ತೆಲುಗು ʻಬಿಗ್ ಬಾಸ್ 9ʼ ಶೋನಲ್ಲಿ ಫಿನಾಲೆ ತಲುಪಿದ ಸಂಜನಾ ಗಲ್ರಾನಿ; ಜೊತೆಗೆ ಮತ್ತೋರ್ವ ಕನ್ನಡತಿಗೂ ಸಿಕ್ಕಿದೆ ಚಾನ್ಸ್!
Telugu Bigg Boss 9 Finale: ತೆಲುಗು ನಟ ನಾಗಾರ್ಜುನ ನಡೆಸಿಕೊಡುತ್ತಿರುವ 'ಬಿಗ್ ಬಾಸ್ ತೆಲುಗು 9' ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಫಿನಾಲೆ ತಲುಪಿರುವುದು ವಿಶೇಷ. ಇವರ ಜೊತೆಗೆ ಕನ್ನಡದ ಮತ್ತೋರ್ವ ನಟಿ ತನುಜಾ ಪುಟ್ಟಸ್ವಾಮಿ ಕೂಡ ಟಾಪ್ 5 ರೇಸ್‌ನಲ್ಲಿದ್ದಾರೆ.
-
ನಾಗಾರ್ಜುನ ನಡೆಸಿಕೊಡುತ್ತಿರುವ ಬಿಗ್ ಬಾಸ್ ತೆಲುಗು 9 ಈಗ ಫಿನಾಲೆವರೆಗೂ ಬಂದಿದೆ. ಡಿಸೆಂಬರ್ 21ರಂದು ಅದ್ಧೂರಿಯಾಗಿ ಫಿನಾಲೆ ನಡೆಯಲಿದ್ದು, ಅದಕ್ಕೀಗ ಐವರು ಫಿನಾಲೆ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಯಾರಿಗೆ ಈ ಸಲದ 50 ಲಕ್ಷ ರೂ. ನಗದು ಬಹುಮಾನ ಸಿಗಲಿದೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಸದ್ಯ ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಕೂಡ ಈ ಫಿನಾಲೆ ರೇಸ್‌ನಲ್ಲಿ ಇರುವುದು ವಿಶೇಷ.
ಫಿನಾಲೆ ತಲುಪಿದ ಕನ್ನಡದ ಇಬ್ಬರು ಸ್ಪರ್ಧಿಗಳು
ಈ ಮೊದಲು ಕನ್ನಡ ಮೂಲದ ನಟಿ ತನುಜಾ ಪುಟ್ಟಸ್ವಾಮಿ ಅವರು ಬಿಗ್ ಬಾಸ್ ತೆಲುಗು 9ರ ಫಿನಾಲೆಯನ್ನು ತಲುಪಿದ್ದರು. ಇದೀಗ ಸಂಜನಾ ಗಲ್ರಾನಿ ಕೂಡ ಎಂಟ್ರಿ ಕೊಟ್ಟಿದ್ದು, ಐವರು ಫೈನಲಿಸ್ಟ್‌ಗಳಲ್ಲಿ ಇಬ್ಬರು ಕನ್ನಡದ ಕಲಾವಿದರೇ ಇರುವುದು ವಿಶೇಷ. ಇನ್ನುಳಿದಂತೆ ಕಲ್ಯಾಣ್ ಪಡಾಳ, ನಂದೂರಿ ಎಮ್ಯಾನುಯೆಲ್, ಉಪ್ಪಳ ಪವನ್ ಕುಮಾರ್ ಕೂಡ ಫಿನಾಲೆ ತಲುಪಿದ್ದಾರೆ. ಇದೀಗ ಐವರಲ್ಲಿ ವಿನ್ನರ್ ಯಾರಾಗಬಹುದು ಎಂಬುದೇ ಕುತೂಹಲ. ಈಗಾಗಲೇ ವೋಟಿಂಗ್ ಶುರುವಾಗಿದ್ದು, ಡಿಸೆಂಬರ್ 21ರಂದು ಅಧಿಕೃತವಾಗಿ ವಿನ್ನರ್ ಯಾರು ಎಂಬುದು ಗೊತ್ತಾಗಲಿದೆ.
