Champions Trophy ಭಾರತ ತಂಡದ ಆಯ್ಕೆಯಲ್ಲಿನ ಎಡವಟ್ಟೇನೆಂದು ತಿಳಿಸಿದ ಹರ್ಭಜನ್ ಸಿಂಗ್!
2025ರ ಏಕದಿನ ಸ್ವರೂಪದ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಬಿಸಿಸಿಐ ಆಯ್ಕೆ ಮಂಡಳಿಯು ಭಾರತ ತಂಡವನ್ನು ಪ್ರಕಟಿಸಿದೆ. ಆದರೆ ಸ್ಪಿನ್ ವಿಭಾಗಕ್ಕೆ ಯುಜ್ವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡದೆ ಬಿಸಿಸಿಐ ದೊಡ್ಡ ಎಡವಟ್ಟು ಮಾಡಿಕೊಂಡಿದೆ ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

Harbhajan Singh

ನವದೆಹಲಿ: ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡದಲ್ಲಿ ಯುಜ್ವೇಂದ್ರ ಚಹಲ್ (Yuzvendra Chahal) ಅವರನ್ನು ಆಯ್ಕೆ ಮಾಡದೆ ಬಿಸಿಸಿಐ ಆಯ್ಕೆ ಮಂಡಳಿ ದೊಡ್ಡ ಎಡವಟ್ಟು ಮಾಡಿದೆ ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಬೇಸರ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ವಾಷಿಂಗ್ಟನ್ ಸುಂದರ್ ಸ್ಪಿನ್ನರ್‌ಗಳಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಯುಜ್ವೇಂದ್ರ ಚಹಲ್ ಹೆಚ್ಚಾಗಿ ಏಕದಿನ ಪಂದ್ಯವಾಡದ ಕಾರಣ 2023ರ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಗಿಡಲಾಗಿತ್ತು. ಈಗ ಚಾಂಪಿಯನ್ಸ್ ಟ್ರೋಫಿಗೂ ಆಯ್ಕೆ ಮಾಡದ ಕ್ರಮವನ್ನು ಪ್ರಶ್ನಿಸಿರುವ ಹರ್ಭಜನ್ ಸಿಂಗ್ , ಒಂದೇ ರೀತಿಯ ಬೌಲಿಂಗ್ ಶೈಲಿ ಹೊಂದಿರುವ ರವೀಂದ್ರ ಜಡೇಜಾ ಅಥವಾ ಅಕ್ಷರ್ ಪಟೇಲ್ ಬದಲಿಗೆ ಚಹಲ್‌ಗೆ ಸ್ಥಾನ ನೀಡಬೇಕಿತ್ತು ಎಂದು ಹೇಳಿದ್ದಾರೆ.
IND vs ENG: ಅಭಿಷೇಕ್ ಶರ್ಮಾಗೆ ಗಾಯ, ಎರಡನೇ ಟಿ20ಐಗೂ ಮುನ್ನ ಭಾರತಕ್ಕೆ ಗಾಯದ ಭೀತಿ!
ಲೆಗ್ ಸ್ಪಿನ್ನರ್‌ಗೆ ಸ್ಥಾನ ನೀಡಬೇಕಿತ್ತು: ಹರ್ಭಜನ್ ಸಿಂಗ್
ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಿರುವ ಭಾರತ ತಂಡದ ಕುರಿತು ಮಾತನಾಡಿದ ಹರ್ಭಜನ್ ಸಿಂಗ್, "ಸಂಜು ಸ್ಯಾಮ್ಸನ್ ಹಾಗೂ ಯುಜ್ವೇಂದ್ರ ಚಹಲ್‌ಗೆ ತಂಡದಲ್ಲಿ ಸ್ಥಾನ ನೀಡಿಲ್ಲ. ಆದರೆ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಅದರಲ್ಲಿ ಇಬ್ಬರು ಎಡಗೈ ಸ್ಪಿನ್ನರ್‌ಗಳಾಗಿದ್ದು, ತಂಡದ ಬೌಲಿಂಗ್ ಸಂಯೋಜನೆ ದೃಷ್ಟಿಯಿಂದ ಇಬ್ಬರು ಎಡಗೈ ಸ್ಪಿನ್ನರ್‌ಗಳಿಗೆ ಸ್ಥಾನ ನೀಡಬಾರದಿತ್ತು. ಚಹಲ್ ಉತ್ತಮ ಬೌಲರ್ ಆಗಿದ್ದು, ಅವರು ಮಾಡಿದ ತಪ್ಪು ಏನು ಎಂದು ನನಗೆ ತಿಳಿದಿಲ್ಲ. ಏಕೆ ಅವರು ಈ ತಂಡಕ್ಕೆ ಸೂಕ್ತವಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
72 ಏಕದಿನ ಪಂದ್ಯಗಳಿಂದ ಚಹಲ್ ಎರಡು ಬಾರಿ ಐದು ವಿಕೆಟ್ ಸಾಧನೆ ಸೇರಿದಂತೆ 5.26ರ ಸರಾಸರಿಯಲ್ಲಿ 125 ವಿಕೆಟ್ ಪಡೆದಿದ್ದಾರೆ. 2024ರ ಟಿ20 ವಿಶ್ವಕಪ್ ಟೂರ್ನಿಗೆ ಚಹಲ್ ಆಯ್ಕೆ ಆಗಿದ್ದರೂ ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದರಿಂದ ಚಹಲ್ ಒಂದು ಪಂದ್ಯ ಆಡಲಾಗದೆ ಬೆಂಚ್ ಕಾದಿದ್ದರು.
England Squad: ಐಸಿಸಿ ಚಾಂಪಿಯನ್ಸ್ ಟ್ರೋಫಿ, ಭಾರತದ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ!
ಸಂಜು ಸ್ಯಾಮ್ಸನ್‌ಗೆ ಸ್ಥಾನ ನೀಡಬೇಕಿತ್ತು
"ಸಂಜು ಸ್ಯಾಮ್ಸನ್‌ಗೆ ಸ್ಥಾನ ಸಿಗದಿರುವುದು ನನಗೆ ತುಂಬಾ ಬೇಸರವಾಗಿದೆ. ಅವರು ರನ್ ಗಳಿಸುತ್ತಿದ್ದರೂ ಆಯ್ಕೆ ಮಾಡದೆ ನಿರ್ಲಕ್ಷಿಸಿದ್ದಾರೆ. ತಂಡದಲ್ಲಿ ಕೇವಲ 15 ಮಂದಿಗೆ ಮಾತ್ರ ಸ್ಥಾನ ಸಿಗುತ್ತದೆ ಎಂಬುದು ನನಗೆ ತಿಳಿದಿದೆ. ಆದರೆ ಸ್ಯಾಮ್ಸನ್ ಏಕದಿನ ಕ್ರಿಕೆಟ್‌ನ ಉತ್ತಮ ಆಟಗಾರ ಎಂಬುದು ನನ್ನ ಭಾವನೆ. ಅವರು 55-56ರ ಸರಾಸರಿಯಲ್ಲಿ ರನ್ ಗಳಿಸಿದ್ದರೂ ಎರಡನೇ ವಿಕೆಟ್ ಕೀಪರ್ ರೂಪದಲ್ಲೂ ಆಯ್ಕೆ ಮಾಡಿಲ್ಲ. ಸಂಜು ಸ್ಯಾಮ್ಸನ್ ಆಯ್ಕೆ ಕುರಿತು ಚರ್ಚಿಸಿದರೆ, ನೀವು (ಜನರು) ತಂಡದಲ್ಲಿ ಯಾರ ಬದಲಿಗೆ ಸ್ಥಾನ ನೀಡಬೇಕಿತ್ತು ಎಂದು ಕೇಳುತ್ತೀರಿ?" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಸಂಜು ಸ್ಯಾಮ್ಸನ್ 14 ಏಕದಿನ ಪಂದ್ಯಗಳಿಂದ 99.60 ಸ್ಟ್ರೆಕ್ ರೇಟ್‌ನಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕ ನೆರವಿನಿಂದ 510 ರನ್ ಗಳಿಸಿದ್ದಾರೆ. ಆದರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ರಿಷಭ್ ಪಂತ್ ಸ್ಥಾನ ಪಡೆದಿದ್ದಾರೆ.