ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ranji Trophy 2025-26: ಕೆಎಲ್‌ ರಾಹುಲ್‌ ಸತತ ಎರಡನೇ ಶತಕ, ಪಡಿಕ್ಕಲ್‌ ಜತೆ 200 ರನ್‌ ಜೊತೆಯಾಟ!

ಉತ್ತರಾಖಂಡ ವಿರುದ್ಧದ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಅಲ್ಲದೆ ದೇವದತ್‌ ಪಡಿಕ್ಕಲ್‌ ಅವರ ಜೊತೆಗೆ 278 ರನ್‌ಗಳ ದಾಖಲೆಯ ಜೊತೆಯಾಟವನ್ನು ಆಡಿದರು. ಆ ಮೂಲಕ ಈ ಜೋಡಿ ವಿಶೇಷ ದಾಖಲೆಯನ್ನು ಬರೆದಿದೆ.

Ranji Trophy: ಉತ್ತರಾಖಂಡ ಎದುರು ಶತಕ ಬಾರಿಸಿದ ಕೆಎಲ್‌ ರಾಹುಲ್‌!

ಉತ್ತರಾಖಂಡ ಎದುರು ಕೆಎಲ್‌ ರಾಹುಲ್‌ ಶತಕ ಸಿಡಿಸಿದಾರೆ. ಚಿತ್ರ: ಬಿಸಿಸಿಐ -

Profile
Ramesh Kote Feb 15, 2026 5:03 PM

ಲಖನೌ: ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯಲ್ಲಿ ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ (KL Rahul) ತಮ್ಮ ಭರ್ಜರಿ ಪಾರ್ಮ್‌ ಅನ್ನು ಮುಂದುವರಿಸಿದ್ದಾರೆ. ಅವರು ಉತ್ತರಾಖಂಡ ವಿರುದ್ಧ ಇದೀಗ ನಡೆಯುತ್ತಿರುವ ಸೆಮಿಫೈನಲ್‌ ಪಂದ್ಯದಲ್ಲಿಯೂ (KAR vs UT) ಶತಕವನ್ನು ಭಾರಿಸಿದ್ದಾರೆ. ಅಲ್ಲದೆ ದೇವದತ್‌ ಪಡಿಕ್ಕಲ್‌ ಅವರ ಜತೆಗೆ ಎರಡನೇ ವಿಕೆಟ್‌ಗೆ 250ಕ್ಕೂ ಹೆಚ್ಚಿನ ರನ್‌ಗಳ ಜೊತೆಯಾಟವನ್ನು ಆಡಿದ್ದಾರೆ. ಆ ಮೂಲಕ ಕರ್ನಾಟಕ ತಂಡಕ್ಕೆ ಅದ್ಭುತ ಆರಂಭ ತಂದುಕೊಡುವಲ್ಲಿ ಈ ಜೋಡಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಕರ್ನಾಟಕ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಕೆಎಲ್‌ ರಾಹುಲ್‌ ಹಾಗೂ ಮಯಾಂಕ್‌ ಅಗರ್ವಾಲ್‌ ಜೋಡಿ ದೊಡ್ಡ ಜೊತೆಯಾಟವನ್ನು ಆಡುವಲ್ಲಿ ವಿಫಲರಾದರು. ಮಯಾಂಕ್‌ ಅಗರ್ವಾಲ್‌ ಅವರು 32 ಎಸೆತಗಳಲ್ಲಿ 5 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಕರ್ನಾಟಕ ತಂಡ 18 ರನ್‌ ಇರುವಾಗಲೇ ಮೊದಲನೇ ವಿಕೆಟ್‌ ಕಳೆದುಕೊಂಡಿತು.

ಹ್ಯಾಟ್ರಿಕ್‌ ಗೆಲುವು ಸಾಧಿಸಿದ ವೆಸ್ಟ್‌ ಇಂಡೀಸ್‌; ನೇಪಾಳ ವಿರುದ್ಧ 9 ವಿಕೆಟ್‌ ಜಯ

ವಿಶೇಷ ದಾಖಲೆ ಬರೆದ ಕೆಎಲ್‌ ರಾಹುಲ್‌-ದೇವದತ್‌ ಪಡಿಕ್ಕಲ್‌

ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ಕೆಎಲ್‌ ರಾಹುಲ್‌ ಹಾಗೂ ದೇವದತ್‌ ಪಡಿಕ್ಕಲ್‌ ಉತ್ತರಾಖಂಡ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಪಂದ್ಯದ ಆರಂಭಿಕ ದಿನ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 278 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಪ್ರಸಕ್ತ ರಣಜಿ ಟ್ರೋಫಿ ಟೂರ್ನಿಯ ಆವೃತ್ತಿಯಲ್ಲಿ ಎರಡನೇ ವಿಕೆಟ್‌ಗೆ ಎರಡನೇ ಅತಿ ದೊಡ್ಡ ಜೊತೆಯಾಟವಾಡಿದ ಜೋಡಿ ಎಂಬ ದಾಖಲೆಯನ್ನು ರಾಹುಕ್‌-ಪಡಿಕ್ಕಲ್‌ ಬರೆಯಿತು. ಇದಕ್ಕೂ ಮುನ್ನ ನಾಗಾಲ್ಯಾಂಡ್‌ ವಿರುದ್ಧ ವಿಮಲ್‌ ಕುಮಾರ್‌ ಹಾಗೂ ಪ್ರದೋಷ್‌ ರಂಜನ್‌ ಪಾಲ್‌ ಜೋಡಿ ಎರಡನೇ ವಿಕೆಟ್‌ಗೆ 307 ರನ್‌ಗಳ ಜೊತೆಯಾಟವನ್ನು ಆಡಿತ್ತು.

KAR vs MUM: ಕೆಎಲ್‌ ರಾಹುಲ್‌ ಭರ್ಜರಿ ಶತಕ, ಮುಂಬೈ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಕರ್ನಾಟಕ!

ಕೆಎಲ್‌ ರಾಹುಲ್‌ ಸತತ ಎರಡನೇ ಶತಕ

ಇನ್ನು ಆರಂಭಿಕ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ಶತಕವನ್ನು ಬಾರಿಸಿದರು. ಕಳೆದ ಪಂದ್ಯದಲ್ಲಿಯೂ ಇವರು ಸೆಂಚುರಿ ಬಾರಿಸಿದ್ದರು. ಅವರು ತಮ್ಮ ದೇಶಿ ಕ್ರಿಕೆಟ್‌ನಲ್ಲಿನ ಫಾರ್ಮ್‌ ಅನ್ನು ಮುಂದುವರಿಸಿದ್ದಾರೆ. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಕೆಎಲ್‌ ರಾಹುಲ್‌, ಆಡಿದ 211 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ 141 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಕರ್ನಾಟಕ ತಂಡಕ್ಕೆ ಭರ್ಜರಿ ಆರಂಭ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರ, ಅವರು 150ರ ಸನಿಹದಲ್ಲಿ ಆದಿತ್ಯ ರಾವತ್‌ಗೆ ವಿಕೆಟ್‌ ಒಪ್ಪಿಸಿದರು.



ದೇವದತ್‌ ಪಡಿಕ್ಕಲ್‌ ಶತಕ

ಕೆಎಲ್‌ ರಾಹುಲ್‌ ಜೊತೆಗೆ ದಾಖಲೆಯ ಜೊತೆಯಾಟವನ್ನು ಆಡಿದ ದೇವದತ್‌ ಪಡಿಕ್ಕಲ್‌ ಕೂಡ ಶತಕವನ್ನು ಬಾರಿಸಿದರು. ಅವರು ಆಡಿದ 89 ಓವರ್‌ಗಳ ಅಂತ್ಯಕ್ಕೆ 234 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 16 ಬೌಂಡರಿಗಳೊಂದಿಗೆ ಅಜೇಯ 147 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ 150ರ ಸನಿಹದಲ್ಲಿದ್ದಾರೆ. ಮೊದಲನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 90 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 355 ರನ್‌ಗಳನ್ನು ಕಲೆ ಹಾಕಿದೆ.