BBK 12: ಎಲ್ಲರಿಗೂ ಫೇವರಿಟ್ ಆದ ಗಿಲ್ಲಿ ನಟ; ಮನೆಗೆ ಬಂದ ಕುಟುಂಬ ಸದಸ್ಯರಿಂದ ಮಾತಿನ ಮಲ್ಲನಿಗೆ ಮೆಚ್ಚುಗೆ
Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12ರ ಗಿಲ್ಲಿ ನಟ ಈಗ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಫ್ಯಾಮಿಲಿ ವೀಕ್‌ನಲ್ಲಿ ಮನೆಗೆ ಬಂದ ಸ್ಪರ್ಧಿಗಳ ಪೋಷಕರು ಗಿಲ್ಲಿಯ ಕಾಮಿಡಿ ಮತ್ತು ನೈಜ ಆಟಕ್ಕೆ ಮನಸೋತಿದ್ದಾರೆ. ಈ ವಾರದ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಅಶ್ವಿನಿ, ರಕ್ಷಿತಾ ಮತ್ತು ಧನುಷ್ ಅವರ ಕುಟುಂಬದವರು ಗಿಲ್ಲಿಯನ್ನೇ ಆಯ್ಕೆ ಮಾಡಿದ್ದಾರೆ. ಕಾತರರಾಗಿದ್ದಾರೆ.
-
ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ಸದಸ್ಯ ರೌಂಡ್ ನಡೆಯುತ್ತಿದೆ. ಸ್ಪರ್ಧಿಗಳ ಫ್ಯಾಮಿಲಿ ಮೆಂಬರ್ಸ್ ಮನೆಯೊಳಗೆ ಎಂಟ್ರಿ ಕೊಟ್ಟು ಸರ್ಪ್ರೈಸ್ ನೀಡುತ್ತಿದ್ದಾರೆ. ವಿಶೇಷವೆಂದರೆ, ಬೇರೆ ಸ್ಪರ್ಧಿಗಳ ಕುಟುಂಬದವರಿಗೂ ಗಿಲ್ಲಿ ನಟ ಎಂದರೆ ಅಚ್ಚುಮೆಚ್ಚು. ಅಂದಹಾಗೆ, ಮನೆಯ ಮುಂದಿನ ಕ್ಯಾಪ್ಟನ್ ಯಾರಾಗಬೇಕು ಎಂಬ ನಿರ್ಧಾರ ಕೂಡ ಈ ಕುಟುಂಬ ಸದಸ್ಯರ ಆಯ್ಕೆಯ ಮೇಲಿದೆ. ಹಾಗಾಗಿ, ಬಹುತೇಕ ಆಯ್ಕೆ ಗಿಲ್ಲಿ ನಟ ಅವರೇ ಆಗಿದ್ದಾರೆ.
ಗಿಲ್ಲಿ ಫೋಟೋವನ್ನು ಸೆಲೆಕ್ಟ್ ಮಾಡಿದ ಸದಸ್ಯರು
ಅಶ್ವಿನಿ ಗೌಡ ಅವರ ತಾಯಿ ಗಿಲ್ಲಿಯನ್ನ ಸೆಲೆಕ್ಟ್ ಮಾಡಿ, "ಗಿಲ್ಲಿ ಈ ಮನೆಯ ಕ್ಯಾಪ್ಟನ್ ಆಗಿ ಏನೆಲ್ಲಾ ಕೆಲಸ ಮಾಡಿಸುತ್ತಾನೆ? ಹೇಗೆಲ್ಲಾ ಮ್ಯಾನೇಜ್ ಮಾಡುತ್ತಾನೆ ಎಂಬುದನ್ನು ನೋಡಬೇಕು, ಅದಕ್ಕಾಗಿ ಗಿಲ್ಲಿಯನ್ನು ಸೆಲೆಕ್ಟ್ ಮಾಡುತ್ತೇನೆ" ಎಂದಿದ್ದಾರೆ. ಹಾಗೆಯೇ, ರಕ್ಷಿತಾ ಅವರ ತಾಯಿ ಕೂಡ ಗಿಲ್ಲಿಗೆ ತಮ್ಮ ಮತವನ್ನು ಹಾಕಿದ್ದಾರೆ. ಧನುಷ್ ತಾಯಿ ವೋಟ್ ಕೂಡ ಗಿಲ್ಲಿಗೆ ಸಿಕ್ಕಿದೆ. "ನನಗೆ ಅಶ್ವಿನಿ ಗೌಡ ಕೂಡ ಇಷ್ಟ. ಆದರೆ, ಗಿಲ್ಲಿ ಸ್ವಲ್ಪ ಜಾಸ್ತಿನೇ ಇಷ್ಟ. ಅವರ ಕಾಮಿಡಿ ನನಗೆ ತುಂಬಾ ಇಷ್ಟ. ಗಿಲ್ಲಿ ಕ್ಯಾಪ್ಟನ್ ಆಗಲಿ” ಎಂದಿದ್ದಾರೆ ಧನುಷ್ ತಾಯಿ.
ಧ್ರುವಂತ್ ಅವರ ಕುಟುಂಬದವರು ಕೂಡ ಗಿಲ್ಲಿ ಫೋಟೋವನ್ನ ಆಯ್ಕೆ ಮಾಡಿ, ಬೋರ್ಡ್‌ನಲ್ಲಿ ಇರಿಸಿದ್ದಾರೆ. ಇಲ್ಲಿ ಹೆಚ್ಚು ಗಿಲ್ಲಿ ಅವರ ಫೋಟೋಗಳೇ ಇರುವುದರಿಂದ, ಅವರೇ ಕ್ಯಾಪ್ಟನ್ ಆಗುವ ಸಾಧ್ಯತೆ ಇದೆ.
ಕುಟುಂಬ ಸದಸ್ಯರು, ತಮ್ಮವರನ್ನು ಬಿಟ್ಟು ಬೇರೆ ಸದಸ್ಯರನ್ನು ಆಯ್ಕೆ ಮಾಡಬೇಕಿತ್ತು. ಹಾಗಾಗಿ, ಬಹುತೇಕರ ಆಯ್ಕೆ ಗಿಲ್ಲಿ ಆಗಿದ್ದರು. ರಾಶಿಕಾ ಶೆಟ್ಟಿ ಸಹೋದರ, ಸೂರಜ್ ಅವರ ಹೆಸರನ್ನ ಘೋಷಿಸಿದರು. "ನಾನು ಸೂರಜ್ ಅವರನ್ನ ಕ್ಯಾಪ್ಟನ್ಸಿ ರೇಸ್‌ಗೆ ಆಯ್ಕೆ ಮಾಡುತ್ತೇನೆ. ಎಷ್ಟೆಲ್ಲಾ ಎಫರ್ಟ್ ಹಾಕಿದ್ದರೂ, ಈವರೆಗೂ ಅವರಿಗೆ ಕ್ಯಾಪ್ಟನ್ ಪಟ್ಟ ಸಿಕ್ಕಿಲ್ಲ. ಹಾಗಾಗಿ, ಈ ಬಾರಿ ಅವರು ಕ್ಯಾಪ್ಟನ್ ಆಗಬೇಕು" ಎಂದರೆ, ಅಶ್ವಿನಿ ಗೌಡ ಅವರನ್ನು ಸೂರಜ್ ಸಹೋದರಿ ಆಯ್ಕೆ ಮಾಡಿದ್ದಾರೆ. ಸದ್ಯ ಕ್ಯಾಪ್ಟನ್ ರೇಸ್‌ನಲ್ಲಿ ಗಿಲ್ಲಿ ನಟ ಮೊದಲ ಸ್ಥಾನದಲ್ಲಿದ್ದು, ಬಿಗ್ ಬಾಸ್ ಮನೆಯ ಮುಂದಿನ ಕ್ಯಾಪ್ಟನ್ ಗಿಲ್ಲಿ ನಟ ಎನ್ನಲಾಗುತ್ತಿದೆ.
Bigg Boss Kannada 12: ಬಿಗ್ ಬಾಸ್ ಜಂಟಿ ಕ್ಯಾಪ್ಟನ್ ಆದ ