Tumkur News: 89ನೇ ತ್ರಿಮೂರ್ತಿ ಶಿವ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮ
ನಗರದ ಸಂತೆಪೇಟೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ಭಾನುವಾರ 89ನೇ ತ್ರಿಮೂರ್ತಿ ಶಿವ ಜಯಂತಿ ಅಂಗವಾಗಿ ವಿವಿಧ ಕಾರ್ಯ ಕ್ರಮಗಳನ್ನು ಏರ್ಪ ಡಿಸಲಾಗಿತ್ತು. ಬೆಳಿಗ್ಗೆ 10 ಗಂಟೆಗೆ ಸೇವಾ ಕೇಂದ್ರದಿಂದ ಶಾಂತಿ ರಥ ಯಾತ್ರೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.


ಶಿರಾ : ನಗರದ ಸಂತೆಪೇಟೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ಭಾನುವಾರ 89ನೇ ತ್ರಿಮೂರ್ತಿ ಶಿವ ಜಯಂತಿ ಅಂಗವಾಗಿ ವಿವಿಧ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿತ್ತು. ಬೆಳಿಗ್ಗೆ 10 ಗಂಟೆಗೆ ಸೇವಾ ಕೇಂದ್ರದಿಂದ ಶಾಂತಿ ರಥ ಯಾತ್ರೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಮಧ್ಯಾಹ್ನ 12 ಗಂಟೆಗೆ ಅಮರಾಪುರ ಈಶ್ವರಿ ಸೇವಾ ಕೇಂದ್ರದ ಸಂಚಾಲಕರಾದ ಬಿಕೆ ಪುಷ್ಪ ಅವರು ಶಿವ ಧ್ವಜಾ ರೋಹಣ ನೆರವೇರಿಸಿ ನಂತರ ಪಂಚ ಶಿವಲಿಂಗಗಳನ್ನು ಉದ್ಘಾಟಿಸಿದರು. ಯೋಗ ಬಟ್ಟಿ ಕಾರ್ಯಕ್ರಮ ಮಧ್ಯಾಹ್ನ 2:30 ಗಂಟೆವರೆಗೆ ಜರುಗಿತು.
ಇದನ್ನೂ ಓದಿ: Tumkur News: ಮೂಲ ಸೌಕರ್ಯ ಒದಗಿಸುವ ಸಲುವಾಗಿ ಹಲವು ಯೋಜನೆ: ಶಾಸಕ ಸಿ.ಬಿ.ಸುರೇಶಬಾಬು
ಈ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯ ಅಮರಾಪುರ ಸಂಚಾಲಕರಾದ ಬಿಕೆ ಪುಷ್ಪ, ಶಿರಾ ಸೇವಾ ಕೇಂದ್ರದ ಸಂಚಾಲಕರಾದ ಶಾಂತ, ಯಶೋದಕ್ಕ, ಹನುಮಂತಣ್ಣ,, ನಾಗರಾಜಣ್ಣ ಹಾಗೂ ಬ್ರಹ್ಮಕುಮಾರಿ ಕುಮಾರಿಯರು ಉಪಸ್ಥಿತರಿದ್ದರು.