IND vs ENG: ʻಬ್ಯಾಟ್ ಮೂಲಕ ಉತ್ತರ ನೀಡಿʼ-ರೋಹಿತ್ ಶರ್ಮಾ ವೈಫಲ್ಯದ ಬಗ್ಗೆ ಆರ್ ಅಶ್ವಿನ್ ಪ್ರತಿಕ್ರಿಯೆ!
R Ashwin on Rohit Sharma's poor Form: ಇಂಗ್ಲೆಂಡ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿಯೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಗ್ಗೆ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ತಮ್ಮ ಬ್ಯಾಟ್‌ನಿಂದಲೇ ಟೀಕಾಕಾರರಿಗೆ ಉತ್ತರ ನೀಡಬೇಕೆಂದು ಹೇಳಿದ್ದಾರೆ.
![Rohit Sharma-R Ashwin](https://cdn-vishwavani-prod.hindverse.com/media/images/Rohit_Sharma-R_Ashwin.max-1280x720.jpg)
![Profile](https://vishwavani.news/static/img/user.png)
ನಾಗ್ಪುರ: ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಸಾಕಷ್ಟು ಮಂದಿ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ತಮ್ಮ ಬ್ಯಾಟ್‌ನಲ್ಲಿ ರನ್ ಗಳಿಸುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಬೇಕೆಂದು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಸಲಹೆ ನೀಡಿದ್ದಾರೆ. ಅಲ್ಲದೆ ರೋಹಿತ್ ಶರ್ಮಾ ಮುಂದಿನ ಪಂದ್ಯಗಳಲ್ಲಿ ಫಾರ್ಮ್‌ಗೆ ಮರಳಲಿದ್ದಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ರೋಹಿತ್ ಶರ್ಮಾ, ಗುರುವಾರ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಕ್ಯಾಪ್ಟನ್ ವೈಫಲ್ಯ ಅನುಭವಿಸಿದ್ದರು. ಅವರು ಆಡಿದ್ದ 7 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದರ ಹೊರತಾಗಿಯೂ ಭಾರತ ತಂಡ, ಸಂಘಟಿತ ಪ್ರದರ್ಶನದ ಫಲವಾಗಿ 4 ವಿಕೆಟ್‌ಗಳ ಗೆಲುವು ಪಡೆದಿತ್ತು ಹಾಗೂ ಏಕದಿನ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡದಿದೆ.
IND vs ENG: 2 ರನ್‌ಗೆ ವಿಕೆಟ್ ಒಪ್ಪಿಸಿದ ಕೆಎಲ್ ರಾಹುಲ್ ವಿರುದ್ಧ ಸುನೀಲ್ ಗವಾಸ್ಕರ್ ಕಿಡಿ!
ರೋಹಿತ್ ಶರ್ಮಾ ವೈಫಲ್ಯದ ಬಗ್ಗೆ ಅಶ್ವಿನ್ ಹೇಳಿದ್ದಿದು
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆರ್ ಅಶ್ವಿನ್, "ಇದು ಅಷ್ಟೊಂದು ಸುಲಭವಲ್ಲ. ರೋಹಿತ್ ಶರ್ಮಾ ಅವರ ಫಾರ್ಮ್ ಅನ್ನು ನೀವು ನೋಡಬಹದು, ಅವರ ಪಾಲಿಗೆ ಇದು ತುಂಬಾ ನಿರಾಶದಾಯಕವಾಗಿದೆ. ಈ ಸರಣಿಯಲ್ಲಿ ಅವರು ಹೆಚ್ಚಿನ ಗಮನವನ್ನು ಹರಿಸಬೇಕಾದ ಅಗತ್ಯವಿದೆ. ಈ ಸ್ವರೂಪದಲ್ಲಿ ನಾನು ಉತ್ತಮ ಪ್ರದರ್ಶನ ತೋರಿದರೆ, ಮುಂದುವರಿಯುತ್ತೇನೆಂಬುದನ್ನು ಅವರು ಅರಿತುಕೊಳ್ಳಬೇಕು. ತಾನು ಸಾಕಷ್ಟು ಏಕದಿನ ಟೂರ್ನಿಗಳನ್ನು ಸಾಕಷ್ಟು ವಿಶ್ವಾಸದಿಂದ ಆಡಿದ್ದೇನೆ ಎಂಬುದನ್ನು ಅವರು ತಿಳಿದುಕೊಂಡು ಮುನ್ನುಗ್ಗಬೇಕು," ಎಂದು ಸಲಹೆ ನೀಡಿದ್ದಾರೆ.
