IND vs ENG: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಸೂರ್ಯಕುಮಾರ್ ಯಾದವ್ ವಿರುದ್ಧ ಅಶ್ವಿನ್ ಕಿಡಿ!
R Ashwin on Suryakumar Yadav's Failure: ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಸ್ಪಿನ್ ದಿಗ್ಗಜ ಆರ್ ಅಶ್ವಿನ್ ಟೀಕಿಸಿದ್ದಾರೆ. ಅವರು ಕೆಲ ಅಗತ್ಯ ಸನ್ನಿವೇಶಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಅಗತ್ಯವಿದೆ ಎಂದಿದ್ದಾರೆ.
ಮುಂಬೈ: ಇಂಗ್ಲೆಂಡ್ ವಿರುದ್ದದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವ ಅದ್ಭುತವಾಗಿತ್ತು.ಆದರೆ ಅವರ ವೈಯಕ್ತಿಕ ಬ್ಯಾಟಿಂಗ್ ಪ್ರದರ್ಶನದಲ್ಲಿ ಸಮಸ್ಯೆ ಇದೆ ಎಂದು ಸ್ಪಿನ್ ದಿಗ್ಗಜ ಆರ್ ಅಶ್ವಿನ್ ಟೀಕಿಸಿದ್ದಾರೆ. ಭಾನುವಾರ ಅಂತ್ಯವಾಗಿದ್ದ ಟಿ20ಐ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಸಂಪೂರ್ಣವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಅವರು ಆಡಿದ್ದ ಐದು ಇನಿಂಗ್ಸ್‌ಗಳಿಂದ ಕೇವಲ 28 ರನ್‌ಗಳಿಗೆ ಸೀಮಿತರಾಗಿದ್ದರು. ಅವರು ಕ್ರಮವಾಗಿ 0,12,14,0 ಹಾಗೂ 2 ರನ್‌ಗಳಿಗೆ ಸೀಮಿತರಾಗಿದ್ದರು.
ಈ ಸರಣಿಯಲ್ಲಿ ಅವರು ಬಹುತೇಕ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ನೆಚ್ಚಿನ ಶಾಟ್ ಫ್ಲಿಕ್ ಶಾಟ್‌ಗೆ ಪ್ರಯತ್ನಿಸಿ ವಿಕೆಟ್ ಒಪ್ಪಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಜೊತೆಗೆ ಸಂಜು ಸ್ಯಾಮ್ಸನ್ ಕೂಡ ಒಂದೇ ರೀತಿ ಔಟ್ ಆಗಿದ್ದಾರೆ. ಶಾರ್ಟ್ ಎಸೆತಗಳಲ್ಲಿ ಸಂಜು ವಿಕೆಟ್ ಒಪ್ಪಿಸಿದ್ದಾರೆ. ಸೂರ್ಯಕುಮಾರ್ ಯಾದವ್, ಜೋಫ್ರಾ ಆರ್ಚರ್, ಮಾರ್ಕ್‌ವುಡ್ ಹಾಗೂ ಬ್ರೈಡನ್ ಕಾರ್ಸ್ ಅವರ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾಗಿದ್ದಾರೆ.
IND vs ENG: ಅಭಿಷೇಕ್ ಶರ್ಮಾ ಬ್ಯಾಟಿಂಗ್ ಅಬ್ಬರ, ಕೊನೆಯ ಪಂದ್ಯವನ್ನೂ ಗೆದ್ದ ಭಾರತ!
ಸೂರ್ಯುಕುಮಾರ್ ಯಾದವ್ ಬಗ್ಗೆ ಅಶ್ವಿನ್ ಹೇಳಿದ್ದಿದು
"ಸಮಸ್ಯೆ ಇರುವುದು ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್‌ನಲ್ಲಿ. ಹೌದು, ಈ ಸರಣಿಯಲ್ಲಿ ಅವರ ನಾಯಕತ್ವಅದ್ಭುತವಾಗಿತ್ತು. ಅವರ ನಾಯಕತ್ವದ ಎಲ್ಲರ ಗಮನ ಸೆಳೆದಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅವರು ತಮ್ಮ ನಾಯಕತ್ವದ ಜೊತೆಗೆ ಅಗತ್ಯ ಸನ್ನಿವೇಶಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಬೇಕಾಗಿತ್ತು. ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಒಂದೇ ತರಹದ ಎಸೆತಗಳಲ್ಲಿ, ಒಂದೇ ಶಾಟ್‌ಗೆ, ಒಂದೇ ಫೀಲ್ಡ್ ಸೆಟ್‌ಗೆ, ಒಂದೇ ತಪ್ಪಿನಿಂದ ಔಟ್ ಆಗಿದ್ದಾರೆ," ಎಂದು ಆರ್ ಅಶ್ವಿನ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ದೂರಿದ್ದಾರೆ.
"ಒಂದು ಅಥವಾ ಎರಡು ಪಂದ್ಯಗಲ್ಲಿ ಇದು ನಡೆದರೆ ಇದನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಆದರೆ, ಇದು ನಾವು ಹೇಳಿದ ರೀತಿ ವಿಚಿತ್ರವಲ್ಲ. ಆಟಗಾರರು ಸ್ವತಂತ್ರವಾಗಿ ಬ್ಯಾಟ್ ಮಾಡಬೇಕು. ಒಂದೇ ರೀತಿಯ ಪ್ರಶ್ನೆಗೆ ನಮ್ಮ ಬ್ಯಾಟ್ಸ್‌ಮನ್‌ಗಳು ಉತ್ತರಿಸಬೇಕಾದ ಅಗತ್ಯವಿದೆ," ಎಂದು ಜನವರಿ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಆರ್ ಅಶ್ವಿನ್ ತಿಳಿಸಿದ್ದಾರೆ.
IND vs ENG: ಸ್ಪೋಟಕ ಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ!
ಐದನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (16) ಹಾಗೂ ಸೂರ್ಯಕುಮಾರ್ ಯಾದವ್ (2) ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿ ಬರಲಿಲ್ಲ. ಇನ್ನು ತಿಲಕ್ ವರ್ಮಾ (24) ಹಾಗೂ ಶಿವಂ ದುಬೆ (30) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಎಡವಿದರು. ಆದರೆ, ದಾಖಲೆಯ ಶತಕ ಸಿಡಿಸಿದ ಅಭಿಷೇಕ್ ಶರ್ಮಾ ಜೊತೆ ದುಬೆ 115 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ್ದ ಅಭಿಷೇಕ್ ಶರ್ಮಾ 135 ರನ್‌ಗಳನ್ನು ಸಿಡಿಸಿ, ಭಾರತ ತಂಡ 247 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ಬಳಿಕ ಗುರಿ ಹಿಂಬಾಲಿಸಿದ್ದ ಇಂಗ್ಲೆಂಡ್ ತಂಡ 97 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆ ಮೂಲಕ 150 ರನ್‌ಗಳಿಂದ ಸೋಲು ಅನುಭವಿಸಿತ್ತು.