IPL 2025: ಫಾರ್ಮ್ ಕಂಡುಕೊಳ್ಳಲು ರೋಹಿತ್ ಶರ್ಮಾಗೆ ಸಂಜಯ್ ಮಾಂಜ್ರೇಕರ್ ಉಪಯುಕ್ತ ಸಲಹೆ!
ರೋಹಿತ್ ಶರ್ಮಾ ಅವರು ಪ್ರಸ್ತುತ ತಮ್ಮ ವೃತ್ತಿಜೀವನದಲ್ಲಿ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರು ಪ್ರತಿದಿನ ಬೆಳಿಗ್ಗೆ ತಮ್ಮ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಾಂಜ್ರೇಕರ್ ಸಲಹೆ ನೀಡಿದ್ದಾರೆ. ಶನಿವಾರ ನಡೆದಿದ್ದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಎಂಟು ರೋಹಿತ್ ಶರ್ಮಾ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.

ರೋಹಿತ್ ಶರ್ಮಾಗೆ ಉಪಯುಕ್ತ ಸಲಹೆ ನೀಡಿದ ಸಂಜಯ್ ಮಾಂಜ್ರೇಕರ್.

ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಪ್ರಸ್ತುತ ವೃತ್ತಿ ಜೀವನದ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ ಮತ್ತು ಈಗ ಅವರು ಪ್ರತಿದಿನ ಬೆಳಿಗ್ಗೆ ತಮ್ಮ ಕಡೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಾಂಜ್ರೇಕರ್ (Sanjay Manjrekar) ಸಲಹೆ ನೀಡಿದ್ದಾರೆ. ಶನಿವಾರ ಗುಜರಾತ್ ಟೈಟನ್ಸ್ (GT) ವಿರುದ್ಧದ 2025ರ ಐಪಿಎಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ ಎಂಟು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದಕ್ಕೂ ಮೊದಲು ತನ್ನ ಮೊದಲನೇ ಪಂದ್ಯದಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ನಾಲ್ಕು ಎಸೆತಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
ಸಂಜಯ್ ಮಾಂಜ್ರೇಕರ್ ಅವರು ಜಿಯೋಸ್ಟಾರ್ ಜೊತೆ ಮಾತನಾಡುತ್ತಾ, "ಈಗ ಅವರು ಮೂರು-ನಾಲ್ಕು ವರ್ಷಗಳ ಹಿಂದಿನ ರೋಹಿತ್ ಶರ್ಮಾ ಅಲ್ಲ. ಅವರು ತಮ್ಮ ವೃತ್ತಿಜೀವನದ ಕಠಿಣ ಹಂತದಲ್ಲಿದ್ದಾರೆ, ಅಲ್ಲಿ ಅವರು ಪ್ರತಿದಿನ ಬೆಳಿಗ್ಗೆ ತನ್ನನ್ನು ಹೆಚ್ಚುವರಿಯಾಗಿ ತಳ್ಳಬೇಕಾಗುತ್ತದೆ. ವಿಷಯಗಳು ಅವರ ಕೈಯಿಂದ ಜಾರಿಬೀಳುತ್ತಿರುವ ಕಾರಣ ಅವರು ಉತ್ತಮವಾಗಿ ತರಬೇತಿ ಪಡೆಯಬೇಕು. ಅವರು ಇನ್ನೂ ತಮ್ಮ ನೈಸರ್ಗಿಕ ಪ್ರತಿಭೆಯನ್ನು ಅವಲಂಬಿಸಿದ್ದಾರೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
MI vs GT: ಹಾರ್ದಿಕ್ ಪಾಂಡ್ಯ ಜತೆಗಿನ ಕಿರಿಕ್ ಬಗ್ಗೆ ಪ್ರತಿಕ್ರಿಯಿಸಿದ ಸಾಯಿ ಕಿಶೋರ್!
ರೋಹಿತ್ ಶರ್ಮಾ ಐಪಿಎಲ್ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಕೆಟ್ಟ ಫಾರ್ಮ್‌ನಲ್ಲಿದ್ದಾರೆ. 2024 ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಕೇವಲ ಒಂದು ಅರ್ಧ ಶತಕದೊಂದಿಗೆ 10.93 ರ ಸಾಧಾರಣ ಸರಾಸರಿಯಲ್ಲಿ ರನ್ ಗಳಿಸಿದ್ದರು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅವರು ಪ್ರತಿಯೊಂದು ಪಂದ್ಯದಲ್ಲೂ ಭಾರತಕ್ಕೆ ವೇಗದ ಆರಂಭವನ್ನು ನೀಡಲು ಪ್ರಯತ್ನಿಸಿದರು, ಆದರೆ ಈ ಟೂರ್ನಿಯಲ್ಲಿಯೂ ಅವರು ಕೇವಲ ಒಂದು ಅರ್ಧ ಶತಕವನ್ನು ಸಿಡಿಸಿದ್ದರು. ಅದು ಕೂಡ ಫೈನಲ್‌ನಲ್ಲಿ ಮೂಡಿ ಬಂದಿತ್ತು.
ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ಈ ಋತುವಿನಲ್ಲಿ ತಮ್ಮ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಅವರ ಬ್ಯಾಟ್ಸ್‌ಮನ್‌ಗಳು ಈಗ ಸಾಧ್ಯವಾದಷ್ಟು ಬೇಗ ಲಯಕ್ಕೆ ಬಂದು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ನಂಬಿದ್ದಾರೆ.
MI vs GT: ಮುಂಬೈ ಇಂಡಿಯನ್ಸ್‌ಗೆ ಸತತ ಎರಡನೇ ಸೋಲು, ಗುಜರಾತ್‌ಗೆ ಮೊದಲನೇ ಜಯ!
ಮುಂಬೈ ಬ್ಯಾಟಿಂಗ್ ಬಗ್ಗೆ ಮಾಂಜ್ರೇಕರ್ ಹೇಳಿಕೆ
ಈ ವರ್ಷ ಮುಂಬೈನ ಬ್ಯಾಟಿಂಗ್ ಕ್ರಮಾಂಕವು ವಿಶೇಷ, ಸ್ಥಿರ ಮತ್ತು ಮನವೊಪ್ಪಿಸುವಂತಿಲ್ಲ. ಈ ಬ್ಯಾಟಿಂಗ್ ಕ್ರಮಾಂಕದಲ್ಲಿರುವ ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವ ಪಿಚ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಇದಲ್ಲದೇ, ವಾಂಖೆಡೆಯಂತೆಯೇ ಬ್ಯಾಟ್‌ಗೆ ಚೆಂಡು ಸರಿಯಾಗಿ ಬರುತ್ತಿದ್ದರೂ, ಪ್ರತಿ ಓವರ್‌ಗೆ 12 ಅಥವಾ 13 ರನ್ ಗಳಿಸಲು ಅವರು ಹೆಣಗಾಡಬಹುದು," ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
"ಆದಾಗ್ಯೂ, ಇದು ಇನ್ನೂ ಋತುವಿನ ಆರಂಭವಾಗಿದೆ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು ಸಂಪೂರ್ಣವಾಗಿ ಬದಿಗಿಡಲು ಸಾಧ್ಯವಿಲ್ಲ," ಎಂದ ಮಾಂಜ್ರೇಕರ್, "ಅವರು 2014ರಲ್ಲಿ ಮಾಡಿದಂತೆ ಈಗಲೂ ಮರಳಿ ಬಂದು ಪ್ರಶಸ್ತಿ ಗೆಲ್ಲಬಹುದು," ಎಂದು ಹೇಳಿದ್ದಾರೆ.