ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದ ಸಾರ್ವಕಾಲಿಕ ನಾಯಕರಲ್ಲಿ ರೋಹಿತ್‌ ಶರ್ಮಾ ಕೂಡ ಒಬ್ಬರು: ದಿನೇಶ್‌ ಕಾರ್ತಿಕ್‌!

Dinesh Karthik Praised Rohit Sharma: ಭಾರತ ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ದಿನೇಶ್ ಕಾರ್ತಿಕ್ ನಾಯಕ ರೋಹಿತ್ ಶರ್ಮಾ ಅವರನ್ನು ಹೊಗಳಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಭಾರತ ಕಂಡ ಅತ್ಯುತ್ತಮ ನಾಯಕರಲ್ಲಿ ರೋಹಿತ್ ಕೂಡ ಒಬ್ಬರು ಎಂದು ಕಾರ್ತಿಕ್ ಹೇಳಿದ್ದಾರೆ.

ರೋಹಿತ್‌ ಶರ್ಮಾ ನಾಯಕತ್ವದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಕಾರ್ತಿಕ್‌!

ರೋಹಿತ್‌ ಶರ್ಮಾಗೆ ದಿನೇಶ್‌ ಕಾರ್ತಿಕ್‌ ಮೆಚ್ಚುಗೆ.

Profile Ramesh Kote Mar 10, 2025 11:23 PM

ದುಬೈ: ಭಾರತ ತಂಡ ಚಾಂಪಿಯನ್ಸ್ ಟ್ರೋಫಿ (Champions Trophy 2025) ಗೆದ್ದ ನಂತರ ಮಾಜಿ ವಿಕೆಟ್‌ ಕೀಪರ್‌-ಕಾಮೆಂಟೇಟರ್‌ ದಿನೇಶ್ ಕಾರ್ತಿಕ್ (Dinesh Karthik), ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಭಾರತ ಕಂಡ ಅತ್ಯುತ್ತಮ ನಾಯಕರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು ಎಂದು ಕಾರ್ತಿಕ್ ಬಣ್ಣಿಸಿದ್ದು, ತಂಡದ ಆಕ್ರಮಣಕಾರಿ ಮನಸ್ಥಿತಿಯನ್ನು ಶ್ಲಾಘಿಸಿದ್ದಾರೆ. ಭಾನುವಾರ ದುಬೈನಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಹಣಾಹಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಮ್‌ ಇಂಡಿಯಾ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಫೈನಲ್‌ನಲ್ಲಿ ರೋಹಿತ್ ಶರ್ಮಾ 76 ರನ್‌ಗಳ ಅದ್ಭುತ ಇನಿಂಗ್ಸ್‌ ಆಡಿದರು. ಈ ಟೂರ್ನಿಯ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. ಈ ಹಿಂದೆ 2002 ಮತ್ತು 2013 ರಲ್ಲಿಯೂ ಟೀಮ್‌ ಇಂಡಿಯಾ ಈ ಪ್ರಶಸ್ತಿಯನ್ನು ಗೆದ್ದಿತ್ತು.

ನಾಯಕನಾಗಿ ರೋಹಿತ್ ಶರ್ಮಾ ಪಾಲಿಗೆ ಇದು ಎರಡನೇ ಐಸಿಸಿ ಪ್ರಶಸ್ತಿಯಾಗಿದೆ. ಕಳೆದ ವರ್ಷ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಟೀಮ್‌ ಇಂಡಿಯಾ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದಿತ್ತು. ಭಾರತ ಎರಡೂ ಟೂರ್ನಿಗಳಲ್ಲಿ ಒಂದೇ ಒಂದು ಪಂದ್ಯದಲ್ಲಿಯೂ ಸೋತಿಲ್ಲ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ನಾಯಕತ್ವವನ್ನು ದಿನೇಶ್ ಕಾರ್ತಿಕ್ ಶ್ಲಾಘಿಸಿದ್ದಾರೆ.

IND vs NZ: ನ್ಯೂಜಿಲೆಂಡ್‌ಗೆ ಮಣ್ಣು ಮುಕ್ಕಿಸಿ ಮೂರನೇ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ!

"ನೀವು ನಾಯಕರ ಬಗ್ಗೆ ಮಾತನಾಡುವಾಗ, ಅವರು (ರೋಹಿತ್‌ ಶರ್ಮಾ) ಭಾರತ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರು. ನಾವು ಕಪಿಲ್ ದೇವ್, ಎಂಎಸ್ ಧೋನಿ - ವಿಶ್ವಕಪ್ ವಿಜೇತರ ಬಗ್ಗೆ ಮಾತನಾಡುತ್ತೇವೆ. ರೋಹಿತ್ ಶರ್ಮಾ ವಿಶ್ವಕಪ್ ವಿಜೇತರು ಮತ್ತು ಅವರು ತಂಡವನ್ನು ಮುನ್ನಡೆಸಿದ ರೀತಿ ವಿಶಿಷ್ಟವಾಗಿದೆ," ಎಂದು ದಿನೇಶ್‌ ಕಾರ್ತಿಕ್‌ ಹೇಳಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡದ ಬದಲಾದ ಮನಸ್ಥಿತಿಯನ್ನು ಕಾರ್ತಿಕ್ ಶ್ಲಾಘಿಸಿದರು. ರೋಹಿತ್ ತಂಡದಲ್ಲಿ ಆಕ್ರಮಣಕಾರಿ ಮನೋಭಾವವನ್ನು ತುಂಬಿದ್ದಾರೆ ಎಂದು ಅವರು ಹೇಳಿದ್ದಾರೆ. "ಅವರು ಟೂರ್ನಿಯನ್ನು ಗೆದ್ದಿದ್ದಾರೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ, ನಾವು ಹೊಂದಿಕೊಳ್ಳಬೇಕು ಮತ್ತು ವಿಕಸನಗೊಳ್ಳಬೇಕು ಮತ್ತು ಆಕ್ರಮಣಕಾರಿಯಾಗಿ ಆಡಬೇಕು ಎಂಬ ಭಾರತ ತಂಡದ ಹಾಗೂ ಮುಂದಿನ ಪೀಳಿಗೆಯ ಮನಸ್ಥಿತಿಯನ್ನು ಬದಲಾಯಿಸಿದ್ದಾರೆ. ಇದನ್ನು ನೋಡುವುದು ಸುಂದರವಾಗಿದೆ," ಎಂದು ಆರ್‌ಸಿಬಿ ಮಾಜಿ ವಿಕೆಟ್‌ ಕೀಪರ್‌ ತಿಳಿಸಿದ್ದಾರೆ.

