IND vs ENG: ಅಕ್ಷರ್ ಪಟೇಲ್‌ಗೆ ಹೊಸ ಬ್ಯಾಟಿಂಗ್ ಕ್ರಮಾಂಕ ಆರಿಸಿದ ಆಕಾಶ್ ಚೋಪ್ರಾ!
IND vs AUS: ಇಂಗ್ಲೆಂಡ್ ವಿರುದ್ಧ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ, ಅಕ್ಷರ್ ಪಟೇಲ್‌ಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಬೇಕೆಂದು ಸಲಹೆ ನೀಡಿದ್ದಾರೆ.


ನವದೆಹಲಿ: ಟೀಮ್ ಇಂಡಿಯಾದ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ (Axar Patel)ಅವರ ಬ್ಯಾಟಿಂಗ್ ಕೌಶಲವನ್ನು ಭಾರತ ತಂಡದ ಟೀಮ್ ಮ್ಯಾನೇಜ್‌ಮೆಂಟ್ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Akash Chopra) ಆಗ್ರಹಿಸಿದ್ದಾರೆ. ಚೆನ್ನೈನಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಅಕ್ಷರ್ ಪಟೇಲ್ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಅಲ್ಲದೆ ತಂಡದಲ್ಲಿ ಹೆಚ್ಚಾಗಿ ಆಲ್‌ರೌಂಡರ್‌ಗಳಿಗೆ ಸ್ಥಾನ ನೀಡುವುದರಿಂದ ಆಗುವ ಸಮಸ್ಯೆಯನ್ನು ಚೋಪ್ರಾ ವಿವರಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲು 5 ಓವರ್‌ಗಳಲ್ಲಿ 40 ರನ್‌ಗಳಿಸುವ ಒತ್ತಡಕ್ಕೆ ಸಿಲುಕಿತ್ತು. ಈ ವೇಳೆ ತಿಲಕ್ ವರ್ಮಾಗೆ ಉತ್ತಮ ಸಾಥ್ ನೀಡುವ ಭರದಲ್ಲಿ ಅಕ್ಷರ್ ಪಟೇಲ್ ವಿಕೆಟ್ ಒಪ್ಪಿಸಿದ್ದರು. ಅಕ್ಷರ್ ಪಟೇಲ್ ವಿಕೆಟ್ ಕೈಚೆಲ್ಲಿದರೂ ಮುಂಬೈ ಇಂಡಿಯನ್ಸ್ ಆಟಗಾರ 55 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
IND vs ENG: ಮೊಹಮ್ಮದ್ ಶಮಿ ಏಕೆ ಆಡುತ್ತಿಲ್ಲ? ಟೀಮ್ ಮ್ಯಾನೇಜ್‌ಮೆಂಟ್‌ಗೆ ಆಕಾಶ ಚೋಪ್ರಾ ಪ್ರಶ್ನೆ!
ಹೆಚ್ಚು ಆಲ್‌ರೌಂಡರ್‌ಗಳಿದ್ದರೆ ಸಮಸ್ಯೆ: ಆಕಾಶ್ ಚೋಪ್ರಾ
ತಮ್ಮದೇ ಆದ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, "ಭಾರತ ತಂಡದಲ್ಲಿ ಹೆಚ್ಚು ಆಲ್‌ರೌಂಡರ್‌ಗಳಿರುವುದು ಕೂಡ ಒಂದು ಸಣ್ಣ ಸಮಸ್ಯೆ. ನೀವು ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅವರಿಂದ ಕೇವಲ ಒಂದು ಓವರ್ ಮಾಡಿಸಿ, ಉಳಿದ ಓವರ್‌ಗಳನ್ನು ಅಕ್ಷರ್ ಪಟೇಲ್‌ಗೆ ನೀಡಿದ್ದೀರಿ. ಆದರೆ ಅವರ ಬ್ಯಾಟಿಂಗ್ ಕ್ರಮಾಂಕವನ್ನು 8 ಅಥವಾ 9ಕ್ಕೆ ಬದಲಾಯಿಸಿದ್ದೀರಿ. ಪ್ರಾಮಾಣಿಕವಾಗಿ ಹೇಳುವುದಾದರೆ ತಂಡದಲ್ಲಿ ಹೆಚ್ಚುವರಿ ಆಲ್‌ರೌಂಡರ್‌ಗಳಿದ್ದರೆ ಅವರನ್ನು ಸಮರ್ಥವಾಗಿ ಹೇಗೆ ಬಳಸಿಕೊಳ್ಳಬೇಕೆಂದು ಗೊತ್ತಾಗುವುದಿಲ್ಲ. ಕೆಲವರಿಗೆ ಬೌಲಿಂಗ್ ಅಥವಾ ಇನ್ನೂ ಕೆಲವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗುವುದಿಲ್ಲ," ಎಂದು ಕ್ರಿಕೆಟ್ ವಿಶ್ಲೇಷಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND vs ENG: ಹ್ಯಾರಿಸ್ ರೌಫ್ ಸಾರ್ವಕಾಲಿಕ ದಾಖಲೆ ಮೇಲೆ ಅರ್ಷದೀಪ್ ಸಿಂಗ್ ಕಣ್ಣು!
ಅಕ್ಷರ್ ಪಟೇಲ್ ಬ್ಯಾಟಿಂಗ್ ಕ್ರಮಾಂಕ ಬದಲಿಸಿ
"ಅಕ್ಷರ್ ಪಟೇಲ್ ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಆಡಬೇಕು. ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಆಡಿದ ಆಟವನ್ನು ಪರಿಗಣಿಸದೆ, ಕಳೆದ ಒಂದೂವರೆ ವರ್ಷದಿಂದ ಅವರ ಬ್ಯಾಟಿಂಗ್ ವೈಖರಿ ಗಮನಿಸಿದರೆ ಅವರು ಒಬ್ಬ ಪ್ರಬುದ್ಧ ಬ್ಯಾಟರ್ ಆಗಿ ಕಾಣಿಸುತ್ತಾರೆ. ನೀವು (ಆಯ್ಕೆ ಮಂಡಳಿ) 8ನೇ ಕ್ರಮಾಂಕಕ್ಕೂ ಮುನ್ನವೇ ಅಂದರೆ 3 ಅಥವಾ 4ನೇ ಕ್ರಮಾಂಕದಲ್ಲಿ ಅವರನ್ನು ಕಳುಹಿಸಬೇಕು. ತಾನೆಂಥಾ ಆಟಗಾರ ಎಂಬುದನ್ನು ಟಿ20ಐ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಕ್ಷರ್ ಪಟೇಲ್ ಸಾಬೀತುಪಡಿಸಿದ್ದಾರೆ. ಆದ್ದರಿಂದ ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸುವ ಚಿಂತನೆ ಬಿಟ್ಟು ಬಡ್ತಿ ನೀಡಿ ಮುಂಚೆಯೇ ಕಳುಹಿಸಬೇಕು," ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಟಿ20ಐ ಕ್ರಿಕೆಟ್ ನಲ್ಲಿ ಅಕ್ಷರ್ ಪಟೇಲ್ ಹೆಚ್ಚಾಗಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದು, 150ರ ಸ್ಟ್ರೆಕ್ ರೇಟ್‌ನಲ್ಲಿ 306 ರನ್‌ಗಳನ್ನು ಕಲೆ ಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲೂ ಅಕ್ಷರ್ ಪಟೇಲ್ 7 ಅಥವಾ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದು, 8 ಪಂದ್ಯಗಳಲ್ಲಿ ಮಾತ್ರ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದು ಆಡಿದ್ದಾರೆ.