"ಆದರೆ, ನೀವು ಉತ್ತಮ ಪ್ರದರ್ಶನ ತೋರಿಲ್ಲವಾದರೆ, ಜನರು ನಿಮ್ಮನ್ನು ಪ್ರಶ್ನೆ ಮಾಡುತ್ತಾರೆ. ಯಾರು ನೋಡುತ್ತಾರೆ ಅವರು ನಿಸ್ಸಂಶಯವಾಗಿ ಪ್ರಶ್ನೆ ಮಾಡುತ್ತಾರೆ. 22ರ ಸನ್ನಿವೇಶದಲ್ಲಿ ಇದು ಕ್ಯಾಚ್ ಆಗಿದೆ. ನೀವು ಈ ಪ್ರಶ್ನೆಗಳನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಅವರು ಉತ್ತಮ ಪ್ರದರ್ಶನ ತೋರಿದಾಗ ಜನರು ಪ್ರಶ್ನೆ ಮಾಡುವುದನ್ನು ನಿಲ್ಲಿಸುತ್ತಾರೆ," ಎಂದು ಜನವರಿ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಅಶ್ವಿನ್ ತಿಳಿಸಿದ್ದಾರೆ.
IND vs ENG: ಇಂಗ್ಲೆಂಡ್ ವಿರುದ್ಧ ಗೆದ್ದು ಏಕದಿನ ಸರಣಿಯಲ್ಲಿ ಶುಭಾರಂಭ ಕಂಡ ಭಾರತ!
ರೋಹಿತ್ ಶರ್ಮಾ ಶತಕ ಸಿಡಿಸುತ್ತಾರೆ: ಅಶ್ವಿನ್ ಭವಿಷ್ಯ
ರೋಹಿತ್ ಶರ್ಮಾ ಇತ್ತೀಚಿನ ದಿನಗಳ ಸಾಕಷ್ಟು ವೈಫಲ್ಯವನ್ನು ಅನುಭವಿಸಿದ್ದಾರೆ. ಆಡಿದ ಎಲ್ಲಾ ಸ್ವರೂಪದಲ್ಲಿ 16 ಇನಿಂಗ್ಸ್‌ಗಳಿಂದ ಗಳಿಸಿರುವುದು ಕೇವಲ 166 ರನ್‌ಗಳು ಮಾತ್ರ. ಇಂಗ್ಲೆಂಡ್ ವಿರುದ್ಧಧ ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ವೈಫಲ್ಯ ಅನುಭವಿಸಿದರೆ, ಅವರ ವೃತ್ತಿ ಜೀವನ ಅಂತ್ಯವಾಗುವ ಸಾಧ್ಯತೆ ಇದೆ. ಆದರೂ, ರೋಹಿತ್ ಶರ್ಮಾ ಶತಕ ಸಿಡಿಸಲಿದ್ದಾರೆಂಬ ವಿಶ್ವಾಸವನ್ನು ಆರ್ ಅಶ್ವಿನ್ ವ್ಯಕ್ತಪಡಿಸಿದ್ದಾರೆ.
"ಒಬ್ಬ ಕ್ರಿಕೆಟರ್ ಆಗಿ, ರೋಹಿತ್ ಶರ್ಮಾ ಅವರಿಗೆ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತೇನೆ. ಇದು ನಿಜಕ್ಕೂ ಸುಲಭವಲ್ಲ, ಈ ಸರಣಿಯ ಮುಂದಿನ ಪಂದ್ಯಗಳಲ್ಲಿ ಅವರು ಶತಕ ಸಿಡಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ," ಎಂದು ಸ್ಪಿನ್ ದಿಗ್ಗಜ ತಿಳಿಸಿದ್ದಾರೆ.
ಎರಡನೇ ಏಕದಿನ ಪಂದ್ಯ ಯಾವಾಗ?
ಮೊದಲನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವ ಭಾರತ ತಂಡ, ಫೆಬ್ರವರಿ 9 ರಂದು ಕಟಕ್‌ನ ಬಾರಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. 2019ರ ಡಿಸೆಂಬರ್ ತಿಂಗಳಲ್ಲಿ ವಿಂಡೀಸ್ ವಿರುದ್ಧ ಇದೇ ಮೈದಾನದಲ್ಲಿ ರೋಹಿತ್ ಶರ್ಮಾ ಆಡಿದ್ದರು. ಈ ಪಂದ್ಯದಲ್ಲಿ ಅವರು 63 ರನ್‌ಗಳನ್ನು ಗಳಿಸಿದ್ದರು.