ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur news: ಸಂವಿಧಾನವೇ ನಮ್ಮ ಧರ್ಮ ಗ್ರಂಥ : ಪ್ರೊ.ಬಿ.ರಾಮಚಂದ್ರಪ್ಪ

ಮಾನವ ಬಂಧುತ್ವ ವೇದಿಕೆಯಿಂದ ಬೆಂಗಳೂರು ಮತ್ತು ಶಿರಾದಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದ್ದು ಮೌಢ್ಯಗಳನ್ನು ವಿರೋಧಿಸುವಮ ವೈಜ್ಞಾನಿಕ ಚಿಂತ ನೆಯ ಹಾದಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದು ಕೊಂಡು ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ಬಯಸುವ ಯುವಕರಿಗೆ ಉಚಿತ ಊಟ, ಆಶ್ರಯ ಪುಸ್ತಕ ಸಹಿತ ತರಬೇತಿ ನೀಡಲಾಗುವುದು. ನಮ್ಮ ವೇದಿಕೆಯ ಆರ್ಥಿಕ ಶಕ್ತಿಯಾಗಿ ಸಂಸ್ಥಾಪಕ ಅಧ್ಯಕ್ಷ ಸತೀಶ್ ಜಾರಕಿಹೊಳಿ ಕೆಲಸ ಮಾಡುತ್ತಿದ್ದಾರೆ ಎಂದರು.

ಮಾನವೀಯತೆಯೇ ನಮ್ಮ ಧರ್ಮ

ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಹೇಳಿದರು.

Profile Ashok Nayak Apr 4, 2025 12:23 PM

ಚಿಕ್ಕಬಳ್ಳಾಪುರ : ಮಾನವೀಯತೆಯೇ ನಮ್ಮ ಧರ್ಮ, ಸಂವಿಧಾನವೇ ನಮ್ಮ ಧರ್ಮ ಗ್ರಂಥವಾಗಿದೆ.ಮೌಢ್ಯವನ್ನು ಕಿತ್ತೆಸೆದು ಜೀವಪರವಾದ ವೈಚಾರಿಕ ಜಾಗೃತಿಯನ್ನು ಯುವ ಸಮುದಾಯದಲ್ಲಿ ತುಂಬುವುದೇ ನಮ್ಮ ವೇದಿಕೆ ಉದ್ದೇಶವಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಹೇಳಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಮಾನವ ಭಾತರವು ಜ್ಯಾತ್ಯಾತೀತ ರಾಷ್ಟ್ರ. ಇಲ್ಲಿ ಎಲ್ಲಾ ಜಾತಿ ಧರ್ಮ ಜನಾಂಗಕ್ಕೆ ಬದು ಕುವ ಸಮಾನ ಹಕ್ಕುಗಳಿವೆ. ಕೋಮುವಾದವನ್ನು ಪ್ರತಿಪಾದಿಸುವ ಸಾಂವಿಧಾನಿಕ ಹಕ್ಕು ಗಳನ್ನು ಕಸಿಯುವ ಯಾವುದೇ ಪಕ್ಷವಿದ್ದರೂ ಅದು ಜನವಿರೋಧಿ ಪಕ್ಷವಾಗಿದೆ ಎಂದರು.

ವೇದಿಕೆ 10 ವರ್ಷಗಳ ಸಾರ್ಥಕ ಪಯಣವನ್ನು ಮುಂದುವರೆಸಿದ್ದು,ಜಿಲ್ಲೆಯಲ್ಲಿ ಇದರ ಕಾರ್ಯಚಟವಟಿಕೆ ಕುಂಠಿತವಾಗಿದೆ.ಇದಕ್ಕೆ ವೇಗವನ್ನು ನೀಡುವ ಉದ್ದೇಶದಿಂದ ಜಿಲ್ಲೆಗೆ ಬಂದಿದ್ದು, ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು.

ಮಾನವ ಬಂಧುತ್ವ ವೇದಿಕೆಯಿಂದ ಬೆಂಗಳೂರು ಮತ್ತು ಶಿರಾದಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದ್ದು ಮೌಢ್ಯಗಳನ್ನು ವಿರೋಧಿಸುವಮ ವೈಜ್ಞಾನಿಕ ಚಿಂತ ನೆಯ ಹಾದಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದು ಕೊಂಡು ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ಬಯಸುವ ಯುವಕರಿಗೆ ಉಚಿತ ಊಟ, ಆಶ್ರಯ ಪುಸ್ತಕ ಸಹಿತ ತರಬೇತಿ ನೀಡಲಾಗುವುದು. ನಮ್ಮ ವೇದಿಕೆಯ ಆರ್ಥಿಕ ಶಕ್ತಿಯಾಗಿ ಸಂಸ್ಥಾಪಕ ಅಧ್ಯಕ್ಷ ಸತೀಶ್ ಜಾರಕಿಹೊಳಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಸಂಚಾಲಕ ಕುಂದಲಗುರ್ಕಿ ಮುನೀಂದ್ರ,ಪದಾಧಿಕಾರಿಗಳಾದ ಪಟ್ರೇನಹಳ್ಳಿ ಕೃಷ್ಣ, ಶ್ರೀನಿವಾಸ್,ಶಿವಚಂದ್ರ, ಮಂಜುಳ, ರಹಮತ್ತುಲ್ಲಾ ಇತರರು ಇದ್ದರು.

೩ಸಿಬಿಪಿಎಂ೫: