ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhargavi LL.B: ಮಹಾ ತಿರುವಿನಲ್ಲಿ ಭಾರ್ಗವಿ LL.B! ಜೆಪಿ ವಿರುದ್ಧ ನಿಂತೇ ಬಿಟ್ಟ ಅರ್ಜುನ್‌

Colors Kannada: ಕಲರ್ಸ್ ಕನ್ನಡ ದಲ್ಲಿ ಪ್ರಸಾರ ಆಗ್ತಿರುವ ಭಾರ್ಗವಿ ಎಲ್ ಎಲ್ ಬಿ ಸೀರಿಯಲ್ ರೋಚಕ ಘಟ್ಟ ತಲುಪಿದೆ. ಎಲ್ಲ ಸರಿ ಹೋಯ್ತು, ಇನ್ನೇನು ವಿಕ್ಕಿ ಅಮ್ಮ ಜೈಲು ಸೇರ್ತಾರೆ ಎನ್ನುವಾಗ ಸಂಧ್ಯಾ ಪ್ರತ್ಯಕ್ಷಳಾಗಿದ್ದಾಳೆ. ಏಕಾಏಕಿ ಕೋರ್ಟ್ ಗೆ ಬಂದು ಭಾರ್ಗವಿ ವಿರುದ್ಧವೇ ಹೇಳಿಕೆ ನೀಡಿದ್ದಾಳೆ. ಒಂದು ಕಡೆ ಭಾರ್ಗವಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾಳೆ, ಮತ್ತೊಂದು ಕಡೆ ಬೃಂದಾ ಮತ್ತು ಜೆಪಿ ಡೂಪ್ಲಿಕೇಟ್ ಸಂದ್ಯಾ ಎಂಬ ಗಾಳ ಬಳಸಿ ಭಾರ್ಗವಿಯನ್ನು ಜೈಲಿನಲ್ಲೇ ಇರುವಂತೆ ಮಾಡಲು ಸಿದ್ಧವಾಗಿದ್ದಾರೆ.

ಮಹಾ ತಿರುವಿನಲ್ಲಿ ಭಾರ್ಗವಿ LL.B! ಜೆಪಿ ವಿರುದ್ಧ ನಿಂತೇ ಬಿಟ್ಟ ಅರ್ಜುನ್‌

ಭಾರ್ಗವಿ LLB -

Yashaswi Devadiga
Yashaswi Devadiga Dec 16, 2025 7:11 PM

ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರ ಆಗ್ತಿರುವ ಭಾರ್ಗವಿ ಎಲ್ ಎಲ್ ಬಿ (Bhargavi LL.B) ಸೀರಿಯಲ್ ರೋಚಕ ಘಟ್ಟ ತಲುಪಿದೆ. ಎಲ್ಲ ಸರಿ ಹೋಯ್ತು, ಇನ್ನೇನು ವಿಕ್ಕಿ ಅಮ್ಮ ಜೈಲು ಸೇರ್ತಾರೆ ಎನ್ನುವಾಗ ಸಂಧ್ಯಾ ಪ್ರತ್ಯಕ್ಷಳಾಗಿದ್ದಾಳೆ. ಏಕಾಏಕಿ ಕೋರ್ಟ್ ಗೆ ಬಂದು ಭಾರ್ಗವಿ ವಿರುದ್ಧವೇ ಹೇಳಿಕೆ ನೀಡಿದ್ದಾಳೆ. ಒಂದು ಕಡೆ ಭಾರ್ಗವಿ (Bhargavi) ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾಳೆ, ಮತ್ತೊಂದು ಕಡೆ ಬೃಂದಾ ಮತ್ತು ಜೆಪಿ ಡೂಪ್ಲಿಕೇಟ್ ಸಂದ್ಯಾ ಎಂಬ ಗಾಳ ಬಳಸಿ ಭಾರ್ಗವಿಯನ್ನು ಜೈಲಿನಲ್ಲೇ ಇರುವಂತೆ ಮಾಡಲು ಸಿದ್ಧವಾಗಿದ್ದಾರೆ. ಆದರೆ ಈಗ ಒಂದು ಟ್ವಿಸ್ಟ್‌ ಇದೆ.

ನಿರಂತರ ಹೋರಾಟ

ವಿಕ್ಕಿ ವಿರುದ್ಧ ಹೋರಾಟ ಶುರು ಮಾಡಿ ಸಂಧ್ಯಾಳನ್ನು ಕಳೆದುಕೊಂಡಿದ್ದ ಭಾರ್ಗವಿ ಹೋರಾಟ ಬಿಟ್ಟಿರಲಿಲ್ಲ. ಜೆಪಿ ಪಾಟೀಲ್ ಹಾಗೂ ಶಕ್ತಿ ಪ್ರಸಾದ್ ವಿರುದ್ಧ ತಿರುಗಿ ನಿಂತಿದ್ದ ಭಾರ್ಗವಿಗೆ ಪತಿ ಅರ್ಜುನ್ ಕೂಡ ಸಹಾಯ ಮಾಡಿದ್ದ. ವಿಕ್ಕಿ ಸಂಧ್ಯಾ ಕೊಲೆ ಮಾಡಿಲ್ಲ ಆದ್ರೆ ವಿಕ್ಕಿ ತಾಯಿ ಕೊಲೆ ಮಾಡಿಸಿದ್ದಾಳೆ ಎಂಬುದಕ್ಕೆ ಭಾರ್ಗವಿ ಬಳಿ ಸಾಕಷ್ಟು ಸಾಕ್ಷ್ಯ ಕೂಡ ಸಿಕ್ಕಿತ್ತು.

ಇದನ್ನೂ ಓದಿ: Kannada Serial TRP: ಪಾತಾಳಕ್ಕೆ ಕುಸಿದ ಸೀತಾ ರಾಮ ಧಾರಾವಾಹಿ ಟಿಆರ್​ಪಿ: ನಂಬರ್ 1 ಧಾರಾವಾಹಿ ಯಾವುದು?

ಭಾರ್ಗವಿ ಅಂದ್ಕೊಂಡಂತೆ ವಿಕ್ಕಿ ಅಮ್ಮ ಜೈಲಿಗೆ ಹೋಗ್ಲಿಲ್ಲ.ಭಾರ್ಗವಿ ಜೊತೆ ಸದಾ ನಾನಿರ್ತೇನೆ ಅಂತ ಪ್ರಮಾಣ ಮಾಡಿದ್ದಾನೆ ಅರ್ಜುನ್. ಇದರ ಬೆನ್ನಲ್ಲೇ ಹೊಸ ಸಂಕಷ್ಟಕ್ಕೆ ಗುರಿಯಾಗಿದ್ದಳು ಭಾರ್ಗವಿ.

ಲಾಯರ್‌ಗಳು ಸಿದ್ಧವಾಗಿಲ್ಲ

ರವೀಂದ್ರ ತನ್ನ ಮಗಳನ್ನು ಬಿಡಿಸಲು ನಾನಾ ಪ್ರಯತ್ನ ಪಡುತ್ತಿದ್ದಾನೆ. ಆದರೆ ಜೆಪಿ ವಿರುದ್ಧ ನಿಲ್ಲಲು ಯಾವ ಲಾಯರ್‌ಗಳು ಸಿದ್ಧವಾಗಿಲ್ಲ . ಇಂತ ಸಂದರ್ಭದಲ್ಲಿ ವ್ಯೂಹದಲ್ಲಿ ಸಿಲುಕಿರುವ ತನ್ನ ಹೆಂಡತಿಯನ್ನು ಉಳಿಸಲು ಶ್ರೀರಾಮನಂತೆ ಅರ್ಜುನ್, ಈಗ ಲಾಯರ್‌ ಕೋಟ್‌ ಧರಿಸಿ ಬಂದಿದ್ದಾನೆ. ಲಾಯರ್ ಆಗಿ ಬಂದು ನಿಲ್ಲುವ ಸಂಚಿಕೆಗಳು ರೋಚಕ ತಿರುವಗಳಿಂದ ತುಂಬಿದೆ.
ಇದನ್ನೂ ಓದಿ: Lakshmi Nivasa Serial: ಅಂದು ಸೀರಿಯಲ್‌ ಬಗ್ಗೆ ಬೇಸರ! ಇದೀಗ ಧಾರಾವಾಹಿಯಿಂದಲೇ ಔಟ್‌, ಏನಿದು `ಲಕ್ಷ್ಮೀ ನಿವಾಸ' ವಿವಾದ?

ಈಗ ಬಂದಿದ್ದು ಸಂಧ್ಯಾ ಅಲ್ವೇ ಅಲ್ಲ. ಈ ಸತ್ಯ ಭಾರ್ಗವಿ ಹಾಗೂ ಅರ್ಜುನ್ ಗೆ ತಿಳಿದಿಲ್ಲ. ಬೃಂದಾಗೆ ಸಂಧ್ಯಾ ಹೋಲುವ ಹುಡುಗಿ ಸಿಕ್ಕಿದ್ದಾಳೆ. ಇನ್ನು ಪೊಲೀಸ್‌ ಬಳಿ ಆದಷ್ಟು ಬೇಗ ತಾನು ಹೊರಗೆ ಬರಬೇಕು ಅಂತ ಹೇಳಿದ್ದಾಳೆ. ಸಂಧ್ಯಾ ಇಷ್ಟು ದಿನ ಎಲ್ಲಿದ್ಲು, ಬಂದಿದ್ದು ಸಂಧ್ಯಾನಾ ಎಂಬೆಲ್ಲ ಪ್ರಶ್ನೆಗೆ ಭಾರ್ಗವಿ ಜೊತೆ ಅರ್ಜುನ್‌ ಸಹ ಕೈ ಜೋಡಿಸಿದ್ದಾನೆ. ಭಾರ್ಗವಿ LL.B, ಪ್ರತಿ ರಾತ್ರಿ 8:30 ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