IND vs NZ: ರೋಹಿತ್ ಶರ್ಮಾ ಬ್ಯಾಟಿಂಗ್‌ನಿಂದ ಬೌಲರ್‌ಗಳು ಭಯ ಬಿದ್ದಿದ್ದರೆಂದ ಮಿಚೆಲ್ ಸ್ಯಾಂಟ್ನರ್!
Mitchell Santner Praised on Rohit Sharma: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಹಣಾಹಣಿಯಲ್ಲಿ ಅರ್ಧಶತಕ ಸಿಡಿಸಿ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ನಾಯಕ ರೋಹಿತ್ ಶರ್ಮಾ ಅವರನ್ನು ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ರೋಹಿತ್ ಶರ್ಮಾ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ನಮ್ಮ ಬೌಲರ್‌ಗಳು ಭಯ ಭೀತರಾಗಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ.

ರೋಹಿತ್ ಶರ್ಮಾಗೆ ಮಿಚೆಲ್ ಸ್ಯಾಂಟ್ನರ್ ಮೆಚ್ಚುಗೆ.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭಾರತ ತಂಡದ 4 ವಿಕೆಟ್ ಗೆಲುವಿಗೆ ನೆರವು ನೀಡಿದ್ದ ನಾಯಕ ರೋಹಿತ್ ಶರ್ಮಾ( Rohit Sharma) ಅವರನ್ನು ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ( Mithcell Santner) ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ರೋಹಿತ್ ಶರ್ಮಾ ಅವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ನಮ್ಮ ಬೌಲರ್‌ಗಳಲ್ಲಿ ಭಯ ಮೂಡಿಸಿದ್ದರು ಎಂದು ಅವರು ಹೇಳಿದ್ದಾರೆ. ಈ ಹಣಾಹಣಿಯಲ್ಲಿ ಅದ್ಭುತ ಬ್ಯಾಟ್ ಮಾಡಿದ್ದ ರೋಹಿತ್ ಶರ್ಮಾ 76 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಟೀಮ್ ಇಂಡಿಯಾ ಮೂರನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ಮಾರ್ಚ್ 9 ರಂದು ಭಾನುವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೀಡಿದ್ದ 252 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮಾ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಆಡಿದ್ದ 83 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 76 ರನ್‌ಗಳನ್ನು ಸಿಡಿಸಿ ಭಾರತ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು. ಪವರ್‌ಪ್ಲೇನಲ್ಲಿ ರೋಹಿತ್ ಶರ್ಮಾ ತಮ್ಮ ಸ್ಟೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳಲ್ಲಿ ನಡುಕ ಉಂಟು ಮಾಡಿದ್ದರು. 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿಯೂ ರೋಹಿತ್ ಶರ್ಮಾ ಇದೇ ಆಟವನ್ನು ಆಡಿದ್ದರು. ಆದೆರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಭಾರತ ತಂಡ ಅಂದು ಆಸ್ಟ್ರೇಲಿಯಾ ವಿರುದ್ದ ಸೋಲು ಅನುಭವಿಸಿತ್ತು.
IND vs NZ: ನ್ಯೂಜಿಲೆಂಡ್‌ಗೆ ಮಣ್ಣು ಮುಕ್ಕಿಸಿ ಮೂರನೇ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ!
ರೋಹಿತ್ ಶರ್ಮಾ ಬೌಲರ್‌ಗಳಿಗೆ ಭಯ ಮೂಡಿಸಿದ್ದಾರೆ: ಮಿಚೆಲ್ ಸ್ಯಾಂಟ್ನರ್
ರೋಹಿತ್ ಶರ್ಮ ಬ್ಯಾಟಿಂಗ್ ವಿಧಾನ ಕೆಲವು ಸಮಯಗಳಲ್ಲಿ ವೈಫಲ್ಯ ಅನುಭವಿಸಿರಬಹುದು. ಆದರೆ, ಫೈನಲ್ ಪಂದ್ಯಗಳಲ್ಲಿ ಅವರು ಎಂದಿಗೂ ವೈಫಲ್ಯ ಅನುಭವಿಸುವುದಿಲ್ಲ. ರೋಹಿತ್ ಶರ್ಮಾ ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ನಾವು ಆರಂಭದಲ್ಲಿಯೇ ಹಿನ್ನಡೆಯನ್ನು ಅನುಭವಿಸಿದ್ದೆವು ಎಂದು ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಒಪ್ಪಿಕೊಂಡಿದ್ದಾರೆ.
"ನೀವು ಯಾವ ಪಂದ್ಯಗಳಲ್ಲಿ ರನ್ ಗಳಿಸಲು ಬಯಸುತ್ತೀರಿ ಎಂದು ಟೂರ್ನಿಯ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾಗೆ ಕೇಳಿದರೆ, ಅವರು ಫೈನಲ್ ಪಂದ್ಯವೆಂದು ಹೇಳುತ್ತಾರೆ. ಅವರು ತಮ್ಮ ಬ್ಯಾಟಿಂಗ್ ವಿಧಾನದಿಂದ ಬೌಲರ್‌ಗಳಲ್ಲಿ ಭಯ ಮೂಡಿಸುತ್ತಾರೆ. ಆ ರೀತಿಯ ಆಕ್ರಮಣಕಾರಿ ಆಟವನ್ನು ಅವರು ಹೊಂದಿದ್ದಾರೆ. ಅವರು ಮತ್ತು ಶುಭಮನ್ ಗಿಲ್ ಚೆನ್ನಾಗಿ ಆಡಿದ್ದಾರೆ. ಶುಭಮನ್ ಗಿಲ್ ಅವರು ಕೆಟ್ಟ ಎಸೆತಕ್ಕಾಗಿ ಕಾಯುತ್ತಿದ್ದರು. ಆದರೆ, ರೋಹಿತ್ ಶರ್ಮಾ ಅವರು ಬೌಲರ್‌ಗಳ ಲೆನ್ತ್ ಎಸೆತಗಳಲ್ಲಿ ದೊಡ್ಡ ಹೊಡೆತಗಳನ್ನು ಹೊಡೆಯುತ್ತಿದ್ದರು," ಎಂದು ಮಿಚೆಲ್ ಸ್ಯಾಂಟ್ನರ್ ಶ್ಲಾಘಿಸಿದ್ದಾರೆ.
"ರೋಹಿತ್ ಶರ್ಮಾ ಈ ಆಟವನ್ನು ಆಡಲಿದ್ದಾರೆಂದು ನನಗೆ ಮೋದಲೇ ಗೊತ್ತಿತ್ತು. ಕೆಲವೊಮ್ಮ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಎಡವಿರಬಹುದು ಆದರೆ, ಫೈನಲ್‌ನಂತಹ ಪಂದ್ಯಗಳಲ್ಲಿ ಅವರು ವಿಫಲರಾಗುವುದಿಲ್ಲ. ಅದನ್ನೇ ಇವತ್ತು (ಭಾನುವಾರ) ಅವರು ಮಾಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಸ್ಲೋ ವಿಕೆಟ್‌ನಲ್ಲಿ ಅವರು ತಮ್ಮನ್ನು ತಾವು ಅಭಿವ್ಯಕ್ತಗೊಳಿಸಿದರು. ಪವರ್‌ಪ್ಲೇನಲ್ಲಿ ಅವರ ಬ್ಯಾಟಿಂಗ್ ಉತ್ತಮವಾಗಿತ್ತು ಹಾಗೂ ನಾವು ಹಿನ್ನಡೆಯನ್ನು ಅನುಭವಿಸುತ್ತೇವೆಂದು ನಮಗೆ ಮೊದಲೇ ಗೊತ್ತಿತ್ತು. ಎಲ್ಲಾ ಸಮಯದಲ್ಲಿ ಅವರು ವಿಫಲರಾಗಿರಬಹದು. ಆದರೆ, ಅವರು ಯಶಸ್ವಿಯಾದರೆ ಪಂದ್ಯವನ್ನು ಒಬ್ಬರೇ ತಿರುಗಿಸುತ್ತಾರೆ," ಎಂದು ಕಿವೀಸ್ ನಾಯಕ ತಿಳಿಸಿದ್ದಾರೆ.
IND vs NZ Finla: ಚಾಂಪಿಯನ್ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?
ರೋಹಿತ್ ಶರ್ಮಾ ನಮ್ಮಿಂದ ಪಂದ್ಯವನ್ನು ಕಸಿದುಕೊಂಡರು
"ಹೌದು, ಕೊನೆಯಲ್ಲಿ ನಮಗೆ ಸ್ವಲ್ಪ ನಿರಾಶೆಯಾಯಿತು. ಏಕೆಂದರೆ, ಒಳ್ಳೆಯ ತಂಡವಾಗಿ ನಾವು ಫೈನಲ್‌ಗೆ ಬಂದಿದ್ದೆವು. ಪಂದ್ಯದುದ್ದಕ್ಕೂ ನಾವು ಸವಾಲನ್ನು ನೀಡಿದ್ದೆವು. ಆದರೆ, ಕೆಲವೊಂದು ಸಣ್ಣ ಸಣ್ಣ ಕ್ಷಣಗಳಲ್ಲಿ ಪಂದ್ಯ ನಮ್ಮಿಂದ ದೂರವಾಯಿತು. ಆದರೆ, ನಮ್ಮ ತಂಡದ ಬಗ್ಗೆ ನನಗೆ ಯಾವಾಗಲೂ ಹೆಮ್ಮೆ ಇದೆ. ಏಕೆಂದರೆ ಟೂರ್ನಿಯುದ್ದಕ್ಕೂ ತೋರಿದ ಪ್ರದರ್ಶನ ಅತ್ಯುತ್ತಮವಾಗಿತ್ತು. ನಮ್ಮಲ್ಲಿ ಅನುಭವಿ ಹಾಗೂ ಯುವ ಆಟಗಾರರ ಅತ್ಯುತ್ತಮ ಸಂಯೋಜನೆ ಇತ್ತು. ಈ ಪಂದ್ಯದಲ್ಲಿ ನಮಗೆ 20 ರನ್ ಕಡಿಮೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ, ರೋಹಿತ್ ಶರ್ಮಾ ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು," ಎಂದು ಮಿಚೆಲ್ ಸ್ಯಾಂಟ್ನರ್ ಹೇಳಿದ್ದಾರೆ.