ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸಫಾರಿಗೆ ಹೋದ ಮಹಿಳೆಯ ಮಡಿಲಲ್ಲಿ ಮರಿಯನ್ನು ಇಟ್ಟ ಸಿಂಹಿಣಿ: ವೈರಲ್ ವಿಡಿಯೊ ಇಲ್ಲಿದೆ

ಸಿಂಹಗಳು ತಮ್ಮ ಮರಿಗಳ ಜತೆಗಿರುವ, ಬೇಟೆಯಾಡುವ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಸಿಂಹಿಣಿಯೊಂದು ತನ್ನ ಮರಿಯನ್ನು ಮಹಿಳೆಯೊಬ್ಬರ ಮಡಿಲಲ್ಲಿ ಬಿಟ್ಟು ಬಂದಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾಡಿನಲ್ಲಿ ಬೇಟೆಯಾಡುತ್ತಿರುವುದನ್ನು ಕಂಡು ಸಿಂಹಿಣಿಯು ಭಯಗೊಂಡು ತನ್ನ ಮರಿಯನ್ನು ರಕ್ಷಿಸುವಂತೆ ಮಹಿಳೆಯ ಬಳಿ ಮನವಿ ಮಾಡುತ್ತಿರಬೇಕು ಎಂದು ವಿಡಿಯೊ ಕಂಡ ನೆಟ್ಟಿಗರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಹಿಳೆಯ ಮಡಿಲಲ್ಲಿ ಮರಿಯನ್ನು ಇರಿಸಿ ಹೋದ ಸಿಂಹಿಣಿ

ವೈರಲ್ ವಿಡಿಯೊ -

Profile Pushpa Kumari Oct 31, 2025 6:35 PM

ನವದೆಹಲಿ: ಕಾಡಿನ ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಸಿಂಹ ಕೂಡ ಒಂದು. ಬಲಿಷ್ಠವಾಗಿರುವ ಸಿಂಹ ಕಂಡರೆ ಬಹುತೇಕ ಕಾಡು ಪ್ರಾಣಿಗಳಿಗೆ ಭಯ ಇದ್ದೇ ಇರುತ್ತದೆ. ಸಿಂಹಿಣಿಗಳು ತಮ್ಮ ಮರಿಗಳ ಜತೆಗಿರುವ, ಬೇಟೆಯಾಡುವ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಸಿಂಹಿಣಿಯೊಂದು ತನ್ನ ಮರಿಯನ್ನು ಮಹಿಳೆಯೊಬ್ಬರ ಮಡಿಲಲ್ಲಿ ಬಿಟ್ಟು ಬಂದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದೆ. ನರಭಕ್ಷಕ ಸಿಂಹಗಳ ಬಗ್ಗೆ ಕೇಳಿದ್ದ ನೆಟ್ಟಿಗರು ಈ ವಿಡಿಯೊ ನೋಡಿ ಅಚ್ಚರಿಗೆ ಒಳಗಾಗಿದ್ದಾರೆ. ತನ್ನ‌ ಮರಿಗೆ ಆಶ್ರಯ ನೀಡಲು ಸಿಂಹಿಣಿಯು ಮಹಿಳೆಗೆ ಅವಕಾಶ ನೀಡಿದ್ದು ನೆಟ್ಟಿಗರ‌ನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ಈ ವಿಡಿಯೊ ಬಗೆಗಿನ ಸತ್ಯಾಸತ್ಯಗಳ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದೆ.

ವೈರಲ್ ಆದ ವಿಡಿಯೊದಲ್ಲಿ ಮಹಿಳೆಯು ತನ್ನ ಸಂಗಡಿಗರ ಜೊತೆಗೆ ಸಫಾರಿ ವಾಹನದಲ್ಲಿ ಕುಳಿತಿರುವುದು ಕಾಣಬಹುದು. ಮಹಿಳೆಯು ಸುತ್ತಲಿನ ಪ್ರಕೃತಿಯನ್ನು ವಾಹನದ ಒಳಗೆ ಕೂತು ವೀಕ್ಷಿಸುತ್ತಿದ್ದರು. ಅಗ ಒಮ್ಮಿಂದೊಮ್ಮೆಲೆ ದೊಡ್ಡ ಸಿಂಹಿಣಿ ತನ್ನ ಮರಿಯನ್ನು ಬಾಯಿಯಲ್ಲಿ ಹಿಡಿದುಕೊಂಡು ಸಫಾರಿ ವಾಹನ ಇದ್ದಲ್ಲಿಗೆ ಬಂದಿದೆ. ಆಗ ಮಹಿಳೆಗೆ ದಿಗ್ಬ್ರಾಂತಿಯಾಗಿದೆ. ಮಹಿಳೆ ಭಯದಿಂದ ಉಸಿರು ಬಿಗಿಹಿಡಿದು ಸ್ಥಬ್ಧವಾಗಿ ಕುಳಿತುಬಿಡುತ್ತಾಳೆ.

ವೈರಲ್ ವಿಡಿಯೊ ಇಲ್ಲಿದೆ:



ನಂತರ ಸಿಂಹಿಣಿಯು ಮಹಿಳೆಯನ್ನು ನೋಡಿ ಸುಮ್ಮನಾಗುತ್ತದೆ. ಯಾವುದೇ ಆಕ್ರಮಣಕಾರಿ ವರ್ತನೆ ತೋರದೆ ತನ್ನ ಮರಿಯನ್ನು ಆ ಮಹಿಳೆಯ ಮಡಿಲಿಗೆ ನಿಧಾನವಾಗಿ ಇಳಿಸುತ್ತದೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ಕಾಡಿನಲ್ಲಿ ಬೇಟೆಯಾಡುತ್ತಿರುವುದನ್ನು ಕಂಡು ಸಿಂಹಿಣಿಯು ಭಯಗೊಂಡು ತನ್ನ ಮರಿಯನ್ನು ರಕ್ಷಿಸುವಂತೆ ಮಹಿಳೆಗೆ ಬೇಡಿಕೊಳ್ಳುತ್ತಿರಬೇಕು ಎಂದು ನೆಟ್ಟಿಗರು ಪ್ರತಿಕ್ರಯಿಸಿದ್ದಾರೆ.

ಮರಿಯನ್ನು ಮಹಿಳೆಯ ಮಡಿಲಿಗೆ ಹಾಕಿದ ಬಳಿಕ ಸಿಂಹಿಣಿಯು ಶಾಂತವಾಗಿ ಸ್ವಲ್ಪ ದೂರಕ್ಕೆ ಸರಿಯುತ್ತದೆ. ಆಗ ಸಫಾರಿ ಕಾರಿನ‌ಲ್ಲಿದ್ದ ಇತರರು ಮಹಿಳೆಗೆ ಭಯಪಡಬಾರದು ಶಾಂತವಾಗಿರುವಂತೆ ಸೂಚನೆ ನೀಡುತ್ತಾರೆ. ಸಿಂಹಿಣಿ ಕಂಡು ಮಹಿಳೆಗೆ ಭಯವಾದರೂ ಅದಕ್ಕೆ ತನ್ನ ಮೇಲಿನ ನಂಬಿಕೆ ಪ್ರೀತಿ ಕಂಡು ಆಕೆಗೆ ಖುಷಿಯಾಗುತ್ತದೆ. ಮರಿಯನ್ನು ನೋಡಿದ ಮಹಿಳೆಯೂ ಕಣ್ಣೀರು ಸುರಿಸುತ್ತಾಳೆ.

ಇದನ್ನು ಓದಿ:Viral News: ಮುಟ್ಟಾಗಿದ್ದೀರಾ ಎಂದು ನಂಬಲು ಪ್ಯಾಡ್‌ ಫೋಟೋ ಕಳುಹಿಸಿ; ಛೀ.. ಮಹಿಳಾ ಸಿಬ್ಬಂದಿಗೆ ಇದೆಂತಾ ಕಿರುಕುಳ

ಆದರೆ ಈ ವಿಡಿಯೊದ ಬಗ್ಗೆ ಅನುಮಾನ ಮೂಡಿದೆ. ವನ್ಯಜೀವಿ ತಜ್ಞರು ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರು ಈ ವಿಡಿಯೊ ನಕಲಿ ಎಂದು ಶಂಕಿಸಿದ್ದಾರೆ. ಸಿಂಹಿಣಿಗಳು ಸ್ವಾಭಾವಿಕವಾಗಿ ಮನುಷ್ಯರ ಹತ್ತಿರಕ್ಕೆ ಬರುವುದಿಲ್ಲ. ಒಂದು ವೇಳೆ ಬಂದರೂ ಆಕ್ರಮಣ ಮಾಡುತ್ತವೆ. ತಮ್ಮ ಮರಿಯನ್ನು ಅಪರಿಚಿತರ ಮಡಿಲಲ್ಲಿ ಎಂದಿಗೂ ಬಿಡುವುದಿಲ್ಲ ಎಂದು ಈ ಬಗ್ಗೆ ನೆಟ್ಟಿಗರೊಬ್ಬರು ಕಮೆಂಟ್ ಹಾಕಿದ್ದಾರೆ. ಈ ವಿಡಿಯೊವನ್ನು ಎಐ ತಂತ್ರಜ್ಞಾನದ ಸಹಾಯದಿಂದ ಮಾಡಿರಬಹುದು ಎಂದು ಕೂಡ ಬಳಕೆದಾರರು ಅಭಿಪ್ರಾಯ ಪಟ್ಟಿದ್ದಾರೆ. ಹಾಗಿದ್ದರೂ ಕೂಡ ಕ್ರೂರ ಪ್ರಾಣಿಯಲ್ಲಿಯೂ ಪ್ರೀತಿ ,ಕೃತಜ್ಞತೆ ಭಾವ ಇರುತ್ತದೆ. ಈ ವಿಡಿಯೊ ನಿಜವಾಗಿರಬೇಕು ಎಂದು ಕೆಲವರು ತಿಳಿಸಿದ್ದಾರೆ.