BBK 12: ಶರಂಪರ ಕಿತ್ತಾಡಿದ ಚೈತ್ರಾ ಕುಂದಾಪುರ; ಫೈರ್ ಬ್ರ್ಯಾಂಡ್ ಜೊತೆ ಅಶ್ವಿನಿ ಗೌಡ ಫೈಟ್, ಸುಸ್ತಾಗಿಹೋದ ಕಾಪ್ಟನ್ ರಾಶಿಕಾ ಶೆಟ್ಟಿ!
Chaitra Kundapura Vs Ashwini Gowda: ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಚೈತ್ರಾ ಕುಂದಾಪುರ ಮತ್ತು ಅಶ್ವಿನಿ ಗೌಡ ನಡುವೆ ದೊಡ್ಡ ಜಗಳವೇ ನಡೆದಿದೆ. ನಾಮಿನೇಷನ್ ಟಾಸ್ಕ್ ವೇಳೆ ಒಬ್ಬರನ್ನೊಬ್ಬರು ಪರಚಿಕೊಂಡಿದ್ದಾರೆ ಎನ್ನಲಾಗಿದ್ದು, ಅಶ್ವಿನಿ ತನ್ನ ಕೈಗೆ ಹೊಡೆದಿದ್ದಾರೆ ಎಂದು ಚೈತ್ರಾ ಆರೋಪ ಮಾಡಿದ್ದಾರೆ. ಅಂತಿಮವಾಗಿ ಏನಾಯ್ತು? ಮುಂದೆ ಓದಿ.
-
ಬಿಗ್ ಬಾಸ್ ಮನೆಯಲ್ಲಿ ಫೈರ್ ಬ್ರ್ಯಾಂಡ್ ಎಂದೇ ಫೇಮಸ್ ಆಗಿದ್ದ ಚೈತ್ರಾ ಕುಂದಾಪುರ ಪುನಃ ತಮ್ಮ ಹವಾ ತೋರಿಸುತ್ತಿದ್ದಾರೆ. ಹೌದು, ಚೈತ್ರಾ ಕುಂದಾಪುರ ಅವರು ‘ಬಿಗ್ ಬಾಸ್ ಕನ್ನಡ 12’ ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದು, ಸದ್ಯ ಅಶ್ವಿನಿ ಗೌಡ ಜೊತೆ ಫೈಟ್ ಶುರು ಮಾಡಿದ್ದಾರೆ. ಸದ್ಯ ನಾಮಿನೇಷನ್‌ಗೆ ಸಂಬಂಧಿಸಿದ ಟಾಸ್ಕ್ ನಡೆಯುತ್ತಿದ್ದು, ಚೈತ್ರಾ ಮತ್ತು ಅಶ್ವಿನಿ ಗೌಡ ಮಧ್ಯೆ ಟಾಸ್ಕ್ ನಡೆಯುತ್ತಿತ್ತು. ಇದರಲ್ಲಿ ಸೋತವರು ನಾಮಿನೇಟ್ ಆಗುತ್ತಾರೆ. ಹಾಗಾಗಿ, ಅಶ್ವಿನಿ ಮತ್ತು ಚೈತ್ರಾ ಮಾರಾಮಾರಿ ಆಗುವವರೆಗೂ ಟಾಸ್ಕ್ ಅನ್ನು ತೆಗೆದುಕೊಂಡಿದ್ದಾರೆ.
ಚೈತ್ರಾ ಮತ್ತು ಅಶ್ವಿನಿ ಗೌಡ ನಡುವೆ ಯಾವ ಲೆವೆಲ್‌ಗೆ ಪೈಪೋಟಿ ಇತ್ತು ಎಂದರೆ, ಅಶ್ವಿನಿಗೆ ಪರಚಿ, ಗಿಲ್ಲಿ, ಉಗಿದು ರಂಪಾ ಮಾಡಿದರೆ, ಚೈತ್ರಾ ಅವರ ಕೈಗೆ ಅಶ್ವಿನಿ ಪಟಪಟ ಅಂತ ಹೊಡೆದೇ ಬಿಟ್ಟಿದ್ದಾರೆ! ತಮ್ಮ ಬಟ್ಟೆಯನ್ನು ಅಶ್ವಿನಿ ಎಳೆದರು ಅಂತ ಚೈತ್ರಾ ಕೂಗಾಡಿದರೆ, ಚೈತ್ರಾ ಕುಂದಾಪುರ ನನ್ನ ಕಾಲನ್ನು ಉಗುರಿನಿಂದ ಪರಚಿದ್ರು ಎಂದು ಅಶ್ವಿನಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ, ಪರಚಿದ ಕೈಗೆ ಅಶ್ವಿನಿ ಹೊಡೆದಿದ್ದೂ ಆಗಿದೆ.
Bigg Boss Kannada 12: ಗಿಲ್ಲಿ ನಟಗೆ ಕಳಪೆ! ಎಚ್ಚರಿಕೆಯಿಂದಿರು ಅಂತ ವಾರ್ನ್ ಮಾಡಿದ್ದೇಕೆ ಚೈತ್ರಾ ಕುಂದಾಪುರ?
ನಾಮಿನೇಟ್ ಆದ ಚೈತ್ರಾ ಕುಂದಾಪುರ
ಕೊನೆಗೆ ಚೈತ್ರಾ ಅವರನ್ನು ರಾಶಿಕಾ ನಾಮಿನೇಟ್ ಮಾಡಿದ್ದಾರೆ. ಇದರಿಂದ ಕ್ರೋಧಗೊಂಡ ಚೈತ್ರಾ, ರಾಶಿಕಾಗೆ ಹಿಡಿಶಾಪ ಹಾಕಿದ್ದಾರೆ. "ಆಟ ಬದಲಾಯಿಸೋ ಅಧಿಕಾರ ಉಸ್ತುವಾರಿಗೆ ಇಲ್ಲ. ನೀನು ಯಾವ ಉಸ್ತುವಾರಿ ಹೆಸರಿನಲ್ಲಿ ನನ್ನನ್ನ ನಾಮಿನೇಟ್ ಮಾಡಿದಿಯೋ, ಅದೇ ನಿನಗೆ ಕರ್ಮ ರಿಟರ್ನ್ಸ್ ಅನ್ನುವಂತೆ ನಿನಗೆ ಹೊಡೆಯತ್ತೆ" ಎಂದು ರಾಶಿಕಾಗೆ ಚೈತ್ರಾ ಕುಂದಾಪುರ ಶಾಪ ಹಾಕಿದ್ದಾರೆ. ಅಲ್ಲದೆ, "ತಮಗೆ ಬೇಕಾದವರನ್ನ ಸೇಫ್ ಮಾಡಿಕೊಳ್ಳುವ ಇವರಿಗೆ ತಮ್ಮನ್ನ ಉಸ್ತುವಾರಿ ಅಂತ ಕರೆದುಕೊಳ್ಳಲು ಯಾವ ನೈತಿಕತೆ ಇದೆ" ಎಂದು ಆರೋಪ ಕೂಡ ಮಾಡಿದ್ದಾರೆ.
Chaithra Kundapura: ‘ಸಿಹಿ ಸುದ್ದಿ ಕೊಟ್ಟ ಚೈತ್ರಾ ಕುಂದಾಪುರ’ ಎಂದವರಿಗೆ ಚಳಿ ಬಿಡಿಸಿದ ಫೈರ್ ಬ್ರ್ಯಾಂಡ್
ರಾಶಿಕಾ ಮೇಲೆ ಚೈತ್ರಾ ಕೆಂಡ ಕೆಂಡ
ಯಾವಾಗ ರಾಶಿಕಾ ನಾಮಿನೇಟ್ ಮಾಡಿದರೋ, ರೊಚ್ಚಿಗೆದ್ದ ಚೈತ್ರಾ ಕುಂದಾಪುರ, "ನಾನು ಈಗ ಜಿದ್ದಿಗೆ ಬಿದ್ದಿದ್ದೇನೆ. ಮೋಸದ ಉಸ್ತುವಾರಿ ಮಾಡಿ, ತಮಗೆ ಬೇಕಾದವರನ್ನ ಉಳಿಸಿಕೊಳ್ಳುತ್ತಿದ್ದಾರೆ. ನಾನು ಸಾಯೋದಾದರೆ ಇದೇ ಗ್ರೌಂಡ್‌ನಲ್ಲಿ ಸಾಯ್ತೀನಿ. ಯಾಕೆಂದರೆ, ನನಗೆ ಜೀವನ ಕೊಟ್ಟಿದ್ದೇ ಈ ಮನೆ. ಸಾಯೋದಾದ್ರೆ ನಾನಿಲ್ಲೇ ಸಾಯ್ತೀನಿ" ಅಂತೆಲ್ಲಾ ಬಡಬಡಾಯಿಸಿದ್ದಾರೆ ಚೈತ್ರಾ!
ಅಲ್ಲದೆ, ಅಶ್ವಿನಿ ಗೌಡ ನನಗೆ ಹೊಡೆದರು ಎಂಬುದನ್ನು ಕೂಡ ಹೈಲೈಟ್ ಮಾಡಿರುವ ಚೈತ್ರಾ ಕುಂದಾಪುರ, "ನಂಗೆ ಹೊಡೆದಿದ್ದಾರೆ, ನಂಗೆ ನ್ಯಾಯ ಬೇಕು. ಹಲ್ಲೆ ಮಾಡಿದ್ದಕ್ಕೆ ನಮ್ಮ ಸೀಸನ್‌ನಲ್ಲಿ ಭವ್ಯಾಗೆ ಶಿಕ್ಷೆ ಆಗಿತ್ತು, ಹಿಂದೆ ಸಂಯುಕ್ತಾ ಹೆಗ್ಡೆಗೂ ಆಗಿದೆ" ಎಂದು ಚೈತ್ರಾ ಸಿಟ್ಟಿಗೆದ್ದರೆ, ಉಸ್ತುವಾರಿ ಆಗಿ ಇದನ್ನೆಲ್ಲಾ ನಿಭಾಯಿಸುವ ಹೊತ್ತಿಗೆ ರಾಶಿಕಾ ಸುಸ್ತಾಗಿಬಿಟ್ಟಿದ್ದಾರೆ. ಕೂಗಾಡಿ ಕೂಗಾಡಿ ರೋಸಿಹೋದ ಅವರು, ಚೈತ್ರಾಗೆ, "ನೀವೆಷ್ಟು ನಾಟಕ ಮಾಡ್ತೀರಾ ಅಂತ ಈ ಟಾಸ್ಕ್‌ನಲ್ಲೇ ಗೊತ್ತಾಗ್ತಿದೆ" ಎಂದು ರೇಗಿದ್ದಾರೆ. ಒಟ್ಟಾರೆ, ಈ ನಾಮಿನೇಷನ್ ಟಾಸ್ಕ್‌ನಲ್ಲಿ ಚೈತ್ರಾ ಕುಂದಾಪುರ ಅವರನ್ನು ನಿಭಾಯಿಸುವಲ್ಲಿ ಉಸ್ತುವಾರಿ ರಾಶಿಕಾ ಸುಸ್ತಾದರೆ, ಚೈತ್ರಾ ಜೊತೆ ಆಟಕ್ಕಿಳಿದ ಅಶ್ವಿನಿ ಗೌಡಗೂ ಇದೇ ಅನುಭವ ಆಗಿದೆ.