Bigg Boss Kannada 12: ಮದುವೆ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ ಗಿಲ್ಲಿ! ಕಾವು ಉತ್ತರ ಏನು?
Gilli Nata Kavya: ಬಿಗ್ ಬಾಸ್ ಮನೆಯಲ್ಲೀಗ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಗಿಲ್ಲಿ ಹಾಗೂ ಕಾವ್ಯ ಮನೆಯವರೂ ಎಂಟ್ರಿ ಕೊಟ್ಟಿದ್ದಾಗಿದೆ. ಬಿಗ್ ಬಾಸ್ ಶುರುವಾದಾಗಿನಿಂದಲೂ ಗಿಲ್ಲಿ ಹಾಗೂ ಕಾವ್ಯ ಜೋಡಿ ಪ್ರಮುಖ ಹೈಲೈಟ್. ಜಂಟಿ ಆಗಿ ಬಂದಿದ್ದ ಜೋಡಿ ಸಖತ್ ವೀಕ್ಷಕರಿಗೆ ಮನರಂಜನೆ ನೀಡಿದೆ.ಇದೀಗ ಗಿಲ್ಲಿ ಮದುವೆ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲೀಗ (Bigg Boss Kannada 12) ಫ್ಯಾಮಿಲಿ ವೀಕ್ (Family Week) ನಡೆಯುತ್ತಿದೆ. ಗಿಲ್ಲಿ ಹಾಗೂ ಕಾವ್ಯ ಮನೆಯವರೂ ಎಂಟ್ರಿ ಕೊಟ್ಟಿದ್ದಾಗಿದೆ. ಬಿಗ್ ಬಾಸ್ ಶುರುವಾದಾಗಿನಿಂದಲೂ ಗಿಲ್ಲಿ ಹಾಗೂ ಕಾವ್ಯ (Gilli Kavya) ಜೋಡಿ ಪ್ರಮುಖ ಹೈಲೈಟ್. ಜಂಟಿ ಆಗಿ ಬಂದಿದ್ದ ಜೋಡಿ ಸಖತ್ ವೀಕ್ಷಕರಿಗೆ ಮನರಂಜನೆ ನೀಡಿದೆ.ಇದೀಗ ಗಿಲ್ಲಿ ಮದುವೆ (Marriage) ಬಗ್ಗೆ ಮಾತನಾಡಿದ್ದಾರೆ. ನೇರವಾಗಿ ಕಾವ್ಯ ಕುರಿತು ಮದುವೆ ಬಗ್ಗೆ ಎಲ್ಲರ ಎದುರು ಮಾತನಾಡಿದ್ದಾರೆ.
ಮದುವೆ ಬಗ್ಗೆ ಆಸೆ
ಮನೆಯ ಸ್ಪರ್ಧಿಗಳ ಪೋಷಕರು ಒಬ್ಬಬ್ಬರಾಗಿಯೇ ಬಂದು ಹೋಗುತ್ತಿದ್ದಾರೆ. ಬಹುತೇಕ ಎಲ್ಲರೂ ಗಿಲ್ಲಿ ಅವರನ್ನೇ ಇಷ್ಟ ಪಡುತ್ತಿದ್ದಾರೆ. ಮದುವೆ ಬಗ್ಗೆ ಆಸೆ ಚಿಗುರಿದಂತಿದೆ. ನೇರವಾಗಿ ಅವರು ಮದುವೆ ಬಗ್ಗೆ ಎಲ್ಲರ ಎದುರು ಮಾತನಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯೋರ ಬಗ್ಗೆ ಕಿಚ್ಚ ಹೇಳಿದ್ದೇನು?
ಕಾವ್ಯಾ ಶೈವ ಅವರ ಪೋಷಕರು ಬಂದಾಗ ಬೇರೆಯವರೆಲ್ಲ ಏನು ಮಾತನಾಡಬೇಕು ಎಂಬುದನ್ನು ಗಿಲ್ಲಿ ಮೊದಲೇ ಪ್ಲ್ಯಾನ್ ಮಾಡಿದ್ದಾರೆ. ಗಿಲ್ಲಿ ಯಾವ ಥರದ ಹುಡುಗ ಅಂತ ಕೇಳಿ. ಕಾವ್ಯಾಗೆ ಮದುವೆ ಮಾಡಬೇಕು ಅಂತ ಇದ್ದೀರಂತೆ ಹೌದಾ ಅಂತ ಕೇಳಿ ಎಂದು ಪ್ಲ್ಯಾನ್ ಮಾಡಿದ್ದಾರೆ. ನಿಶ್ಚಿತಾರ್ಥಕ್ಕೆ ಯಾರು ಬರುತ್ತಾರೋ ? ಮದುವೆ ಮಾತುಕಥೆಗೆ ಯಾರು ಬರುತ್ತಾರೋ ಅಂತ ಕಾವ್ಯ ಅವರನ್ನೂ ರೇಗಿಸಿದ್ದಾರೆ.
