ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತೆಲುಗು ನಿರ್ದೇಶಕನಿಗೆ ಗ್ರೀನ್‌ ಸಿಗ್ನಲ್‌ ಕೊಡ್ತಾರಾ ಹೃತಿಕ್‌ ರೋಷನ್?‌ ‌ʻಹೊಂಬಾಳೆ ಫಿಲ್ಮ್ಸ್‌ʼ ಜೊತೆ ಸಿನಿಮಾ ಮಾಡೋದ್ಯಾವಾಗ?

Hrithik Roshan Upcoming Movies: ನಟ ಹೃತಿಕ್ ರೋಷನ್ ಅವರು ತೆಲುಗಿನ ಖ್ಯಾತ ನಿರ್ದೇಶಕ ಬಾಬಿ ಕೊಲ್ಲಿ ಅವರ ಹೊಸ ಕಥೆಗೆ ಮಾರುಹೋಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಹೃತಿಕ್ ಅವರಿಗೆ ಸ್ಕ್ರಿಪ್ಟ್ ವಿವರಿಸಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು ಸ್ಕ್ರಿಪ್ಟ್‌ ರೈಟರ್‌ ಕೋನಾ ವೆಂಕಟ್ ತಿಳಿಸಿದ್ದಾರೆ.

ತೆಲುಗು ನಿರ್ದೇಶಕನ ಜತೆ ಹೃತಿಕ್ ಹೈ-ವೋಲ್ಟೇಜ್ ಆಕ್ಷನ್ ಚಿತ್ರ! ಯಾವಾಗ ಶುರು?

-

Avinash GR
Avinash GR Mar 5, 2026 8:05 PM

ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಅವರು ಕಳೆದ ವರ್ಷ ವಾರ್ 2‌ ಸಿನಿಮಾದಲ್ಲಿ ಎನ್‌ಟಿಆರ್‌ ಜೊತೆಗೆ ನಟಿಸಿದ್ದರು. ಆನಂತರ ಅವರು ಬೇರಾವ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂಬ ಬಗ್ಗೆ ಅಪ್ಡೇಟ್‌ ಸಿಕ್ಕಿಲ್ಲ. ಅಭಿಮಾನಿಗಳು ಕೂಡ ಹೃತಿಕ್‌ ರೋಷನ್‌ ಕಡೆಯಿಂದ ಏನಾದರೂ ಹೆಚ್ಚಿನ ಮಾಹಿತಿ ಸಿಗಬಹುದು ಎಂದು ಕಾದಿದ್ದಾರೆ. ಇದೀಗ ಅವರ ಮುಂದಿನ ಸಿನಿಮಾಗಳ ಬಗ್ಗೆ ಕೆಲವೊಂದು ಅಪ್ಡೇಟ್‌ಗಳು ಸಿಕ್ಕಿವೆ. ಅದೇನು? ಮುಂದೆ ಓದಿ.

ತೆಲುಗು ನಿರ್ದೇಶಕನ ಜೊತೆ ಹೃತಿಕ್‌ ಸಿನಿಮಾ

ಈಗಾಗಲೇ ತೆಲುಗಿನಲ್ಲಿ ವಾಲ್ತೇರು ವೀರಯ್ಯ, ಡಾಕು ಮಹಾರಾಜ್‌, ಜೈ ಲವ ಕುಶ ರೀತಿಯ ಹಿಟ್‌ ಸಿನಿಮಾಗಳನ್ನು ಕೊಟ್ಟಿರುವ ಬಾಬಿ ಕೊಲ್ಲಿ ಇದೀಗ ಹೊಸ ಸಿನಿಮಾವೊಂದನ್ನು ಹೃತಿಕ್‌ ರೋಷನ್‌ ಜೊತೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೃತಿಕ್ ಕೂಡ ತಮ್ಮ ಮುಂದಿನ ಚಿತ್ರಕ್ಕಾಗಿ ಸೂಕ್ತ ನಿರ್ದೇಶಕನ ಹುಡುಕಾಟದಲ್ಲಿದ್ದಾರಂತೆ. ಅವರ ಬಹುನಿರೀಕ್ಷಿತ 'ಕ್ರಿಶ್ 4' ಸಿನಿಮಾ ಕೆಲ ಕಾರಣಗಳಿಂದಾಗಿ ಸದ್ಯಕ್ಕೆ ಶುರುವಾಗುತ್ತಿಲ್ಲವಂತೆ. ಹಾಗಾಗಿ, ಸದ್ಯ ತೆಲುಗು ನಿರ್ದೇಶಕ ಬಾಬಿ ಅವರು ಹೃತಿಕ್ ರೋಷನ್ ಅವರಿಗೆ ಒಂದು ಕಥೆಯನ್ನು ವಿವರಿಸಿದ್ದು, ಅದು ಹೃತಿಕ್ ಅವರಿಗೆ ಬಹಳ ಇಷ್ಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ʻಮೊದಲು ಅಸಮಾಧಾನ, ಆಮೇಲೆ ಹೊಗಳಿಕೆʼ; ʻಧುರಂಧರ್‌ʼ ಬಗ್ಗೆ ಹೃತಿಕ್‌ ರೋಷನ್‌ ಗೊಂದಲ ಮಾಡಿಕೊಂಡ್ರಾ? ಕೆಲವೇ ಗಂಟೆಗಳಲ್ಲಿ ನಿಲುವು ಬದಲಾಗಿದ್ದೇಕೆ?

ಈ ಸಿನಿಮಾ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆಯಿದೆ. ಈ ವಿಚಾರವನ್ನು ಸ್ವತಃ ಸ್ಕ್ರಿಪ್ಟ್‌ ರೈಟರ್ ಕೋನಾ ವೆಂಕಟ್ ಅವರು ಹಂಚಿಕೊಂಡಿದ್ದಾರೆ. "ನಾನು ಮತ್ತು ಬಾಬಿ ಸೇರಿ ಹೃತಿಕ್ ರೋಷನ್ ಅವರಿಗೆ ಒಂದು ಸ್ಕ್ರಿಪ್ಟ್ ವಿವರಿಸಿದ್ದೇವೆ, ಅದು ಅವರಿಗೆ ತುಂಬಾ ಇಷ್ಟವಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ಮಾಡಿದ್ದೇವೆ. ಬಾಬಿ ಕೊಲ್ಲಿ ಕೂಡ ಪ್ರಸ್ತುತ ಆ ಕೆಲಸದಲ್ಲಿ ತೊಡಗಿದ್ದಾರೆ" ಎಂದು ಹೇಳಿದ್ದಾರೆ.

Rashmika Mandanna: ರಶ್ಮಿಕಾ ಮಂದಣ್ಣಗೆ ಬಾಲಿವುಡ್‌ನಲ್ಲಿ ಮತ್ತೊಂದು ಬಂಪರ್‌ ಆಫರ್‌; ಹೃತಿಕ್‌ ರೋಷನ್‌ಗೆ ಕನ್ನಡತಿ ಜೋಡಿ

ಚಿರು ಜೊತೆ ಬಾಬಿ ಸಿನಿಮಾ

ಸದ್ಯ ಮೆಗಾಸ್ಟಾರ್ ಚಿರಂಜೀವಿ ಅವರ ಚಿತ್ರದಲ್ಲಿ ನಿರ್ದೇಶಕ ಬಾಬಿ ಕೊಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣವು ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸಂಕ್ರಾಂತಿ 2027 ರಂದು ಬಿಡುಗಡೆ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ. ಈ ಚಿತ್ರದಲ್ಲಿ ಪ್ರಿಯಾಮಣಿ ನಾಯಕಿಯಾಗಿ ನಟಿಸಲಿದ್ದು, ಸಂಗೀತ ನಿರ್ದೇಶನಕ್ಕಾಗಿ ಎ. ಆರ್. ರೆಹಮಾನ್ ಅವರೊಂದಿಗೆ ಮಾತುಕತೆ ನಡೆಯುತ್ತಿದೆ.

ಹೊಂಬಾಳೆ ಜೊತೆ ಯಾವಾಗ ಸಿನಿಮಾ?

ಈ ಮಧ್ಯೆ ಕನ್ನಡದ ಹೊಂಬಾಳೆ ಫಿಲ್ಮ್ಸ್‌ಗೆ ಹೃತಿಕ್‌ ರೋಷನ್‌ ಅವರ ಕಾಲ್‌ ಶೀಟ್‌ ಸಿಕ್ಕಿದೆ. ಬಹಳ ಹಿಂದೆಯೇ ಈ ವಿಚಾರ ಬಹಿರಂಗವಾಗಿತ್ತು. ಆದರೆ ಇದುವರೆಗೂ ಆ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಆಗಲಿ, ಹೃತಿಕ್‌ ರೋಷನ್‌ ಅವರಾಗಲಿ ಏನೊಂದು ಮಾಹಿತಿ ನೀಡಿಲ್ಲ. ಆದಷ್ಟು ಬೇಗ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಹೃತಿಕ್‌ ಸಿನಿಮಾ ಸೆಟ್ಟೇರಲಿ ಎಂದು ಫ್ಯಾನ್ಸ್‌ ಕೂಡ ಕಾದಿದ್ದಾರೆ.