DC vs MI: ಜಸ್‌ಪ್ರೀತ್ ಬುಮ್ರಾಗೆ ರೂಪಿಸಿದ್ದ ರಣತಂತ್ರವನ್ನು ರಿವೀಲ್ ಮಾಡಿದ ಕರುಣ್ ನಾಯರ್!
Karun Nair on Jasprit Bumrah: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮಾರಕ ವೇಗಿ ಜಸ್‌ಪ್ರೀತ್ ಬುಮ್ರಾಗೆ ರೂಪಿಸಿದ್ದ ಬ್ಯಾಟಿಂಗ್ ಗೇಮ್ ಪ್ಲ್ಯಾನ್ ಏನೆಂಬುದನ್ನು ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಕರುಣ್ ನಾಯರ್ ಬಹಿರಂಗಪಡಿಸಿದ್ದಾರೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್ 12 ರನ್‌ಗಳಿಂದ ಸೋಲು ಅನುಭವಿಸಿತು.

ಜಸ್‌ಪ್ರೀತ್ ಬುಮ್ರಾ ಸವಾಲಿನ ಬಗ್ಗೆ ಕರುಣ್ ನಾಯರ್ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ: ಮುಂಬೈ ಇಂಡಿಯನ್ಸ್(Mumbai Indians) ವಿರುದ್ದದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) 12 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಮುಂಬೈ ನೀಡಿದ್ದ 206 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಕರುಣ್ ನಾಯರ್(Karun Nair) ಸ್ಪೋಟಕ ಬ್ಯಾಟ್ ಮಾಡಿದ್ದರು, ಆ ಮೂಲಕ ಏಳು ವರ್ಷಗಳ ಐಪಿಎಲ್ ಟೂರ್ನಿಯಲ್ಲಿ ಅರ್ಧಶತಕವನ್ನು ಸಿಡಿಸಿದರು. ಇವರು ಆಡಿದ್ದ 40 ಎಸೆತಗಳಲ್ಲಿ 89 ರನ್‌ಗಳನ್ನು ಸಿಡಿಸಿದ್ದರು. ಮುಂಬೈ ಇಂಡಿಯನ್ಸ್ ತಂಡದ ಎಲ್ಲಾ ಬೌಲರ್‌ಗಳಿಗೆ ಬೆವರಿಳಿಸಿದ್ದರು. ಅದರಲ್ಲಿಯೂ ವಿಶೇಷವಾಗಿ ಜಸ್‌ಪ್ರೀತ್ ಬುಮ್ರಗೂ ಕೂಡ ಸಿಕ್ಸರ್-ಬೌಂಡರಿಗಳನ್ನು ಸಿಡಿಸಿದ್ದರು. ಆ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಪಂದ್ಯದ ಬಳಿಕ ಮಾತನಾಡಿದ್ದ ಕರುಣ್ ನಾಯರ್ ಜಸ್‌ಪ್ರೀತ್ ಬುಮ್ರಾ ಸವಾಲನ್ನು ಮೆಟ್ಟಿ ನಿಂತ್ತಿದ್ದೇಗೆಂದು ವಿವರಿಸಿದ್ದಾರೆ.
2022ರಲ್ಲಿ ಕರುಣ್ ನಾಯರ್ ಕೊನೆಯ ಬಾರಿ ಐಪಿಎಲ್ ಆಡಿದ್ದರು. ಇದಾದ ಬಳಿಕ ಅವರು ಇದೇ ಮೊದಲ ಬಾರಿ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ಕಾಣಿಸಿಕೊಂಡರು. ಭಾನುವಾರದ ಪಂದ್ಯದಲ್ಲಿ ಜೇಕ್ ಮೆಗರ್ಕ್ ವಿಕೆಟ್ ಒಪ್ಪಿಸಿದ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿದ ಕರುಣ್ ನಾಯರ್, ಅಭಿಷಕ್ ಪೊರೆಲ್ ಅವರ ಜೊತೆ ಭರ್ಜರಿ ಜೊತೆಯಾಟವನ್ನು ಆಡಿದರು ಹಾಗೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಜಸ್‌ಪ್ರೀತ್ ಬುಮ್ರಾ ಅವರ ಮೊದಲನೇ ಓವರ್‌ನಲ್ಲಿ ಕರುಣ್ ನಾಯರ್ ಎರಡು ಬೌಂಡರಿಗಳು ಸೇರಿದಂತೆ 11 ರನ್‌ಗಳನ್ನು ಸಿಡಿಸಿದ್ದರು. ನಂತರ ಬುಮ್ರಾ ಅವರ ಕೊನೆಯ ಓವರ್‌ನಲ್ಲಿ ಕರುಣ್ ನಾಯರ್ 83 ಮೀಟರ್ ಸಿಕ್ಸರ್ ಬಾರಿಸಿದ್ದರು. ನಂತರ ಯಾರ್ಕರ್ ಹೊಡೆಯುವ ಪ್ರಯತ್ನದಲ್ಲಿ ಬುಮ್ರಾ ಫುಲ್ ಟಾಸ್ ಹಾಕಿದ್ದರು, ಈ ವೇಳೆ ನಾಯರ್ ಸ್ಲೈಸ್ ಮಾಡಿ ಬೌಂಡರಿ ಬಾರಿಸಿದ್ದರು. ಬುಮ್ರಾ ಮೊದಲ ಎರಡು ಓವರ್‌ಗಳಲ್ಲಿ 29 ರನ್ ನೀಡಿದ್ದರು. ಬುಮ್ರಾಗೆ 9 ಎಸೆತಗಳಲ್ಲಿ ಕರುಣ್ ನಾಯರ್ 26 ರನ್ ಸಿಡಿಸಿದ್ದರು. ಕರುಣ್ ನಾಯರ್ ಕೇವಲ 22 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದರು. ಇದರ ನಡುವೆ ಬುಮ್ರಾ ಹಾಗೂ ಕರುಣ್ ನಾಯರ್ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು.
MI vs DC: ಕರುಣ್ ನಾಯರ್ ಹೋರಾಟ ವ್ಯರ್ಥ, ಗೆಲುವಿನ ಸನಿಹ ಬಂದು ಮುಂಬೈಗೆ ಮಣಿದ ಡೆಲ್ಲಿ!
ಜಸ್‌ಪ್ರೀತ್ ಬುಮ್ರಾಗೆ ರೂಪಿಸಿದ್ದ ಗೇಮ್ ಪ್ಲ್ಯಾನ್ ತಿಳಿಸಿದ ಕರುಣ್ ನಾಯರ್
ಪಂದ್ಯದ ಬಳಿಕ ಜಸ್‌ಪ್ರೀತ್ ಬುಮ್ರಾ ಸವಾಲಿನ ಬಗ್ಗೆ ಮಾತನಾಡಿದ ಕರುಣ್ ನಾಯರ್," ನಿಸ್ಸಂಶಯವಾಗಿ ನಾನು ತುಂಬಾ ವಿಶ್ವಾಸದಲ್ಲಿ ಆಡುತ್ತಿದ್ದೆ. ನಾನು ಆಡುತ್ತಿದ್ದಾಗ, ಒಂದು ಫ್ಲೋನಲ್ಲಿ ಇರುವಾಗ, ನನಗೆ ಇದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ," ಎಂದು ತಿಳಿಸಿದ್ದಾರೆ.
"ಸೂಕ್ತವಾದ ಎಸೆತವನ್ನು ಆಯ್ಕೆ ಮಾಡುವುದು ಇದಾಗಿದೆ ಹಾಗೂ ನಾನು ಅಂದುಕೊಂಡಿದ್ದ ಸ್ಥಳದಲ್ಲಿ ಆಡಿದ್ದೇನೆ. ವಿಶ್ವ ಕ್ರಿಕೆಟ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಒಬ್ಬರು. ಹಾಗಾಗಿ ಅವರು ಬೌಲ್ ಮಾಡುವಾಗ, ನಾನು ಅತ್ಯಂತ ಎಚ್ಚರಿಕೆಯಿಂದ ಅವರ ಎಸೆತಗಳನ್ನು ನೋಡುತ್ತಿದ್ದೆ. ಅವರು ಬೌಲಿಂಗ್‌ಗೆ ಆಡುವಾಗ ನಾನು ನನ್ನ ಸಾಮರ್ಥ್ಯವನ್ನು ಬೆಂಬಲಿಸಿದ್ದೇನೆ," ಎಂದು ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಹೇಳಿದ್ದಾರೆ.
IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಿನ ಬೆನ್ನೆಲ್ಲೆ ಅಕ್ಷರ್ ಪಟೇಲ್‌ಗೆ ದಂಡ!
ಡೆಲ್ಲಿ ಕ್ಯಾಪಿಟಲ್ಸ್‌ಗೆ 12 ರನ್ ಸೋಲು
ಮುಂಬೈ ಇಂಡಿಯನ್ಸ್ ನೀಡಿದ್ದ 206 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕರುಣ್ ನಾಯರ್ ಹಾಗೂ ಅಭಿಷೇಕ್ ಪೊರೆಲ್ ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಕರುಣ್ ನಾಯರ್ 40 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ 12 ಬೌಂಡರಿಗಳೊಂದೊಗೆ 89 ರನ್‌ಗಳಿಸಿದ್ದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಹಾದಯಲ್ಲಿತ್ತು. ಆದರೆ, 12ನೇ ಓವರ್‌ನಲ್ಲಿ ಮಿಚೆಲ್ ಸ್ಯಾಂಟ್ನರ್‌ಗೆ ಕರುಣ್ ನಾಯರ್ ಕ್ಲೀನ್ ಬೌಲ್ಡ್ ಆದ ಬಳಿಕ ಪಂದ್ಯದ ದಿಕ್ಕು ಸಂಪೂರ್ಣವಾಗಿ ಬದಲಾಯಿತು. ಕೊನೆಯ 58 ರನ್‌ಗಳಲ್ಲಿ ಡೆಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 12 ರನ್‌ಗಳಿಂದ ಸೋಲು ಒಪ್ಪಿಕೊಂಡಿತ್ತು.