Dhurandhar Box Office Collection: ಭಾನುವಾರ ‘ಧುರಂಧರ್’ ಭರ್ಜರಿ ಕಲೆಕ್ಷನ್! 350 ಕೋಟಿಗೂ ಹೆಚ್ಚು ಬಾಚಿದ ಮೂವಿ
Rakveer: ರಣವೀರ್ ಸಿಂಗ್ ನಟನೆಯ ‘ಧುರಂಧರ್’ 2ನೇ ಭಾನುವಾರ ಕೂಡ ಅದ್ಭುತ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿದೆ. ಶೀಘ್ರದಲ್ಲೇ 'KGF- 2' ದಾಖಲೆ ಮುರಿಯುವ ಸುಳಿವು ಸಿಕ್ತಿದೆ. ಎರಡನೇ ವಾರಾಂತ್ಯದಲ್ಲಿ ಧುರಂಧರ್ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದು, ಕೇವಲ ಎರಡು ದಿನಗಳಲ್ಲಿ 100 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಡಿಸೆಂಬರ್ 13 ರಂದು, ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು 53 ಕೋಟಿ ರೂ. ಮತ್ತು ಭಾನುವಾರ, ಸ್ಪೈ ಥ್ರಿಲ್ಲರ್ ಸುಮಾರು 59 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ.
ರಣವೀರ್ ಸಿಂಗ್ ಧುರಂಧರ್ -
ರಣವೀರ್ ಸಿಂಗ್ ನಟನೆಯ ‘ಧುರಂಧರ್’ 2ನೇ (Dhurandhar) ಭಾನುವಾರ ಕೂಡ ಅದ್ಭುತ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿದೆ. ಶೀಘ್ರದಲ್ಲೇ 'KGF- 2' ದಾಖಲೆ ಮುರಿಯುವ ಸುಳಿವು ಸಿಕ್ತಿದೆ. ಎರಡನೇ ವಾರಾಂತ್ಯದಲ್ಲಿ ಧುರಂಧರ್ ಬಾಕ್ಸ್ ಆಫೀಸ್‌ನಲ್ಲಿ (Box Office) ಇತಿಹಾಸ ನಿರ್ಮಿಸಿದ್ದು, ಕೇವಲ ಎರಡು ದಿನಗಳಲ್ಲಿ 100 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಡಿಸೆಂಬರ್ 13 ರಂದು, ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು 53 ಕೋಟಿ ರೂ. ಮತ್ತು ಭಾನುವಾರ, ಸ್ಪೈ ಥ್ರಿಲ್ಲರ್ ಸುಮಾರು 59 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ, ಚಿತ್ರದ ವಾರಾಂತ್ಯದ ಬಾಕ್ಸ್ ಆಫೀಸ್ ಒಟ್ಟು 112 ಕೋಟಿ ರೂ.ಗಳಷ್ಟಿದೆ. ಸಿನಿಮಾದ ಭಾರತದ ಕಲೆಕ್ಷನ್ 350 ಕೋಟಿ ರೂಪಾಯಿ ದಾಟಿದೆ.
ಮುಂದುವರಿದಿದೆ ಓಟ
ಧುರಂಧರ್ ಬಾಕ್ಸ್ ಆಫೀಸ್‌ನಲ್ಲಿ ತನ್ನ ಕನಸಿನ ಓಟವನ್ನು ಮುಂದುವರೆಸಿದ್ದು, ಇಲ್ಲಿಯವರೆಗೆ ಒಟ್ಟು 351 ಕೋಟಿ ರೂ. ಗಳಿಕೆ ಮಾಡಿದೆ. ಈ ಚಿತ್ರವು ಮೊದಲ ವಾರಾಂತ್ಯದಲ್ಲಿ 103 ಕೋಟಿ ರೂ.ಗಳೊಂದಿಗೆ ಬಲವಾಗಿ ತೆರೆಕಂಡಿತು - ಶುಕ್ರವಾರ 28 ಕೋಟಿ ರೂ., ಶನಿವಾರ 32 ಕೋಟಿ ರೂ. ಮತ್ತು ಭಾನುವಾರ 43 ಕೋಟಿ ರೂ ಕಲೆಕ್ಷನ್ ಮಾಡಿದೆ.
ವಾರದ ದಿನಗಳಲ್ಲಿಯೂ ಈ ಗಳಿಕೆ ಮುಂದುವರೆದಿದೆ. ಸೋಮವಾರ 23.25 ಕೋಟಿ ರೂ.ಗಳನ್ನು ಸೇರಿಸಿದರೆ, ಮಂಗಳವಾರ 27 ಕೋಟಿ ರೂ.ಗಳನ್ನು ತಂದು ಒಟ್ಟು 150 ಕೋಟಿ ರೂ.ಗಳನ್ನು ದಾಟಿದೆ. ಬುಧವಾರ ಮತ್ತು ಗುರುವಾರ ತಲಾ 27 ಕೋಟಿ ರೂ.ಗಳೊಂದಿಗೆ ವೇಗವನ್ನು ಕಾಯ್ದುಕೊಂಡಿದ್ದು, ಒಟ್ಟು ಗಳಿಕೆ 207.25 ಕೋಟಿ ರೂ.ಗಳಿಗೆ ತಲುಪಿದೆ.
ಇದನ್ನೂ ಓದಿ: Ranveer Singh: 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ʻಧುರಂಧರ್ʼ ! ರಣವೀರ್ ಮೂವಿ ಹವಾ ಜೋರು
ಧುರಂಧರ್ 300 ಕೋಟಿ ರೂ. ಕ್ಲಬ್‌ಗೆ ಹೆಜ್ಜೆ ಹಾಕುತ್ತಿದೆ - 2025 ರ ಮೂರನೇ ಚಿತ್ರ ತ್ರಿಶತಕದ ದಾಖಲೆ ಬರೆದಿದೆ. ಧುರಂಧರ್ 300 ಕೋಟಿ ರೂ. ಮೈಲಿಗಲ್ಲನ್ನು ದಾಟಿ, 2025 ರ ಮೂರನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಎಂದು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಬರೆದಿದ್ದಾರೆ.
'DHURANDHAR' STEPS INTO THE ₹ 300 CR CLUB – THIRD FILM *OF 2025* TO HIT THE TRIPLE-CENTURY MARK... #Dhurandhar storms past the ₹ 300 crore milestone, becoming the third film of 2025 to hit the coveted triple-century figure.
— taran adarsh (@taran_adarsh) December 14, 2025
⭐️ [Feb] #Chhaava
⭐️ [July] #Saiyaara
⭐️ [Dec]… pic.twitter.com/un5tWWhQkB
ಆದಿತ್ಯ ಧರ್ ಅವರ ಧುರಂಧರ್ ಚಿತ್ರ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್. ಮಾಧವನ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಸೇರಿದಂತೆ ತಾರಾಗಣವಿದೆ. ಈ ಮುಂದುವರಿದ ಭಾಗವು ಮಾರ್ಚ್ 19, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಯಾರಕರು ಖಚಿತಪಡಿಸಿದ್ದಾರೆ.
ನೈಜ ಘಟನೆಗಳನ್ನು ಆಧರಿಸಿ 'ಧುರಂಧರ್' ಸಿನಿಮಾ ನಿರ್ಮಾಣವಾಗಿದೆ. ರಣ್‌ವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್, ಅಕ್ಷಯ್ ಖನ್ನಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಸಂಭಾಷಣೆಗಳು ಪ್ರೇಕ್ಷಕರ ಮನಗೆದ್ದಿದೆ. ರಣ್‌ವೀರ್ ಸಿಂಗ್ ಜೋಡಿಯಾಗಿ ಸಾರಾ ಅರ್ಜುನ್ ಮಿಂಚಿದ್ದಾರೆ.