Mesha Rashi 2026: ಈ ವರ್ಷ ಮೇಷ ರಾಶಿಯವರಿಗೆ ಶನಿಯ ಸಾಡೆಸಾತ್; ವೃತ್ತಿ ಜೀವನ ಹೇಗಿರಲಿದೆ?
2026ರ ಹೊಸ ವರ್ಷದ ಆರಂಭದ ದಿನದಂದು ಶನಿಯು ತನ್ನ ರಾಶಿ ಬದಲಿಸದಿದ್ದರೂ ಸೂರ್ಯ, ಬುಧ, ಗುರು ಮತ್ತು ಮಂಗಳ ಗ್ರಹದಲ್ಲಿ ಸ್ಥಾನ ಪಲ್ಲಟ ಆಗಲಿದೆ. ಇದರಿಂದಾಗಿ ದ್ವಾದಶ ರಾಶಿಗಳಲ್ಲಿ ಪೈಕಿ ಮೇಷ ರಾಶಿಯ ಮೇಲೆ ಪರಿಣಾಮ ಕಂಡು ಬರಲಿದೆ. ಹಣ, ಪ್ರಗತಿ, ವೈವಾಹಿಕ ಸಂಬಂಧ, ಆರೋಗ್ಯ, ವ್ಯಾಪಾರ, ವ್ಯವಹಾರ ಇತರ ಕ್ಷೇತ್ರದ ಮೇಲೆ ಯಾವ ರೀತಿ ಬದಲಾವಣೆ ಉಂಟು ಮಾಡಲಿದೆ ಎಂಬುದರ ಬಗ್ಗೆ ಜ್ಯೋತಿಷಿ, ವಿಜ್ಞಾನ ಸಂಶೋಧಕ ಮಹಾಬಲ ಮೂರ್ತಿ ಕೂಡ್ಲೆಕೆರೆ ವಿಶ್ವವಾಣಿ ಟಿವಿ ಚಾನೆಲ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಮೇಷರಾಶಿ ಭವಿಷ್ಯ -
ಬೆಂಗಳೂರು, ಜ. 5: ಹೊಸ ವರ್ಷ ಆರಂಭ ಆಗುತ್ತಿದ್ದಂತೆ ಬದುಕಿನ ಬಗ್ಗೆ ಹೊಸ ಕನಸು, ಭರವಸೆ ಮೂಡುತ್ತದೆ. ಈ ವರ್ಷ ಯಾವೆಲ್ಲ ಸಮಸ್ಯೆ ಬಗೆ ಹರಿಯಬಹುದು, ಯಾವೆಲ್ಲ ಹೊಸ ಕೆಲಸಕ್ಕೆ ಮುನ್ನುಡಿ ಇಡಬಹುದು ಎಂಬ ಅಂಶಗಳ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತದೆ. 2026ರ ಹೊಸ ವರ್ಷದ ಆರಂಭದ ದಿನದಂದು ಶನಿಯು ತನ್ನ ರಾಶಿ ಬದಲಿಸದಿದ್ದರೂ ಸೂರ್ಯ, ಬುಧ, ಗುರು ಮತ್ತು ಮಂಗಳ ಗ್ರಹದಲ್ಲಿ ಸ್ಥಾನ ಪಲ್ಲಟ ಆಗಿದೆ. ಇದು ದ್ವಾದಶ ರಾಶಿಗಳ ಪೈಕಿ ಮೇಷ ರಾಶಿಯ (Mesha Rashi 2026) ಮೇಲೆ ಪರಿಣಾಮ ಬೀರಲಿದೆ. ಹಣ, ಪ್ರಗತಿ, ವೈವಾಹಿಕ ಸಂಬಂಧ, ಆರೋಗ್ಯ, ವ್ಯಾಪಾರ, ವ್ಯವಹಾರ ಮತ್ತಿತರ ಕ್ಷೇತ್ರದ ಮೇಲೆ ಇದು ಯಾವ ರೀತಿ ಬದಲಾವಣೆ ಉಂಟು ಮಾಡಲಿದೆ ಎಂಬುದರ ಬಗ್ಗೆ ಜ್ಯೋತಿಷಿ, ವಿಜ್ಞಾನ ಸಂಶೋಧಕ ಮಹಾಬಲ ಮೂರ್ತಿ ಕೂಡ್ಲೆಕೆರೆ ವಿಶ್ವವಾಣಿ ಟಿವಿ ಚಾನೆಲ್‌ನಲ್ಲಿ ವಿವರಿಸಿದ್ದಾರೆ.
ವಿಶ್ವವಸು ಸಂವತ್ಸರ 2026ರ ಮಾರ್ಚ್ ತನಕ ಇರಲಿದ್ದು, ಅದರ ನಂತರ ಪರಾಭವ ಸಂವತ್ಸರ ಆರಂಭ ಆಗಲಿದೆ. ಆಗ ಗುರುವಿನ ಆದಿಪತ್ಯ ಇರಲಿದ್ದು ಇದರಿಂದ ಮೇಷ ರಾಶಿಯವರಿಗೆ ಸಾಡೆಸಾತ್ ಶನಿ ಗ್ರಹದ ಸಂಚಲನದಿಂದ ಸಮಸ್ಯೆಗಳಾಗುದು ಆದಷ್ಟು ಕಡಿಮೆಯಾಗಲಿದೆ. 2026ರ ಮಾರ್ಚ್ 19ರಿಂದ ಪರಾಭವ ಸಂವತ್ಸರದ ಅಧಿಪತಿ ಗುರುವಾದ ಕಾರಣ ಮೇಷ ರಾಶಿಯವರಿಗೆ ಶನಿ ಕಾಟದ ಸಮಸ್ಯೆಯಿಂದ ನಷ್ಟ, ನೋವು ಇತ್ಯಾದಿ ಅನುಭವಿಸಿದ್ದರೆ ಎಲ್ಲ ಸಮಸ್ಯೆ ಸರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷ ಮೇಷ ರಾಶಿಯವರಿಗೆ ಏನೆಲ್ಲ ಪರಿಣಾಮ ಆಗಲಿದೆ?
ಶನಿಕಾಟದಿಂದ ಎಲ್ಲ ರಾಶಿ ಅವರಿಗೂ ತೊಂದರೆ ಅಗಲಾರದು. ಆದರೆ ಸಾಡೆಸಾತ್ ಏಳು ವರ್ಷದ ಶನಿಕಾಟವು ಆದಷ್ಟು ಸಮಸ್ಯೆಯಿಂದ ಕೂಡಿರುವುದಾಗಿದ್ದು, ಈ ಬಗ್ಗೆ ಮೊದಲೇ ನಿಗಾ ವಹಿಸಬೇಕು. ಮೇಷಾ ರಾಶಿಯವರಿಗೂ ಈ ಸಮಸ್ಯೆ ಇರುವ ಕಾರಣ ಮಾರ್ಚ್ 19ರ ತನಕವು ಈ ಸಮಸ್ಯೆಯನ್ನು ಆದಷ್ಟು ಸರಿದೂಗಿಸಿಕೊಂಡು ಹೋಗಬೇಕು. ಮಾರ್ಚ್ 19ರ ನಂತರ ಪರಾಭವ ಸಂವತ್ಸರ ಆರಂಭ ಆಗಲಿದ್ದು ಅಧಿಪತಿಯಾದ ಗುರುವಿನ ಕಾರಣದಿಂದ ನೆಮ್ಮದಿ ಪ್ರಾಪ್ತಿಯಾಗಲಿದೆ. ಈ ಸಮಯದಲ್ಲಿ ಕೋಪ, ಹತಾಶೆ, ಮನಸ್ಥಾಪ ಇತ್ಯಾದಿಗಳನ್ನು ಆದಷ್ಟು ದೂರ ಮಾಡಿ ಶಾಂತಿಯಿಂದ ಇದ್ದರೆ ಮೇಷ ರಾಶಿಯವರಿಗೆ ಶುಭ ಫಲ ಗೋಚರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮನೆಯಲ್ಲಿ ಸುಗಂಧರಾಜ ಗಿಡವನ್ನು ಈ ದಿಕ್ಕಿನಲ್ಲಿ ನೆಟ್ಟರೆ, ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ!
ಮೇಷ ರಾಶಿಯಲ್ಲಿ ಬೇರೆ ಬೇರೆ ನಕ್ಷತ್ರಗಳಿರುವುದರಿಂದ ಕೃತಿಕಾ ನಕ್ಷತ್ರದ ಒಂದು ಗುಣ ಕೋಪ ಆಗಿರುವ ಕಾರಣ ಈ ರಾಶಿಯವರು ಬೇಗ ಸಿಟ್ಟಾಗುವುದನ್ನು ಕಾಣಬಹುದು. ಹೀಗಾಗಿ ಮಾತಿನ ಮೇಲೆ ನಿಗಾ ಇಟ್ಟು ಜಾಣ್ಮೆಯಿಂದ ವ್ಯವಹರಿಸಿ ಸಂವಹನ ಮಾಡಬೇಕು. ಮಾತಿನ ಮೇಲೆ ಸಂಪೂರ್ಣ ಹತೋಟಿ ಇಟ್ಟುಕೊಳ್ಳುವ ಗುಣ ಮೇಷ ರಾಶಿಯವರು ಕರಗತ ಮಾಡಿಕೊಂಡರೆ ಸಾಕಷ್ಟು ಅನುಕೂಲ ಆಗುತ್ತದೆ. ಶನಿ ಕಾಟದ ಸಮಸ್ಯೆ ಎಷ್ಟೇ ತೀವ್ರವಾಗಿ ಇದ್ದರೂ ಕೂಡ ಅದನ್ನು ಅತ್ಯಂತ ಸಮರ್ಥವಾಗಿ ಎದುರಿಸಲು ಗುರು ಬಲ ಕೂಡ ಮೇಷ ರಾಶಿ ಅವರಿಗೆ ಸಿಗಲಿದೆ ಎಂದು ಅವರು ಹೇಳಿದ್ದಾರೆ.
ಮೇಷ ರಾಶಿಯಲ್ಲಿ ಭರಣಿ ನಕ್ಷತ್ರ ಇರುವವರಿಗೆ ಈ ವರ್ಷ ಆರಂಭದಿಂದಲೇ ವೈವಾಹಿಕ ಜೀವನದಲ್ಲಿ ಸ್ವಲ್ಪಮಟ್ಟಿಗೆ ತೊಂದರೆ ಕಂಡು ಬರುವ ಸಾಧ್ಯತೆ ಇದೆ. ಆದರೆ ನಿರಾಶೆ, ಹತಾಶೆಗೊಳ್ಳುವ ಅಗತ್ಯ ಇಲ್ಲ. ಗುರು ಮತ್ತು ರಾಹು ಬಲದಿಂದ ಎಲ್ಲ ಸಮಸ್ಯೆ ಸಮರ್ಥವಾಗಿ ಬಗೆಹರಿಯಲಿದೆ. ಅನವಶ್ಯಕ ಗಲಾಟೆ, ವೈಮನಸ್ಸನ್ನು ಆದಷ್ಟು ದೂರ ಮಾಡಿದರೆ ಶನಿಯ ಸಾಡೆ ಸಾತ್‌ನಿಂದಲೂ ಪರಿಹಾರ ಕಂಡುಕೊಂಡಂತಾಗಲಿದೆ. ಜಾಹೀರಾತು, ಮಾಡೆಲಿಂಗ್, ಸಿನಿಮಾ ಮತ್ತಿತರ ಮನೋರಂಜನ ಕ್ಷೇತ್ರದಲ್ಲಿರುವವರಿಗೆ ಗುರು ಬಲ ಇರಲಿದ್ದು, ಅನೇಕ ಸಮಸ್ಯೆ ಪರಿಹಾರ ಕಂಡು ಯಶಸ್ಸು ಸಿಗಲಿದೆ ಎಂದು ಅವರು ಸಲಹೆ ನೀಡಿದ್ದಾರೆ.