Chanakya: ನಿಮ್ಮನ್ನು ಗೆಲುವಿನ ಹಾದಿಯಲ್ಲಿ ಸಾಗಿಸಬಲ್ಲ ʻಚಾಣಕ್ಯʼನ ಆರು ಸೂತ್ರಗಳು ಇವೇ ನೋಡಿ
ಚಾಣಕ್ಯ ಮಹಾ ಮೇಧಾವಿ, ಜ್ಞಾನಿ, ಅವರು ನೀಡಿದ ಜೀವನ ಪಾಠಗಳು ಚಾಣಕ್ಯ ಸೂತ್ರಗಳೆಂದೇ ಹೆಸರುವಾಸಿಯಾಗಿದೆ. ಹಾಗಾದ್ರೆ ಜೀವನದಲ್ಲಿ ಸೋತವರಿಗೆ ಮೇಲೆದ್ದು ಗೆಲ್ಲಲು ಚಾಣಕ್ಯರು ನೀಡಿದ ಸೂತ್ರಗಳೇನು?
ನವದೆಹಲಿ: ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಬಯಸುವುದು ಸಹಜ. ಸೋಲು ಯಾರಿಗೂ ಇಷ್ಟವಾಗುವುದಿಲ್ಲ. ಯಶಸ್ಸಿಗಾಗಿ ಸಾಕಷ್ಟು ಹೋರಾಡುತ್ತೇವೆ, ಕಠಿಣ ಪರಿಶ್ರಮ ಪಡುತ್ತೇವೆ. ಆದರೆ ಕಠಿಣ ಪರಿಶ್ರಮದಿಂದ ಮಾತ್ರ ಗೆಲ್ಲಲ್ಲು ಸಾಧ್ಯವಿಲ್ಲ. ಬದುಕಿನಲ್ಲಿ ಯಶಸ್ಸು ಗಳಿಸಲು ಕೆಲವು ಇನ್ನೂ ಕೆಲವು ಅಂಶಗಳು ಬಹಳ ಅಗತ್ಯ ಎನ್ನಿಸುತ್ತವೆ. ಅವುಗಳನ್ನು ರೂಢಿಸಿಕೊಂಡಾಗ ಮಾತ್ರ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ.
ಯಶಸ್ಸಿನ ವಿಚಾರವಾಗಿ ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಉಲ್ಲೇಖಿಸಿದ ಕೆಲವು ಪ್ರಮುಖ ಅಂಶಗಳು ಹೀಗಿವೆ:
ಬಲವಾದ ಇಚ್ಛೆ: ಚಾಣಕ್ಯರ ಪ್ರಕಾರ, ನಿಮ್ಮ ಇಚ್ಛೆ ಬಲವಾಗಿರದಿದ್ದರೆ, ನೀವು ಯಶಸ್ವಿಯಾಗಲು ಸಾಧ್ಯವಿಲ್ಲ. ಬದುಕಿನಲ್ಲಿ ಎಷ್ಟೇ ಕಷ್ಟಪಟ್ಟರೂ, ನಿಮ್ಮಲ್ಲಿ ಇಚ್ಛಾಶಕ್ತಿಯ ಕೊರತೆಯಿದ್ದರೆ, ಅದು ನಿಮ್ಮ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ. ಏಕೆಂದರೆ ಇಚ್ಛಾಶಕ್ತಿಯಿಲ್ಲದೆ ಮನುಷ್ಯ ಯಾವುದೇ ಕೆಲಸವನ್ನು ಪೂರ್ಣ ಸಮರ್ಪಣಾಭಾವದಿಂದ ಮಾಡಲು ಸಾಧ್ಯವಿಲ್ಲ.
ಆತ್ಮವಿಶ್ವಾಸ: ಚಾಣಕ್ಯರ ಪ್ರಕಾರ, ಯಶಸ್ಸಿಗೆ ಕಠಿಣ ಪರಿಶ್ರಮದ ಜೊತೆಗೆ ಆತ್ಮವಿಶ್ವಾಸವೂ ಬಹಳ ಮುಖ್ಯ. ಒಬ್ಬ ವ್ಯಕ್ತಿಯು ಆತ್ಮವಿಶ್ವಾಸವಿಲ್ಲದೆ ಯಶಸ್ವಿಯಾಗಲು ಸಾಧ್ಯವಿಲ್ಲ. ಆತ್ಮವಿಶ್ವಾಸದಿಂದ ಕೆಲಸ ಮಾಡುವ ವ್ಯಕ್ತಿ ಯಶಸ್ಸು ಗಳಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಈ ಸುದ್ದಿಯನ್ನೂ ಓದಿ: Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ
ಸೋಲುವ ಮನೋಭಾವ:ಬದುಕಿನಲ್ಲಿ ಅರ್ಧಕ್ಕೆ ಸೋತು ಕೈ ಚೆಲ್ಲುವ ವ್ಯಕ್ತಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ. ಗೆಲ್ಲಲ್ಲು ಛಲ, ದೃಢನಿರ್ಧಾರ ಬಹಳ ಮುಖ್ಯ. ಗೆಲ್ಲುವ ಮನಸ್ಸಿದ್ದರೆ ಖಂಡಿತ ಗೆಲುವು ಅಸಾಧ್ಯವಲ್ಲ. ಚಾಣಕ್ಯರ ಪ್ರಕಾರ, ಸೋತ ವ್ಯಕ್ತಿ ಯಾವಾಗಲೂ ನಕಾರಾತ್ಮಕವಾಗಿ ಯೋಚಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಯಶಸ್ಸು ಅವನ ಹತ್ತಿರಕ್ಕೆ ಬರುವುದಿಲ್ಲ. ಹಾಗಾಗಿ ಗೆದ್ದೆ ಗೆಲ್ಲುತ್ತೇನೆ ಎನ್ನುವ ಮನೋಭಾವ ಬಹಳ ಮುಖ್ಯ ಎಂದು ಚಾಣಕ್ಯ ಹೇಳುತ್ತಾರೆ
ತಾಳ್ಮೆ ಮತ್ತು ಸಂಯಮವಿರಲಿ : ಯಾವುದೇ ಗುರಿಯನ್ನು ಸಾಧಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನಿರಂತರವಾಗಿ ಕೆಲಸ ಮಾಡುವುದು ಬಹಳ ಮುಖ್ಯ. ತಾಳ್ಮೆ ಮತ್ತು ಸಂಯಮ ಗುಣಗಳು ಒಬ್ಬ ವ್ಯಕ್ತಿಯನ್ನು ಕಷ್ಟಕರ ಸಂದರ್ಭಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಯಾವುದೇ ವಿಷಯದಲ್ಲಿ ಆತುರ ಪಡುವ ಬದಲು ತಾಳ್ಮೆಯಿಂದ ಶ್ರದ್ಧೆವಹಿಸಿ ಕೆಲಸ ಮಾಡುವತ್ತ ಗಮನ ಹರಿಸಿ ಎಂದು ಚಾಣಕ್ಯ ತನ್ನ ನೀತಿಯಲ್ಲಿ ಉಲ್ಲೇಖಿಸಿದ್ದಾನೆ.
ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದು : ಯಶಸ್ವಿ ಜೀವನವು ನಿಮ್ಮದಾಗಲೂ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸಮಯ ವ್ಯರ್ಥ ಮಾಡುವವರು ಬದುಕಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಮಯವನ್ನು ಗೌರವಿಸುವ ಹಾಗೂ ಸರಿಯಾದ ಸಮಯಕ್ಕೆ ಎಲ್ಲಾ ಕೆಲಸವನ್ನು ಮಾಡಿ ಮುಗಿಸುವ ವ್ಯಕ್ತಿ ಮಾತ್ರ ಜೀವನದಲ್ಲಿ ಏಳಿಗೆ ಹಾಗೂ ಯಶಸ್ಸಿಗೆ ಹತ್ತಿರವಾಗುತ್ತಾನೆ. ಹೀಗಾಗಿ ಸಮಯದ ಸದುಪಯೋಗಪಡಿಸಿಕೊಳ್ಳುವ ಗುಣವಿರಬೇಕು ಎಂದು ಚಾಣಕ್ಯ ಹೇಳುತ್ತಾನೆ.