IPL 2025: ʻಐಪಿಎಲ್ ಸರಾಸರಿ ದಾಖಲೆʼ-ರೋಹಿತ್ ಶರ್ಮಾ ವಿರುದ್ಧ ಮೈಕಲ್ ವಾನ್ ಟೀಕೆ!
Michael Vaughan on Rohit Sharma's Form: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕಳಪೆ ಪ್ರದರ್ಶನವನ್ನು ತೋರುತ್ತಿದ್ದಾರೆ. ರೋಹಿತ್ ಶರ್ಮಾ ಅವರು ನಾಯಕನಾಗಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಆದರೆ ಆಟಗಾರನಾಗಿ ವೈಫಲ್ಯ ಅನುಭವಿಸಿದ್ದಾರೆಂದು ಮೈಕಲ್ ವಾನ್ ಟೀಕಿಸಿದ್ದಾರೆ.

ರೋಹಿತ್ ಶರ್ಮಾ ವಿರುದ್ಧ ಮೈಕಲ್ ವಾನ್ ಟೀಕೆ.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್(IPL 2025) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಅವರು ಆಡಿದ ಮೂರು ಪಂದ್ಯಗಳಿಂದ ಗಳಿಸುವುದು ಕೇವಲ 21 ರನ್‌ಗಳನ್ನು ಮಾತ್ರ. ಇನ್ನು ಇವರ 260 ಐಪಿಎಲ್ ಪಂದ್ಯಗಳಿಂದ ಒಟ್ಟಾರೆ ಸರಾಸರಿ 29.42ರಷ್ಟಿದೆ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಅವರ ಸ್ಥಾನದ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.
ಕ್ರಿಕ್‌ಬಝ್ ಜೊತೆ ಮಾತನಾಡಿದ ಮೈಕಲ್ ವಾನ್, "ರೋಹಿತ್ ಶರ್ಮಾ ಅವರು ಇದೀಗ ಬ್ಯಾಟ್ಸ್‌ಮನ್ ಮಾತ್ರ. ಹಾಗಾಗಿ ಅವರ ಅಂಕಿಅಂಶಗಳನ್ನು ಒಮ್ಮೆ ನೋಡಿ. ಅವರ ಐಪಿಎಲ್ ವೃತ್ತಿ ಜೀವನದ ಸರಾಸರಿ ತುಂಬಾ ಕಡಿಮೆ ಇದೆ. ಅವರು ಸರಾಸರಿ ಕಡೆಗೆ ಗಮನ ನೀಡಬೇಕಿದೆ. ಒಂದು ವೇಳೆ ನಿಮ್ಮ ಹೆಸರು ತೋಹಿತ್ ಶರ್ಮಾ ಅಲ್ಲ ಎಂದಾದರೆ, ಒಂದು ಹಂತದಲ್ಲಿ ನೀವು ತಂಡದಲ್ಲಿ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಏಕೆದರೆ ಅವರು ರೋಹಿತ್ ಶರ್ಮಾ ರೀತಿ ಒಳ್ಳೆಯ ಆಟಗಾರ ಆಗಲು ಸಾಧ್ಯವಾಗುವುದಿಲ್ಲ," ಎಂದು ತಿಳಿಸಿದ್ದಾರೆ.
IPL 2025 Points Table: ಕೊನೆಯ ಸ್ಥಾನಕ್ಕೆ ಕುಸಿದ ಹಾಲಿ ಚಾಂಪಿಯನ್ ಕೆಕೆಆರ್
"ಒಂದು ವೇಳೆ ಅವರು ನಾಯಕರಾಗಿದ್ದರೆ, ಅವರು ನಾಯಕನಾಗಿ ತಮ್ಮ ಜ್ಞಾನವನ್ನು ಸೇರಿಸುತ್ತಿದ್ದರು, ಅವರದೇ ಆದ ಸಂಸ್ಕೃತಿಯನ್ನು ರೂಪಿಸುತ್ತಿದ್ದರು, ಅವರಲ್ಲಿ ಅತ್ಯುತ್ತಮ ತಂತ್ರಗಾರಿಕೆ ಇದೆ. ಇದನ್ನು ನಾನು ನಾಯಕನಾಗಿದ್ದಾಗ ಭಾರತ ತಂಡದಲ್ಲಿ ಹಾಗೂ ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಲವು ವರ್ಷಗಳ ನೋಡಿದ್ದೇನೆ. ರೋಹಿತ್ ಶರ್ಮಾ ಅವರ ನಾಯಕತತ್ವದ ಅಂಕಿಅಂಶಗಳನ್ನು ನಾನು ನೋಡುವುದಿಲ್ಲ. ಆದರೆ, ಒಬ್ಬ ಬ್ಯಾಟ್ಸ್‌ಮನ್ ಆಗಿ ಅವರನ್ನು ನಾನು ಟೀಕಿಸುತ್ತೇನೆ. ಈಗ ಅವರು ನಾಯಕನಾಗಿ ಇಲ್ಲದೆ ಇರುವ ಕಾರಣ, ರನ್‌ಗಳನ್ನು ಗಳಿಸಬೇಕಾದ ಅಗತ್ಯವಿದೆ," ಎಂದು ಇಂಗ್ಲೆಂಡ್ ಮಾಜಿ ನಾಯಕ ತಿಳಿಸಿದ್ದಾರೆ.
IPL 2025: ಫಾರ್ಮ್ ಕಂಡುಕೊಳ್ಳಲು ರೋಹಿತ್ ಶರ್ಮಾಗೆ ಸಂಜಯ್ ಮಾಂಜ್ರೇಕರ್ ಉಪಯುಕ್ತ ಸಲಹೆ!
"ಅವರನ್ನು ನಾನು ಟೀಕಿಸುವುದಿಲ್ಲ ಹಾಗೂ ಅವರನ್ನು ತಂಡದಿಂದಲೂ ಕೈ ಬಿಡುವುದಿಲ್ಲ. ಅವರು ಕಮ್‌ಬ್ಯಾಕ್ ಮಾಡಬೇಕೆಂದು ಬಯಸುತ್ತೇನೆ. ಅವರು ತಮ್ಮ ಹಳೆಯ ಆಟವನ್ನು ಕಂಡುಕೊಳ್ಳಬೇಕಾಗಿದೆ. ಏಕೆಂದರೆ ಕಳೆದ ಎರಡು ಪಂದ್ಯಗಳಲ್ಲಿ ಮಾಡಿದ ತಪ್ಪುಗಳನ್ನು ಮುಂಬೈ ಇಂಡಿಯನ್ಸ್ ತಂಡ ತಿದ್ದಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಆಟಗಾರನಾಗಿ ರೋಹಿತ್ ಶರ್ಮಾ ಮಿಂಚಬೇಕಾಗಿದೆ ಹಾಗೂ ಅವರು ತಮ್ಮ ಹಳೆಯ ಲಯಕ್ಕೆ ಮರಳಬೇಕಾಗಿದೆ," ಎಂದು ಮೈಕಲ್ ವಾನ್ ಸಲಹೆ ನೀಡಿದ್ದಾರೆ.
ಕೆಕೆಆರ್ ವಿರುದ್ಧ ಮುಂಬೈಗೆ 8 ವಿಕೆಟ್ ಜಯ
ಮಾರ್ಚ್ 31 ರಂದು ನಡೆದಿದ್ದ ತನ್ನ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ 2025ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಮೊದಲ ಗೆಲುವು ಪಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಅಶ್ವಿನ್ ಕುಮಾರ್ ಮಾರಕ ಬೌಲಿಂಗ್ ದಾಳಿಗೆ ನಲುಗಿ 116 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ 12.5 ಓವರ್‌ಗಳಿಗೆ ಗೆದ್ದು ಸಂಭ್ರಮಿಸಿತ್ತು.