IND vs NZ: ರೋಹಿತ್‌ ಶರ್ಮಾ ಬ್ಯಾಟಿಂಗ್‌ನಿಂದ ಬೌಲರ್‌ಗಳು ಭಯ ಬಿದ್ದಿದ್ದರೆಂದ ಮಿಚೆಲ್‌ ಸ್ಯಾಂಟ್ನರ್‌!

ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ರೋಹಿತ್ ಶರ್ಮಾ 83 ಎಸೆತಗಳಲ್ಲಿ 76 ರನ್ ಗಳಿಸಿದರು. ಅವರ ಇನಿಂಗ್ಸ್‌ ಭಾರತದ ಗೆಲುವಿಗೆ ಅಡಿಪಾಯ ಹಾಕಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನವನ್ನು ತೋರಿದೆ. 2024ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ನಂತರ ರೋಹಿತ್ ತಮ್ಮ ಎರಡನೇ ಐಸಿಸಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಎರಡೂ ಬಾರಿ ಇವರ ನಾಯಕತ್ವದಲ್ಲಿ ಭಾರತ ತಂಡ ಒಂದೂ ಒಂದು ಪಂದ್ಯದಲ್ಲಿಯೂ ಸೋತಿರಲಿಲ್ಲ.

ಈ ಬಗ್ಗೆ ಮಾತನಾಡಿದ ದಿನೇಶ್‌ ಕಾರ್ತಿಕ್‌, "ಒಂಬತ್ತು ತಿಂಗಳ ಅವಧಿಯಲ್ಲಿ ಎರಡು ಪ್ರಮುಖ ಐಸಿಸಿ ಪ್ರಶಸ್ತಿಗಳನ್ನು ಗೆದ್ದಿರುವುದು, ಇದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ರೋಹಿತ್‌ ಶರ್ಮಾ ಅವರು ಅದ್ಭುತವಾದ ಪರಂಪರೆಯನ್ನು ಬಿಟ್ಟು ಹೋಗಲಿದ್ದಾರೆ. ಟೂರ್ನಿಯನ್ನು ಗೆಲ್ಲುವ ಅವರ ಮನಸ್ಥಿತಿ ಮಾತ್ರವಲ್ಲ, ಕಂಡಿಷನ್ಸ್‌ಗೆ ತಕ್ಕಂತೆ ಆಟಗಾರರನ್ನು ಆಯ್ಕೆ ಮಾಡುವ ವಿಷಯದಲ್ಲಿಯೂ ಅವರು ಶ್ರೇಷ್ಠ ದರ್ಜೆಯಲ್ಲಿದ್ದಾರೆ," ಎಂದು ಮಾಜಿ ವಿಕೆಟ್‌ ಕೀಪರ್‌ ತಿಳಿಸಿದ್ದಾರೆ.

IND vs NZ: 37 ರನ್‌ ಗಳಿಸಿ ಕೇನ್‌ ವಿಲಿಯಮ್ಸನ್‌ ದಾಖಲೆ ಮುರಿದ ರಚಿನ್‌ ರವೀಂದ್ರ!

ರೋಹಿತ್ ಶರ್ಮಾ ಅವರ ಶಾಂತ ಸ್ವಭಾವ ಮತ್ತು ತಂತ್ರವನ್ನು ದಿನೇಶ್‌ ಕಾರ್ತಿಕ್ ಕೂಡ ಶ್ಲಾಘಿಸಿದರು. "ಕಠಿಣ ಕ್ಷಣಗಳಲ್ಲಿ, ಅವರು ಶಾಂತವಾಗಿದ್ದರು ಮತ್ತು ನಿಜವಾಗಿಯೂ ಉತ್ತಮ ಯೋಜನೆ ಮತ್ತು ಅದನ್ನು ಹೇಗೆ ಮಾಡಬೇಕೆಂಬ ಕಲ್ಪನೆಯೊಂದಿಗೆ ಕೆಲವು ಗಂಭೀರ ಪ್ರತಿಭೆಯನ್ನು ಅವರು ಹೊಂದಿದ್ದಾರೆ," ಎಂದು ರೋಹಿತ್‌ ಶರ್ಮಾ ಹೇಳಿದರು.