ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aero India: ಏರೋ ಇಂಡಿಯಾಗೆ ಸಾರಂಗ್‌ ಡೌಟು ?

ಗುಜರಾತ್‌ನ ವಡೋದರಾದಲ್ಲಿ ಜ.21ರಂದು ನಡೆದ ವೈಮಾನಿಕ ಪ್ರದರ್ಶನದಲ್ಲಿ ಸಾರಂಗ್ ವಾಯು ಪಡೆ ತಂಡಕ್ಕೆ ಅನುಮತಿ ದೊರಕದ ಕಾರಣ ಪ್ರದರ್ಶನ ನೀಡಿರಲಿಲ್ಲ. ಬದಲಾಗಿ ಸೂರ್ಯಕಿರಣ್ ತಂಡ ಭಾಗಿಯಾಗಿತ್ತು. ಏರೋ ಇಂಡಿಯಾದಲ್ಲಿ ಸಾರಂಗ್ ಭಾಗವಹಿಸುವಿಕೆ ಬಗ್ಗೆ ಯಾವುದೇ ಸಂವಹನ ನಡೆದಿಲ್ಲ. ಈ ಬಗ್ಗೆ ಅಧಿಕೃತ ಅನುಮತಿ ದೊರೆತಲ್ಲಿ ತಂಡ ಪ್ರದರ್ಶನ ನೀಡಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

ಏರೋ ಇಂಡಿಯಾಗೆ ಸಾರಂಗ್‌ ಡೌಟು ?

Profile Ashok Nayak Feb 10, 2025 10:46 AM

ಗುಜರಾತ್ ಅಪಘಾತದ ಹಿನ್ನೆಲೆಯಲ್ಲಿ ತಾತ್ಕಾಲಿಕ ನಿರ್ಬಂಧ

ಧ್ರುವ್ ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿದ ವಾಯುಪಡೆ

ಬೆಂಗಳೂರು: ಪ್ರತಿಬಾರಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಮೈ ಝುಮ್ ಎನಿಸುವ ರೀತಿಯಲ್ಲಿ ಅಕ್ರೋಬ್ಯಾಟ್ ಮಾಡುವ ಸಾರ್ವಜನಿಕರ ನೆಚ್ಚಿನ ಪ್ರದರ್ಶನ ದಲ್ಲಿ ಒಂದಾಗಿದ್ದ ಸಾರಂಗ್ ತಂಡ ಈ ಬಾರಿಯ ಏರೋ ಇಂಡಿಯಾದಲ್ಲಿ ಭಾಗವಹಿಸುವುದು ಬಹುತೇಕ ಅನುಮಾನ ಎನ್ನಲಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಏರೋ ಇಂಡಿಯಾದಲ್ಲಿ ಯುದ್ಧ ವಿಮಾನಗಳ ಸಾಹಸ ಪ್ರದರ್ಶನದ ಜತೆಜತೆಗೆ ಸಾರಂಗ್ ಹಾಗೂ ಸೂರ್ಯಕಿರಣ್ ತಂಡಗಳ ಆಕ್ರೋಬ್ಯಾಟಿಕ್ ಪ್ರದರ್ಶನ ಜನಮನ್ನಣೆ ಗಳಿಸಿತ್ತು. ಆದರೆ ಕೆಲದಿನಗಳಿಂದ ಆರಂಭಗೊಂಡಿರುವ ಪೂರ್ಣಪ್ರಮಾಣದ ಸಿದ್ಧತಾ ಹಾರಾಟದಲ್ಲಿ ಸಾರಂಗ್ ಕಾಣಿಸಿಕೊಂಡಿರಲಿಲ್ಲ. ಆದರೀಗ 15ನೇ ಏರೋ ಇಂಡಿಯಾ ಆವೃತ್ತಿ ಯಿಂದಲೇ ದೂರ ಉಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸಾರಂಗ್ ಭಾಗಿ ಇನ್ನೂ ಖಚಿತ ಇಲ್ಲ: ಎಚ್‌ಎಎಲ್ ಅಭಿವೃದ್ಧಿಪಡಿಸಿ ರುವ ಧ್ರುವ್ -330 ಸುಧಾರಿತ ಲಘು ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಸಾರಂಗ್ ತಂಡ ಸಾಹಸವನ್ನು ಪ್ರದರ್ಶನ ಮಾಡುತ್ತದೆ. ಆದರೆ ಕಳೆದ ಜನವರಿ 5ರಂದು ನಡೆದಿದ್ದ ಅಪಘಾತ ಹಿನ್ನೆಲೆಯಲ್ಲಿ ಈ ಬಾರಿ ಏರ್ ಶೋನಲ್ಲಿ ಭಾಗಿಯಾಗುವ ಬಗ್ಗೆ ಈವರೆಗೆ ಸಾರಂಗ್ ಪ್ರದರ್ಶನ ಖಚಿತವಾಗಿಲ್ಲ. ಗುಜರಾತ್‌ನ ವಡೋದರಾದಲ್ಲಿ ಜ.21ರಂದು ನಡೆದ ವೈಮಾನಿಕ ಪ್ರದರ್ಶನದಲ್ಲಿ ಸಾರಂಗ್ ವಾಯುಪಡೆ ತಂಡಕ್ಕೆ ಅನುಮತಿ ದೊರಕದ ಕಾರಣ ಪ್ರದರ್ಶನ ನೀಡಿರಲಿಲ್ಲ. ಬದಲಾಗಿ ಸೂರ್ಯಕಿರಣ್ ತಂಡ ಭಾಗಿಯಾಗಿತ್ತು. ಏರೋ ಇಂಡಿಯಾದಲ್ಲಿ ಸಾರಂಗ್ ಭಾಗವಹಿಸುವಿಕೆ ಬಗ್ಗೆ ಯಾವುದೇ ಸಂವಹನ ನಡೆದಿಲ್ಲ. ಈ ಬಗ್ಗೆ ಅಧಿಕೃತ ಅನುಮತಿ ದೊರೆತಲ್ಲಿ ತಂಡ ಪ್ರದರ್ಶನ ನೀಡಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

ಪೋರಬಂದರ್‌ನಲ್ಲಿ ಸಾರಂಗ್ ಅಪಘಾತ

ಜನವರಿ 4ರಂದು ಕೇರಳದ ಕೋಯಿಕ್ಕೋಡ್‌ನಲ್ಲಿ ನಡೆದ ಬೇಪೋರ್ ಅಂತಾರಾಷ್ಟ್ರೀಯ ಜಲ ಉತ್ಸವದಲ್ಲಿ ಸಾರಂಗ್ ತಂಡವು ಪ್ರದರ್ಶನ ನೀಡಿತ್ತು. ಜ.5ರಂದು ಗುಜರಾತ್‌ನ ಪೋರಬಂದರ್ ವಿಮಾನ ನಿಲ್ದಾಣದಲ್ಲಿ ಭಾರತೀಯ ನೌಕನೆಲೆಯ ಸುಧಾರಿತ ಲಘು ವಿಮಾನ ಎಂಕೆ 111 ಅಪಘಾ ತಕ್ಕೀಡಾಗಿ ಮೂವರು ಸಾವನ್ನಪ್ಪಿದ್ದರು. ಈ ದುರಂತದ ಕಾರಣ ಪತ್ತೆಗೆ ವಾಯುಪಡೆಯ ನಿರ್ವ ಹಣಾ ಕಮಾಂಡರ್ ಮಾಜಿ ಮುಖ್ಯಸ್ಥ ಏರ್ ಮಾರ್ಷಲ್ ವಿಭಾಸ್ ಪಾಂಡೆ ನೇತೃತ್ವದಲ್ಲಿ ಸಮಿತಿ ಯನ್ನು ರಚಿಸಲಾಗಿತ್ತು.

ಅಲ್ಲದೆ, ಎಚ್‌ಎಎಲ್ 330 ಧ್ರುವ್ ಹೆಲಿಕಾಪ್ಟರ್ ಗಳ ಹಾರಾಟವನ್ನು ತಾತ್ಕಲಿಕವಾಗಿ ನಿಷೇಧಿಸ ಲಾಗಿತ್ತು. ತನಿಖೆ ಹಾಗೂ ಶಿಫಾರಸ್ಸು ವರದಿ ಸಲ್ಲಿಸುವವರೆಗೆ ಹಾರಾಟ ನಡೆಸಲು ಸಾಧ್ಯವಿಲ್ಲ. ಈ ಬಗ್ಗೆ ಅಧಿಕೃತ ಸೂಚನೆಗಾಗಿ ಕಾಯಲಾಗುತ್ತಿದೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ದಶಕದಿಂದ ಪ್ರದರ್ಶನ ನೀಡಿಲ್ಲ ಸಾರಂಗ್: ಸಾರಂಗ್ ತಂಡವು 2003ರಲ್ಲಿ ಸ್ಥಾಪನೆ ಯಾಗಿದ್ದು, 2004ರಲ್ಲಿ ಸಿಂಗಾಪುರದಲ್ಲಿ ನಡೆದ ಏಷ್ಯನ್ ಏರೋಸ್ಪೇಸ್ ಶೋನಲ್ಲಿ ಮೊದಲ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ನಡೆಸಿತು. ಐದು ಹೆಲಿಕಾಪ್ಟರ್‌ಗಳ ಸಾರಂಗ್ ತಂಡ, ದೇಶ-ವಿದೇಶಗಳ 385ಕ್ಕೂ ಹೆಚ್ಚು ಸ್ಥಳಗಳಲ್ಲಿ 1200ಕ್ಕೂ ಹೆಚ್ಚು ಪ್ರದರ್ಶನ ನೀಡಿದೆ.