ಕೋಲ್ಕತಾದಲ್ಲಿ ಮೊಹಮ್ಮದ್ ಶಮಿ ಏಕೆ ಆಡಲಿಲ್ಲ? ನಿಜವಾದ ಕಾರಣ ತಿಳಿಸಿದ ಪಠಾಣ್!
ಇಂಗ್ಲೆಂಡ್ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ ಆಡುವ ಮೂಲಕ ಮೊಹಮ್ಮದ್ ಶಮಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಆಡಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು, ಶಮಿ ಮೊದಲನೇ ಪಂದ್ಯದಿಂದ ಹೊರಗುಳಿದಿರುವ ನಿರ್ಧಾರವನ್ನು ಬೆಂಬಲಿಸಿದ್ದಾರೆ.
ಕೋಲ್ಕತಾ: ಇಂಗ್ಲೆಂಡ್ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ (IND vs ENG 1st T20I Highlights) ಭಾರತ ತಂಡದ ಪರ ಮೊಹಮ್ಮದ್ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆಂದು ಎಲ್ಲರೂ ಭಾವಿಸಿದ್ದರು. ಆದರೆ, ಇದು ಸಾಧ್ಯವಾಗಲಿಲ್ಲ. ನಾಯಕ ಸೂರ್ಯಕುಮಾರ್ ಯಾದವ್ ತನ್ನ ಪ್ಲೇಯಿಂಗ್ ಇಲೆವೆನ್‌ನಿಂದ ಶಮಿ ಅವರನ್ನು ದೂರ ಇಟ್ಟರು. ಅಂದ ಹಾಗೆ ಮೊದಲನೇ ಟಿ20ಐ ಪಂದ್ಯದಿಂದ ಮೊಹಮ್ಮದ್ ಶಮಿ ದೂರ ಉಳಿದ ನಿರ್ಧಾರವನ್ನು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಬೆಂಬಲಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಗಾಯದ ಹೊರತಾಗಿಯೂ ಅವರು ಈ ಟೂರ್ನಿಯಲ್ಲಿ ಆಡಿದ್ದರು. ಆದರೆ, ಈ ಟೂರ್ನಿಯ ಬಳಿಕ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ದೀರ್ಘಾವಧಿ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ಸಂಪೂರ್ಣ ಗುಣಮುಖರಾಗಿರುವ ಅವರು, ಇಂಗ್ಲೆಂಡ್ ವಿರುದ್ದ ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇದೆ.
ವರುಣ್ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರ, ಅಭಿಷೇಕ್ ಅಬ್ಬರದಿಂದ ಭಾರತಕ್ಕೆ ಮೊದಲ ಜಯ!
ಮೊಹಮ್ಮದ್ ಶಮಿ ನಿರ್ಧಾರಕ್ಕೆ ಪಠಾಣ್ ಬೆಂಬಲ
ಭಾರತ ತಂಡಕ್ಕೆ ಮರಳುವುದಕ್ಕೂ ಮುನ್ನ ಅವರು ಬಂಗಾಳ ತಂಡದ ಪರ ದೇಶಿ ಕ್ರಿಕೆಟ್ ಆಡಿದ್ದರು ಹಾಗೂ ತಮ್ಮ ಫಿಟ್‌ನೆಸ್ ಅನ್ನು ಸಾಬೀತುಪಡಿಸಿದ್ದರು. ಆದರೆ, ಅವರ ಕಾಲಿನಲ್ಲಿ ಊತ ಕಾಣಿಸಿಕೊಂಡಿದ್ದ ಕಾರಣ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕಮ್‌ಬ್ಯಾಕ್ ಇನ್ನಷ್ಟು ವಿಳಂಬವಾಗುತ್ತಿದೆ. ಆದರೆ, ಮೊದಲನೇ ಟಿ20ಐ ಪಂದ್ಯದಿಂದ ಹೊರಗುಳಿದಿದ್ದ ಶಮಿಯ ನಿರ್ಧಾರವನ್ನು ಇರ್ಫಾನ್ ಪಠಾಣ್ ಸ್ವಾಗತಿಸಿದ್ದಾರೆ.
"ನೀವು ಅತ್ಯಂತ ಅನುಭವಿ ಮತ್ತು ಭಾರತದ ಅಗ್ರ 10 ಬೌಲರ್‌ಗಳ ಪೈಕಿ ನೀವು ಕೂಡ ಒಬ್ಬರು. ನಿಮ್ಮ ದೇಹದ ಮಿತಿಗಳನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಿ," ಎಂದು ಇರ್ಫಾನ್ ಪಠಾಣ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
IND vs ENG: ಉಸಿರಿರುವ ತನಕ ಭಾರತಕ್ಕೆ ಆಡುತ್ತೇನೆಂದ ಮೊಹಮ್ಮದ್ ಶಮಿ!
ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಬೌಲಿಂಗ್ ಬ್ಯಾಕ್‌ಅಪ್ ಕೊರತೆ ಇದೆ
"ಶಮಿ ಯಾವಾಗಲೂ ತಮ್ಮ ಪರಿಸ್ಥಿತಿಯ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್‌ಗೆ ಪ್ರಾಮಾಣಿಕವಾಗಿ ತಿಳಿಸುತ್ತಿದ್ದರು ಮತ್ತು ಈ ನಿರ್ಧಾರವನ್ನು ಪರಸ್ಪರ ಒಪ್ಪಿಗೆಯೊಂದಿಗೆ ತೆಗೆದುಕೊಳ್ಳಲಾಗಿದೆ. ನೀವು ಉನ್ನತ ಮಟ್ಟದಲ್ಲಿ ಸತತವಾಗಿ ಆಡುತ್ತಿರುವಾಗ ಗಾಯಗಳಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಟೀಮ್ ಮ್ಯಾನೇಜ್‌ಮೆಂಟ್ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಂಬಿದ್ದೇನೆ. ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ವೇಗದ ಬೌಲಿಂಗ್ ಬ್ಯಾಕ್‌ಅಪ್ ಕೊರತೆ ಇದೆ," ಎಂದು ಮಾಜಿ ಆಲ್‌ರೌಂಡರ್ ಕಳವಳ ವ್ಯಕ್ತಪಡಿಸಿದ್ದಾರೆ.
"ನಿಮಗೆ ವೇಗದ ಬೌಲಿಂಗ್‌ನಲ್ಲಿ ಬ್ಯಾಕಪ್ ಅಗತ್ಯವಿದೆ. ಸಿರಾಜ್ ಉತ್ತಮ ಆಯ್ಕೆಯಾಗಬಹುದಿತ್ತು. ದುಬೈನಲ್ಲಿ ನಾಲ್ಕು ಸ್ಪಿನ್ನರ್‌ಗಳೊಂದಿಗೆ ಆಡುವುದು ಪ್ರಾಯೋಗಿಕವಲ್ಲ. ಬುಮ್ರಾ ಮತ್ತು ಶಮಿ ಗಾಯದಿಂದ ವಾಪಸಾಗುತ್ತಿದ್ದಾರೆ ಮತ್ತು ಅವರು ಮರಳಿದ ತಕ್ಷಣ ಉತ್ತಮ ಪ್ರದರ್ಶನ ನೀಡುವುದು ಅವರಿಗೆ ಸುಲಭವಲ್ಲ. ಸಿರಾಜ್ ಅವರಂತಹ ಬೌಲರ್ ಈ ಕೊರತೆಯನ್ನು ತುಂಬಬಹುದಿತ್ತು," ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.