Vishwavani Editorial: ಕಾಡ್ಗಿಚ್ಚಿನ ಬಗ್ಗೆ ನಿರ್ಲಕ್ಷ್ಯ ಸಲ್ಲ
ಕಾಫಿನಾಡು ಚಿಕ್ಕಮಗಳೂರು ಪಶ್ಚಿಮಘಟ್ಟದ ಅಮೂಲ್ಯ ವನಸಿರಿ ಹೊಂದಿರುವ ಪ್ರದೇಶ. ಇಲ್ಲಿ ಕಾಫಿ ತೋಟಗಳೂ ಅರಣ್ಯದ ನಡುವೆಯೇ ಇದೆ. ಆದರೆ ಇಲ್ಲಿನ ಜಿಲ್ಲಾ ಕೇಂದ್ರದಲ್ಲಿ ಕೇವಲ ಒಂದು ಅಗ್ನಿಶಾಮಕ ವಾಹನವಿದೆ. ಇನ್ನೊಂದು ವಾಹನ ಇದ್ದರೂ 15 ವರ್ಷ ದಾಟಿರುವ ಕಾರಣ ಆರ್.ಸಿ ರದ್ದಾಗಿದೆ ಎಂಂದು ಹೇಳಲಾಗಿದೆ


ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಿಂತ ಕಾಡಂಚಿನ ಜನರನ್ನು ಒಕ್ಕಲೆಬ್ಬಿಸಲು ಹೆಚ್ಚು ಶ್ರಮ ವಹಿಸುತ್ತಿರುವ ರಾಜ್ಯ ಅರಣ್ಯ ಇಲಾಖೆ ಬೇಸಿಗೆಯಲ್ಲಿ ಎದುರಾಗುವ ಕಾಡ್ಗಿಚ್ಚಿ ನ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಆತಂಕದ ವಿದ್ಯಮಾನ. ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಕಾಡ್ಗಿಚ್ಚು ಎಕರೆ ಗಟ್ಟಲೆ ಪ್ರಮಾಣದ ಅರಣ್ಯ ಸಂಪತ್ತನ್ನು ಬಲಿ ತೆಗೆದುಕೊಂಡಿದೆ. ಇದನ್ನು ನಿಯಂತ್ರಿಸಲು ಇಲಾಖೆಗೆ ಎರಡು, ಮೂರು ದಿನಗಳೇ ಬೇಕಾದವು. ಇದರ ಬೆನ್ನಿಗೇ ಮುಳ್ಳಯ್ಯನ ಗಿರಿ ಮತ್ತು ಕಲ್ಲತ್ತಗಿರಿ ಪ್ರದೇಶದಲ್ಲಿ ಕಾಡ್ಗಿಚ್ಚು ಅಮೂಲ್ಯ ವನಸಂಪತ್ತನ್ನು ದಹಿಸಿರುವ ವರದಿಗಳು ಬಂದಿವೆ. ಬೇಸಿಗೆಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುವುದು ಹೊಸ ವಿದ್ಯಮಾನವೇನಲ್ಲ. ಪ್ರತೀ ವರ್ಷ ಇದನ್ನು ಎದು ರಿಸಲು ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆ ಕ್ರಮ ವಹಿಸಿರುತ್ತಾರೆ. ಆದರೆ ಈ ಬಾರಿ ಬೇಸಿಗೆಯ ಆರಂಭದಲ್ಲಿಯೇ ಕಾಡಿಗೆ ಬೆಂಕಿ ಬಿದ್ದಿರುವುದು, ಈ ಸಿದ್ಧತೆಯ ಬಗ್ಗೆ ಸಂದೇಹ ಮೂಡುವಂತೆ ಮಾಡಿದೆ.
ಕಾಫಿನಾಡು ಚಿಕ್ಕಮಗಳೂರು ಪಶ್ಚಿಮಘಟ್ಟದ ಅಮೂಲ್ಯ ವನಸಿರಿ ಹೊಂದಿರುವ ಪ್ರದೇಶ. ಇಲ್ಲಿ ಕಾಫಿ ತೋಟಗಳೂ ಅರಣ್ಯದ ನಡುವೆಯೇ ಇದೆ. ಆದರೆ ಇಲ್ಲಿನ ಜಿಲ್ಲಾ ಕೇಂದ್ರದಲ್ಲಿ ಕೇವಲ ಒಂದು ಅಗ್ನಿಶಾಮಕ ವಾಹನವಿದೆ. ಇನ್ನೊಂದು ವಾಹನ ಇದ್ದರೂ 15 ವರ್ಷ ದಾಟಿರುವ ಕಾರಣ ಆರ್.ಸಿ ರದ್ದಾಗಿದೆ ಎಂಂದು ಹೇಳಲಾಗಿದೆ.
ಇದನ್ನೂ ಓದಿ: Vishwavani Editorial: ಖಾತಾ ಗೊಂದಲಕ್ಕೆ ತೆರೆ ಬೀಳಲಿ
ಸರಕಾರದ ನಿಯಮದ ಪ್ರಕಾರ ಜಿಲ್ಲಾ ಕೇಂದ್ರದಲ್ಲಿ 3, ತಾಲೂಕು ಕೇಂದ್ರದಲ್ಲಿ 2 ಅಗ್ನಿ ಶಾಮಕ ವಾಹನಗಳಿರಬೇಕು. ಆದರೆ ಇಲ್ಲಿನ 9 ತಾಲೂಕುಗಳಲ್ಲಿ ಒಟ್ಟು 7 ಅಗ್ನಿಶಾಮಕ ವಾಹನಗಳಷ್ಟೇ ಇವೆ. ಕಳಸ, ಅಜ್ಜಂಪುರದಲ್ಲಿ ಅಗ್ನಿಶಾಮಕ ಠಾಣೆಯೇ ಇಲ್ಲ. ಬಂಡೀಪುರ, ನಾಗರಹೊಳೆ ಮತ್ತಿತರ ಸಂರಕ್ಷಿತ ಅರಣ್ಯಗಳಲ್ಲಿ ಸಂಭಾವ್ಯ ಅಗ್ನಿ ಅನಾಹುತಗಳನ್ನು ಎದುರಿಸುವುದಕ್ಕಾಗಿ ಬೇಸಿಗೆ ಆರಂಭದಲ್ಲಿಯೇ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸ ಲಾಗುತ್ತದೆ.
ಕೆಲ ವರ್ಷಗಳ ಹಿಂದಿನ ತನಕ ಬೇಸಿಗೆಯಲ್ಲಿ ಸ್ಥಳೀಯರನ್ನೂ ಗುತ್ತಿಗೆ ಆಧಾರದಲ್ಲಿ ಕಾಡ್ಗಿಚ್ಚು ನಿಯಂತ್ರಣ ತಂಡಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಇತ್ತೀಚೆಗೆ ಸಿಬ್ಬಂದಿಗಳನ್ನಷ್ಟೇ ಬಳಸಿಕೊಳ್ಳಲಾಗುತ್ತಿದೆ. ಸಾಕಷ್ಟು ಸಂಪನ್ಮೂಲ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಹೊರತಾಗಿಯೂ ಕ್ಯಾಲಿ-ರ್ನಿಯಾ ಮತ್ತು ಲಾಸ್ ಎಂಜಲಿಸ್ ರಾಜ್ಯಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಭೀಕರ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರಲಾಗದೇ ಅಮೆರಿಕ ವಿಶ್ವದೆದುರು ಅಮೆರಿಕ ಬೆತ್ತಲಾಗಿತ್ತು.
ನುರಿತ ಸಿಬ್ಬಂದಿ, ಅಗ್ನಿಶಾಮಕ ವಾಹನ, ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಕೊರತೆ ಹೊಂದಿರುವ ಅರಣ್ಯ ಇಲಾಖೆ ಕನಿಷ್ಠ ಪಕ್ಷ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ನಮ್ಮ ಅರಣ್ಯ ಮತ್ತು ವನ್ಯ ಸಂಪತ್ತನ್ನು ರಕ್ಷಿಸಬೇಕು. ಈ ವಿಷಯದಲ್ಲಿ ನಿರ್ಲ ಕ್ಷ್ಯ ಸಲ್ಲ.