ಪೈಲಟ್ ಸುರಕ್ಷತೆ ಖಚಿತಪಡಿಸುವ ಫೈಟರ್ ಜೆಟ್ ಪರೀಕ್ಷೆ ಯಶಸ್ವಿ
ಪೈಲಟ್ ಸುರಕ್ಷತೆ ಖಚಿತಪಡಿಸುವ ಫೈಟರ್ ಜೆಟ್ ಅನ್ನು ಚಂಡೀಗಢದ ರೈಲ್ವೇ ಟ್ರ್ಯಾಕ್ ಮೇಲೆ ಪರೀಕ್ಷಿಸಲಾಗಿದೆ. ಚಂಡೀಗಢದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿಯ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ ನಲ್ಲಿ ಕ್ಯಾನೊಪಿ ಸೆವೆರೆನ್ಸ್, ಎಜೆಕ್ಷನ್ ಸೀಕ್ವೆನ್ಸಿಂಗ್ ಮತ್ತು ಸಂಪೂರ್ಣ ಏರ್‌ಕ್ರೂ-ರಿಕವರಿಯನ್ನು ನಿಖರವಾಗಿ ನಿರ್ಧರಿಸುವ ಗಂಟೆಗೆ 800 ಕಿಮೀ ವೇಗದ ಯುದ್ಧ ವಿಮಾನ ಎಸ್ಕೇಪ್ ಸಿಸ್ಟಮ್‌ನ ಹೈ-ಸ್ಪೀಡ್ ರಾಕೆಟ್ ಸ್ಲೆಡ್ ಪರೀಕ್ಷೆ ನಡೆಸಿದ್ದು, ಇದು ಯಶಸ್ವಿಯಾಗಿದೆ.
(ಸಂಗ್ರಹ ಚಿತ್ರ) -
ಚಂಡೀಗಢ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (Defence Research and Development Organisation) ಚಂಡೀಗಢದ (Chandigarh) ರೈಲ್ ಟ್ರ್ಯಾಕ್ (Rail Track) ನಲ್ಲಿ ಪೈಲಟ್ ಸುರಕ್ಷತೆ ಖಚಿತಪಡಿಸುವ ಅತೀ ವೇಗದ ರಾಕೆಟ್ ಸ್ಲೆಡ್ ಪರೀಕ್ಷೆ ನಡೆಸಿದ್ದು, ಇದು ಯಶಸ್ವಿಯಾಗಿದೆ. ಗಂಟೆಗೆ 800 ಕಿ.ಮೀ. ವೇಗದಲ್ಲಿ ನಿಖರವಾಗಿ ನಿಯಂತ್ರಿತ ವೇಗದಲ್ಲಿ ಇದನ್ನು ನಡೆಸಲಾಗಿದೆ. ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿಯ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ (rocket sled) ನಲ್ಲಿ ಕ್ಯಾನೊಪಿ ಸೆವೆರೆನ್ಸ್, ಎಜೆಕ್ಷನ್ ಸೀಕ್ವೆನ್ಸಿಂಗ್ ಮತ್ತು ಸಂಪೂರ್ಣ ಏರ್‌ಕ್ರೂ-ರಿಕವರಿಯನ್ನು ನಿಖರವಾಗಿ ನಿರ್ಧರಿಸುವ ಯುದ್ಧ ವಿಮಾನ ಇದಾಗಿದೆ.
ಈ ಕುರಿತು ಮಂಗಳವಾರ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಫೈಟರ್ ವಿಮಾನ ಎಸ್ಕೇಪ್ ಸಿಸ್ಟಮ್‌ನ ಹೈ-ಸ್ಪೀಡ್ ರಾಕೆಟ್-ಸ್ಲೆಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಸುರಕ್ಷತಾ ತಂತ್ರಜ್ಞಾನಕ್ಕೆ ಒತ್ತು ನೀಡುವ ಈ ಸ್ಥಳೀಯ ಫೈಟರ್ ಜೆಟ್ ನ ಪೈಲಟ್ ಎಜೆಕ್ಷನ್ ಕಾರ್ಯವಿಧಾನವು ತೀವ್ರ ಪರಿಸ್ಥಿತಿಗಳಲ್ಲಿ ನಿಖರವಾಗಿ ಮತ್ತು ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪರೀಕ್ಷೆಯ ಮೂಲಕ ದೃಢಪಡಿಸಲಾಗಿದೆ.
Harshit Rana: ನೀತಿ ಸಂಹಿತೆ ಉಲ್ಲಂಘನೆ; ಹರ್ಷಿತ್ ರಾಣಾಗೆ ವಾಗ್ದಂಡನೆ
ಈ ಕುರಿತು ವಿಡಿಯೊವನ್ನು ಬಿಡುಗಡೆ ಮಾಡಿರುವ ಸಚಿವಾಲಯವು, ಚಂಡೀಗಢದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿಯ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ ನಲ್ಲಿ ಗಂಟೆಗೆ 800 ಕಿ.ಮೀ. ನಿಖರವಾಗಿ ನಿಯಂತ್ರಿತ ವೇಗದಲ್ಲಿ ಪರೀಕ್ಷೆಯನ್ನು ನಡೆಸಲಾಯಿತು ಎಂದು ತಿಳಿಸಿದೆ.
ವಿಡಿಯೊ ಕ್ಲಿಪ್ ನಲ್ಲಿ ರಾಕೆಟ್ ಸ್ಲೆಡ್ ನ ಹಂತ ಹಂತದ ಪರೀಕ್ಷೆಯನ್ನು ನೋಡಬಹುದು.ಮಾರಣಾಂತಿಕ ಪರಿಸ್ಥಿತಿಯಲ್ಲಿ ಕಾಕ್‌ಪಿಟ್‌ನಿಂದ ಪೈಲಟ್ ಅನ್ನು ಹೇಗೆ ಹೊರಗೆ ತಳ್ಳುತ್ತದೆ ಎಂಬುದನ್ನು ಇದು ತೋರಿಸಿದೆ. ಫೈಟರ್ ಜೆಟ್ ಗೆ ಅಪಾಯ ಎದುರಾದಾಗ ಸುರಕ್ಷತೆಯನ್ನು ಎಜೆಕ್ಷನ್ ಹೇಗೆ ಖಚಿತಪಡಿಸುತ್ತದೆ ಎಂಬುದನ್ನು ಇದು ವಿವರಿಸುತ್ತದೆ. ಆಧುನಿಕ ಎಸ್ಕೇಪ್ ಸಿಸ್ಟಮ್‌ನಲ್ಲಿ ಮೂರು ಪ್ರಮುಖ ಅಂಶಗಳಿವೆ. ಕ್ಯಾನೋಪಿ ಸೆವೆರೆನ್ಸ್, ಎಜೆಕ್ಷನ್ ಸೀಕ್ವೆನ್ಸಿಂಗ್ ಮತ್ತು ಸಂಪೂರ್ಣ ಏರ್‌ಕ್ರೂ ರಿಕವರಿ.
Defence Research and Development Organization (DRDO) has successfully conducted a high-speed rocket-sled test of fighter aircraft escape system at precisely controlled velocity of 800 km/h- validating canopy severance, ejection sequencing and complete aircrew-recovery at Rail… pic.twitter.com/G19PJOV6yD
— रक्षा मंत्री कार्यालय/ RMO India (@DefenceMinIndia) December 2, 2025
ಈ ಸಾಧನೆಗಾಗಿ ಡಿಆರ್‌ಡಿಒ, ಭಾರತೀಯ ವಾಯುಪಡೆ, ಎಡಿಎ, ಎಚ್‌ಎಎಲ್ ಮತ್ತು ಕೈಗಾರಿಕಾ ಪಾಲುದಾರರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಭಿನಂದಿಸಿದರು. ಭಾರತದ ಸ್ಥಳೀಯ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವ ಮತ್ತು ಸ್ವಾವಲಂಬನೆಯತ್ತ ವಿಶಾಲವಾದ ಪ್ರಗತಿಯನ್ನು ಸೂಚಿಸುವ ಒಂದು ಪ್ರಮುಖ ಮೈಲುಗಲ್ಲಾಗಿದೆ ಎಂದು ಅವರು ಹೇಳಿದ್ದಾರೆ.
Stone pelting: ಬನಾರಸ್ ವಿಶ್ವವಿದ್ಯಾಲಯ ಕೊತಕೊತ; ವಿದ್ಯಾರ್ಥಿ , ಸಿಬ್ಬಂದಿಯ ನಡುವೆ ಘರ್ಷಣೆ, ಕಲ್ಲು ತೂರಾಟ
ಕಳೆದ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯು ಪಶ್ಚಿಮ ಗಡಿಗಳಲ್ಲಿ ಸ್ಥಳೀಯ ಮಿಲಿಟರಿ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿತ್ತು. ಇದು ಅದರ ಮುಂದುವರಿದ ಭಾಗವಾಗಿದೆ ಎಂದು ಡಿಆರ್‌ಡಿಒ ಅಧ್ಯಕ್ಷ ಸಮೀರ್ ವಿ ಕಾಮತ್ ಅವರು ತಿಳಿಸಿದ್ದಾರೆ.
ಆಪರೇಷನ್ ಸಿಂದೂರ್ ಯಶಸ್ಸಿಗೆ ಆಕಾಶ್ ಕಿರು ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿಗಳು, ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು, ಡಿ4 ಡ್ರೋನ್ ವಿರೋಧಿ ವ್ಯವಸ್ಥೆ, ವಾಯುಗಾಮಿ ಮುಂಚಿನ ಎಚ್ಚರಿಕೆ ಮತ್ತು ನಿಯಂತ್ರಣ ವೇದಿಕೆಗಳು, ಆಕಾಶ್‌ತೀರ್ ವಾಯು ರಕ್ಷಣಾ ನಿಯಂತ್ರಣ ವ್ಯವಸ್ಥೆ ಮತ್ತು ಸುಧಾರಿತ ಸಿ4I ವ್ಯವಸ್ಥೆಗಳಂತಹ ಸ್ವದೇಶಿ ವ್ಯವಸ್ಥೆಗಳು ಕಾರಣವೆಂದು ನಾನು ಹೆಮ್ಮೆಯಿಂದ ಹೇಳಬಲ್ಲೆ ಎಂದು ಅವರು ತಿಳಿಸಿದ್ದಾರೆ. A