#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Emergency Movie: ಎಮರ್ಜೆನ್ಸಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ- ಲಂಡನ್‌ನಲ್ಲಿ ಪ್ರತಿಭಟನೆ;ಬ್ರಿಟನ್‌ಗೆ ಭಾರತ ಕೊಟ್ಟ ಸಂದೇಶವೇನು?

ಕಂಗನಾ ರಣಾವತ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಎಮರ್ಜೆನ್ಸಿ' ಚಿತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಲಂಡನ್‌ನಲ್ಲಿ ಭಾರೀ ಪ್ರತಿಭಟನೆಗಳು ಆರಂಭವಾಗಿದ್ದು, ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡದೆ ಸಿಖ್ಖರು ನಿರಂತರ ಪ್ರತಿಭಟನೆ ನಡೆಸಿದ್ದಾರೆ. 'ಎಮರ್ಜೆನ್ಸಿ' ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಬಗ್ಗೆ ಭಾರತ ಸರ್ಕಾರವು ಬ್ರಿಟನ್‌ ಸರ್ಕಾರದ ಕಳವಳ ವ್ಯಕ್ತಪಡಿಸಿದೆ.

ಎಮರ್ಜೆನ್ಸಿ ಚಿತ್ರಕ್ಕೆ ಲಂಡನ್‌ನಲ್ಲಿ ಅಡ್ಡಿ;ಕಳವಳ ವ್ಯಕ್ತಡಿಸಿದ ಬ್ರಿಟನ್‌ ಸರ್ಕಾರ!

Profile Deekshith Nair Jan 24, 2025 6:26 PM

ಲಂಡನ್:‌ 1975ರಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ(Indira Gandhi) ಅವರು ಹೇರಿದ ತುರ್ತು ಪರಿಸ್ಥಿತಿಯನ್ನು ಆಧರಿಸಿದ ʼಎಮರ್ಜೆನ್ಸಿʼ(Emergency Movie) ಚಿತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಆ ಚಿತ್ರದ ಪ್ರದರ್ಶನವನ್ನು ನಿಲ್ಲಿಸುವಂತೆ ಲಂಡನ್‌ನಲ್ಲಿ(UK Protests Over Emergency) ಪ್ರತಿಭಟನೆಯಾಗುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಶುಕ್ರವಾರ(ಜ.24) ನೀಡಿರುವ ಹೇಳಿಕೆ ಪ್ರಕಾರ, ಭಾರತ ವಿರೋಧಿ ಅಂಶಗಳಿಂದ ಹಿಂಸಾತ್ಮಕ ಪ್ರತಿಭಟನೆ ಮತ್ತು ಬೆದರಿಕೆ ಘಟನೆಗಳ ಬಗ್ಗೆ, ವಿಶೇಷವಾಗಿ 'ಎಮರ್ಜೆನ್ಸಿ' ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಬಗ್ಗೆ ಬ್ರಿಟನ್ ಸರ್ಕಾರವು ಕಳವಳ ವ್ಯಕ್ತಪಡಿಸಿದೆ.‌

ಕಂಗನಾ ರಣಾವತ್‌ ನಿರ್ದೇಶನದ ಎಮರ್ಜೆನ್ಸಿ ಚಿತ್ರದ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವಂತಿಲ್ಲ. ಅದಕ್ಕೆ ಅಡ್ಡಿಪಡಿಸುವವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.



ಇನ್ನು ಕನ್ಸರ್ವೇಟಿವ್ ಪಕ್ಷದ ಸಂಸದರೊಬ್ಬರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಬ್ರಿಟಿಷ್ ಗೃಹ ಕಾರ್ಯದರ್ಶಿಯನ್ನು ಕೇಳಿದ್ದಾರೆ. ಬಾಬ್ ಬ್ಲ್ಯಾಕ್‌ಮ್ಯಾನ್ ಎಂಬ ಸಂಸದರು ಹೌಸ್ ಆಫ್ ಕಾಮನ್ಸ್ (ಬ್ರಿಟನ್ ಸಂಸತ್ತು)ಗೆ ಚಿತ್ರದ ಪ್ರದರ್ಶನದ ಸಮಯದಲ್ಲಿ, ವಾಲ್ವರ್‌ಹ್ಯಾಂಪ್ಟನ್, ಬರ್ಮಿಂಗ್ಹ್ಯಾಮ್, ಸ್ಲೋ, ಸ್ಟೇನ್ಸ್ ಮತ್ತು ಮ್ಯಾಂಚೆಸ್ಟರ್ ನಗರಗಳಲ್ಲಿ ಅಡ್ಡಿ ಪಡಿಸಲಾಗಿದೆ . ಈ ಕಾರಣದಿಂದಾಗಿ, ವ್ಯೂ ಮತ್ತು ಸಿನಿ ವರ್ಲ್ಡ್ ಸಿನಿಮಾಗಳಲ್ಲಿ ದೇಶದ ಅನೇಕ ಚಿತ್ರಮಂದಿರಗಳಿಂದ ಚಿತ್ರವನ್ನು ತೆಗೆದುಹಾಕಲು ನಿರ್ಧರಿಸಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Kolkata Horror: ಕೊಲ್ಕತ್ತಾ ವೈದ್ಯೆ ಕೊಲೆ ಪ್ರಕರಣ; 17 ಲಕ್ಷ ಪರಿಹಾರ ತಿರಸ್ಕರಿಸಿದ ಪೋಷಕರು

ಚಿತ್ರವು ಜನವರಿ 17 ರಂದು ಬ್ರಿಟಿಷ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬ್ರಿಟನ್‌ನ ಕೆಲವು ಚಿತ್ರಮಂದಿರಗಳನ್ನು ಕೆಲವು ಖಾಲಿಸ್ತಾನಿ ಭಯೋತ್ಪಾದಕರು ಮುಖವಾಡಗಳನ್ನು ಧರಿಸಿ ಚಿತ್ರಮಂದಿರಕ್ಕೆ ಪ್ರವೇಶಿಸುವ ಮೂಲಕ ಚಿತ್ರವನ್ನು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಸಿಖ್ ಪ್ರೆಸ್ ಅಸೋಸಿಯೇಷನ್ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ಅವರು ಚಲನಚಿತ್ರವನ್ನು ಸಿಖ್ ವಿರೋಧಿ ಎಂದು ಪರಿಗಣಿಸಿದ್ದಾರೆ ಎಂದು ಹೇಳಿದ್ದಾರೆ. ಇಂತಹ ಪ್ರತಿಭಟನೆಗಳಿಂದಾಗಿ, ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ಬರ್ಮಿಂಗ್ಹ್ಯಾಮ್ ಮತ್ತು ವಾಲ್ವರ್‌ಹ್ಯಾಂಪ್ಟನ್‌ನಲ್ಲಿ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ.