Bomb Blast: ಅಕ್ರಮ ಬಾಂಬ್ ತಯಾರಿಕೆ ವೇಳೆ ಭಾರೀ ಸ್ಫೋಟ; ಮೂವರ ದಾರುಣ ಸಾವು
Bomb Blast : ಅಕ್ರಮ ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದ ವೇಳೆ ಭಾರೀ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ.

ಕೋಲ್ಕತಾ: ದೇಶಿ ನಿರ್ಮಿತ ಬಾಂಬ್‌ಗಳು ಸ್ಫೋಟಗೊಂಡ (Explosion) ಪರಿಣಾಮ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ (West Bengal) ಖಯರ್ತಲಾ (Khayartala) ಪ್ರದೇಶದಲ್ಲಿ ಭಾನುವಾರ(ಡಿ. 8) ತಡ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ (Bomb Blast)
Murshidabad # Three killed in a blast at Sagarpara .Blast took place inside a house last night .Investigation underway . pic.twitter.com/8XMBAB8C0C— Syeda Shabana (@JournoShabana) December 9, 2024
ಮೃತರನ್ನು ಮಾಮುನ್ ಮೊಲ್ಲಾ, ಸಕಿರುಲ್ ಸರ್ಕಾರ್ ಮತ್ತು ಮುಸ್ತಾಕಿನ್ ಶೇಖ್ ಎಂದು ಗುರುತಿಸಲಾಗಿದೆ. ಮಾಮುನ್ ಮೊಲ್ಲಾ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಬಾಂಬ್‌ಗಳನ್ನು ತಯಾರಿಸಲಾಗುತ್ತಿತ್ತು ಎಂದು ಅಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ. ಅವು ಸ್ಫೋಟಗೊಂಡಿದ್ದು, ಮೂವರು ಸಾವಿಗೀಡಾಗಿದ್ದಾರೆ. ರಾತ್ರಿ ವೇಳೆ ದೊಡ್ಡ ಸ್ಫೋಟದ ಶಬ್ದ ಕೇಳಿಸಿದ್ದು, ಇದಕ್ಕೆ ಕಾರಣವೇನು ಎಂದು ತಿಳಿದಿರಲಿಲ್ಲ ಎಂದು ಸ್ಥಳೀಯರು ಪೊಲೀಸರೊಂದಿಗೆ ಹೇಳಿದ್ದಾರೆ.
ಸ್ಫೋಟದ ತೀವ್ರತೆಗೆ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಸ್ಫೋಟದಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಾಂಬ್ ತಯಾರಿಕೆ ವೇಳೆ ಏನೋ ಸಮಸ್ಯೆಯಾಗಿ ಸ್ಫೋಟಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳೀಯರು ಹೇಳಿದ್ದೇನು?
ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಜಿಲ್ಲೆಯ ಖೈರ್ತಲಾ ನಿವಾಸಿ ಮಾಮುನ್ ಮುಲ್ಲಾ ಎಂಬುವವರ ಮನೆಯಲ್ಲಿ ಭಾನುವಾರ ರಾತ್ರಿ ಅಕ್ರಮ ಬಾಂಬ್ ತಯಾರಿಸುವ ಕಾರ್ಯ ನಡೆದಿದೆ. ಈ ವೇಳೆ ಏನೋ ಸಮಸ್ಯೆಯಾಗಿ ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟಿಸಿದೆ. ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದ ಮೂವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಬಾಂಬ್ ತಯಾರಿಕೆಯ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಹಿಂದೆ ಯಾವುದಾದರೂ ರಾಜಕೀಯ ವ್ಯಕ್ತಿಗಳ ಕೈವಾಡವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಬೇರೆ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಕಂಡುಹಿಡಿಯಲು ಮನೆಯ ಅವಶೇಷಗಳನ್ನು ತನಿಖೆ ನಡೆಸಲಾಗುತ್ತಿದೆ. ಈ ಘಟನೆಯು ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ಮನೆಯಲ್ಲಿ ಬಾಂಬ್ ತಯಾರಿಕೆಯ ಅಪಾಯಗಳನ್ನು ಎತ್ತಿ ತೋರಿಸಿದೆ. ಈ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯ ನಿವಾಸಿಗಳಿಗೆ ಪೊಲೀಸರು ಮನವಿ ಮಾಡಿದ್ದಾರೆ.
ದೆಹಲಿಯ ಶಾಲೆಗಳಿಗೆ ಬಾಂಬ್ ಬೆದರಿಕೆ
ರಾಷ್ಟ್ರ ರಾಜಧಾನಿ ದೆಹಲಿಯ 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಕಿಡಿಗೇಡಿಗಳು 30 ಸಾವಿರ ಅಮೆರಿಕನ್ ಡಾಲರ್ (₹ 25,40,719) ಹಣಕ್ಕೆ ಬೇಡಿಯಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಆರಂಭದಲ್ಲಿ ಎರಡು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಬಳಿಕ 40 ಶಾಲೆಗಳಿಗೆ ಇ–ಮೇಲ್(E-mail) ಮೂಲಕ ಬೆದರಿಕೆ ಬಂದಿದೆ ಎಂದು ತಿಳಿಯಿತು. ಶಾಲೆಗಳಿಗೆ ರಜೆ ನೀಡಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇ–ಮೇಲ್‌ನಲ್ಲಿ ‘ಶಾಲೆಯ ಕಟ್ಟಡದೊಳಗೆ ಅನೇಕ ಬಾಂಬ್‌ಗಳನ್ನು ಇರಿಸಲಾಗಿದೆ. ಎಲ್ಲವನ್ನೂ ಮರೆಮಾಚಿ ಇಡಲಾಗಿದೆ. ಈ ಬಾಂಬ್‌ಗಳು ಕಟ್ಟಡಕ್ಕೆ ಹೆಚ್ಚು ಹಾನಿ ಮಾಡುವುದಿಲ್ಲ, ಆದರೆ ಜನರನ್ನು ಗಾಯಗೊಳಿಸಲಿದೆ. 30 ಸಾವಿರ ಡಾಲರ್ ಹಣ ನೀಡದಿದ್ದರೆ, ನೀವೆಲ್ಲರೂ ಕೈಕಾಲು ಕಳೆದುಕೊಳ್ಳಬೇಕಾಗುತ್ತದೆ. =E2=80=9CKNR=E2=80=9D ಈ ದಾಳಿಯ ಹಿಂದೆ ಇದೆ’ ಎಂದು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ದಳದ ಅಧಿಕಾರಿಗಳು, ಶ್ವಾನ ದಳ, ಬಾಂಬ್ ಪತ್ತೆ ದಳ, ಸ್ಥಳೀಯ ಪೊಲೀಸರು ಶಾಲೆಗಳಿಗೆ ಆಗಮಿಸಿ ಶೋಧ ಕಾರ್ಯ ನಡೆಸಿದ್ದು, ಸದ್ಯಕ್ಕೆ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ. ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Bomb Threat: ಪ್ರಯಾಣಿಕನ ಬಳಿ ಬಾಂಬ್ ಇದೆ… ಮುಂಬೈ ಏರ್‌ಪೋರ್ಟ್‌ಗೆ ಮತ್ತೆ ಬೆದರಿಕೆ