ಟಿ20 ಕ್ರಿಕೆಟ್‌ನಲ್ಲಿ 1000 ವಿಕೆಟ್ ಪಡೆಯುವುದು ನನ್ನ ಗುರಿ ಎಂದ ರಶೀದ್ ಖಾನ್!
Rashid Khan Eye on 1000 T20 Wickets: ಟಿ20 ಕ್ರಿಕೆಟ್‌ನಲ್ಲಿ 1000 ವಿಕೆಟ್ ಸಾಧನೆ ಮಾಡುವುದೇ ನನ್ನ ದೊಡ್ಡ ಕನಸು ಎಂದು ಅಫಘಾನಿಸ್ತಾನದ ಆಟಗಾರ ರಶೀದ್ ಖಾನ್ ಹೇಳಿದ್ದಾರೆ. ಪ್ರಸ್ತುತ ಎಸ್‌ಎ20 ಲೀಗ್‌ನಲ್ಲಿ ರಶೀದ್ ಖಾನ್ ಸಾರಥ್ಯದ ಎಂಐ ಕೇಪ್ ಟೌನ್ ತಂಡವು ಶನಿವಾರ (ಫೆ.8) ಫೈನಲ್ ಪಂದ್ಯದಲ್ಲಿ ಏಡೆನ್ ಮಾರ್ಕ್ರಮ್ ನಾಯಕತ್ವದ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ಟೌನ್ ತಂಡವನ್ನು ಎದುರಿಸುತ್ತಿದ್ದು, ಚೊಚ್ಚಲ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
![ಟಿ20ಯಲ್ಲಿ 1000 ವಿಕೆಟ್ ಕಬಳಿಸುವುದು ನನ್ನ ಗುರಿ ಎಂದ ರಶೀದ್ ಖಾನ್!](https://cdn-vishwavani-prod.hindverse.com/media/original_images/Rashid_Khan.jpg)
Rashid Khan
![Profile](https://vishwavani.news/static/img/user.png)
ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ನನಗೆ 1000 ವಿಕೆಟ್ ಪಡೆಯುವ ಅವಕಾಶವಿದೆ ಎಂದು ಅಫಘಾನಿಸ್ತಾನದ ಸ್ಪಿನ್ ಆಲ್‌ರೌಂಡರ್ ರಶೀದ್ ಖಾನ್ (Rashid Khan) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ದಿಗ್ಗಜ ಡ್ವೇನ್ ಬ್ರಾವೋ (Dwayne Bravo)ಅವರ ದಾಖಲೆ ಹಿಂದಿಕ್ಕಿರುವ ರಶೀದ್ ಖಾನ್ ಟಿ20 ಕ್ರಿಕೆಟ್‌ನಲ್ಲಿ ಲೀಡಿಂಗ್ ವಿಕೆಟ್ ಟೇಕರ್ ಆಗಿದ್ದಾರೆ.
461 ಟಿ20 ಪಂದ್ಯಗಳಿಂದ 4 ಬಾರಿ ಐದು ವಿಕೆಟ್ ಸಾಧನೆ ಹಾಗೂ 16 ಬಾರಿ ನಾಲ್ಕು ವಿಕೆಟ್ ಸಾಧನೆಯೊಂದಿಗೆ 633 ವಿಕೆಟ್ ಪಡೆಯುವ ಮೂಲಕ ಆಫ್ಘನ್ ಸ್ಪಿನ್ನರ್ ಅಗ್ರಸ್ಥಾನದಲ್ಲಿದ್ದಾರೆ. ಪ್ರಸ್ತುತ ದಕ್ಷಿಣ ಆಫ್ರಿಕಾ ಟಿ20ಲೀಗ್ ಟೂರ್ನಿಯಲ್ಲಿ ಎಂಐ ಕೇಪ್ ಟೌನ್ ತಂಡವನ್ನು ರಶೀದ್ ಖಾನ್ ಮುನ್ನಡೆಸುತ್ತಿದ್ದಾರೆ.
2023 ಹಾಗೂ 2024ರ ಎಸ್‌ಎ20 ಲೀಗ್‌ನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿದ್ದ ಎಂಐ ಕೇಪ್ ಟೌನ್ ತಂಡ, ಇದೇ ಮೊದಲ ಬಾರಿ ಫೈನಲ್ ತಲುಪಿದ್ದು, ಶನಿವಾರ (ಫೆಬ್ರವರಿ 8) ಗ್ಕೆಬರ್ಹಾದ ಸೆಂಟ್ ಜಾರ್ಜ್ ಪಾರ್ಕ್‌ನಲ್ಲಿ ಏಡೆನ್ ಮಾರ್ಕ್ರಮ್ ನಾಯಕತ್ವದ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ವಿರುದ್ದ ಗೆದ್ದು ಚೊಚ್ಚಲ ಟ್ರೋಫಿ ಗೆಲ್ಲಲು ಎದುರು ನೋಡುತ್ತಿದೆ.
Rashid Khan: ಟಿ20ಯಲ್ಲಿ ವಿಶ್ವ ದಾಖಲೆ ಬರೆದ ರಶೀದ್ ಖಾನ್
1000 ವಿಕೆಟ್ ಪಡೆಯುವುದೇ ಗುರಿ: ರಶೀದ್ ಖಾನ್
ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆ ಮಾತನಾಡಿದ ರಶೀದ್ ಖಾನ್ ತಮ್ಮ ಮುಂದಿನ ಗುರಿ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ.
"1000 ವಿಕೆಟ್‌ಗಳನ್ನು ಕಬಳಿಸುವುದೇ ನನ್ನ ಮುಂದಿನ ಗುರಿಯಾಗಿದೆ. ಟಿ20 ಕ್ರಿಕೆಟ್‌ನಲ್ಲಿ 1000 ವಿಕೆಟ್ ಪಡೆಯುವುದು ದೊಡ್ಡ ಸವಾಲಾಗಿದೆ. ಒಂದು ವೇಳೆ ಸಂಪೂರ್ಣ ಫಿಟ್ನೆಸ್ ಹೊಂದಿ, ಸತತವಾಗಿ ಉತ್ತಮ ಪ್ರದರ್ಶನ ತೋರಿದರೆ ಟಿ20 ಕ್ರಿಕೆಟ್‌ನಲ್ಲಿ 1000 ವಿಕೆಟ್ ಸಾಧನೆ ಮಾಡಬಹುದು. ಈಗ ನಾನು ಆ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸಿದ್ದೇನೆ. 4 ಅಂಕಿಗಳ ವಿಕೆಟ್ ಪಡೆಯುವುದು ಎಷ್ಟು ಆನಂದವಾಗಿರುತ್ತದೆ ಅಲ್ಲವೇ?," ಎಂದು ಅನುಭವಿ ಸ್ಪಿನ್ನರ್ ಹೇಳಿದ್ದಾರೆ.
IPL 2025: ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್ ಮುರಿಯಬಲ್ಲ 3 ಪ್ರಮುಖ ದಾಖಲೆಗಳು!
ನಂಬಲು ಸಾಧ್ಯವಿಲ್ಲ
"ಟಿ20 ಕ್ರಿಕೆಟ್‌ನಲ್ಲಿ 1000 ವಿಕೆಟ್ ಪಡೆಯುವುದು ನಂಬಲು ಅಸಾಧ್ಯವಾಗಿದೆ. ಆದರೆ ನನ್ನಲ್ಲಿ ಸಾಕಷ್ಟು ಆತ್ಮವಿಶ್ವಾಸ ಮೂಡಿದೆ. ಬಹುಶಃ ನಾನು ಸಂಪೂರ್ಣ ಫಿಟ್ನೆಸ್ ಪಡೆದು, ಈಗಿನ ಪ್ರದರ್ಶನವನ್ನು ಮುಂದಿನ ಮೂರೂವರೆ ಅಥವಾ ನಾಲ್ಕು ವರ್ಷಗಳ ಕಾಲ ಕಾಯ್ದುಕೊಂಡರೆ, 1000 ವಿಕೆಟ್ ಅನ್ನು ಸುಲಭವಾಗಿ ಪಡೆಯಬಹುದು ಎಂಬ ಭಾವನೆ ನನ್ನಲ್ಲಿ ಉಂಟಾಗಿದೆ," ಎಂದು ರಶೀದ್ ಖಾನ್ ತಿಳಿಸಿದ್ದಾರೆ.
IPL 2025: ಮಾರ್ಚ್ 21 ರಿಂದ ಐಪಿಎಲ್ ಆರಂಭ; ಅಧ್ಯಕ್ಷ ಅರುಣ್ ಧುಮಾಲ್
ಟಿಮ್ ಸೌಥಿ ದಾಖಲೆ ಮುರಿಯುವತ್ತ ರಶೀದ್ ಖಾನ್
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ 100 ವಿಕೆಟ್ ಸಾಧನೆ ಮಾಡಿದ ದಾಖಲೆ ಬರೆದಿರುವ ರಶೀದ್ ಖಾನ್, ಮುಂದಿನ ಪಂದ್ಯಗಳಲ್ಲಿ 4 ವಿಕೆಟ್ ಪಡೆದರೆ, ನ್ಯೂಜಿಲೆಂಡ್ ಅನುಭವಿ ವೇಗಿ ಟಿಮ್ ಸೌಥಿ (164 ವಿಕೆಟ್) ದಾಖಲೆ ಮುರಿಯಲಿದ್ದಾರೆ. ಪ್ರಸ್ತುತ ರಶೀದ್ ಖಾನ್ 91 ಟಿ20ಐ ಪಂದ್ಯಗಳಿಂದ 6.08ರ ಸರಾಸರಿಯಲ್ಲಿ 161 ವಿಕೆಟ್ ಪಡೆದು ಎರಡನೇ ಗರಿಷ್ಠ ವಿಕೆಟ್ ಟೇಕರ್ ಆಗಿದ್ದಾರೆ.