IND vs ENG: ಈಡನ್ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ ಸೂರ್ಯ ಪಡೆ
IND vs ENG: 14 ತಿಂಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿರುವ ವೇಗೆ ಮೊಹಮ್ಮದ್ ಶಮಿ ಅವರು ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎನ್ನುವುದು ಸರಣಿಯ ಕುತೂಹಲ
ಕೋಲ್ಕತಾ: ಜ.22 ರಿಂದ ಆರಂಭಗೊಳ್ಳುವ ಪ್ರವಾಸಿ ಇಂಗ್ಲೆಂಡ್(IND vs ENG) ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್(suryakumar yadav) ನೇತೃತ್ವದ ಭಾರತ ತಂಡ ಅಭ್ಯಾಸ ಆರಂಭಿಸಿದೆ. ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ ಲಘು ಅಭ್ಯಾಸ ನಡೆಸಿದ ಆಟಗಾರರು ಸೋಮವಾರ(ಜ.20) ನೂತನ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಮಾರ್ಗದರ್ಶನದಲ್ಲಿ ಕಠಿಣ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಇಂಗ್ಲೆಂಡ್ ಆಟಗಾರರು ಕೂಡ ಈಗಾಗಲೇ ಭಾರತ ತಲುಪಿದ್ದು ಅವರು ಕೂಡ ಅಭ್ಯಾಸ ಆರಂಭಿಸಿದ್ದಾರೆ.
14 ತಿಂಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿರುವ ವೇಗೆ ಮೊಹಮ್ಮದ್ ಶಮಿ ಅವರು ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎನ್ನುವುದು ಸರಣಿಯ ಕುತೂಹಲ. ಚಾಂಪಿಯನ್ಸ್ ಟ್ರೋಫಿಗೂ ಶಮಿ ಆಯ್ಕೆಯಾಗಿದ್ದಾರೆ.
2 ತಿಂಗಳ ಬಳಿಕ ಭಾರತ ತಂಡ ಆಡುತ್ತಿರುವ ಮೊದಲ ಟಿ20 ಸರಣಿ ಇದಾಗಿದೆ. ಭಾರತ ಕೊನೆಯ ಬಾರಿಗೆ ಟಿ20 ಸರಣಿ ಆಡಿದ್ದು ಕಳೆದ ವರ್ಷದ ನವೆಂಬರ್‌ನಲ್ಲಿ. ಎದುರಾಳಿ ದಕ್ಷಿಣ ಆಫ್ರಿಕಾ. ಈ ಸರಣಿಯನ್ನು ಭಾರತ 3-1 ಅಂತರದಿಂದ ಗೆದ್ದು ಬೀಗಿತ್ತು. ಆದರೆ ಈ ಸರಣಿಯಲ್ಲಿ ನಾಯಕ ಸೂರ್ಯಕುಮಾರ್ ಸಂಪೂರ್ಣ ವೈಫಲ್ಯ ಕಂಡಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹೇಗೆ ಪ್ರದರ್ಶನ ತೋರಲಿದ್ದಾರೆ ಎಂದು ಕಾದು ನೋಡಬೇಕಿದೆ. ಸರಣಿಯ ಮೊದಲ ಪಂದ್ಯ ಬುಧವಾರ ನಡೆಯಲಿದೆ.
ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿ.ಕೀ), ಅಭಿಷೇಕ್ ಶರ್ಮ, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿ.ಕೀ).
He's BACK 💪🏻
— BCCI (@BCCI) January 20, 2025
Team India 🇮🇳
Mohd. Shami 😎
Eden Gardens 🏟️
Just perfect 👌🏻#TeamIndia | #INDvENG | @MdShami11 | @IDFCFIRSTBank pic.twitter.com/PwCuEOcaDA
ಇಂಗ್ಲೆಂಡ್ ತಂಡ
ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಬೆನ್ ಡಕೆಟ್, ಜಾಮಿ ಒವರ್ಟನ್, ಜಾಮಿ ಸ್ಮಿತ್, ಲಿಯಮ್ ಲಿವಿಂಗ್‌ಸ್ಟೋನ್, ಅದಿಲ್ ರಶೀದ್, ಸಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.
ಸರಣಿ ವೇಳಾಪಟ್ಟಿ
ಮೊದಲ ಪಂದ್ಯ; ಜ. 22 ಕೋಲ್ಕತಾ
ದ್ವಿತೀಯ ಪಂದ್ಯ; ಜ. 25 ಚೆನ್ನೈ
ತೃತೀಯ ಪಂದ್ಯ; ಜ. 28 ರಾಜ್‌ಕೋಟ್
ನಾಲ್ಕನೇ ಪಂದ್ಯ;ಫೆ. 6 ನಾಗ್ಪುರ
ಐದನೇ ಪಂದ್ಯ;ಫೆ. 12 ಅಹ್ಮದಾಬಾದ್