Weather Forecast: ಹವಾಮಾನ ವರದಿ; ಒಳನಾಡಿನಲ್ಲಿ 30-40 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ
Weather Forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಮುಖ್ಯವಾಗಿ ಶುಭ್ರ ಆಕಾಶ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 35 °C ಮತ್ತು 19°C ಇರುವ ಸಾಧ್ಯತೆ ಇದೆ.


ಬೆಂಗಳೂರು: ರಾಜ್ಯದಾದ್ಯಂತ ಶನಿವಾರ ಒಣ ಹವೆಯ (Weather Forecast) ವಾತಾವರಣವಿತ್ತು. ಅದೇ ರೀತಿ ಭಾನುವಾರ ಕೂಡ ರಾಜ್ಯದಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡದೆ. ಇನ್ನು ಮಾ.18 ಮತ್ತು 19ರಂದು ಉತ್ತರ ಒಳನಾಡಿನ ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಬಿಸಿ ಗಾಳಿ ವಾತಾವರಣ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಮುಖ್ಯವಾಗಿ ಶುಭ್ರ ಆಕಾಶ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 35 °C ಮತ್ತು 19°C ಇರುವ ಸಾಧ್ಯತೆ ಇದೆ.
ಇನ್ನು ಮಾ.17ರಂದು ಕೂಡ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ. ಮಾ.19ವರೆಗೆ ಇದೇ ರೀತಿಯ ಸ್ಥಿತಿ ಇರಲಿದ್ದು, ನಂತರ ಮಾ. 20ರಿಂದ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಕಡೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ.
ಮಾ. 21ರಂದು ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಕಡೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ.
ಕಲಬುರಗಿಯಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲು
ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಶುಕ್ರವಾರ ಕಲಬುರಗಿಯಲ್ಲಿ ಅತೀ ಹೆಚ್ಚು ಉಷ್ಣಾಂಶ 40.4 ಡಿ.ಸೆ ದಾಖಲಾಗಿದೆ. ಇನ್ನು ಚಾಮರಾಜನಗರದಲ್ಲಿ ಅತೀ ಕಡಿಮೆ ಉಷ್ಣಾಂಶ 15.6 ಡಿ.ಸೆ. ದಾಖಲಾಗಿದೆ.
ವಿಸ್ತೃತ ಶ್ರೇಣಿಯ ಮುನ್ಸೂಚನೆ
ಹವಾಮಾನ ಇಲಾಖೆ ರಾಜ್ಯದ ಹವಾಮಾನದ ಕುರಿತ ನಾಲ್ಕು ವಾರಗಳ ವಿಸ್ತೃತ ಮುನ್ಸೂಚನೆಯನ್ನು ನೀಡಿದೆ.
ಮಾರ್ಚ್ 14 ರಿಂದ 20: ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇರಲಿದ್ದು, ಗರಿಷ್ಠ ತಾಪಮಾನ ಕರಾವಳಿ, ದಕ್ಷಿಣ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಇರಲಿದೆ.
ಮಾರ್ಚ್ 21-27: ಸಾಮಾನ್ಯಕ್ಕಿಂತ 1-5 ಮಿ.ಮೀ. ಹೆಚ್ಚು ಮಳೆ, 1-4 ಡಿಗ್ರಿ ಸೆಲ್ಸಿಯಸ್ ಕಡಿಮೆ ಬಿಸಿಲು ಇರಲಿದೆ.
ಮಾರ್ಚ್ -28 ರಿಂದ ಏ. 3: ಸಾಮಾನ್ಯಕ್ಕಿಂತ 1-3 ಮಿಮೀ ಮಳೆ, 1-4 ಡಿಗ್ರಿ ಸೆಲ್ಸಿಯಸ್ ಕಡಿಮೆ ಗರಿಷ್ಠ ತಾಪಮಾನ ದಾಖಲಾಗಲಿದೆ.
ಮಾರ್ಚ್ 4 ರಿಂದ 10 ಏ. 10: ದಿನಕ್ಕೆ 1-3 ಮಿಮೀ ನಷ್ಟು ,ಸಾಮಾನ್ಯ ಹಾಗೂ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಯಾಗುವ ಸಾಧ್ಯತೆ ಇದೆ. ಬಿಸಿಲು ಕಡಿಮೆ ಇರಲಿದೆ.
ಈ ಸುದ್ದಿಯನ್ನೂ ಓದಿ | Health Tips: ಊಟದ ಬಳಿಕ ವಾಕಿಂಗ್ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು