IND vs ENG: ಉಸಿರಿರುವ ತನಕ ಭಾರತಕ್ಕೆ ಆಡುತ್ತೇನೆಂದ ಮೊಹಮ್ಮದ್ ಶಮಿ!
ಸುಮಾರು ಒಂದೂವರೆ ವರ್ಷದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಟೀಮ್ ಇಂಡಿಯಾ ಹಿರಿಯ ವೇಗಿ ಮೊಹಮ್ಮದ್ ಶಮಿ ಎದುರು ನೋಡುತ್ತಿದ್ದಾರೆ. ಬುಧವಾರ ಕೋಲ್ಕತಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುವ ಮೊದಲನೇ ಟಿ20ಐ ಪಂದ್ಯದಲ್ಲಿ ಶಮಿ ಆಡಲಿದ್ದಾರೆ. ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಶಮಿ ಕೊನೆಯ ಉಸಿರು ಇರುವವರೆಗೂ ಭಾರತದ ಪರ ಆಡುತ್ತೇನೇಂದು ಹೇಳಿದ್ದಾರೆ.
ಕೋಲ್ಕತಾ: ಸುದೀರ್ಘ ಅವಧಿಯ ಬಳಿಕ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಎದುರು ನೋಡುತ್ತಿರುವ ಹಿರಿಯ ವೇಗಿ ಮೊಹಮ್ಮದ್ ಶಮಿ, ಇಂಗ್ಲೆಂಡ್ ವಿರುದ್ಧ ಬುಧವಾರ ನಡೆಯಲಿರುವ ಮೊದಲನೇ ಟಿ20ಐ ಪಂದ್ಯದಲ್ಲಿ(IND vs ENG) ಕಣಕ್ಕೆ ಇಳಿಯಲಿದ್ದಾರೆ. 2023ರ ಐಸಿಸಿ ಏಕದಿನ ವಿಶ್ವಕಪ್ ಪೈನಲ್ ಪಂದ್ಯದ ಬಳಿಕ ಅವರು ಪಾದದ ಕಾರಣ ಬರೋಬ್ಬರಿ ಒಂದೂವರೆ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಬಂಗಾಳ ತಂಡದ ಪರ ದೇಶಿ ಕ್ರಿಕೆಟ್ ಆಡಿದ್ದ ಶಮಿ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆ. ನಂತರ ಒಡಿಐ ಸರಣಿ ಹಾಗೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿಯೂ ಆಡಲಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲನೇ ಟಿ20ಐ ಪಂದ್ಯದ ನಿಮಿತ್ತ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಸೂರ್ಯಕುಮಾರ್ ಯಾದವ್ ಬಳಗ ಅಭ್ಯಾಸ ನಬಡೆಸಿತು. ತದ ನಂತರ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊಹಮ್ಮದ್ ಶಮಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಮೊಹಮ್ಮದ್ ಶಮಿ, ಭಾರತ ತಂಡವನ್ನು ಪ್ರತಿನಿಧಿಸುವ ಹಸಿವು ನನಗೆ ಸದಾ ಇರುತ್ತದೆ ಎಂದು ಹೇಳಿದ್ದಾರೆ.
IND vs ENG: ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಕೊನೆಯ ಉಸಿರು ಇರುವವರೆಗೂ ಭಾರತದ ಪರ ಆಡಬೇಕು
"ಮೊದಲನೇ ಸಂಗತಿ ಏನೆಂದರೆ ಭಾರತ ತಂಡದ ಪರ ಆಡಬೇಕೆಂಬ ಹಸಿವು ಎಂದಿಗೂ ಅಂತ್ಯವಾಗುವುದಿಲ್ಲ. ಭಾರತೀಯ ಕ್ರಿಕೆಟ್ ಪರ ಆಡಬೇಕೆಂಬ ಹಸಿವು ನನ್ನಲ್ಲಿ ಎಂದಿಗೂ ಹಾಗೇ ಇರುತ್ತದೆ. ಇಷ್ಟು ದಿನಗಳ ಕಾಲ ಭಾರತ ತಂಡದಿಂದ ಹೊರಗುಳಿದಿದ್ದ ನನಗೆ ಇದೀಗ ರಾಷ್ಟ್ರೀಯ ತಂಡದಲ್ಲಿ ಆಡಬೇಕೆಂಬ ಹಸಿವು ಜಾಸ್ತಿಯಾಗಿದೆ. ಅಂದ ಹಾಗೆ ಕೊನೆಯ ಉಸಿರು ಇರುವವರೆಗೂ ಭಾರತ ತಂಡದ ಪರ ಆಡಲು ಬಯಸುತ್ತೇನೆ," ಎಂದು ಮೊಹಮ್ಮದ್ ಶಮಿ ತಿಳಿಸಿದ್ದಾರೆ.
IND vs ENG 1st T20: ಪಂದ್ಯದ ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ಹೀಗಿದೆ
ಮೊಹಮ್ಮದ್ ಶಮಿ ರೆಡ್ ಬಾಲ್ ಕ್ರಿಕೆಟ್‌ಗೂ ಮರಳಬೇಕು
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಇದೇ ಕಾರ್ಯಕ್ರಮದಲ್ಲಿ ಇದ್ದರು ಹಾಗೂ ಟೀಮ್ ಇಂಡಿಯಾ ಹಿರಿಯ ವೇಗಿ ಮೊಹಮ್ಮದ್ ಶಮಿ ಬಗ್ಗೆ ಮಾತನಾಡಿದರು. ಕೇವಲ ಸೀಮಿತ ಓವರ್‌ಗಳ ಕ್ರಿಕೆಟ್ ಮಾತ್ರವಲ್ಲ, ಅವರು ಟೆಸ್ಟ್ ಕ್ರಿಕೆಟ್‌ಗೂ ಕೂಡ ಕಮ್‌ಬ್ಯಾಕ್ ಮಾಡಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
"ನಿಸ್ಸಂಶಯವಾಗಿ, ರೆಡ್ ಬಾಲ್ ಕ್ರಿಕೆಟ್‌ನಲ್ಲಿಯೂ ಮೊಹಮ್ಮದ್ ಶಮಿ ಆಡುವುದನ್ನು ನಾನು ನೋಡಬೇಕು. ಜಸ್‌ಪ್ರೀತ್ ಬುಮ್ರಾ ಅವರಿಗೆ ಮೊಹಮ್ಮದ್ ಶಮಿ ಅತ್ಯಂತ ಪ್ರಮುಖ ವೇಗಿಯಾಗಿದ್ದಾರೆ. ಬಂಗಾಳ ತಂಡಕ್ಕೆ ಶಮಿ ಸಾಕಷ್ಟು ಓವರ್‌ಗಳನ್ನು ಬೌಲ್ ಮಾಡಿದ್ದಾರೆ," ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಮೊದಲನೇ ಟಿ20ಐ ಪಂದ್ಯ
ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ಇಂಗ್ಲೆಂಡ್ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ ಮೊಹಮ್ಮದ್ ಶಮಿ ಕಣಕ್ಕೆ ಇಳಿಯಲಿದ್ದಾರೆ. ಆ ಮೂಲಕ ಒಂದೂವರೆ ವರ್ಷದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ.