ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aero India 2025: ಏರ್‌ ಶೋಗೆ ಟಿಕೆಟ್ ಬುಕ್ ಮಾಡೋದು ಹೇಗೆ? ಟಿಕೆಟ್ ಬೆಲೆ ಎಷ್ಟು? ಇಲ್ಲಿದೆ ವಿವರ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆರಂಭವಾಗಿರುವ 2025ರ ಏರ್‌ ಶೋನಲ್ಲಿ ನೂರಾರು ಉದ್ಯಮಿಗಳು, ಹೂಡಿಕೆದಾರರು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ಫೆ.13ರಿಂದ 14ರವರೆಗೆ ಸಾರ್ವಜನಿಕರಿಗೆ ಏರ್‌ ಶೋ ನೋಡಲು ಅವಕಾಶ ನೀಡಲಾಗುತ್ತದೆ. ಇದಕ್ಕೆ ಟಿಕೆಟ್‌ ವ್ಯವಸ್ಥೆಯನ್ನು ನೀಡಲಾಗಿದೆ. ಹಾಗಿದ್ದರೆ ಏರ್‌ ಶೋ ಟಿಕೆಟ್ ಪಡೆಯೋದು ಹೇಗೆ? ಬೆಲೆ ಎಷ್ಟು?

ಏರ್‌ ಶೋಗೆ ಟಿಕೆಟ್ ಬುಕ್ ಮಾಡೋದು ಹೇಗೆ? ಟಿಕೆಟ್ ಬೆಲೆ? ಇಲ್ಲಿದೆ ವಿವರ

ಏರೋ ಇಂಡಿಯಾ ಶೋ

ಹರೀಶ್‌ ಕೇರ ಹರೀಶ್‌ ಕೇರ Feb 10, 2025 2:25 PM

ಬೆಂಗಳೂರು: ಏರೋ ಇಂಡಿಯಾ- 2025 (Aero India 2025) ವೈಮಾನಿಕ ಪ್ರದರ್ಶನ ಸೋಮವಾರ ಆರಂಭವಾಗಿದೆ. ಏಷ್ಯಾದ ಅತಿದೊಡ್ಡ ಏರೋ ಶೋದ 15ನೇ ಆವೃತ್ತಿಯಾದ ಇದು ಫೆಬ್ರವರಿ 10ರಿಂದ 14ರವರೆಗೆ ಬೆಂಗಳೂರಿನ (Bangalore) ಯಲಹಂಕದ (Yalahanka) ಏರ್ ಫೋರ್ಸ್ ಸ್ಟೇಷನ್‌ (Air Force Station) ನಲ್ಲಿ ನಡೆಯಲಿದೆ. ಆನ್‌ಲೈನ್‌ನಲ್ಲಿ ಇದರ (Air show) ಟಿಕೆಟ್‌ಗಳನ್ನು ಬುಕ್‌ ಮಾಡಿಕೊಂಡು ನೀವೂ ಸಹ ಈ ಏರ್‌ ಶೋ ಅನ್ನು ವೀಕ್ಷಿಸಬಹುದು.

ಬೆಂಗಳೂರು ಏರ್ ಶೋ ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1996ರಲ್ಲಿ ಪ್ರಾರಂಭವಾದ ಏಷ್ಯಾದ ಅತಿದೊಡ್ಡ ಏರೋ ಶೋ ಕಾರ್ಯಕ್ರಮವಾದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಸರಣಿಯು ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ನಡೆಯುತ್ತದೆ. ಈ ಏರ್‌ ಶೋ ಪ್ರದರ್ಶನವನ್ನು ವೀಕ್ಷಿಸಲು ದೇಶ-ವಿದೇಶದ ನಾಯಕರು ಮತ್ತು ಸಾವಿರಾರು ಜನರು ಆಗಮಿಸುತ್ತಾರೆ. ಬಾನಂಗಳದಲ್ಲಿ ವಿಮಾನಗಳ ರೋಮಾಂಚನಕಾರಿ ಸಾಹಸವನ್ನು ನೋಡುವುದು ಕಣ್ಣಿಗೆ ಹಬ್ಬವೇ ಸರಿ. ಎರಡು ವರ್ಷಕ್ಕೊಮ್ಮೆ ಬರುವ ಇಂತಹ ಅವಕಾಶವನ್ನು ನೋಡಲು ಜನ ತುದಿಗಾಲಲ್ಲಿ ನಿಂತಿರುತ್ತಾರೆ.

ಯಲಹಂಕದಲ್ಲಿ ನಡೆಯಲಿರುವ 2025ರ ಏರ್‌ಶೋನಲ್ಲಿ 10ರಿಂದ 12ರವರೆಗೆ ಉದ್ಯಮಿಗಳು, ಹೂಡಿಕೆದಾರರು, ಹಲವು ಗಣ್ಯರು ಭಾಗವಹಿಸುತ್ತಾರೆ. ಹಾಗೆಯೇ 13ರಿಂದ 14ರವರೆಗೆ ಸಾರ್ವಜನಿಕರಿಗೆ ಏರ್‌ ಶೋ ನೋಡಲು ಅವಕಾಶ ನೀಡಲಾಗುತ್ತದೆ. ಇದಕ್ಕೆ ಟಿಕೆಟ್‌ ವ್ಯವಸ್ಥೆಯನ್ನು ನಿಗದಿಪಡಿಸಲಾಗಿದೆ.

ಏರೋ ಇಂಡಿಯಾ 2025ರ ಟಿಕೆಟ್ ಬೆಲೆ ಎಷ್ಟು? ಸಂದರ್ಶಕರ ಪಾಸ್: ಭಾರತೀಯರಿಗೆ 2,500 ರೂಪಾಯಿ ಇದ್ದರೆ, ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ. ಎಡಿವಿಎ ಪಾಸ್: ಭಾರತೀಯರಿಗೆ 1,000 ರೂಪಾಯಿ ಮತ್ತು ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ. ಹಾಗೆಯೇ ಬ್ಯುಸಿನೆಸ್‌ ಪಾಸ್: ಭಾರತೀಯರಿಗೆ 5,000 ಸಾವಿರ ಹಾಗೂ ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ.

ಒಂದು ಸಾವಿರ ರೂಪಾಯಿ ಪಾವತಿಸಿ ಪಾಸ್ ಖರೀದಿಸಬಹುದು. ನಾಳೆಯಿಂದ ಫೆಬ್ರವರಿ 14ರವರೆಗೆ ಏರೋ ಇಂಡಿಯಾ ಶೋ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇದೆ. ವಸ್ತು ಪ್ರದರ್ಶನ ಮತ್ತು ವೈಮಾನಿಕ ಪ್ರದರ್ಶನ ವೀಕ್ಷಣೆ ಮಾಡಲು 2500 ರೂಪಾಯಿ ಹಾಗೂ ಬಿಸಿನೆಸ್ ಪಾಸ್ ದರ 5000 ರೂಪಾಯಿ ನಿಗದಿ ಮಾಡಲಾಗಿದೆ.

ಏರ್‌ ಶೋ 2025ರ ಟಿಕೆಟ್‌ ಬುಕ್‌ ಮಾಡೋದು ಸುಲಭ. ಅದಕ್ಕಾಗಿ ನೀವು ಮೊದಲು ಏರೋ ಇಂಡಿಯಾದ ವೆಬ್‌ಸೈಟ್‌ aeroindia.gov.in ಅನ್ನು ತೆರೆಯಿರಿ. ಬಳಿಕ ವೆಬ್‌ಸೈಟ್‌ನ ಹೋಮ್‌ ಪೇಜ್‌ನಲ್ಲಿ ಟಿಕೆಟ್ಸ್ ಅಂತ ಕಾಣಿಸುತ್ತೆ. ಅಲ್ಲಿ ವಿಸಿಟರ್ಸ್ ರಿಜಿಸ್ಟ್ರೇಶನ್‌ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ನಿಮಗೆ ಯಾವ ಪಾಸ್‌ ಬೇಕೆಂದು ಆಯ್ಕೆ ಮಾಡಬೇಕು. ನಂತರ ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್, ಅಗತ್ಯ ವಿವರಗಳನ್ನುಆ್ಯಡ್ ಮಾಡಿ. ಆ ನಂತರ ಹಣ ಪಾವತಿ ಮಾಡಿ, ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್‌ ಮಾಡಿ.

ಹೀಗೆ ಮಾಡಿದ್ರೆ ನಿಮಗೂ ಬಾನಂಗಳದಲ್ಲಿ ಹಾರೋ ವಿಮಾನಗಳ ಅದ್ಭುತ ಪ್ರದರ್ಶನಗಳನ್ನು ಕಾಣಬಹುದು. 13 ಮತ್ತು 14ರಂದು ಸಾರ್ವಜನಿಕರಿಗೆ ಏರ್‌ ಶೋ ನೋಡೋ ಅವಕಾಶ ಇರಲಿದ್ದು, ಈ ವೇಳೆ ಯುದ್ಧ ವಿಮಾನಗಳು, ಹೀಗೆ ಹಲವು ರೀತಿಯ ವಿಮಾನಗಳು ಆಕಾಶದಲ್ಲಿ ಹಾರಾಡುತ್ತಿರುತ್ತದೆ.

ಇದನ್ನೂ ಓದಿ: Aero India: ಏರೋ ಇಂಡಿಯಾಗೆ ಸಾರಂಗ್‌ ಡೌಟು ?