ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡದ ಆಟಗಾರರಿಗೆ ಶಾಕ್ ನೀಡಿದ ಬಿಸಿಸಿಐ!
ಪಾಕಿಸ್ತಾನ ಆತಿಥ್ಯದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಸಜ್ಜಾಗುತ್ತಿರುವ ಭಾರತ ತಂಡದ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶಾಕ್ ನೀಡಿದೆ. ದುಬೈಗೆ ತಂಡದ ಆಟಗಾರರ ಅವರ ಕುಟುಂಬದ ಯಾವುದೇ ಸದಸ್ಯರು ತೆರಳಬಾರದು ಎಂದು ಬಿಸಿಸಿಐ ಸೂಚನೆ ನೀಡಿದೆ ಎಂದು ವರದಿಯಾಗಿದೆ.
![ಭಾರತ ತಂಡದ ಆಟಗಾರರ ಜೊತೆ ಕುಟುಂಬ ದುಬೈಗೆ ಪ್ರಯಾಣಿಸುವಂತಿಲ್ಲ!](https://cdn-vishwavani-prod.hindverse.com/media/original_images/Indian_Cricket_Team_mR9k344.jpg)
ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಭಾರತ ತಂಡದ ಆಟಗಾರರ ಜೊತೆ ಅವರ ಕುಟುಂಬದ ಸದಸ್ಯರ ಇರುವಂತಿಲ್ಲ!
![Profile](https://vishwavani.news/static/img/user.png)
ನವದೆಹಲಿ: ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಈ ಮಹತ್ವದ ಟೂರ್ನಿಗೂ ಮುನ್ನ ಭಾರತ ತಂಡ ಯಾವುದೇ ಅಭ್ಯಾಸ ಪಂದ್ಯಗಳನ್ನು ಆಡುವುದಿಲ್ಲ ಮತ್ತು ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ನೇರವಾಗಿ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ. ಮುಂಬರುವ ಟೂರ್ನಿಯಲ್ಲಿ ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ಯುಎಇಯ ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಆಡಲಿದೆ. ಆದರೆ ಟೂರ್ನಿ ಆರಂಭವಾಗುವ ಮೊದಲೇ ಭಾರತೀಯ ಆಟಗಾರರು ತಮ್ಮ ಕುಟುಂಬ ಸದಸ್ಯರನ್ನು ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಎಂಬ ದೊಡ್ಡ ಸುದ್ದಿ ಹೊರಬಿದ್ದಿದೆ. ಈ ಟೂರ್ನಿಯ ಮೂಲಕ ಬಿಸಿಸಿಐನ ಹೊಸ ಪ್ರಯಾಣ ನೀತಿಯನ್ನು ಮೊದಲ ಬಾರಿಗೆ ಜಾರಿಗೆ ತರಲಿದೆ.
ಬಾಂಗ್ಲಾದೇಶ ವಿರುದ್ದ ತನ್ನ ಮೊದಲನೇ ಪಂದ್ಯದ ಬಳಿಕ ಭಾರತ ತಂಡ, ಫೆಬ್ರವರಿ 23 ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಹೈವೋಲ್ಟೇ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಮಾರ್ಚ್ 2 ರಂದು ಹಲವು ಐಸಿಸಿ ಟೂರ್ನಿಗಳಲ್ಲಿ ನಮಗೆ ಆಘಾತ ನೀಡಿರುವ ನ್ಯೂಜಿಲೆಂಡ್ ತಂಡದ ವಿರುದ್ದ ರೋಹಿತ್ ಶರ್ಮಾ ಪಡೆ ಕಾದಾಟ ನಡೆಸಲಿದೆ. 2025 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ. ಆದ್ದರಿಂದ, ಈ ಪ್ರವಾಸವು ಮೂರು ವಾರಗಳಿಗಿಂತ ಕಡಿಮೆ ಅವಧಿಯನ್ನು ಹೊಂದಿದೆ. ತಂಡದ ಆಟಗಾರರ ಕುಟುಂಬಗಳನ್ನು ಅವರೊಂದಿಗೆ ಬರಲು ಅನುಮತಿ ನೀಡಲಾಗುವುದಿಲ್ಲ. ಹೊಸ ನೀತಿಯಡಿಯಲ್ಲಿ 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಪ್ರವಾಸಗಳಲ್ಲಿ ಮಾತ್ರ ಕುಟುಂಬಗಳು ಆಟಗಾರರೊಂದಿಗೆ ಗರಿಷ್ಠ ಎರಡು ವಾರಗಳ ಕಾಲ ಜೊತೆಯಲ್ಲಿ ಇರಲು ಅವಕಾಶ ನೀಡಲಾಗುತ್ತದೆ.
ವರುಣ್ ಚಕ್ರವರ್ತಿ ಇನ್, ಜಸ್‌ಪ್ರೀತ್ ಬುಮ್ರಾ ಔಟ್: ಚಾಂಪಿಯನ್ಸ್ ಟ್ರೋಫಿಗೆ ಭಾರತದ ಪರಿಷ್ಕೃತ ತಂಡ!
ಬಿಸಿಸಿಐ ಮೂಲಗಳು ಹೇಳಿದ್ದೇನು?
"ಏನಾದರೂ ಬದಲಾವಣೆಯಾದರೆ, ಅದು ಬೇರೆ ವಿಷಯ. ಆದರೆ ಆಟಗಾರರ ಜೊತೆ ಅವರ ಪತ್ನಿ, ಗೆಳತಿ ಸೇರಿದಂತೆ ಕುಟುಂಬದ ಯಾವುದೇ ಸದಸ್ಯರು ಇರುವಂತಿಲ್ಲ. ಭಾರತ ತಂಡದ ಹಿರಿಯ ಆಟಗಾರರೊಬ್ಬರು ಈ ಬಗ್ಗೆ ವಿಚಾರ ಮಾಡಿದ್ದರು ಹಾಗೂ ಇದಕ್ಕೆ ಯಾವುದೇ ಅವಕಾಶವಿಲ್ಲ ಎಂಬುದನ್ನು ಅವರು ಮನದಟ್ಟು ಮಾಡಿಕೊಂಡಿದ್ದಾರೆ," ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರತದ ವಿರುದ್ಧ 0-3 ಅಂತರದಲ್ಲಿ ಸೋತರೂ ಪರವಾಗಿಲ್ಲ, ಚಾಂಪಿಯನ್ಸ್ ಟ್ರೋಫಿ ಗೆಲ್ಲಬೇಕು: ಬೆನ್ ಡಕೆಟ್!
ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಸರಣಿ ಸೋಲಿನ ನಂತರ ಈ ಬದಲಾವಣೆ
ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು 1-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಭಾರತ ತಂಡ ಸೋತ ನಂತರ ಬಿಸಿಸಿಐ ತನ್ನ ನಿಯಮಗಳನ್ನು ಬದಲಾಯಿಸಿದೆ.
A clinical 3-0 ODI series win ✅
— BCCI (@BCCI) February 13, 2025
And hunger to achieve even more 🙌#TeamIndia members react after a phenomenal ODI series win in Ahmedabad 👌👌
WATCH 🎥🔽 #INDvENG | @IDFCFIRSTBankhttps://t.co/Tw4XGqqskT
"ಈ ಪ್ರವಾಸ ಒಂದು ತಿಂಗಳಿಗಿಂತ ಕಠಿಣ ಅವಧಿಯನ್ನು ಹೊಂದಿದೆ. ಹೀಗಾಗಿ ತಂಡದ ಆಟಗಾರರ ಕುಟುಂಬದ ಸದಸ್ಯರು ದುಬೈಗೆ ಪ್ರಯಾಣಿಸುವಂತಿಲ್ಲ. ಒಂದು ವೇಳೆ ಯಾವುದೇ ಆಟಗಾರ ತನ್ನ ಕುಟುಂಬವನ್ನು ಕರೆದುಕೊಂಡು ಹೋಗಬೇಕಿದ್ದರೆ, ಅದರ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ ಹಾಗೂ ಅವರ ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ಪ್ರಯಾಣವನ್ನು ಮಾಡಬೇಕಾಗುತ್ತದೆ," ಏಂದು ಮೂಲಗಳು ತಿಳಿಸಿವೆ.