Surendra Pai Column: ಓದುಗರ ಮನಗೆದ್ದ ಪುಸ್ತಕ ಸಂತೆಗಳು
ಮೊದಲೆಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಮಾತ್ರ ಆಯೋಜಿಸುತ್ತಿದ್ದ ಪುಸ್ತಕ ಮೇಳಗಳು ಒಂದು ಸಿಮೀತ ವ್ಯಾಪ್ತಿಗೆ ಒಳಪಟ್ಟಿವು. ಆದರೆ ಇಂದು ಹಲವು ಉತ್ಸಾಹಿ ಪ್ರಕಾಶನ ದವರು ಲಾಭ ನಷ್ಟದ ಬಗ್ಗೆ ಹೆಚ್ಚಾಗಿ ಲೆಕ್ಕಾಚಾರ ಹಾಕದೇ ಓದುಗರಿಗೆ ಹೊಸ ಹೊಸ ವಿಷಯ ಗಳನ್ನು ಹೊತ್ತಿರುವ ಹೊತ್ತಿಗೆಯನ್ನು ಪರಿಚಯಿಸುವುದರ ಮೂಲಕ ‘ಒಳ್ಳೆಯ ಪುಸ್ತಕ ಓದುವು ದರಿಂದ ನಮ್ಮ ಬಾಳು ಬೆಳಗುವುದು’ ಎಂದು ತೋರಿಸಿಕೊಟ್ಟರು.


ಸುರೇಂದ್ರ ಪೈ, ಭಟ್ಕಳ
ಕರ್ನಾಟಕದಲ್ಲಿ ಇತರೆ ಭಾಷೆಗಳ ವ್ಯಾಮೋಹದ ಪರಿಣಾಮವಾಗಿ ಕನ್ನಡಿಗರು ಕನ್ನಡ ಗೊತ್ತಿದ್ದರೂ ಸಹ ಕನ್ನಡ ಮಾತನಾಡದಂತಹ ಪರಿಸ್ಥಿತಿಯ ನಿರ್ಮಾಣವಾಗಿರುವ ಈ ಕಾಲಘಟ್ಟದಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಕನ್ನಡದ ಕೆಲವು ಪುಸ್ತಕ ಪ್ರಕಾಶಕರು ‘ಪುಸ್ತಕ ಸಂತೆ’ ಗಳನ್ನು ಆಯೋಜನೆ ಮಾಡುವುದರ ಮೂಲಕ, ಓದುಗರು ಕನ್ನಡದ ಪುಸ್ತಕ ಗಳನ್ನು ಕೊಂಡು ಓದುವಂತಹ ಒಂದು ವಾತಾವರಣವನ್ನು ನಿರ್ಮಿಸುವುದರಲ್ಲಿ ಯಶಸ್ವಿ ಯಾಗಿದ್ದಾರೆ. ಇಂತಹ ಪುಸ್ತಕ ಸಂತೆಗಳ ಯಶಸ್ಸು ಹಾಗೂ ಅದರ ಮಹತ್ವವನ್ನು ಅರಿತು ವಿಧಾನಸೌಧದ ಆವರಣದಲ್ಲಿ ಪುಸ್ತಕ ಸಂತೆಯನ್ನು ಆಯೋಜನೆ ಮಾಡುವುದರ ಮೂಲಕ, ನಮ್ಮ ರಾಜ್ಯ ವು ಹೊಸ ಇತಿಹಾಸವನ್ನೇ ಸೃಷ್ಟಿಸಿತು. ’ಪುಸ್ತಕ ಮತ್ತು ವಿಧಾನ ಸೌಧ - ಜ್ಞಾನಕೇಂದ್ರ ಮತ್ತು ಅಧಿಕಾರಕೇಂದ್ರ’ ಒಟ್ಟಿಗೆ ಸಿಗುವಂತೆ ಮಾಡಿದ್ದು ಒಳ್ಳೆಯ ಯೋಜನೆ.
ಇದರ ಜತೆಯಲ್ಲೇ, ಇತ್ತೀಚಿನ ವರ್ಷಗಳಲ್ಲಿ, ಕೆಲವು ಖಾಸಗಿ ಪ್ರಕಾಶನದವರು ವರ್ಷ ಪೂರ್ತಿ ಆಯೋಜಿಸುವ ಪುಸ್ತಕ ಸಂತೆಗಳು, ಪುಸ್ತಕ ಬಿಡುಗಡೆ ಸಮಾರಂಭಗಳು ಓದುಗರಿಗೆ ಹತ್ತಿರವಾಗುತ್ತಿವೆ. ಇಂತಹ ಪರಿಕಲ್ಪನೆಗೆ ಸರ್ಕಾರವು ಕೈ ಜೋಡಿಸಿರುವುದು ಸಂತಸದ ಸಂಗತಿ.
ಇದನ್ನೂ ಓದಿ: Surendra Pai Column: ಶಿರಸಿಯ ಬೇಡರ ವೇಷ
ಮೊದಲೆಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಮಾತ್ರ ಆಯೋಜಿಸುತ್ತಿದ್ದ ಪುಸ್ತಕ ಮೇಳಗಳು ಒಂದು ಸಿಮೀತ ವ್ಯಾಪ್ತಿಗೆ ಒಳಪಟ್ಟಿವು. ಆದರೆ ಇಂದು ಹಲವು ಉತ್ಸಾಹಿ ಪ್ರಕಾಶನದವರು ಲಾಭ ನಷ್ಟದ ಬಗ್ಗೆ ಹೆಚ್ಚಾಗಿ ಲೆಕ್ಕಾಚಾರ ಹಾಕದೇ ಓದುಗರಿಗೆ ಹೊಸ ಹೊಸ ವಿಷಯಗಳನ್ನು ಹೊತ್ತಿರುವ ಹೊತ್ತಿಗೆಯನ್ನು ಪರಿಚಯಿಸುವುದರ ಮೂಲಕ ‘ಒಳ್ಳೆಯ ಪುಸ್ತಕ ಓದುವುದರಿಂದ ನಮ್ಮ ಬಾಳು ಬೆಳಗುವುದು’ ಎಂದು ತೋರಿಸಿಕೊಟ್ಟರು.
ರಾಜ್ಯದ ಕೆಲವು ಕಡೆ ಮಾತ್ರ ಪುಸ್ತಕದ ಅಂಗಡಿಗಳಿವೆ. ಅಲ್ಲೂ ಆಯ್ದ ಪುಸ್ತಕಗಳು ಮಾತ್ರ ಇರುತ್ತವೆಯೇ ವಿನಃ ಯುವ ಬರಹಗಾರರ ಪುಸ್ತಕಗಳು ಲಭಿಸುವುದಿಲ್ಲ. ಸರ್ಕಾರಿ ಗ್ರಂಥಾ ಲಯದ ಕಡೆ ಮುಖ ಮಾಡಿದರೂ ಸಹ ಮತ್ತದೇ ನಿರಾಶೆ; ಅಲ್ಲಿರುವುದು ಹೆಚ್ಚಿನವು ಹಳೆಯ ಪುಸ್ತಕಗಳು. ಹಾಗಾಗಿ ಪುಸ್ತಕ ಸಂತೆ, ಮೇಳಗಳು ತಮ್ಮ ಭಾಗದಲ್ಲಿರುವ ಸಾಹಿತ್ಯಾ ಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ಸು ಕಾಣುತ್ತಿವೆ. ಮುಂದೆ, ಉತ್ತಮದ ಪುಸ್ತಕದ ರುಚಿ ಹತ್ತಿದ ಓದುಗನು, ಪುಸ್ತಕದಂಗಡಿಯನ್ನು ಹುಡುಕಿ ಹೋಗಿ ಪುಸ್ತಕ ಖರೀದಿಸಿ ಓದುತ್ತಾನೆ.
ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರ ಸ್ಕ್ರೀನ್ ಟೈಮ್ ಹೆಚ್ಚಿಸಲು, ನಾನಾ ತಂತ್ರಗಳನ್ನು ಖಾಸಗಿ ಕಂಪೆನಿಯವರು ಹೆಕ್ಕಿ ತೆಗೆಯುತ್ತಿದ್ದಾರೆ. ಈ ಮಧ್ಯೆ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವುಳ್ಳವರಿಗೆ ಮಾರುಕಟ್ಟೆಗೆ ಯಾವ ಯಾವ ಪುಸ್ತಕ ಬಿಡು ಗಡೆಯಾಗಿದೆ, ಪುಸ್ತಕದ ಕುರಿತಾದ ಒಂದಿಷ್ಟು ವಿಮರ್ಶೆ, ಪುಸ್ತಕ ಬಿಡುಗಡೆ ಸಮಾರಂಭದ ಲೈವ್ ಮುಂತಾದವುಗಳನ್ನು ಅದೇ ಸಾಮಾಜಿಕ ಜಾಲತಾಣದ ಮೂಲಕ ಬಿತ್ತರಿಸುವ ಮೂಲಕ ಓದುಗರನ್ನು ತಲುಪಲು ಲೇಖಕರು, ಪ್ರಕಾಶಕರು ಬಹುಮಟ್ಟಿಗೆ ಯಶಸ್ಸು ಕಂಡಿ ದ್ದಾರೆ.
ಪುಸ್ತಕ ಸಂತೆಗಳಿಗೆ ಮಳಿಗೆಗಳನ್ನು ಹಾಕಿರುವ ಬಹುತೇಕ ಪ್ರಕಾಶಕರು, ಲೇಖಕರು ಸಾಕಷ್ಟು ಓದುಗರನ್ನು ತಲುಪಿರುವುದು ಸಂತಸದ ವಿಷಯ. ಇಂದು ಪ್ರತಿಯೊಂದು ಮೊಬೈಲ್‌ನಲ್ಲಿ ದೊರೆಯುತ್ತಿರುವ ಸಮಯದಲ್ಲಿ ವಿಶೇಷವಾಗಿ ಯುವಕರು ಪುಸ್ತಕಗಳನ್ನು ಕೊಂಡು ಓದುತ್ತಿರುವುದು ಸಂತಸದ ಸಂಗತಿ.
ಪುಸ್ತಕಗಳನ್ನು ಕೈಯಲ್ಲಿ ಹಿಡಿದು, ಒಂದೊಂದೇ ಪುಟಗಳನ್ನು ಓದಿ ತಿರುವಿ ಹಾಕುತ್ತಾ, ಇಷ್ಟವಾದ ಸಾಲುಗಳನ್ನು ಅಲ್ಲೇ ಮಾರ್ಕ್ ಮಾಡುತ್ತಾ ಓದುವ ಸೊಬಗು ಆನ್ ಲೈನ್ ಮಾಧ್ಯಮದಲ್ಲಿ ಓದುವಾಗ ಆಸ್ವಾದಿಸಲು ಸಾಧ್ಯವಾಗದು. ಈ ನಿಟ್ಟಿನಲ್ಲಿ ಯೋಚಿಸಿದಾಗ, ಇನ್ನೂ ಬೇರೆ ಬೇರೆ ಕಡೆ ಪುಸ್ತಕಸಂತೆಗಳು ನಡೆಯಬೇಕು, ಓದುಗರನ್ನು ಪುಸ್ತಕಗಳು ತಲುಪ ಬೇಕು; ಉತ್ತಮ ಅಭಿರುಚಿಯ ಪುಸ್ತಕಗಳು ಜನರಿಗೆ ತಲುಪಲು ಪುಸ್ತಕ ಸಂತೆಗಳಂತಹ ಉಲ್ಲಾಸಕರ ಚಟುವಟಿಕೆಗಳು ಆಗಾಗ ನಡೆಯಬೇಕು.
ಪುಸ್ತಕ ಹುಡುಕಿಕೊಂಡು ಬಂದ ಓದುಗರು
ಪುಸ್ತಕ ಸಂತೆಗಳು ಕನ್ನಡಿಗರಿಗೆ ಹೊಸತೇನಲ್ಲ; ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಬಹು ದೊಡ್ಡ ಪುಸ್ತಕ ಜಾತ್ರೆಯೇ ನಡೆಯುತ್ತದೆ. ಆದರೆ, ಈಚಿನ ಒಂದೆರಡು ವರ್ಷ ಗಳಲ್ಲಿ ಕೆಲವು ಖಾಸಗಿ ಪ್ರಕಾಶಕರು, ಅದ್ಧೂರಿಯಾಗಿ, ಬಹು ಪ್ರಚಾರ ನೀಡಿ ಪುಸ್ತಕ ಸಂತೆ ನಡೆಸಿ, ಓದುಗರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಪುಸ್ತಕ ಸಂತೆ ನಡೆಯುವ ಜಾಗವು ಆಕರ್ಷಕವಾಗಿದ್ದು, ದೂಳು ಮುಕ್ತವಾಗಿರುವಂತೆ ನೋಡಿಕೊಂಡು ನಡೆಸುತ್ತಿರುವುದರಿಂದ, ಪ್ರಾಜ್ಞ ಓದುಗರು ಇಲ್ಲಿಗೆ ಬಂದು ಪುಸ್ತಕ ಖರೀದಿಸುತ್ತಿದ್ದಾರೆ.
ಖಾಸಗಿ ಪ್ರಕಾಶಕರು ನಡೆಸಿದ ಪುಸ್ತಕ ಸಂತೆಯ ಯಶಸ್ಸನ್ನುಕಂಡು, ಇತ್ತೀಚೆಗೆ ವಿಧಾನ ಸೌಧದಲ್ಲೂ ಪುಸ್ತಕ ಸಂತೆ ಏರ್ಪಾಡಾಯಿತು! ಜನರು ಅಲ್ಲಿಗೂ ಬಂದು ಪುಸ್ತಕ ಖರೀದಿಸಿ ದರು; ಓದುವ ಅಭಿರುಚಿ ಬೆಳೆಸುವಿಲ್ಲಿ ಇದೊಂದು ಮಹತ್ವದ ಬೆಳವಣಿಗೆ.