Surendra Pai Column: ಶಿರಸಿಯ ಬೇಡರ ವೇಷ
ಪ್ರತಿ ಎರಡು ವರ್ಷಗಳಿಗೊಮ್ಮೆ, ಹೋಳಿ ಹಬ್ಬದ ಸಮಯದಲ್ಲಿ ಶಿರಸಿಯಲ್ಲಿ ಬೇಡರ ಕುಣಿತ ನಡೆಯು ವುದು ವಿಶೇಷ. ಪುರಾತನ ವಿದ್ಯಮಾನವೊಂದನ್ನು ಜನಪದ ಆಚರ ಣೆಯ ರೂಪದಲ್ಲಿ ಇಲ್ಲಿ ಕಾಣಬ ಹುದು. ಇದು ಹೋಳಿ ಹಬ್ಬದ ಸಮಯದಲ್ಲಿ ನಡೆಯುವುದು ಕುತೂಹಲಕಾರಿ.


ಸುರೇಂದ್ರ ಪೈ, ಭಟ್ಕಳ
ಪ್ರತಿ ಎರಡು ವರ್ಷಗಳಿಗೊಮ್ಮೆ, ಹೋಳಿ ಹಬ್ಬದ ಸಮಯದಲ್ಲಿ ಶಿರಸಿಯಲ್ಲಿ ಬೇಡರ ಕುಣಿತ ನಡೆಯುವುದು ವಿಶೇಷ. ಪುರಾತನ ವಿದ್ಯಮಾನವೊಂದನ್ನು ಜನಪದ ಆಚರ ಣೆಯ ರೂಪ ದಲ್ಲಿ ಇಲ್ಲಿ ಕಾಣಬಹುದು. ಇದು ಹೋಳಿ ಹಬ್ಬದ ಸಮಯದಲ್ಲಿ ನಡೆಯುವುದು ಕುತೂಹ ಲಕಾರಿ. ಹೋಳಿ ಹಬ್ಬದ ಆಚರಣೆಯ ಹಿಂದಿನ ಪೌರಾಣಿಕ ಕಥೆ ಏನೇ ಇರಲಿ, ಬಣ್ಣಗಳ ಹೊರತಾ ಗಿಯೂ ಹೋಳಿ ಹಬ್ಬವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಸಾಂಪ್ರ ದಾಯಿಕ ಜಾನಪದ ಸೊಗಡಿನ ಹಿನ್ನೆಲೆಯಲ್ಲಿ ಆಚರಿಸುವುದನ್ನು ನಾವು ನೋಡಬಹುದಾಗಿದೆ. ಶಿರಸಿ ಎಂದಾಕ್ಷಣ ನೆನಪಾಗುವುದೇ ಶಿರಸಿಯ ಮಾರಿಕಾಂಬೆಯ ಜಾತ್ರೆ. ಈ ಜಾತ್ರೆಯು ದ್ವೈವಾರ್ಷಿಕವಾಗಿ ಬಹಳ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಶಿರಸಿಯ ಮಾರಿಕಾಂಬ ಜಾತ್ರೆ ಎಂಬುದು ಬಹಳ ಪ್ರಸಿದ್ಧ. ಯಾವ ವರ್ಷ ಜಾತ್ರೆ ನಡೆಯುತ್ತದೆಯೋ ಆ ವರ್ಷ ಶಿರಸಿಯಲ್ಲಿ ಸಾರ್ವಜನಿಕವಾಗಿ ಹೋಳಿ ಹಬ್ಬವನ್ನು ಆಚರಿಸಲಾಗುವುದಿಲ್ಲ. ಅದರ ಬದಲಾಗಿ ಮುಂದಿನ ವರ್ಷ, ಅಂದರೆ ಮಾರಿಜಾತ್ರೆ ಇಲ್ಲದೇ ಇರುವ ವರ್ಷ, ಇಲ್ಲೇ ಹೋಳಿ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ.
ಇದನ್ನೂ ಓದಿ: Surendra Pai column: ಪರೀಕ್ಷಾ ಪೇ ಚರ್ಚಾ: ವಿನೂತನ ಪ್ರಯೋಗ
ಈ ಹೋಳಿ ಹಬ್ಬದ ವಿಶೇಷ ಆಕರ್ಷಣೆಯೇ ಬೇಡರ ವೇಷದ ಕುಣಿತ. ಶಿರಸಿಯಲ್ಲಿ ಹೋಳಿಯ ಸಮಯದಲ್ಲಿ ತಲೆ ತಲಾಂತರದಿಂದಲೂ ನಡೆದುಕೊಂಡು ಬರುತ್ತಿರುವ ಈ ಬೇಡರ ವೇಷದ ಕುಣಿತವು ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಕೆಂಪಿನ ಬಣ್ಣದ ಉದ್ದ ತೋಳಿನ ಅಂಗಿ, ಮೊಣಕಾಲು ಮುಟ್ಟುವ ಚಡ್ಡಿ, ಕಾಲಿಗೆ ಗೆಜ್ಜೆ, ಬೆನ್ನಿಗೆ ವಿಶಾಲವಾಗಿ ಹಬ್ಬಿದ ನವಿಲು ಗರಿಗಳ ಪದರು, ತಲೆಯ ಮೇಲೆ ಮುತ್ತಿನಿಂದ ಪೋಣಿಸಲ್ಪಟ್ಟ ಕೀರಿಟ, ರೋಷ ಉಕ್ಕಿ ತೋರಿಸುವ ಕಣ್ಣು, ಮೂಗಿನ ಮೇಲೊಂದು ಹತ್ತಿ ಉಂಡೆ, ಕೆಂಡ ಉಗುಳುವ ಕೆಂಪು ಮುಖದ ಮೇಲೆ ಬಿಳಿ-ಹಳದಿ ಬಣ್ಣದ ಗೆರೆಗಳ ನಡುವೆ ಕಡುಗಪ್ಪಿನ ದಪ್ಪ ಮೀಸೆ. ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ಗುರಾಣಿ ಹಿಡಿದು ಬೇಡ ವೇಷಧಾರಿ ಮುಂದೆ ಬರುತ್ತಾನೆ.
ಆತನು ರೋಷದಿಂದ ಕುಣಿಯುವುದು, ಆಕ್ರಮಣ ಮಾಡುವುದು ಇವೆಲ್ಲವ್ನೂ ನೋಡುವುದೇ ಒಂದು ವಿಶೇಷ ಅನುಭವ. ಆತನನ್ನು ನಿಯಂತ್ರಿಸಲು ಹಗ್ಗವನ್ನು ಹಿಡಿದು ಹಿಂಬದಿಯಲ್ಲಿ ನಿಂತ ಇಬ್ಬರು ಸಹಚರರು. ಒಮ್ಮೆ ಬೇಡ ಜನರ ಎದೆಯಲ್ಲಿ ನಡುಕ ಶುರುವಾದೀತು!
ಇದೇ ಶಿರಸಿಯ ಜನಪದ ಶೈಲಿಯ ಬೇಡರ ವೇಷದ ರುದ್ರ ನರ್ತನ ದೃಶ್ಯ. ಐತಿಹಾಸಿಕ ವ್ಯಕ್ತಿ ವೇಷಧಾರಿ ನಾಲ್ಕಾರು ಜನರು ಬಾರಿಸುವ ತಮಟೆಯ ಹಲಗೆಯ ಸದ್ದಿಗೆ ಬೀದಿಯಲ್ಲಿ ಹೆಜ್ಜೆ ಹಾಕಿದರೆ ಸುತ್ತ ನಿಂತಿದ್ದ ಈ ಬೇಡರ ವೇಷಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. ಬೇಡರ ವೇಷದ ಆಚರಣೆಯ ಕುರಿತಾಗಿ ಹಲವಾರು ಕಥೆಗಳು ಪ್ರಚಲಿತದಲ್ಲಿವೆ.
ಹೋಳಿ ಹಬ್ಬಕ್ಕೆ ಸರಿಯಾಗಿ ಬೇಡನ ಕುಣಿತ, ಅದನ್ನು ಜನರು ನೋಡಿ ಆನಂದಿಸುವುದು ಎಲ್ಲವೂ ಶಿರಸಿಯ ವಿಶೇಷ. ಬಹು ಹಿಂದೆ ನಡೆದ ಒಂದು ವಿದ್ಯಮಾನವೇ ಈ ಬೇಡನ ರೂಪದಲ್ಲಿ, ಬೇಡರ ವೇಷದ ರೂಪದಲ್ಲಿ ಆಚರಣೆಗೆ ಬಂದಿದೆ. ಇದು ಜನಪದ ಕುಣಿತ ಮತ್ತು ಆಚರಣೆಯ ಸ್ವರೂಪ ಪಡೆದಿರುವುದು ಕುತೂಹಲಕಾರಿ.
ಈ ಬೇಡರ ವೇಷದ ಕುಣಿತವು ಹೋಳಿ ಹಬ್ಬದ ನಾಲ್ಕು ದಿನ ಮೊದಲು ಪ್ರತಿ ರಾತ್ರಿಯು ಶಿರಸಿ ಪೇಟೆಯ ಎಲ್ಲಾ ಬೀದಿಗಳಲ್ಲೂ ಕಾಣಸಿಗುತ್ತದೆ. ಇದನ್ನು ನೋಡಲು ಅಕ್ಕ ಪಕ್ಕದ ಊರಿನ ಸಾವಿರಾರು ಜನರು ಬಂದು ಸೇರುತ್ತಾರೆ.