ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಪೂರ್ವ ಒಳನೋಟಗಳು

ಒಂದು ಉದಾಹರಣೆಯನ್ನು ನೋಡುವುದಾದರೆ, ‘ಸಂಕೀರ್ಣ ಸಂರಚನೆಯ ವದರಿಂಗ್ ಹೈಟ್ಸ್’ ಲೇಖನದಲ್ಲಿ ಬಂದಿರುವ ಆರಂಭದ ಸಾಲುಗಳಿವು: “ಕನ್ನಡದ ನವೋದಯ ಸಾಹಿತ್ಯ ಸಂದರ್ಭ ದಲ್ಲಿ ಇಂಗ್ಲಿಷ್ ಸಾಹಿತ್ಯಾಭ್ಯಾಸದ ಫಲವಾಗಿ ಕಾವ್ಯ, ಸಣ್ಣಕತೆ, ಕಾದಂಬರಿ, ಲಲಿತ ಪ್ರಬಂಧ ಹೀಗೆ ಹೊಸ ಸಾಹಿತ್ಯದ ವಿವಿಧ ಪ್ರಕಾರಗಳು ಹುಟ್ಟಿಕೊಂಡವು.

ಅಪೂರ್ವ ಒಳನೋಟಗಳು

-

ಕಥೆಗಾರರಾಗಿಯೂ ಪ್ರಸಿದ್ಧರಾಗಿರುವ ಎಸ್.ದಿವಾಕರ್ ಅವರು ಬರೆದಿರುವ ವಿವಿಧ ಲೇಖನ ಗಳ ಸಂಗ್ರಹವಿದು. ಸಾಹಿತ್ಯ, ಸಂಸ್ಕೃತಿ ಕುರಿತು ಬರಹಗಳು, ಕೆಲವು ವ್ಯಕ್ತಿಚಿತ್ರ ಮತ್ತು ವಿಮರ್ಶೆಗಳನ್ನು ಒಳಗೊಂಡಿರುವ ಈ ಪುಸ್ತಕವು, ಎಸ್. ದಿವಾಕರ್ ಅವರ ವ್ಯಾಪಕ ಓದು ಮತ್ತು ಅಧ್ಯಯನವನ್ನು ಪರಿಚಯಿಸುವುದರ ಜತೆಯಲ್ಲೇ, ಅವರು ಬಳಸುವ ಗದ್ಯದ ಸೊಗಸನ್ನೂ ಓದುಗರಿಗೆ ಉಣಬಡಿಸುತ್ತದೆ. ಈ ಪುಸ್ತಕದಲ್ಲಿ ಮೂರು ಭಾಗಗಳಿವೆ.

ಮೊದಲ ಭಾಗದಲ್ಲಿ ವೈವಿಧ್ಯಮಯ ಪುಸ್ತಕಗಳ ವಿಮರ್ಶೆ ಮತ್ತು ಪರಿಚಯವಿದೆ. ಇಲ್ಲಿ ಕನ್ನಡದ ಪುಸ್ತಕಗಳ ಜತೆಯಲ್ಲೇ, ಕೆಲವು ಅನುವಾದಿತ ಕೃತಿಗಳ ವಿಮರ್ಶೆಯೂ ಇದ್ದು, ಇಲ್ಲಿನ ಬರಹಗಳು ಹಲವು ಅನನ್ಯ ಒಳನೋಟಗಳನ್ನು ಹೊಂದಿರುವುದನ್ನು ಕಾಣಬಹುದು.

