#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ರಾಜ್ಯದಲ್ಲಿ ಕೂಡ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ : ಕೊಂಡೇನಹಳ್ಳಿ ಮುರಳಿ

ನೂರಾರು ವರ್ಷಗಳ ಸುದೀರ್ಘವಾದ ಈ ಅವಧಿಯಲ್ಲಿ ತಳಮಟ್ಟ ದಿಂದ ಹಂತಹಂತವಾಗಿ ಬೆಳೆದ ಕಾರ್ಯಕರ್ತರ ಪಕ್ಷವಾಗಿದೆ.ಅಣ್ಣಾ ಹಜಾರೆಯ ಗರಡಿಯಲ್ಲಿ ಭ್ರಷ್ಟಾಚಾರ ವಿರೋಧಿ ಅಲೆಯಲ್ಲಿ ಬೆಳೆದ ಅರವಿಂದ ಕೇಜ್ರಿವಾಲ್,ನಂತರದ ದಿನಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ಕಟ್ಟಿ ರಾಜಕಾರಣಕ್ಕೆ ಬಂದರು

ದೆಹಲಿಯಲಿ ಬಿಜೆಪಿ ಗೆಲುವು : ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಚಿಕ್ಕಬಳ್ಳಾಪುರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ದೆಹಲಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಿದರು.

Profile Ashok Nayak Feb 8, 2025 11:51 PM

ಚಿಕ್ಕಬಳ್ಳಾಪುರ : ದೆಹಲಿಯಲ್ಲಿ 27 ವರ್ಷಗಳಿಂದ ಬಿಜೆಪಿಯ ಬಾಗಿಲು ಮುಚ್ಚಿತ್ತು. ಇದೇ ಮೊದಲ ಬಾರಿಗೆ ದೆಹಲಿ ಮತದಾರರು ಆಮ್ ಆದ್ಮಿ ಪಕ್ಷದ ದುರಾಡಳಿತ ಧಿಕ್ಕರಿಸಿ ಬಿಜೆಪಿ ಕೈಹಿಡಿದಿರು ವುದು ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಸಿಕ್ಕ ಬಹುದೊಡ್ಡ ಗೆಲುವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಂಡೇನಹಳ್ಳಿ ಮುರಳಿ ತಿಳಿಸಿದರು. ದೆಹಲಿಯಲ್ಲಿ ಬಿಜೆಪಿ ಗೆದ್ದಿರುವ ಹಿನ್ನೆಲೆಯಲ್ಲಿ ಶನಿವಾರ ನಗರದ ಬಲಮುರಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ ಕೇಂದ್ರ ಸರಕಾರದ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು.

ಇದನ್ನೂ ಓದಿ: Chikkaballapur News: ಸಾಲ ಮರುಪಾವತಿಯಾದಲ್ಲಿ ಮಾತ್ರ ಸಹಕಾರಿ ರಂಗ ಬೆಳೆಯಲಿದೆ : ಎಂ.ನರಸಿಂಹಮೂರ್ತಿ

ಈ ವೇಳೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಕೊಂಡೇನಹಳ್ಳಿ ಮುರಳಿ ನಮ್ಮ ಪಕ್ಷ ವ್ಯಕ್ತಿಗೆ, ಕುಟುಂಬಕ್ಕೆ ಸೀಮಿತವಲ್ಲ. ನೂರಾರು ವರ್ಷಗಳ ಸುದೀರ್ಘವಾದ ಈ ಅವಧಿಯಲ್ಲಿ ತಳಮಟ್ಟ ದಿಂದ ಹಂತಹಂತವಾಗಿ ಬೆಳೆದ ಕಾರ್ಯಕರ್ತರ ಪಕ್ಷವಾಗಿದೆ.ಅಣ್ಣಾ ಹಜಾರೆಯ ಗರಡಿಯಲ್ಲಿ ಭ್ರಷ್ಟಾಚಾರ ವಿರೋಧಿ ಅಲೆಯಲ್ಲಿ ಬೆಳೆದ ಅರವಿಂದ ಕೇಜ್ರಿವಾಲ್,ನಂತರದ ದಿನಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ಕಟ್ಟಿ ರಾಜಕಾರಣಕ್ಕೆ ಬಂದರು.

ಅಧಿಕಾರಕ್ಕೇರಿದ ನಂತರದಲ್ಲಿ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ನಿಲುವನ್ನೇ ಬುಡಮೇಲು ಮಾಡಿ ತಮ್ಮ ಆಡಳಿತದ ಉದ್ದಕ್ಕೂ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿ ದರು. ಪರಿಣಾಮ ಜೈಲಿಗೆ ಹೋಗುವ ಪರಿಸ್ಥಿತಿ ತಂದುಕೊಂಡರು. ಅಂತಹ ಸಂದರ್ಭದಲ್ಲಿ ಕೂಡ ನೈತಿಕ ಹೊಣೆಹೊತ್ತು ರಾಜಿನಾಮೆ ಕೊಡುವ ಬದಲು ಜೈಲಿನಿಂದಲೇ ಅಧಿಕಾರ ನಡೆಸುತ್ತಾ, ಸಂವಿಧಾನವನ್ನೇ ಅಣಕ ಮಾಡಿದ ಮಹಾ ಭ್ರಷ್ಟಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗಿದ್ದಾರೆ ಎಂದು ದೂರಿದರು.

ಜೈಲಿನಿಂದ ಬಿಡುಗಡೆ ಆದ ನಂತರ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ನೆಲಕಚ್ಚಿದ್ದ ಲ್ಲದೆ, ಸ್ವತಃ ಅರವಿಂದ್ ಕೇಜ್ರಿವಾಲ್ ಕೂಡ ಸೋಲನ್ನು ಅಪ್ಪಿದ್ದಾರೆ.ನರೇಂದ್ರ ಮೋದಿ ಅವರ ಕೈ ಬಲಪಡಿಸಲು ದೆಹಲಿ ಮತದಾರರು ಮುನ್ನುಡಿ ಬರೆದಿದ್ದು 27 ವರ್ಷಗಳ ನಂತರ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳುವಂತೆ ಆಗಿದೆ.ನಮ್ಮ ಪಕ್ಷದ ಅಧಿಕಾರಾವಧಿಯಲ್ಲಿ ಪಕ್ಷವು ಭಷ್ಟಾಚಾರ ಮುಕ್ತ ಆಡಳಿತ ನೀಡಲಿದೆ ಎಂಬ ವಿಶ್ವಾದವಿದೆ ಎಂದರು.

ದೆಹಲಿ ಚುನಾವಣೆ ನಮಗೆ ಆದರ್ಶವಾಗಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕ ಸರಕಾರವು ಕೂಡ ಭಾಗ್ಯ÷ಗಳ ಹೆಸರಿನಲ್ಲಿ ಅಭಿವೃದ್ದಿ ಮರೆತಿರುವ ಸಂಗತಿಯನ್ನು ಮತದಾರರಿಗೆ ತಿಳಿಸಿ ಇಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಈ ರಾಜ್ಯದ ಮುಖ್ಯಮಂತ್ರಿಗಳ ಮೇಲೆಯೇ ಗಂಭೀರವಾದ ಆರೋಪಗಳಿವೆ. ಸರಕಾರದ ಮಂತ್ರಿಗಳೇ ಜೈಲಿಗೆ ಹೋಗಿ ಬಂದಿದ್ದಾರೆ. ಇವೆಲ್ಲವನ್ನು ಕೂಡ ಜನತೆಗೆ ತಿಳಿಸಿ ೨೦೨೮ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರಲಿದೆ. ಜಿಲ್ಲೆಯಲ್ಲಿ ಕೂಡ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂದೀಪ್‌ರೆಡ್ಡಿ ಅವರ ಸಮರ್ಥ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಕೂಡ ಬಿಜೆಪಿ ಅರಳಲಿದೆ ಎಂದು ಹೇಳಿದರು.

ರಾಜ್ಯ ಸಮಿತಿ ಸದಸ್ಯ ಲಕ್ಷಿö್ಮÃನಾರಾಯಣ ಗುಪ್ತ, ಮಾಜಿ ಜಿಲ್ಲಾ ಉಪಾಧ್ಯಕ್ಷ ಚದಲಪುರ,  ಸಿ.ಪಿ.ಮಮಂಜುನಾಥ್, ಜಾತವಾರ ಹೊಸಹಳ್ಳಿ ಲೋಕೇಶ್, ಜಿಲ್ಲಾ ಕಾರ್ಯದರ್ಶಿ ಅಶೋಕ್, ಯುವ ಮೋರ್ಚಾ ಉಪಾಧ್ಯಕ್ಷ ಬಾಲು,ಮಾಧ್ಯಮ ವಕ್ತಾರ ಮಧು ಚಂದ್ರ,ವೆAಕಟೇಶ್,ಯುವ ಮುಖಂಡ ಹರೀಶ್‌ರೆಡ್ಡಿ,ನರಸಪ್ಪ,ಲಕ್ಷಿö್ಮÃಪತಿ ಕೆ.ಟೆಕ್ಸ್ ಅಮರ್ ಮತ್ತಿತರರು ಇದ್ದರು.