ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಪಂದ್ಯ ಗೆದ್ದರೂ ದಂಡಕ್ಕೆ ಗುರಿಯಾದ ರಾಜಸ್ಥಾನ್‌ ನಾಯಕ

Riyan Parag: ಮುಂಬೈ ಇಂಡಿಯನ್ಸ್‌ನ ಹಾರ್ದಿಕ್ ಪಾಂಡ್ಯ ನಂತರ ಈ ಋತುವಿನಲ್ಲಿ ನಿಧಾನಗತಿಯ ಓವರ್ ದರಕ್ಕಾಗಿ ದಂಡ ವಿಧಿಸಲಾದ ಎರಡನೇ ನಾಯಕ ರಿಯಾನ್ ಆಗಿದ್ದಾರೆ. ಐಪಿಎಲ್ ಈ ಋತುವಿನಲ್ಲಿ ನಿಧಾನಗತಿಯ ಓವರ್ ದರದ ಅಪರಾಧಗಳನ್ನು ಕೇವಲ ದಂಡಕ್ಕೆ ಸೀಮಿತಗೊಳಿಸಿದೆ.

ಪಂದ್ಯ ಗೆದ್ದರೂ ದಂಡಕ್ಕೆ ಗುರಿಯಾದ ರಾಜಸ್ಥಾನ್‌ ನಾಯಕ

Profile Abhilash BC Mar 31, 2025 2:38 PM

ಗುವಾಹಟಿ: ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ಮೂರನೇ ಪ್ರಯತ್ನದಲ್ಲಿ ಗೆದ್ದು ಗೆಲುವಿನ ಖಾತೆ ಆರಂಭಿಸಿದೆ. ಭಾನುವಾರ ರಾತ್ರಿ ನಡೆದಿದ್ದ ಐಪಿಎಲ್(‌IPL 2025) ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌(RR vs CSK) ತಂಡವನ್ನು 6 ರನ್‌ಗಳಿಂದ ಮಣಿಸಿ ಈ ಗೆಲುವು ಸಾಧಿಸಿತ್ತು. ಆದರೆ ಪಂದ್ಯದಲ್ಲಿ ನಿಧಾನಗತಿ ಓವರ್ ರೇಟ್‌ಗಾಗಿ ಉಸ್ತುವಾರಿ ನಾಯಕ ರಿಯಾನ್‌ ಪರಾಗ್‌(Riyan Parag)ಗೆ 12 ಲಕ್ಷ ರೂ. ದಂಡ ವಿಧಿಸಿಲಾಗಿದೆ.

'ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್‌ ಪಂದ್ಯಲ್ಲಿ ನಿಧಾನಗತಿಯ ಓವರ್ ದರವನ್ನು ಕಾಯ್ದುಕೊಂಡಿದ್ದಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್‌ಗೆ ದಂಡ ವಿಧಿಸಲಾಗಿದೆ. ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ರಾಜಸ್ಥಾನ್‌ ತಂಡದ ಈ ಋತುವಿನ ಮೊದಲ ಅಪರಾಧವಾಗಿರುವುದರಿಂದ, ನಾಯಕನಿಗೆ 12 ಲಕ್ಷ ದಂಡ ವಿಧಿಸಲಾಗಿದೆ. ಎಂದು ಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮುಂಬೈ ಇಂಡಿಯನ್ಸ್‌ನ ಹಾರ್ದಿಕ್ ಪಾಂಡ್ಯ ನಂತರ ಈ ಋತುವಿನಲ್ಲಿ ನಿಧಾನಗತಿಯ ಓವರ್ ದರಕ್ಕಾಗಿ ದಂಡ ವಿಧಿಸಲಾದ ಎರಡನೇ ನಾಯಕ ರಿಯಾನ್ ಆಗಿದ್ದಾರೆ. ಐಪಿಎಲ್ ಈ ಋತುವಿನಲ್ಲಿ ನಿಧಾನಗತಿಯ ಓವರ್ ದರದ ಅಪರಾಧಗಳನ್ನು ಕೇವಲ ದಂಡಕ್ಕೆ ಸೀಮಿತಗೊಳಿಸಿದೆ.

ಇದನ್ನೂ ಓದಿ IPL 2025: 5 ವಿಕೆಟ್‌ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್!

ಈ ಹಿಂದೆ ತಂಡವೊಂದು 3 ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್‌ ಮಾಡಿದರೆ ನಾಯಕರಿಗೆ ಒಂದು ಪಂದ್ಯ ನಿಷೇಧ ಹೇರುಲಾಗುತ್ತಿತ್ತು. ಆದರೆ ಈ ಆವೃತ್ತಿಯಿಂದ ನಿಯಮ ಬದಲಾಗಿದೆ. ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಒಂದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ತಂಡ ನಿಗದಿತ ಅವಧಿಯಲ್ಲಿ ಬೌಲಿಂಗ್‌ ಮುಗಿಸದಿದ್ದರೆ, ನಾಯಕರಿಗೆ ದಂಡ ವಿಧಿಸಿ, 1 ಡಿಮೆರಿಟ್‌ ಅಂಕ ನೀಡಲಾಗುತ್ತದೆ. ಡಿಮೆರಿಟ್‌ ಅಂಕದ ಅವಧಿ 3 ವರ್ಷ ಇರಲಿದ್ದು, ಈ ಅವಧಿಯಲ್ಲಿ 4 ಡಿಮೆರಿಟ್‌ ಅಂಕ ಪಡೆದರೆ ನಾಯಕನಿಗೆ ಪಂದ್ಯದ ಸಂಭಾವನೆಯ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ.