ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shreyas Iyer: ಭಾರತ ತಂಡದ ಯಶಸ್ಸಿನ 'ಸೈಲೆಂಟ್‌ ಹೀರೋ' ಯಾರೆಂದು ತಿಳಿಸಿದ ರೋಹಿತ್‌ ಶರ್ಮಾ!

Rohit Sharma Praised on Shreyas Iyer: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ತಮ್ಮ ಸಹ ಆಟಗಾರ ಶ್ರೇಯಸ್‌ ಅಯ್ಯರ್‌ ಅವರನ್ನು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಭಾರತ ತಂಡದ ಚಾಂಪಿಯನ್ಸ್‌ ಟ್ರೋಫಿ ಪಯಣದಲ್ಲಿ ಶ್ರೇಯಸ್‌ ಅಯ್ಯರ್‌ ಸೈಲೆಂಟ್‌ ಹೀರೋ ಆಗಿದ್ದಾರೆಂದು ಅವರು ಬಣ್ಣಿಸಿದ್ದಾರೆ.

ಶ್ರೇಯಸ್‌ ಅಯ್ಯರ್‌ ಭಾರತ ತಂಡದ 'ಸೈಲೆಂಟ್‌ ಹೀರೋ' ಎಂದ ರೋಹಿತ್‌ ಶರ್ಮಾ!

ಶ್ರೇಯಸ್‌ ಅಯ್ಯರ್‌ ಅವರನ್ನು ಸೈಲೆಂಟ್‌ ಹೀರೋ ಎಂದ ರೋಹಿತ್‌ ಶರ್ಮಾ.

Profile Ramesh Kote Mar 10, 2025 5:47 PM

ದುಬೈ: ಭಾರತ ತಂಡದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (champions Trohy 2025) ಗೆಲುವಿನಲ್ಲಿ ಶ್ರೇಯಸ್‌ ಅಯ್ಯರ್‌ (Shreyas Iyer) ಸೈಲೆಂಟ್‌ ಹೀರೋ ಆಗಿದ್ದಾರೆಂದು ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಶ್ಲಾಘಿಸಿದ್ದಾರೆ. ಭಾನುವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ ನೀಡಿದ್ದ 252 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಶ್ರೇಯಸ್‌ ಅಯ್ಯರ್‌ 48 ರನ್‌ಗಳಿಸಿದ್ದರು ಹಾಗೂ ಅಕ್ಷರ್‌ ಪಟೇಲ್‌ ಜೊತೆ 61 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಅಂತಿಮವಾಗಿ ಭಾರತ ತಂಡ 4 ವಿಕೆಟ್‌ಗಳಿಂದ ಗೆದ್ದು ಮೂರನೇ ಬಾರಿ ಚಾಂಪಿಯನ್ಸ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ ಅವರು ಆಡಿದ ಐದು ಪಂದ್ಯಗಳಿಂದ 48.60ರ ಸರಾಸರಿ ಹಾಗೂ 79.41ರ ಸ್ಟ್ರೈಕ್‌ ರೇಟ್‌ನಲ್ಲಿ 243 ರನ್‌ಗಳನ್ನು ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಅವರು 15, 56, 79, 45 ಹಾಗೂ 48 ರನ್‌ಗಳನ್ನು ಕಲೆ ಹಾಕಿದ್ದರು. ಭಾರತ ತಂಡದ ಚಾಂಪಿಯನ್ಸ್‌ ಟ್ರೋಫಿ ಗೆಲುವಿನಲ್ಲಿ ಶ್ರೇಯಸ್‌ ಅಯ್ಯರ್‌ ಮಹತ್ತರ ಪಾತ್ರವನ್ನು ವಹಿಸಿದ್ದರು. ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದರು. ಅದರಲ್ಲಿಯೂ ವಿಶೇಷವಾಗಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಅರ್ಧಶತಕ ಸಿಡಿಸುವ ಜೊತೆಗೆ 114 ರನ್‌ಗಳ ಜೊತೆಯಾವನ್ನು ಆಡಿದ್ದರು.

IND vs NZ: ರೋಹಿತ್‌ ಶರ್ಮಾ ಬ್ಯಾಟಿಂಗ್‌ನಿಂದ ಬೌಲರ್‌ಗಳು ಭಯ ಬಿದ್ದಿದ್ದರೆಂದ ಮಿಚೆಲ್‌ ಸ್ಯಾಂಟ್ನರ್‌!

ನ್ಯೂಜಿಲೆಂಡ್‌ ವಿರುದ್ಧ ಫೈನಲ್‌ ಪಂದ್ಯದ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌ ಶರ್ಮಾ, " ಇಲ್ಲಿನ ಕಂಡೀಷನ್ಸ್‌ ಕಠಿಣವಾಗಿದ ಎಂಬುದು ನಮಗೆ ಗೊತ್ತಿತ್ತು ಆದರೆ, ನಾವು ಇದಕ್ಕೆ ಹೊಂದಿಕೊಂಡಿದ್ದೆವು. ಇಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ನೀವು ನೋಡಬಹುದು. ಬಾಂಗ್ಲಾದೇಶ ವಿರುದ್ಧ ಮೊದಲನೇ ಪಂದ್ಯವನ್ನು ಆಡಿದ್ದೆವು. ಬಾಂಗ್ಲಾ ನೀಡಿದ್ದು 230 ರನ್‌ಗಳೆಂದು ನಮಗೆ ಗೊತ್ತಿದೆ ಆದರೆ, ಇಲ್ಲಿನ ವಿಕೆಟ್‌ ತುಂಬಾ ನಿಧಾನಗತಿಯಿಂದ ಕೂಡಿದೆ ಎಂದು ನಮಗೆ ಗೊತ್ತಿತ್ತು. ನಮಗೆ ಜೊತೆಯಾಟದ ಅಗತ್ಯವಿತ್ತು. ಬ್ಯಾಟ್ಸ್‌ಮನ್‌ಗಳ ಇಲ್ಲಿ ದೊಡ್ಡ ಜೊತೆಯಾಟವನ್ನು ಆಡಿದ್ದರು," ಎಂದು ರೋಹಿತ್‌ ಶರ್ಮಾ ತಿಳಿಸಿದ್ದಾರೆ.



ಶ್ರೇಯಸ್‌ ಅಯ್ಯರ್‌ ಸೈಲೆಂಟ್‌ ಹೀರೋ

"ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯುದ್ದಕ್ಕೂ ಶ್ರೇಯಸ್‌ ಅಯ್ಯರ್‌ ಅದ್ಭುತ ಪ್ರದರ್ಶನವನ್ನು ತೋರಿದ್ದಾರೆ, ಅವರು ಸೈಲೆಂಟ್‌ ಹೀರೋ. ಮಧ್ಯಮ ಓವರ್‌ಗಳಲ್ಲಿ ಅವರು ನಮಗೆ ಅತ್ಯಂತ ಪ್ರಮುಖ ಆಟಗಾರರಾಗಿದ್ದಾರೆ. ಎಲ್ಲಾ ಬ್ಯಾಟ್ಸ್‌ಮನ್‌ಗಳ ಜತೆ ಅವರು ಜೊತೆಯಾಟವನ್ನು ಆಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಆಸ್ಟ್ರೇಲಿಯಾ ವಿರುದ್ಧ ಸೆಮಿಪೈನಲ್‌ನಲ್ಲಿ ವಿರಾಟ್‌ ಕೊಹ್ಲಿ ಜೊತೆ ಆಡಿದ್ದ ಜೊತೆಯಾಟ ಅತ್ಯಂತ ಪ್ರಮುಖವಾಗಿತ್ತು," ಎಂದು ರೋಹಿತ್‌ ಶರ್ಮಾ ಶ್ಲಾಘಿಸಿದ್ದಾರೆ.

IND vs NZ Finla: ಚಾಂಪಿಯನ್‌ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

"ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ವಿರುದ್ಧದ ಲೀಗ್‌ ಪಂದ್ಯಗಳನ್ನು ಕೂಡ ನಾವು ಆಡಿದ್ದೆವು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇವತ್ತು (ಮಾರ್ಚ್‌ 9) ನಾನು ಔಟ್‌ ಆದ ಬಳಿಕ, ನಾವು ಬಹುಬೇಗ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದೆವು. ಆ ವೇಳೆ ನಮಗೆ 50 ರಿಂದ 70 ರನ್‌ಗಳ ಜೊತೆಯಾಟದ ಅಗತ್ಯವಿತ್ತು. ಈ ಕೆಲಸವನ್ನು ಶ್ರೇಯಸ್‌ ಅಯ್ಯರ್‌ ಪೂರ್ಣಗೊಳಿಸಿದ್ದರು. ಈ ರೀತಿಯ ಪ್ರದರ್ಶನವನ್ನು ನೀವು ತೋರಬೇಕಾದರೆ, ಇಲ್ಲಿನ ಕಂಡೀಷನ್ಸ್‌ ಅನ್ನು ಬಹುಬೇಗ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನೀವು ಅಂದುಕೊಂಡ ಕೆಲಸವನ್ನು ಪೂರ್ಣಗೊಳಿಸಿದ ಬಳಿಕ ಖುಷಿಯಾಗುತ್ತದೆ," ಎಂದು ರೋಹಿತ್‌ ಶರ್ಮಾ ತಿಳಿಸಿದ್ದಾರೆ.