#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Gauthami Jadav: ಮುಂದುವರೆದ ಗೌತಮಿ ಜಾಧವ್ ಟೆಂಪಲ್ ರನ್: ಕನಕನ ಕಿಂಡಿಯಲ್ಲಿ ಬಿಗ್ ಬಾಸ್ ಸ್ಪರ್ಧಿ

ಗೌತಮಿ ಜಾಧವ್ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರು ಉಡುಪಿಗೆ ಭೇಟಿ ಕೊಟ್ಟು ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದಿರುವ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮುಂದುವರೆದ ಗೌತಮಿ ಟೆಂಪಲ್ ರನ್: ಕನಕನ ಕಿಂಡಿಯಲ್ಲಿ ಬಿಗ್ ಬಾಸ್ ಸ್ಪರ್ಧಿ

Gauthami Jadav

Profile Vinay Bhat Feb 10, 2025 6:58 AM

ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾದ ಬಳಿಕ ಸ್ಪರ್ಧಿಗಳು ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲ ಸ್ಪರ್ಧಿಗಳಿಗೆ ಸಿನಿಮಾ, ಸೀರಿಯಲ್​ಗಳಿಂದ ಆಕರ್ಷಕ ಆಫರ್ ಬರುತ್ತಿದ್ದರೆ ಇನ್ನೂ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಗೌತಮಿ ಜಾಧವ್ ಕರಾವಳಿಯಲ್ಲಿ ಬೀಡುಬಿಟ್ಟಿದ್ದು ಟೆಂಪಲ್ ರನ್ ನಡೆಸುತ್ತಿದ್ದಾರೆ. ಕಳೆದ ಕೆಲವು ವಾರಗಳಿಂದ ಒಂದಲ್ಲ ಒಂದು ದೇವಸ್ಥಾನಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಇದೀಗ ಕೃಷ್ಣ ನಾಡು ಉಡುಪಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಗೌತಮಿ ಜಾಧವ್​ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರು ಉಡುಪಿಗೆ ಭೇಟಿ ಕೊಟ್ಟು​ ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದಿರುವ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಗೌತಮಿ ಜೊತೆಗೆ ಅವರ ಪತಿ ಅಭಿಷೇಕ್ ಹಾಗೂ ಫ್ಯಾಮಿಲಿ ಮೆಂಬರ್ಸ್​ ಕೂಡ ಭೇಟಿ ಕೊಟ್ಟಿದ್ದಾರೆ.

ಕಂಡೆ ನಾ ಉಡುಪಿಯ ಕೃಷ್ಣರಾಯನ್ನ , ಭೂ- ಮಂಡಲದೊಳಗೆ ಉದ್ದಂಡ ಮೋಹಿನಿ ಎಂಬ ಭಕ್ತಿಗೀತೆಯನ್ನು ಹೊಂದಿರುವ ರೀಲ್ಸ್‌ ಮೂಲಕ ಗೌತಮಿ ಭಕ್ತಿಪರವಶರಾಗಿ ಕಾಣಿಸಿಕೊಂಡಿದ್ದಾರೆ. ತನ್ನ ಪಾಸಿಟಿವಿಟಿ ಮೂಲಕ ಕರ್ನಾಟಕ ಜನತೆಯ ಮನಗೆದ್ದ ಗೌತಮಿ ಎಲಿಮಿನೇಟ್ ಆದ ಕೂಡಲೇ ವನದುರ್ಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಶೋ ಮುಗಿದ ಬಳಿಕ ಎರಡನೇ ಬಾರಿ ಉಗ್ರಂ ಮಂಜು ಜೊತೆ ಮತ್ತೊಮ್ಮೆ ವನದುರ್ಗೆ ದೇವಸ್ಥಾನಕ್ಕೆ ತೆರಳಿದ್ದರು.

ಬಿಗ್ ಬಾಸ್ ಮನೆಯೊಳಗೆ ಸದಾ ಪಾಸಿಟಿವ್ ಆಗಿ ಆಲೋಚನೆ ಮಾಡುತ್ತಿದ್ದ ಗೌತಮಿ ಯಾವಾಗಲೂ ವನದುರ್ಗೆ, ವನದುರ್ಗಮ್ಮ ಎಂದು ಹೇಳುತ್ತಲೇ ಇದ್ದರು. ಆಟವಾಡುವಾಗೆಲ್ಲ ಗೌತಮಿ ಬಾಯಿಂದ ವನದುರ್ಗೆ ಹೆಸರು ಬರುತ್ತಲೇ ಇತ್ತು. ಮಂಜು ಕ್ಯಾಪ್ಟನ್ ಆಗ್ಬೇಕು, ಹನುಮಂತು ಕ್ಯಾಪ್ಟನ್ ಆಗ್ಬೇಕು ಎನ್ನುವ ಸಮಯದಲ್ಲೂ ಗೌತಮಿ ವನದುರ್ಗೆ ಮಂತ್ರವನ್ನು ಜಪಿಸುತ್ತಿದ್ದರು.

ಇನ್ನು ಗೌತಮಿ ಜಾದವ್ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 4ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದರು. ತನ್ನ ಆಟ ಮತ್ತು ಉಗ್ರಂ ಮಂಜು ಜತೆ ಕ್ಲೋಸ್‌ ಆಗಿರುವ ಮೂಲಕ ಈ ರಿಯಾಲಿಟಿ ಶೋನಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದರು. ಗೌತಮಿ ಸತ್ಯ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಆದರೆ, ಇದಕ್ಕೂ ಮುನ್ನ ಕಿನಾರೆ ಹಾಗೂ ಆದ್ಯ ಎಂಬ ಸಿನಿಮಾದ ಮೂಲಕ ಗೌತಮಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರು.

Aishwarya Shindogi: ಮದುವೆಯಾಗೊ ಹುಡುಗನ ಬಗ್ಗೆ ಮಾತನಾಡಿದ ಐಶ್ವರ್ಯಾ ಸಿಂಧೋಗಿ