Sanjana Galrani: `ʼನಾನು ಸಾಯುತ್ತೇನೆ, ನನ್ನಿಂದ ಇಲ್ಲಿರಲು ಸಾಧ್ಯವಿಲ್ಲʼ' ಎಂದು ಕಣ್ಣೀರಿಟ್ಟ ಸಂಜನಾ ಗಲ್ರಾನಿ
ಅಂದಹಾಗೆ, ಈ ಸೀಸನ್ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಯಿತು. ಫಿನಾಲೆಗೆ ಐವರು ಸೆಲೆಕ್ಟ್ ಆಗುವುದಕ್ಕೂ ಮುನ್ನ ಇಬ್ಬರು ಸ್ಪರ್ಧಿಗಳನ್ನು ಒಟ್ಟಿಗೆ ಎಲಿಮಿನೇಟ್ ಮಾಡಲಾಯಿತು. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಭರಣಿ ಶಂಕರ್ ಮತ್ತು ಸುಮನ್ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದು ಅಚ್ಚರಿಯನ್ನ ಉಂಟು ಮಾಡಿತು. ಈ ಡಬಲ್ ಎವಿಕ್ಷನ್ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಇದೀಗ ಅಂತಿಮವಾಗಿ ಐವರು ಉಳಿದುಕೊಂಡಿದ್ದು, ಯಾರಿಗೆ ಒಲಿಯಲಿಗೆ ವಿನ್ನರ್ ಟ್ರೋಫಿ ಎಂಬುದನ್ನು ಕಾದುನೋಡಬೇಕು.
Sanjana Galrani: ತೆಲುಗು ಬಿಗ್ ಬಾಸ್ನಲ್ಲಿ ಸಂಜನಾ ಗಲ್ರಾನಿ ಅಬ್ಬರ: ಮೊದಲ ವಾರವೇ ಕ್ಯಾಪ್ಟನ್ ಪಟ್ಟ?
ವೋಟಿಂಗ್ ಯಾವ ರೀತಿ ನಡೆಯಲಿದೆ?
ಯಾರು ಈ ಬಾರಿ ವಿನ್ನರ್ ಆಗಬೇಕು ಎಂಬುದನ್ನು ವೀಕ್ಷಕರೇ ನಿರ್ಧಾರ ಮಾಡಲಿದ್ದು, ಈಗಾಗಲೇ ವೋಟಿಂಗ್ ಆರಂಭವಾಗಿದ್ದು, ಡಿಸೆಂಬರ್ 14ರ ರಾತ್ರಿಯಿಂದಲೇ ವೋಟಿಂಗ್ ಶುರುವಾಗಿದೆ. ಡಿಸೆಂಬರ್ 19 ರಂದು ಮಧ್ಯರಾತ್ರಿವರೆಗೂ ವೋಟಿಂಗ್ ಲೈನ್ಸ್ ತೆರೆದೇ ಇರುತ್ತವೆ. ಅಲ್ಲಿವರೆಗೂ ವೋಟ್ ಮಾಡುವ ಅವಕಾಶ ಇರಲಿದೆ. ಒಬ್ಬರಿಗೆ ಎರಡು ಆಯ್ಕೆಗಳು ಲಭ್ಯವಿದ್ದು, ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ವೋಟಿಂಗ್ ಮಾಡಬಹುದಾಗಿದೆ. ಅದರಲ್ಲಿ ಬಿಗ್ ಬಾಸ್ ತೆಲುಗು 9 ಪುಟವನ್ನು ಹುಡುಕಿ, ನೆಚ್ಚಿನ ಸ್ಪರ್ಧಿಯ ಫೋಟೋ ಮೇಲೆ ಕ್ಲಿಕ್ ಮಾಡಿದರೆ, ವೋಟಿಂಗ್ ಮಾಡಿದಂತೆ.