ಇದಾದ ನಂತರ ರಾಖಿ ತೆಗೆದುಕೊಂಡು ಬರಬಹುದು. ರಕ್ಷಾ ಬಂಧನ ಆಗಬಹುದು ಎಂದು ಕಾವ್ಯಾ ಹೇಳಿದರು. ಅವರಿಬ್ಬರ ತಮಾಷೆ ಮಾತುಗಳು ವೈರಲ್ ಆಗುತ್ತಿದೆ.
ಎಲ್ಲರಿಗೂ ಗಿಲ್ಲಿಯೇ ಇಷ್ಟ!
ಇನ್ನು ಮನೆಯಲ್ಲಿ ಯಾರೇ ಎಂಟ್ರಿ ಕೊಟ್ಟರು ಗಿಲ್ಲಿ ಇಷ್ಟ ಅಂದೇ ಹೇಳುತ್ತಿದ್ದಾರೆ. ಈ ವಾರ ಬಿಗ್ ಬಾಸ್ ಮನೆಗೆ ಬರುವ ಕುಟುಂಬದವರು ಮಾಡುವ ಆಯ್ಕೆಯ ಆಧಾರದ ಮೇಲೆ ಕ್ಯಾಪ್ಟನ್ ಯಾರು ಎಂಬುದು ನಿರ್ಧಾರ ಆಗುತ್ತದೆ. ಈಗಾಗಲೇ ಗಿಲ್ಲಿಗೆ ನಾಲ್ಕು ವೋಟ್ ಸಿಕ್ಕಿದೆ. ಇನ್ನು ಗಿಲ್ಲಿ ಅಮ್ಮ ಕೂಡ , ಕಾವ್ಯಗೆ ಗಿಲ್ಲಿಯನ್ನು ಎಂದಿಗೂ ಬಿಟ್ಟುಕೊಡಬೇಡ ಎಂದಿದ್ದಾರೆ.
ಇದಕ್ಕೂ ಮುನ್ನ ಅಶ್ವಿನಿ ಗೌಡ ಅವರ ತಾಯಿ ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು. ತಮ್ಮ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಅವರಿಗೆ, "ಅತ್ತೆ" ಎಂದು ಕರೆದಿದ್ದಾರೆ ಗಿಲ್ಲಿ ನಟ. "ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳಬೇಡಿ, ಚೆನ್ನಾಗಿರಿ" ಎಂದು ಗಿಲ್ಲಿಗೆ ಅಶ್ವಿನಿ ತಾಯಿ ಹೇಳಿದರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಬಗ್ಗೆ ಅತ್ತೆ ಮಗಳ ಕಂಪ್ಲೆಂಟು! ಅಶ್ವಿನಿ-ಗಿಲ್ಲಿ ಕಾಮಿಡಿಗೆ ಮನೆಮಂದಿ ನಕ್ಕೂ ನಕ್ಕೂ ಸುಸ್ತು
ಆಗ ಅಶ್ವಿನಿ, "ವಿಗ್ ಹಾಕಿಕೊಳ್ಳುತ್ತೀರಿ, ಹಲ್ಲು ಸೆಟ್.. ಅಂತೆಲ್ಲ ರೆಗಿಸ್ತಾನೆ" ಎಂದು ಅಮ್ಮನ ಬಳಿ ಗಿಲ್ಲಿ ಬಗ್ಗೆ ದೂರು ಹೇಳಿದ್ದಾರೆ. ಆಗ ಗಿಲ್ಲಿ, "ಅತ್ತೆ ಮಗಳಿಗೆ ಇಷ್ಟೂ ಹೇಳದಿದ್ರೆ ಹೇಗೆ" ಎಂದು ಕೌಂಟರ್ ಕೊಟ್ಟಿದ್ದಾರೆ. ಕೊನೆಗೆ ಅಶ್ವಿನಿ ಗೌಡ ಅವರ ತಾಯಿಗೆ "ಅತ್ತೆ.. ಅತ್ತೆ.." ಎಂದು ಕರೆದಿದ್ದಾರೆ ಗಿಲ್ಲಿ ನಟ.