ಒಂದು ಉದಾಹರಣೆಯನ್ನು ನೋಡುವುದಾದರೆ, ‘ಸಂಕೀರ್ಣ ಸಂರಚನೆಯ ವದರಿಂಗ್ ಹೈಟ್ಸ್’ ಲೇಖನದಲ್ಲಿ ಬಂದಿರುವ ಆರಂಭದ ಸಾಲುಗಳಿವು: “ಕನ್ನಡದ ನವೋದಯ ಸಾಹಿತ್ಯ ಸಂದರ್ಭದಲ್ಲಿ ಇಂಗ್ಲಿಷ್ ಸಾಹಿತ್ಯಾಭ್ಯಾಸದ ಫಲವಾಗಿ ಕಾವ್ಯ, ಸಣ್ಣಕತೆ, ಕಾದಂಬರಿ, ಲಲಿತ ಪ್ರಬಂಧ ಹೀಗೆ ಹೊಸ ಸಾಹಿತ್ಯದ ವಿವಿಧ ಪ್ರಕಾರಗಳು ಹುಟ್ಟಿಕೊಂಡ ವು.

ಇದನ್ನೂ ಓದಿ: Shashidhara Halady Column: ಕುದುರೆಯ ಬಾಲ ಮನೆಯಂಗಳದಲ್ಲಿ !

ಅವುಗಳ ಜೊತೆ ಜೊತೆಗೇ ಇಂಗ್ಲಿಷಿನಿಂದ ಕೆಲವು ಕವನಗಳ ಅನುವಾದಗಳು ಅಥವಾ ಅನುಸರಣೆಗಳು ಕನ್ನಡಕ್ಕೆ ಬಂದವು. ಅವುಗಳಲ್ಲಿ ಮುಖ್ಯವಾಗಿ ಬಿ.ಎಂ.ಶ್ರೀ.ಯವರ ‘ಇಂಗ್ಲಿಷ್ ಗೀತೆಗಳು’ ನಮ್ಮ ನವೋದಯ ಕವಿಗಳಲ್ಲಿ ಕೆಲವರ ಮೇಲೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ಆದರೆ ಅದೊಂದು ಅಪವಾದ ಎನ್ನ ಬೇಕಷ್ಟೆ. ಇತ್ತೀಚಿನವರೆಗೂ ಎಂ.ಎ. ಪದವಿಗಾಗಿ ಇಂಗ್ಲಿಷ್ ಸಾಹಿತ್ಯವನ್ನು ಓದುತ್ತಿದ್ದವರೆಲ್ಲರೂ ಅಭ್ಯಾಸ ಮಾಡುತ್ತಿದ್ದದ್ದು ಮುಖ್ಯವಾಗಿ ಬ್ರಿಟಿಷ್ ಸಾಹಿತ್ಯವನ್ನೇ. ಆದರೂ ಅದೇಕೋ ನಮ್ಮಲ್ಲಿ ಇಂಗ್ಲಿಷ್ ಸಾಹಿತ್ಯದ ಕೆಲವಾದರೂ ಅಭಿಜಾತ ಕಾದಂಬರಿಗಳು ಅನುವಾದಗೊಳ್ಳಲೇ ಇಲ್ಲ. . .’ (ಪುಟ 80).

ಶ್ಯಾಮಲಾ ಮಾಧವ ಅವರು ಅನುವಾದಿಸಿರುವ, ಎಮಿಲಿ ಬ್ರಾಂಟೆ ಯವರ ವದರಿಂಗ್ ಹೈಟ್ಸ್ ಕೃತಿಯು, ಕನ್ನಡದ ಸಂದರ್ಭದಲ್ಲಿ ಎಷ್ಟು ಮುಖ್ಯ ಎಂದು ಎಸ್.ದಿವಾಕರ್ ಅವರು ಈ ಲೇಖನದಲ್ಲಿ ಗಮನಿಸಿ ರುವ ಪರಿ ಅನನ್ಯ. ವಿವಿಧ ಕನ್ನಡದ ಕೃತಿಗಳನ್ನು ವಿಮರ್ಶೆಗೆ ಒಳಪಡಿಸುವಾಗ, ಎಸ್.ದಿವಾಕರ್ ಅವರು, ಆ ಕೃತಿಯ ಆಶಯವನ್ನು ಸಮರ್ಥವಾಗಿ ಹಿಡಿದಿ ಡುವ ಪರಿ ಗಮನ ಸೆಳೆಯುತ್ತದೆ.

“ಜಯ ಪ್ರಕಾಶ ಮಾವಿನಕುಳಿಯವರ ಹಿಂದಿನ ಎರಡು ಸಂಕಲನಗಳ ಕತೆಗಳಂತೆ ಈ ಸಂಕಲನದ ಕತೆಗಳು ಕೂಡ ಅನುಕಂಪದ ಅಗತ್ಯವನ್ನೂ ಸಾಮೂಹಿಕ ಹೊಣೆಗಾರಿಕೆ ಯನ್ನೂ ಪ್ರತಿಪಾದಿಸುವ ಮೂಲಕ ಲಹುವ ಶಕ್ತಿಯುಳ್ಳ ಪ್ರೀತಿಯನ್ನು ಕುರಿತು ಪರೋಕ್ಷ ವಾಗಿ ಮಾತಾಡುತ್ತವೆ.

ಇಲ್ಲಿನ ಕೆಲವು ಕತೆಗಳನ್ನು ಓದುವಾಗ ನನ್ನ ಮನಸ್ಸು ಆರ್ದ್ರ ವಾದದ್ದು ನಿಜ. ಅವರ ಸೃಜನಶೀಲತೆಯ ಆಶಯವೂ ಇದೇ ಆಗಿದ್ದರೆ, ಆ ಮಟ್ಟಿಗೆ ಈ ಸಂಕಲನದ ಅನೇಕ ಕತೆಗಳು ಸಾರ್ಥಕವಾಗಿ ವೆಯೆಂದೇ ಹೇಳಬೇಕು". (ಪುಟ ೯೩) ಈ ಪುಸ್ತಕದಲ್ಲಿರುವುದು ಎಸ್.ದಿವಾಕರ್ ಅವರು ವಿವಿಧ ಸಂದರ್ಭದಲ್ಲಿ ಬರೆದ ಪುಸ್ತಕ ಸಮೀಕ್ಷೆಗಳು ಮತ್ತು ಮುನ್ನುಡಿಗಳು.

ಮೂರನೆಯ ಭಾಗದಲ್ಲಿ ಅವರು ಸಮೀಪದಿಂದ ನೋಡಿದ ಖ್ಯಾತ ವ್ಯಕ್ತಿಗಳ ಒಡನಾಟದ ವಿವರ, ಪರಿಚಯ ಅಥವಾ ವ್ಯಕ್ತಿಚಿತ್ರಗಳಿವೆ. ಆದರೆ, ಇವುಗಳ ವ್ಯಾಪ್ತಿ, ಒಳನೋಟ ನಿಜಕ್ಕೂ ಅಪೂರ್ವ. ಎಸ್. ದಿವಾಕರ್ ಅವರು ಯಾವುದೇ ವ್ಯಕ್ತಿಯ ಕುರಿತು ಬರೆದರೂ, ಅಲ್ಲಿ ಹೊಸ ಹೊಸ ವಿಷಯಗಳು, ಜಿಜ್ಞಾಸೆಗಳು ಒಡಮೂಡುತ್ತವೆ; ಓದುಗರ ಮನಸ್ಸಿನಲ್ಲಿ ಹೊಸ ಸಕಾರಾತ್ಮಕ ಚಿಂತನಗಳನ್ನು ಹುಟ್ಟುಹಾಕುತ್ತವೆ. ಸುಮಾರು 296 ಪುಟಗಳಿರುವ ಈ ಪುಸ್ತಕ, ಕನ್ನಡದ ಎಲ್ಲಾ ಗಂಭೀರ ಓದುಗರನ್ನು ತಲುಪಲಿ ಎಂಬುದು ನನ್ನ ಆಶಯ.