ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2024: ಮುಂಬೈ ಇಂಡಿಯನ್ಸ್‌ ವಿರುದ್ಧ ಸೋಲಿನ ಬೆನ್ನೆಲ್ಲೆ ಅಕ್ಷರ್‌ ಪಟೇಲ್‌ಗೆ ದಂಡ!

Axar Patel for slow over-rate: ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಣ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್‌ ಕಾರಣ ಡೆಲ್ಲಿ ನಾಯಕ ಅಕ್ಷರ್‌ ಪಟೇಕ್‌ಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 12 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತು.

ಮುಂಬೈ ಇಂಡಿಯನ್ಸ್‌ ವಿರುದ್ಧದ ಸೋಲಿನ ಬೆನ್ನಲ್ಲೆ ಅಕ್ಷರ್‌ ಪಟೇಲ್‌ಗೆ ದಂಡ!

ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ಅಕ್ಷರ್‌ ಪಟೇಲ್‌ಗೆ ದಂಡ.

Profile Ramesh Kote Apr 14, 2025 4:06 PM

ನವದೆಹಲಿ: ಮುಂಬೈ ಇಂಡಿಯನ್ಸ್‌Mumbai Indians) ವಿರುದ್ಧದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಕಾರಣ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಅಕ್ಷರ್‌ ಪಟೇಲ್‌ಗೆ (Axar Patel) 12 ಲಕ್ಷ ರೂ ದಂಡವನ್ನು ವಿಧಿಸಲಾಗಿದೆ. ಆ ಮೂಲಕ ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ನಿಧಾನಗತಿಯ ಓವರ್‌ ಪ್ರಮಾದವೆಸಗಿದ ಆರನೇ ನಾಯಕ ಅಕ್ಷರ್‌ ಪಟೇಲ್‌ ಆಗಿದ್ದಾರೆ. ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಕರುಣ್‌ ನಾಯರ್‌ ಸ್ಪೋಟಕ ಬ್ಯಾಟಿಂಗ್‌ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 12 ರನ್‌ಗಳಿಂದ ಸೋಲು ಅನುಭವಿಸಿತ್ತು.

ಪ್ರಸಕ್ತ ಆವೃತ್ತಿಯತಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಅಕ್ಷರ್‌ ಪಟೇಲ್‌ ಪಾಲಿಗೆ ಇದು ಮೊದಲ ನಿಧಾನಗತಿಯ ಓವರ್‌ ಪ್ರಮಾದ ಇದಾಗಿದೆ. ನಿಧಾನಗತಿಯ ಬೌಲಿಂಗ್‌ ಪ್ರಮಾದವನ್ನು ಸತತವಾಗಿ ಎಸಗಿದೆ ನಾಯಕರನ್ನು ಬ್ಯಾನ್‌ ಮಾಡುವ ನಿಯಮವನ್ನು ಪ್ರಸಕ್ತ ಆವೃತ್ತಿಯಲ್ಲಿ ಬಿಸಿಸಿಐ ತೆಗೆದು ಹಾಕಿದೆ. ಕಳೆದ ಆವೃತ್ತಿಯವರೆಗೂ ಮೂರು ಬಾರಿ ತಂಡದ ನಾಯಕ ನಿಧಾನಗತಿಯ ಓವರ್‌ ರೇಟ್‌ ಪ್ರಮಾದವೆಸಗಿದರೆ, ಅಂಥಾ ನಾಯಕರನ್ನು ಒಂದು ಪಂದ್ಯಕ್ಕೆ ಬ್ಯಾನ್‌ ಮಾಡಲಾಗುತ್ತದೆ.

MI vs DC: ಕರುಣ್‌ ನಾಯರ್‌ ಹೋರಾಟ ವ್ಯರ್ಥ, ಗೆಲುವಿನ ಸನಿಹ ಬಂದು ಮುಂಬೈಗೆ ಮಣಿದ ಡೆಲ್ಲಿ!

ಅಕ್ಷರ್‌ ಪಟೇಲ್‌ಗೆ 12 ಲಕ್ಷ ರೂ ದಂಡ

"ದಿಲ್ಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್‌ ವಿರುದ್ಧದ ಟಾಟಾ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 29ನೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಕಾರಣ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಅಕ್ಷರ್‌ ಪಟೇಲ್‌ಗೆ ದಂಡವನ್ನು ವಿಧಿಸಲಾಗಿದೆ. ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ಇದು ಅವರ ತಂಡದ ಈ ಋತುವಿನ ಮೊದಲ ಅಪರಾಧವಾಗಿರುವುದರಿಂದ ಅಕ್ಷರ್‌ ಪಟೇಲ್‌ಗೆ 12 ಲಕ್ಷ ರೂ ದಂಡವನ್ನು ವಿಧಿಸಲಾಗಿದೆ," ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ರಾಜಸ್ಥಾನ್‌ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌, ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ, ಲಖನೌ ಸೂಪರ್‌ ಜಯಂಟ್ಸ್‌ ನಾಯಕ ರಿಷಭ್‌ ಪಂತ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಾಯಕ ರಜತ್‌ ಪಾಟಿದಾರ್‌ ಅವರಿಗೂ ಕೂಡ 2025ರ ಐಪಿಎಲ್‌ ಟೂರ್ನಿಯಲ್ಲಿ ನಿಧಾನಗತಿಯ ಬೌಲಿಂಗ್‌ ಕಾರಣ ದಂಡವನ್ನು ವಿಧಿಸಲಾಗಿತ್ತು.

MI vs DC: ಕರುಣ್‌ ನಾಯರ್‌ ಹೋರಾಟ ವ್ಯರ್ಥ, ಗೆಲುವಿನ ಸನಿಹ ಬಂದು ಮುಂಬೈಗೆ ಮಣಿದ ಡೆಲ್ಲಿ!

ಮುಂಬೈ ಎದುರು ಡೆಲ್ಲಿಗೆ 12 ರನ್‌ ಸೋಲು

ಮುಂಬೈ ಇಂಡಿಯನ್ಸ್‌ ವಿರುದ್ದದ ಪಂದ್ಯದಲ್ಲಿ ನಿಗದಿತ ಸಮಯಕ್ಕೆ 20 ಓವರ್‌ಗಳನ್ನು ಪೂರ್ಣಗೊಳಿಸಲು ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ಸಾಧ್ಯವಾಗಿರಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ ಇಂಡಿಯನ್ಸ್‌ 205 ರನ್‌ಗಳನ್ನು ದಾಖಲಿಸಿತ್ತು. ತಿಲಕ್‌ ವರ್ಮಾ 59 ರನ್‌ ಸಿಡಿಸಿದ್ದರೆ, ಡೆತ್‌ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ನಮನ್‌ ಧೀರ್‌ ಕೇವಲ 17 ಎಸೆತಗಳಲ್ಲಿ 38 ರನ್‌ ಸಿಡಿಸಿದ್ದರು. ನಂತರ 206 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಕರುಣ್‌ ನಾಯರ್‌ ಸ್ಪೋಟಕ ಬ್ಯಾಟ್‌ ಮಾಡಿದ್ದರು.

ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಜಸ್‌ಪ್ರೀತ್‌ ಬುಮ್ರಾ ಸೇರಿದಂತೆ ಮುಂಬೈ ಇಂಡಿಯನ್ಸ್‌ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಂತಿದ್ದರು. ಕೇವಲ 40 ಎಸೆತಗಳನ್ನು ಆಡಿದ್ದ ಕರುಣ್‌ ನಾಯರ್‌ 89 ರನ್‌ಗಳನ್ನು ಸಿಡಿಸಿದ್ದರು. ಆದರೆ, ಶತಕದಂಚಿನಲ್ಲಿ ಮಿಚೆಲ್‌ ಸ್ಯಾಂಟ್ನರ್‌ಗೆ ಕರುಣ್‌ ನಾಯರ್‌ ಕ್ಲೀನ್‌ ಬೌಲ್ಡ್‌ ಆಗಿದ್ದರು. ಈ ವೇಳೆ 12ನೇ ಓವರ್‌ನಲ್ಲಿ ಡೆಲ್ಲಿ 3 ವಿಕೆಟ್‌ ಕಳೆದುಕೊಂಡು 135 ರನ್‌ಗಳನ್ನು ಗಳಿಸಿತ್ತು. ಆದರ, ಕರುಣ್‌ ಔಟ್‌ ಆದ ಬಳಿಕ ಡೆಲ್ಲಿ ಬ್ಯಾಟಿಂಗ್‌ ಕುಸಿತು ಅನುಭವಿಸಿತು. ಕೇವಲ 58 ರನ್‌ಗಳ ಅಂತರದಲ್ಲಿ ಡೆಲ್ಲಿ ಕೊನೆಯ 8 ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಮೂಲಕ ಕೇವಲ 12 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ಸೋಲು ಅನುಭವಿಸಿತ್ತು.