ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

IND vs NZ: 5 ವಿಕೆಟ್‌ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ವರುಣ್‌ ಚಕ್ರವರ್ತಿ!

Varun Chakravarthy Took 5 Wickets Haul: ನ್ಯೂಜಿಲೆಂಡ್‌ ವಿರುದ್ಧ ಭಾನುವಾರ ನಡೆದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತ ತಂಡದ ವರುಣ್‌ ಚಕ್ರರ್ತಿ 5 ವಿಕೆಟ್‌ ಸಾಧನೆ ಮಾಡಿದ್ದಾರೆ. ಆ ಮೂಲಕ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ 5 ವಿಕೆಟ್‌ ಸಾಧನೆ ಮಾಡಿದ ಅತ್ಯಂತ ಹಿರಿಯ ಸ್ಪಿನ್ನರ್‌ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ.

5 ವಿಕೆಟ್‌ ಕಿತ್ತು ಅಪರೂಪದ ದಾಖಲೆ ಬರೆದ ವರುಣ್‌ ಚಕ್ರವರ್ತಿ!

ನ್ಯೂಜಿಲೆಂಡ್‌ ವಿರುದ್ಧ 5 ವಿಕೆಟ್‌ ಕಿತ್ತು ವಿಶೇಷ ದಾಖಲೆ ಬರೆದ ವರುಣ್‌ ಚಕ್ರವರ್ತಿ.

Profile Ramesh Kote Mar 3, 2025 12:57 PM

ದುಬೈ: ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಐದು ವಿಕೆಟ್‌ ಸಾಧನೆ ಮಾಡಿದ್ದಾರೆ. ಆ ಮೂಲಕ ಭಾರತ ತಂಡದ 44 ರನ್‌ಗಳ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಒಟ್ಟು 10 ಓವರ್‌ಗಳನ್ನು ಬೌಲ್‌ ಮಾಡಿದ್ದ ವರುಣ್‌ ಚಕ್ರವರ್ತಿ 42 ರನ್‌ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ಅವರು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಇತಿಹಾಸದಲ್ಲಿ ವರುಣ್‌ ಚಕ್ರವರ್ತಿ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ವರುಣ್‌ ಚಕ್ರವರ್ತಿಗೆ ಆಡಲು ಅವಕಾಶ ಸಿಗಲಿದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಹರ್ಷಿತ್‌ ರಾಣಾ ಅವರ ಸ್ಥಾನದಲ್ಲಿ ವರುಣ್‌ಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿತ್ತು. ಆ ಮೂಲಕ ಇಬ್ಬರು ಸ್ಪಿನ್‌ ಆಲ್‌ರೌಂಡರ್‌ಗಳ ಜೊತೆ ಎರಡನೇ ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ಚೆನ್ನೈ ಆಟಗಾರ ಆಡಿದ್ದರು. ಆ ಮೂಲಕ ಪೂರ್ಣ ಪ್ರಮಾಣದ ವೇಗದ ಬೌಲರ್‌ ಆಗಿ ಮೊಹಮ್ಮದ್‌ ಶಮಿ ಕಾಣಿಸಿಕೊಂಡಿದ್ದರು. ಇವರಿಗೆ ಹಾರ್ದಿಕ್‌ ಪಾಂಡ್ಯ ಸಾಥ್‌ ನೀಡಿದ್ದರು.

IND vs NZ: ವರುಣ್‌ ಸ್ಪಿನ್‌ ಮೋಡಿಗೆ ಸೋತ ಕಿವೀಸ್‌, ಸೆಮೀಸ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿ!

ವರುಣ್‌ ಚಕ್ರವರ್ತಿ ತಮ್ಮ ಸ್ಪಿನ್‌ ಮೋಡಿಯ ಮೂಲಕ ವಿಲ್‌ ಯಂಗ್‌, ಗ್ಲೆನ್‌ ಫಿಲಿಪ್ಸ್‌, ಮೈಕಲ್‌ ಬ್ರೇಸ್‌ವೆಲ್‌, ಮಿಚೆಲ್‌ ಸ್ಯಾಂಟ್ನರ್‌ ಹಾಗೂ ಮ್ಯಾಟ್‌ ಹೆನ್ರಿ ಅವರನ್ನು ಔಟ್‌ ಮಾಡಿದರು. ಭಾರತ ತಂಡ ಕಬಳಿಸಿದ 10 ವಿಕೆಟ್‌ಗಳ ಪೈಕಿ 9 ವಿಕೆಟ್‌ಗಳನ್ನು ಸ್ಪಿನ್ನರ್‌ಗಳನ್ನು ಕಬಳಿಸಿದರು. ಇದೀಗ ಭಾರತ ತಂಡ ಎ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದು, ಮಾರ್ಚ್‌ 4 ರಂದು ನಡೆಯುವ ಮೊದಲನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸಲಿದೆ.

ವಿಶೇಷ ದಾಖಲೆ ಬರೆದ ವರುಣ್‌ ಚಕ್ರವರ್ತಿ

ಪಾಕಿಸ್ತಾನ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಹಾಗೂ ರವೀಂದ್ರ ಜಡೇಜಾ ಬಳಿಕ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ 5 ವಿಕೆಟ್‌ ಸಾಧನೆ ಮಾಡಿದ ವಿಶ್ವದ ಮೂರನೇ ಸ್ಪಿನ್ನರ್‌ ಎಂಬ ದಾಖಲೆಯನ್ನು ವರುಣ್‌ ಚಕ್ರವರ್ತಿ ಬರೆದಿದ್ದಾರೆ. 50 ಓವರ್‌ಗಳ ಈ ಮಹತ್ವದ ಟೂರ್ನಿಯಲ್ಲಿ 5 ವಿಕೆಟ್‌ ಕಿತ್ತ ವಿಶ್ವದ ಅತ್ಯಂತ ಹಿರಿಯ ಸ್ಪಿನ್ನರ್‌ ಎಂಬ ಸಾಧನೆಗೆ ವರುಣ್‌ ಚಕ್ರವರ್ತಿ ಭಾಜನರಾಗಿದ್ದಾರೆ. ಇನ್ನು ಒಟ್ಟಾರೆಯಾಗಿ ಈ ಸಾಧನೆ ಮಾಡಿದ ಎರಡನೇ ಹಿರಿಯ ಆಟಗಾರ ಎಂಬ ದಾಖಲೆಗೆ ವರುಣ್‌ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ವೇಗಿ ಮೊಹಮ್ಮದ್‌ ಶಮಿ (34 ವರ್ಷ, 170 ದಿನಗಳು) ಅಗ್ರ ಸ್ಥಾನದಲ್ಲಿದ್ದಾರೆ. ಇವರು ಬಾಂಗ್ಲಾದೇಶ ವಿರುದ್ಧದ ಮೊದಲನೇ ಲೀಗ್‌ ಪಂದ್ಯದಲ್ಲಿ ಶಮಿ 5 ವಿಕೆಟ್‌ ಸಾಧನೆ ಮಾಡಿದ್ದರು.



ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ 5 ವಿಕೆಟ್‌ ಕಿತ್ತ ಅತ್ಯಂತ ಹಿರಿಯ ಸ್ಪಿನ್ನರ್‌ಗಳು

ವರುಣ್‌ ಚಕ್ರವರ್ತಿ(33 ವರ್ಷ, 185 ದಿನಗಳು): ನ್ಯೂಜಿಲೆಂಡ್‌ ವಿರುದ್ದ 42/5 (2025)

ಶಾಹಿದ್‌ ಅಫ್ರಿದಿ (24 ವರ್ಷ, 197 ದಿನಗಳು): ಕೀನ್ಯಾ ವಿರುದ್ಧ 11/5 (2024)

ರವೀಂದ್ರ ಜಡೇಜಾ (24 ವರ್ಷ, 187 ದಿನಗಳು): ವೆಸ್ಟ್‌ ಇಂಡೀಸ್‌ 33/5 (2013)

IND vs NZ: ರವೀಂದ್ರ ಜಡೇಜಾರ ಸ್ಟನಿಂಗ್‌ ಕ್ಯಾಚ್‌ ಪಡೆದ ಕೇನ್‌ ವಿಲಿಯಮ್ಸನ್‌! ವಿಡಿಯೊ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪದಾರ್ಪಣೆ ಪಂದ್ಯದಲ್ಲಿ ಅತ್ಯುತ್ತಮ ಸ್ಪಿನ್ನರ್‌ ಎಂಬ ದಾಖಲೆಯನ್ನು ವರುಣ್‌ ಚಕ್ರವರ್ತಿ ಬರೆದಿದ್ದಾರೆ. ಜಾಶ್‌ ಹೇಝಲ್‌ವುಡ್‌ (52/6 vs ನ್ಯೂಜಿಲೆಂಡ್) ಹಾಗೂ ಮೊಹಮ್ಮದ್‌ ಶಮಿ (5/53 vs ಬಾಂಗ್ಲಾದೇಶ) ಬಳಿಕ ಮೊದಲ ಪಂದ್ಯದಲ್ಲಿ 5 ವಿಕೆಟ್‌ ಕಿತ್ತ ವಿಶ್ವದ ಮೂರನೇ ಬೌಲರ್‌ ಎಂಬ ದಾಖಲೆಯನ್ನು ವರುಣ್‌ ಚಕ್ರವರ್ತಿ ಬರೆದಿದ್ದಾರೆ.