ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Points Table: ಕೊನೆಯ ಸ್ಥಾನಕ್ಕೆ ಕುಸಿದ ಹಾಲಿ ಚಾಂಪಿಯನ್‌ ಕೆಕೆಆರ್‌

ಡೆಲ್ಲಿ ಕ್ಯಾಪಿಟಲ್ಸ್‌ 4 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಉಳಿದಂತೆ ಲಕ್ನೋ ಸೂಪರ್‌ ಜೈಂಟ್ಸ್‌(2) ಮತ್ತು ಗುಜರಾತ್‌ ಟೈಟಾನ್ಸ್‌(2) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಒಂದು ಪಂದ್ಯ ಆಡಿರುವ ಪಂಜಾಬ್‌ ಕಿಂಗ್ಸ್‌ 5ನೇ ಸ್ಥಾನದಲ್ಲಿದೆ. ಲಕ್ನೋ ಮತ್ತು ಪಂಜಾಬ್‌ ನಡುವೆ ಇಂದು ಪಂದ್ಯ ನಡೆಯಲಿದೆ.

ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಹಾಲಿ ಚಾಂಪಿಯನ್‌ ಕೆಕೆಆರ್‌

Profile Abhilash BC Apr 1, 2025 9:50 AM

ಮುಂಬಯಿ: ಸತತ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್‌(Mumbai Indians) ತನ್ನ ತವರಿನಲ್ಲಿ ಸೋಮವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಜಯ ಸಾಧಿಸಿ ಐಪಿಎಲ್ 2025(IPL 2025) ರಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆಯಿತು. ಈ ಗೆಲುವಿನೊಂದಿಗೆ, ಮುಂಬೈ ತಂಡ ಅಂಕಪಟ್ಟಿ(IPL 2025 Points Table)ಯಲ್ಲಿ ಆರನೇ ಸ್ಥಾನಕ್ಕೆ ಜಿಗಿದಿದೆ. ಸೋಲು ಕಂಡ ಕೆಕೆಆರ್(Kolkata Knight Riders) ಕೊನೆಯ ಸ್ಥಾನಕ್ಕೆ ಕುಸಿದಿದೆ. ಅಜೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಡೆಲ್ಲಿ ಕ್ಯಾಪಿಟಲ್ಸ್‌ 4 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಉಳಿದಂತೆ ಲಕ್ನೋ ಸೂಪರ್‌ ಜೈಂಟ್ಸ್‌(2) ಮತ್ತು ಗುಜರಾತ್‌ ಟೈಟಾನ್ಸ್‌(2) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಒಂದು ಪಂದ್ಯ ಆಡಿರುವ ಪಂಜಾಬ್‌ ಕಿಂಗ್ಸ್‌ 5ನೇ ಸ್ಥಾನದಲ್ಲಿದೆ. ಲಕ್ನೋ ಮತ್ತು ಪಂಜಾಬ್‌ ನಡುವೆ ಇಂದು ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡ ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು, ಎರಡು ಸೋಲಿನೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಪರ್ಪಲ್‌ ಕ್ಯಾಪ್‌

ಅತ್ಯಧಿಕ ವಿಕೆಟ್‌ ಟೇಕರ್‌ ಬೌಲರ್‌ಗಳಿಗೆ ನೀಡುವ ಪರ್ಪಲ್‌ ಕ್ಯಾಪ್‌ ಸದ್ಯ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಪಿನ್ನರ್‌ ನೂರ್‌ ಅಹ್ಮದ್‌ ಬಳಿ ಇದೆ. ಅವರು ಮೂರು ಪಂದ್ಯವನ್ನಾಡಿ 9 ವಿಕೆಟ್‌ ಕಿತ್ತಿದ್ದಾರೆ. ಮಿಚೆಲ್‌ ಸ್ಟಾರ್ಕ್‌ 8 ವಿಕೆಟ್‌ ಕಿತ್ತು ದ್ವಿತೀಯ ಸ್ಥಾನದಲ್ಲಿದ್ದಾರೆ. 6 ವಿಕೆಟ್‌ ಕಿತ್ತು ಜಂಟಿ ಮೂರನೇ ಸ್ಥಾನದಲ್ಲಿರುವ ಶಾರ್ದೂಲ್‌ ಠಾಕೂರ್‌ ಇಂದು ಪಂಜಾಬ್‌ ವಿರುದ್ಧ 4 ವಿಕೆಟ್‌ ಕಿತ್ತರೆ ಪರ್ಪಲ್‌ ಕ್ಯಾಪ್‌ ಇವರ ಪಾಲಾಗಲಿದೆ.

ಇದನ್ನೂ ಓದಿ IPL 2025: 8 ಸಾವಿರ ರನ್‌ ಪೂರೈಸಿ ಕೊಹ್ಲಿ, ರೋಹಿತ್‌ ಜತೆ ಎಲೈಟ್‌ ಪಟ್ಟಿ ಸೇರಿದ ಸೂರ್ಯ

ಆರೆಂಜ್‌ ಕ್ಯಾಪ್‌

ಆರೆಂಜ್‌ ಕ್ಯಾಪ್‌ ಸದ್ಯ ಲಕ್ನೋ ತಂಡದ ನಿಕೋಲಸ್‌ ಪೂರನ್‌ ಬಳಿ ಇದೆ. ಅವರು 145 ರನ್‌ ಗಳಿಸಿದ್ದಾರೆ. ಇಂದಿನ ಪಂಜಾಬ್‌ ಪಂದ್ಯದಲ್ಲಿ ಉತ್ತಮ ರನ್‌ ಕಲೆಹಾಕಿದರೆ ಈ ಕ್ಯಾಪ್‌ ಅವರ ಬಳಿಯೇ ಮುಂದುವರಿಯಲಿದೆ.

ಅಂಕಪಟ್ಟಿ ಇಲ್ಲಿದೆ