ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻನನ್ನ ಅಪ್ಪ ನಿಜವಾದ ಹೀರೋʼ-T20 World Cup ಪದಕವನ್ನು ತಮ್ಮ ತಂದೆಗೆ ಸಮರ್ಪಿಸಿದ ಶಿವಂ ದುಬೇ!

ಭಾರತ ತಂಡದ ಟಿ20 ವಿಶ್ವಕಪ್‌ ಗೆಲುವಿನ ಹೀರೋಗಳಲ್ಲಿ ಒಬ್ಬರಾದ ಶಿವಂ ದುಬೇ ಅವರು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಟಿ20 ವಿಶ್ವಕಪ್‌ ಪದಕವನ್ನು ತಮ್ಮ ತಂದೆಗೆ ಸಮರ್ಪಿಸಿದ್ದಾರೆ ಹಾಗೂ ತಮ್ಮ ತಂದೆಯೇ ನನಗೆ ಹೀರೋ ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್‌ ಪದಕವನ್ನು ಅಪ್ಪನಿಗೆ ಸಮರ್ಪಿಸಿದ ಶಿವಂ ದುಬೇ!

ತಮ್ಮ ತಂದೆಗೆ ಟಿ20 ವಿಶ್ವಕಪ್‌ ಪದಕ ಸಮರ್ಪಿಸಿದ ಶಿವಂ ದುಬೇ. -

Profile
Ramesh Kote Mar 12, 2026 4:52 PM

ನವದೆಹಲಿ: ಭಾರತ ತಂಡದ (India) ಟಿ20 ವಿಶ್ವಕಪ್‌ (ICC T20 World Cup 2026) ಗೆಲುವಿನ ಹೀರೋಗಳ ಪೈಕಿ ಆಲ್‌ರೌಂಡರ್‌ ಶಿವಂ ದುಬೇ (Shivam Dube) ಕೂಡ ಒಬ್ಬರು. ಬ್ಯಾಟಿಂಗ್‌ನಲ್ಲಿ ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪೂರೈಸಿದ್ದಾರೆ. ಇದೀಗ ಶಿವಂ ದುಬೇ ಅವರು ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಟಿ20 ವಿಶ್ವಕಪ್‌ ಪದಕವನ್ನು ತಮ್ಮ ತಂದೆಗೆ ಅರ್ಪಿಸುವ ಮೂಲಕ ದುಬೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ಟಾರ್‌ ಆಲ್‌ರೌಂಡರ್‌, ತಮಗೆ ಸಿಕ್ಕ ಪದಕವನ್ನು ತಂದೆಯ ಕೊರಳಿಗೆ ಹಾಕಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೊದಲ್ಲಿ ದುಬೇ ಅವರ ತಂದೆ ಟೀಮ್‌ ಇಂಡಿಯಾ (India) ಜೆರ್ಸಿ ಧರಿಸಿದ್ದಾರೆ ಹಾಗೂ ಕೊರಳಿನಲ್ಲಿ ಟಿ20 ವಿಶ್ವಕಪ್‌ ಪದಕವನ್ನು ಹಾಕಿಕೊಂಡಿದ್ದಾರೆ. ತಾವು ಹಂಚಿಕೊಂಡಿರುವ ಫೋಟೋ ಹಾಗೂ ವಿಡಿಯೊಗೆ ಶಿವಂ ದುಬೇ ʻನನ್ನ ಜೀವನದ ನಿಜವಾದ ಹೀರೋ ನನ್ನ ತಂದೆʼ ಎಂದು ಬರೆದುಕೊಂಡಿದ್ದಾರೆ. ಶಿವಂ ದುಬೇ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್‌ ಮಾಡುವ ಮೂಲಕ ಟೀಮ್‌ ಇಂಡಿಯಾ ಆಟಗಾರನನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ವಿಶ್ವಕಪ್‌ ಗೆಲುವಿನ ಬಳಿಕ ರೈಲಿನಲ್ಲಿ ತವರಿಗೆ ಮರಳಿದ ಶಿವಂ ದುಬೆ

2026ರ ಟಿ20 ವಿಶ್ವಕಪ್‌ನಲ್ಲಿ ಶಿವಂ ದುಬೇ ಪ್ರದರ್ಶನ ಹೇಗಿತ್ತು?

ಈ ಟೂರ್ನಿಯಲ್ಲಿ ಬ್ಯಾಟ್ ಹಾಗೂ ಬಾಲ್ ಎರಡರಲ್ಲೂ ದುಬೇ ಭಾರತ ತಂಡಕ್ಕೆ ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ. ಪಾಕಿಸ್ತಾನ, ನೆದರ್ಲೆಂಡ್ಸ್‌, ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಹಾಗೂ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಆಡಿದ ಅವರ ಪ್ರಮುಖ ಇನಿಂಗ್ಸ್‌ಗಳು ಭಾರತದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದವು. ಇವರು ಟೂರ್ನಿಯಲ್ಲಿ ಒಂಬತ್ತು ಪಂದ್ಯಗಳಲ್ಲಿ 235 ರನ್ ಗಳಿಸಿ, ಸರಾಸರಿ 39.16 ಮತ್ತು 169.06 ಸ್ಟ್ರೈಕ್‌ರೇಟ್‌ನೊಂದಿಗೆ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಬೌಲಿಂಗ್‌ನಲ್ಲಿಯೂ ದುಬೇ ಸಂಕಷ್ಟದ ಸಂದರ್ಭಗಳಲ್ಲಿ ತಂಡಕ್ಕೆ ನೆರವಾಗಿದ್ದರು. ನಾಯಕ ಸೂರ್ಯಕುಮಾರ್ ಯಾದವ್ ಹಲವು ಕಠಿಣ ಸಂದರ್ಭಗಳಲ್ಲಿ ಅವರ (ದುಬೇ) ಮೇಲೆ ವಿಶ್ವಾಸವಿಟ್ಟು ಬೌಲಿಂಗ್ ಕೊಟ್ಟಿದ್ದರು. ರನ್‌ಗಳನ್ನು ಹೆಚ್ಚು ನೀಡಿದ್ದರೂ, ದುಬೇ ಒಟ್ಟು ಐದು ವಿಕೆಟ್‌ಗಳನ್ನು ಕಬಳಿಸಿದರು. ಇಂಗ್ಲೆಂಡ್ ವಿರುದ್ಧದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಅಂತಿಮ ಓವರ್ ಬೌಲ್ ಮಾಡುವ ಜವಾಬ್ದಾರಿಯನ್ನೂ ಅವರು ಹೊತ್ತಿದ್ದರು. ‌

ಸೆಮಿಫೈನಲ್‌ನ ಕೊನೆಯ ಓವರ್‌ ಬಗ್ಗೆ ಮಾತನಾಡಿದ್ದ ದುಬೇ

“ನಾನು ನನ್ನ ಮೇಲೆಯೇ ನಂಬಿಕೆ ಇಡಲು ಬಯಸಿದೆ. ಆ ಓವರ್‌ನ ಮೊದಲ ಎರಡು ಎಸೆತಗಳು ಅತ್ಯಂತ ಮಹತ್ವದ್ದಾಗಿರುತ್ತವೆ ಎಂದು ನನಗೆ ಗೊತ್ತಿತ್ತು. ಆದ್ದರಿಂದ ಆ ಎರಡು ಎಸೆತಗಳನ್ನು ಸರಿಯಾಗಿ ಬೌಲ್‌ ಮಾಡುವ ಕಡೆಗೆ ನನ್ನ ಗಮನವಿತ್ತು, ಏಕೆಂದರೆ ಆ ಎರಡು ಎಸೆತಗಳು ಪಂದ್ಯದ ಫಲಿತಾಂಶವನ್ನು ನಿರ್ಧರಿಸಬಹುದಾಗಿತ್ತು. ಕೊನೆಯ ಓವರ್ ಅನ್ನು ನಾನು ಬೌಲ್‌ ಮಾಡಬೇಕೆಂದು ಈಗಾಗಲೇ ತೀರ್ಮಾನಿಸಲಾಗಿತ್ತು. ಖಂಡಿತವಾಗಿಯೂ ಸ್ವಲ್ಪ ಉದ್ವಿಗ್ನತೆ ಇತ್ತು — ವಿಶ್ವಕಪ್ ಸೆಮಿಫೈನಲ್‌ನ ಅಂತಿಮ ಓವರ್ ಬೌಲ್‌ ಮಾಡುವುದು ಯಾವಾಗಲೂ ಸವಾಲಿನ ಕೆಲಸ,” ಎಂದು ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದ ಬಳಿಕ ಬಿಸಿಸಿಐ ಪ್ರಕಟಿಸಿದ್ದ ವಿಡಿಯೊದಲ್ಲಿ ತಿಳಿಸಿದ್ದರು.

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಟರ್ನಿಂಗ್‌ ಪಾಯಿಂಟ್‌ ಆದ ಸಂಗತಿ ತಿಳಿಸಿದ ಶಿವಂ ದುಬೇ!

ರೈಲಿನಲ್ಲಿ ಮನೆಗೆ ತೆರಳಿದ್ದ ಶಿವಂ ದುಬೇ

ಮತ್ತೊಂದೆಡೆ ಟಿ20 ವಿಶ್ವಕಪ್ ಫೈನಲ್ ನಂತರ ಭಾನುವಾರ (ಮಾರ್ಚ್ 8) ತಡರಾತ್ರಿ ವಿಮಾನಗಳು ಲಭ್ಯವಾಗದ ಕಾರಣ, ಶಿವಂ ದುಬೇ ಅವರು ಅಹಮದಾಬಾದ್‌ನಿಂದ ರೈಲಿನಲ್ಲಿ ಪ್ರಯಾಣಿಸಿ ಮನೆಗೆ ಮರಳಿದ ಸಂಗತಿಯೂ ಸುದ್ದಿಯಲ್ಲಿತ್ತು. ಇದೀಗ ಅವರು 2026ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.