IND vs NZ: ʻನ್ಯೂಜಿಲೆಂಡ್ ಚೋಕರ್ಸ್ ಅಲ್ಲ, ಹುಷಾರ್..!ʼ-ಭಾರತಕ್ಕೆ ನಾಸರ್ ಹುಸೇನ್ ವಾರ್ನಿಂಗ್!
Nasser Hussain's warning to India: ನ್ಯೂಜಿಲೆಂಡ್ ಎದುರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ನಿಮಿತ್ತ ಭಾರತ ತಂಡಕ್ಕೆ ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸೇನ್ ಎಚ್ಚರಿಕೆ ನೀಡಿದ್ದಾರೆ. ಕಿವೀಸ್ ತಂಡ ಚೋಕರ್ಸ್ ಅಲ್ಲ, ಅವರು ಕಠಿಣ ಹೋರಾಟವನ್ನು ನೀಡುತ್ತಾರೆ. ಹಾಗಾಗಿ ಭಾರತ ತಂಡ ಬಹಳಾ ಎಚ್ಚರಿಕೆಯಿಂದ ಆಡಬೇಕಾಗುತ್ತದೆ ಎಂದಿದ್ದಾರೆ.

ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ನಾಸರ್ ಹುಸೇನ್

ದುಬೈ: ನ್ಯೂಜಿಲೆಂಡ್ ವಿರುದ್ದದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ನಿಮಿತ್ತ ಭಾರತ ತಂಡಕ್ಕೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸರ್ ಹುಸೇನ್ ಎಚ್ಚರಿಕೆ ನೀಡಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮಾರ್ಚ್ 9 ರಂದು ದುಬೈ ಇಂಟರ್‌ನ್ಯಾಷನಲ್ ಕ್ರಿಡಾಂಗಣದಲ್ಲಿ ಕಾದಾಟ ನಡೆಸಲಿವೆ. ಐಸಿಸಿ ಟೂರ್ನಿಗಳ ಫೈನಲ್ ಹಣಾಹಣಿಗಳಲ್ಲಿ ಭಾರತ ತಂಡಕ್ಕಿಂತ ನ್ಯೂಜಿಲೆಂಡ್ ತಂಡ ಪ್ರಾಬಲ್ಯ ಸಾಧಿಸಿದೆ. 2000ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್‌ನಲ್ಲಿ ಈ ಎರಡೂ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಭಾರತವನ್ನು ಮಣಿಸಿ ನ್ಯೂಜಿಲೆಂಡ್ ಚಾಂಪಿಯನ್ ಆಗಿತ್ತು. ನಂತರ 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿಯೂ ಈ ಎರಡೂ ಸೆಣಸಿದ್ದವು. ಈ ಪಂದ್ಯದಲ್ಲಿಯೂ ಭಾರತವನ್ನು ಮಣಿಸಿ ಕಿವೀಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ಭಾನುವಾರ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ನಿಮಿತ್ತ ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿದ ನಾಸರ್ ಹುಸೇನ್, ನ್ಯೂಜಿಲೆಂಡ್ ತಂಡ ಅತ್ಯಂತ ಕಠಿಣ ತಂಡವಾಗಿದೆ ಹಾಗೂ ಅವರು ಒತ್ತಡದ ಸನ್ನಿವೇಶದಲ್ಲಿ ಎಂದಿಗೂ ಚೂಕರ್ಸ್ ಆಗಲ್ಲ ಎಂದು ಹೇಳಿದ್ದಾರೆ.
IND vs NZ Final: ನ್ಯೂಜಿಲೆಂಡ್ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!
"ನ್ಯೂಜಿಲೆಂಡ್ ತಂಡ ಎಂದಿಗೂ ಬಾಟಲ್ ಅಲ್ಲ ಹಾಗೂ ಅವರು ಚೋಕರ್ಸ್ ಆಗುವುದಿಲ್ಲ. ಆಸ್ಟ್ರೇಲಿಯಾ ಮಾಜಿ ನಾಯಕ ಆರೋನ್ ಫಿಂಚ್ ಅವರ ಜತೆ ನಾನು ಭೋಜನ ಮಾಡಿದ್ದೇವೆ ಈ ವೇಳೆ ಅವರು ಕಿವೀಸ್ ತಂಡದ ಬಗ್ಗೆ ಹೇಳಿದ್ದರು. ನ್ಯೂಜಿಲೆಂಡ್ ತಂಡವನ್ನು ಸೋಲಿಸಲು ತುಂಬಾ ಕಷ್ಟವೆಂದು ಅವರು ತಿಳಿಸಿದ್ದರು. ಅವರು ಯಾವುದೇ ಸನ್ನಿವೇಶ ಇರಲಿ ಅಥವಾ ಯಾವುದೇ ಒತ್ತಡದ ಇರಲಿ, ಕೊನೆಯವರೆಗೂ ಕಠಿಣ ಹೋರಾಟವನ್ನು ನೀಡುತ್ತಾರೆ ಹಾಗೂ ತಮ್ಮಿಂದ ಸಾಧ್ಯವಾದಷ್ಟು ಗರಿಷ್ಠ ಪ್ರದರ್ಶನವನ್ನು ತೋರುತ್ತಾರೆ," ಎಂದು ನಾಸರ್ ಹುಸೇನ್ ತಿಳಿಸಿದ್ದಾರೆ.
ಕಿವೀಸ್ ತಂಡದಲ್ಲಿ ಉತ್ತಮ ಸಂಯೋಜನೆ ಇದೆ
ನ್ಯೂಜಿಲೆಂಡ್ ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡ ಅತ್ಯುತ್ತಮ ಸಂಯೋಜನೆ ಇದೆ. ಅವರನ್ನು ಮೆಟ್ಟಿ ನಿಲ್ಲುವುದು ಅಷ್ಟೊಂದು ಸುಲಭವಲ್ಲ ಎಂದು ಇಂಗ್ಲೆಂಡ್ ಮಾಜಿ ಆಟಗಾರ ತಿಳಿಸಿದ್ದಾರೆ.
IND vs NZ final: ಫೈನಲ್ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ
"ನ್ಯೂಜಿಲೆಂಡ್ ತಂಡದ ಹಾದಿಯನ್ನು ನೀವು ಒಮ್ಮೆ ನೋಡಬಹದು, ಆ ತಂಡದಲ್ಲಿ ಅತ್ಯಂತ ಕಠಿಣ ಕ್ರಿಕೆಟಿಗರು ಇದ್ದಾರೆ ಹಾಗೂ ಪ್ರತಿಯೊಂದು ಪಂದ್ಯದಲ್ಲಿಯೂ ತಮ್ಮ ಕಡೆಯಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ತೋರಬಲ್ಲ ಸಾಮರ್ಥ್ಯವನ್ನು ಪ್ರತಿಯೊಬ್ಬರೂ ಹೊಂದಿದ್ದಾರೆ. ಈ ಕಾರಣದಿಂದಲೇ ನ್ಯೂಜಿಲೆಂಡ್ ತಂಡ ಯಾವಾಗಲೂ ಟೂರ್ನಿಗಳಲ್ಲಿ ಸೆಮಿಫೈನಲ್ಸ್ ಹಾಗೂ ಫೈನಲ್ಸ್‌ಗೆ ಅರ್ಹತೆ ಪಡೆಯುತ್ತವೆ. ಅಲ್ಲದೆ ಕಿವೀಸ್ ತಂಡದಲ್ಲಿ ವರ್ಷದಿಂದ ವರ್ಷಕ್ಕೆ ಯುವ ಹಾಗೂ ಹಿರಿಯ ಆಟಗಾರರನ್ನು ಒಳಗೊಂಡ ಅತ್ಯುತ್ತಮ ಸಂಯೋಜನೆಯನ್ನು ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಕೇನ್ ವಿಲಿಯಮ್ಸನ್ ಅವರಂಥೂ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿದ್ದಾರೆ ಹಾಗೂ ಯುವ ಸ್ಟಾರ್ ಆಟಗಾರ ರಚಿನ್ ರವೀಂದ್ರ ತಂಡದಲ್ಲಿದ್ದಾರೆ. ಅವರಾಗಿಯೇ ಅವರೇ (ನ್ಯೂಜಿಲೆಂಡ್) ಎಂದಿಗೂ ಸೋಲುವುದಿಲ್ಲ. ಆದರೆ, ಭಾರತ ತಂಡ ಶ್ರೇಷ್ಠ ಪ್ರದರ್ಶನವನ್ನು ತೋರಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಬೇಕಾಗುತ್ತದೆ," ಎಂದು ನಾಸರ್ ಹುಸೇನ್ ಹೇಳಿದ್ದಾರೆ.
IND vs NZ: 5 ವಿಕೆಟ್ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ವರುಣ್ ಚಕ್ರವರ್ತಿ!
ಭಾರತವನ್ನು 10 ಬಾರಿ ಸೋಲಿಸಿರುವ ಕಿವೀಸ್
ಐಸಿಸಿ ಟೂರ್ನಿಗಳಲ್ಲಿ ಇಲ್ಲಿಯವರೆಗೂ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು 16 ಬಾರಿ ಕಾದಾಟ ನಡೆಸಿವೆ. ಇದರಲ್ಲಿ ಭಾರತ ತಂಡವನ್ನು 10 ಬಾರಿ ನ್ಯೂಜಿಲೆಂಡ್ ತಂಡ ಮಣಿಸಿದೆ. ಸೋತಿರುವ ಪಂದ್ಯಗಳನ್ನು ಒಮ್ಮೆ ನೀವು ಅವಲೋಕಿಸಿದರೆ, ಅವರು ಅದಕ್ಕೆ ದೊಡ್ಡ ಕಾರಣಗಳು ಇರುತ್ತವೆ. ಆದರೆ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಈ ಬಾರಿ ಕಿವೀಸ್ ತಂಡವನ್ನು ಮಣಿಸಲು ಎದುರು ನೋಡುತ್ತಿದೆ.