IND vs ENG: ಸತತ 30ನೇ ಟಿ20ಐ ಪಂದ್ಯ ಗೆದ್ದು ಸದ್ದಿಲ್ಲದೆ ವಿಶ್ವ ದಾಖಲೆ ಬರೆದ ಶಿವಂ ದುಬೆ!
Shivam Dube Creates world Record: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡ ಗೆಲುವು ಪಡೆಯುವ ಮೂಲಕ ಆಲ್‌ರೌಂಡರ್ ಶಿವಂ ದುವೆ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ರಾಷ್ಟ್ರೀಯ ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಶಿವಂ ದುಬೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅದೃಷ್ಟಶಾಲಿ ಆಟಗಾರ ಎನಿಸಿಕೊಂಡಿದ್ದಾರೆ. ಶಿವಂ ದುಬೆ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು. ಈ ಎರಡೂ ಪಂದ್ಯಗಳಲ್ಲಿ ದುಬೆ ತಮ್ಮ ಆಲ್‌ರೌಂಡರ್ ಪ್ರದರ್ಶನದ ಮೂಲಕ ಭಾರತ ತಂಡದ ಗೆಲುವಿಗೆ ನೆರವು ನೀಡಿದ್ದರು. ಇದರೊಂದಿಗೆ ಟಿ20ಐ ಕ್ರಿಕೆಟ್‌ನಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆಯನ್ನು ಶಿವಂ ದುಬೆ ಬರೆದಿದ್ದಾರೆ.
ಶಿವಂ ದುಬೆ ಸತತ 30 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅಂದರೆ, ಶಿವಂ ದುಬೆ ಟೀಮ್ ಇಂಡಿಯಾ ಪರ ಆಡಿದ ಕಳೆದ 30 ಪಂದ್ಯಗಳಲ್ಲಿ ಯಾವುದೇ ಸೋಲು ಕಂಡಿಲ್ಲ. ಆ ಮೂಲಕ ಶಿವಂ ದುಬೆ ಟಿ20ಐ ಕ್ರಿಕೆಟ್‌ನಲ್ಲಿ ಭಾರತೀಯ ತಂಡಕ್ಕೆ ಅದೃಷ್ಟವನ್ನು ತಂದುಕೊಟ್ಟಿದ್ದಾರೆಂದರೆ ತಪ್ಪಾಗಲಾರದು. ರಾಷ್ಟ್ರೀಯ ತಂಡದ ಪರ ಸತತ 30 ಟಿ20ಐ ಪಂದ್ಯಗಳನ್ನು ಗೆದ್ದ ಮೊದಲ ಆಟಗಾರ ಎಂಬ ವಿಶ್ವದಾಖಲೆಯನ್ನು ಶಿವಂ ದುಬೆ ಬರೆದಿದ್ದಾರೆ.
IND vs ENG: ಅಭಿಷೇಕ್ ಶರ್ಮಾ ಬ್ಯಾಟಿಂಗ್ ಅಬ್ಬರ, ಕೊನೆಯ ಪಂದ್ಯವನ್ನೂ ಗೆದ್ದ ಭಾರತ!
ಶಿವಂ ದುಬೆ ಪದಾರ್ಪಣೆ ಪಂದ್ಯದಲ್ಲಿ ಭಾರತ ಸೋತಿತ್ತು
ಶಿವಂ ದುಬೆ ಇಲ್ಲಿಯವರೆಗೆ ಟೀಮ್ ಇಂಡಿಯಾ ಪರ ಒಟ್ಟು 35 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಅವರು 2019ರ ನವೆಂಬರ್ 3 ರಂದು ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಪಂದ್ಯವಾಡಿದ್ದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್‌ಗಳಿಂದ ಸೋತಿತ್ತು. ಇದಾದ ನಂತರ, ಶಿವಂ ದುಬೆ ಅವರ ಐದನೇ ಪಂದ್ಯದಲ್ಲೂ ಭಾರತವನ್ನು ವೆಸ್ಟ್ ಇಂಡೀಸ್ ಸೋಲಿಸಿತು. ಇದಾದ ನಂತರ ಶಿವಂ ದುಬೆ ಟೀಮ್ ಇಂಡಿಯಾ ಪರ ಒಟ್ಟು 30 ಟಿ20ಐ ಪಂದ್ಯಗಳನ್ನು ಆಡಿದ್ದಾರೆ ಅದರಲ್ಲಿ ಅವರು ಒಂದನ್ನೂ ಸಹ ಸೋತಿಲ್ಲ.
Since December 12, 2019, whenever Shivam Dube steps onto the field, India has been unstoppable in T20Is 🔥🌟#ShivamDube #Indiancricket #T20I #Insidesport #CricketTwitter pic.twitter.com/NXFFN7MJ1D
— InsideSport (@InsideSportIND) February 4, 2025
ಶಿವಂ ದುಬೆ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಟೀಮ್ ಇಂಡಿಯಾ ಪರ ಇದುವರೆಗೆ ಆಡಿರುವ 35 ಟಿ20ಐ ಪಂದ್ಯಗಳಲ್ಲಿ ಅವರು 140.10 ಸ್ಟ್ರೈಕ್ ರೇಟ್‌ನಲ್ಲಿ 531 ರನ್ ಗಳಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ 4 ಅರ್ಧಶತಕಗಳನ್ನು ಗಳಿಸಿದ್ದಾರೆ ಮತ್ತು ಅವರ ಗರಿಷ್ಠ ಸ್ಕೋರ್ ಔಟಾಗದೆ 63 ರನ್. ಇದಲ್ಲದೆ, ಶಿವಂ ದುಬೆ 4 ಏಕದಿನ ಪಂದ್ಯಗಳಲ್ಲಿಯೂ ಆಡಿದ್ದಾರೆ. ಬೌಲಿಂಗ್‌ನಲ್ಲಿ ಅವರು ಟಿ20ಐನಲ್ಲಿ 13 ವಿಕೆಟ್‌ಗಳು ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಒಂದು ವಿಕೆಟ್ ಪಡೆದಿದ್ದಾರೆ.
IND vs ENG: ರಾಹುಲ್ ಇನ್, ಪಂತ ಔಟ್! ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಟಿ20ಐ ಸರಣಿ ಗೆದ್ದಿದ್ದ ಭಾರತ
ಅಭಿಷೇಕ್ ಶರ್ಮಾ ದಾಖಲೆಯ ಶತಕದ ಬಲದಿಂದ ಐದನೇ ಹಾಗೂ ಕೊನೆಯ ಪಂದ್ಯವನ್ನು ಗೆದ್ದಿದ್ದ ಭಾರತ ತಂಡ ಟಿ20ಐ ಸರಣಿಯನ್ನು 4-1 ಅಂತರದಲ್ಲಿ ಮುಡಿಗೇರಿಸಿಕೊಂಡಿತ್ತು. ಇದೀಗ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಆಂಗ್ಲರ ವಿರುದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿದೆ. ಮೊದಲನೇ ಏಕದಿನ ಪಂದ್ಯ ಫೆಬ್ರವರಿ 6ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ.