Irani Singer: ಮೊಹಮ್ಮದ್ ಪೈಗಂಬರ್‌ಗೆ ಅಪಮಾನ; ಇರಾನಿ ಗಾಯಕನಿಗೆ ಗಲ್ಲು ಶಿಕ್ಷೆ!
ಪ್ರವಾದಿ ಮುಹಮ್ಮದ್ ಅವರಿಗೆ ಅಪಮಾನ ಮಾಡಿದ ಪ್ರಕರಣದಲ್ಲಿ ಇರಾನ್‌ನ ಜನಪ್ರಿಯ ಗಾಯಕ ಅಮಿರ್ ಹೊಸೈನ್ ಮಾಘಶೋದ್ದೂಗೆ ಅಲ್ಲಿನ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಇದೇ ಪ್ರಕರಣದಲ್ಲಿ ಗಾಯಕನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಪ್ರಾಸಿಕ್ಯೂಟರ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಸುಪ್ರೀಂಕೋರ್ಟ್ ಒಪ್ಪಿತ್ತು. ಆದರೆ ಇದೇ ಅಂತಿಮ ತೀರ್ಪಲ್ಲ, ಅವರಿಗೆ ಮೇಲ್ಮನವಿ ಹೋಗಲು ಇನ್ನೂ ಅವಕಾಶವಿದೆ ಎನ್ನಲಾಗಿದೆ.
ಟೆಹ್ರಾನ್: ಹಿಜಾಬ್ ಧರಿಸದೇ ಆನ್‌ಲೈನ್ ಸಂಗೀತ ಕಾರ್ಯಕ್ರಮ ನಡೆಸಿದ ಕಾರಣಕ್ಕೆ ಗಾಯಕಿಯೊಬ್ಬಳು ಇರಾನ್‌ನಲ್ಲಿ ಕಠಿಣ ಕಾನೂನು ಕ್ರಮ ಎದುರಿಸಿದ ಬೆನ್ನಲ್ಲೇ ಇದೀಗ ಮತ್ತೊರ್ವ ಗಾಯಕನಿಗೆ ಸರ್ಕಾರ ಗಲ್ಲುಶಿಕ್ಷೆ ವಿಧಿಸಿದೆ. ಪ್ರವಾದಿ ಮೊಹಮ್ಮದ್(Prophet Muhammed) ಅವರಿಗೆ ಅಪಮಾನ ಮಾಡಿದ ಪ್ರಕರಣದಲ್ಲಿ ಇರಾನ್‌ನ ಪ್ರಸಿದ್ಧ ಗಾಯಕ(Irani Singer) ಅಮಿರ್ ಹೊಸೈನ್ ಮಾಘಶೋದ್ದೂಗೆ(Amir Hossein Maghsoudloo) ಅಲ್ಲಿನ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಅಮಿರ್ ಹೂಸೈನ್‌ಗೆ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಇದೇ ಪ್ರಕರಣದಲ್ಲಿ ಗಾಯಕನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಪ್ರಾಸಿಕ್ಯೂಟರ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಸುಪ್ರೀಂಕೋರ್ಟ್ ಒಪ್ಪಿತ್ತು. ಆದರೆ ಇದೇ ಅಂತಿಮ ತೀರ್ಪಲ್ಲ, ಅವರಿಗೆ ಮೇಲ್ಮನವಿ ಹೋಗಲು ಇನ್ನೂ ಅವಕಾಶವಿದೆ ಎನ್ನಲಾಗಿದೆ. 37 ವರ್ಷದ ಅಮಿರ್ ಇಸ್ತಾಂಬುಲ್‌ನಲ್ಲಿ 2018ರಿಂದ ತಲೆಮರೆಸಿಕೊಂಡಿದ್ದು 2023ರ ಡಿಸೆಂಬರ್‌ಲ್ಲಿ ಟರ್ಕಿ ಪೊಲೀಸರು ಇರಾನ್‌ಗೆ ಈತನನ್ನು ಹಸ್ತಾಂತರಿಸಿದ್ದರು. ಇದಲ್ಲದೆ ಈತನ ವಿರುದ್ಧ ವೇಶ್ಯಾವಾಟಿಕೆ ಉತ್ತೇಜನ ಮತ್ತು ಇರಾನ್ ಇಸ್ಲಾಮಿಕ್ ರಿಪಬ್ಲಿಕ್ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಲ್ಲಿ 10 ವರ್ಷ ಶಿಕ್ಷೆ ವಿಧಿಸಲಾಗಿದೆ.
Iran has sentenced the popular singer Amir Hossein to death for blasphemy. He talked against the Islamic dictatorship just changed that to blasphemy to hang him. pic.twitter.com/u4Ns2T5tGK
— Imtiaz Mahmood (@ImtiazMadmood) January 20, 2025
ಇರಾನಿನ ಗಾಯಕ ಅಮೀರ್ ಹೊಸೈನ್‌ನನ್ನು ಮಗ್ಸೌದ್ಲೂ, ಟಾಟಾಲೂ ಎಂತಲೂ ಕರೆಯುತ್ತಾರೆ , ಧರ್ಮ ನಿಂದನೆಯ ಆರೋಪದ ನಂತರ ಮೇಲ್ಮನವಿಯ ಮೇಲೆ ಸೋಮವಾರ(ಜ.21) ಗಾಯಕನಿಗೆ ಮರಣದಂಡನೆ ವಿಧಿಸಲಾಗಿದೆ. 37 ವರ್ಷದ ಅಮೀರ್‌ನನ್ನು ಡಿಸೆಂಬರ್ 2023 ರಲ್ಲಿ ಟರ್ಕಿಯ ಅಧಿಕಾರಿಗಳು ಹಸ್ತಾಂತರಿಸಿದ ನಂತರ ಇರಾನ್‌ನಲ್ಲಿ ಬಂಧನದಲ್ಲಿಡಲಾಗಿದೆ. ಇದಕ್ಕೂ ಮೊದಲು, ಅವರು 2018 ರಿಂದ ಇಸ್ತಾನ್‌ಬುಲ್‌ನಲ್ಲಿ ವಾಸಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಇರಾನ್ ಗಾಯಕಿ ವಿರುದ್ಧ ಕಾನೂನು ಕ್ರಮ
ಮಹಿಳೆಯರಿಗೆ ಇರಾನ್‌ಲ್ಲಿ(Iran) ಕಟ್ಟುನಿಟ್ಟಾದ ಡ್ರೆಸ್‌ಕೋಡ್ ಇದೆ. ಆದರೆ ಅದನ್ನು ಉಲ್ಲಂಘಿಸಿ ಹಿಜಾಬ್ ಧರಿಸದೆ ಆನ್‌ಲೈನ್ ಕನ್ಸರ್ಟ್‌ನಲ್ಲಿ ಪ್ರದರ್ಶನ ನೀಡಿದ ಇರಾನ್ ಗಾಯಕಿ ಪರಸ್ಪೂ ಅಹ್ಮದಿ ಅವರು ಇತ್ತೀಚೆಗೆ ಕಾನೂನು ಕ್ರಮವನ್ನು ಎದುರಿಸಿದ್ದರು. ಯೂಟ್ಯೂಬ್‌ನಲ್ಲಿ ಪ್ರಸಾರವಾದ ಸಂಗೀತ ಕಛೇರಿಯಲ್ಲಿ ಭಾಗವಹಿಸಿದ್ದ ಅಹ್ಮದಿ ಮತ್ತು ಅವರ ಟೀಂ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇರಾನ್ ನ್ಯಾಯಾಂಗವು ಘೋಷಿಸಿತ್ತು.
ಈ ಸುದ್ದಿಯನ್ನೂ ಓದಿ:viral video: ಮಹಾ ಕುಂಭಮೇಳದಲ್ಲೂ ಆರ್‌ಸಿಬಿಯದ್ದೇ ಹವಾ; ಕಪ್ ಗೆಲ್ಲಲು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಅಭಿಮಾನಿ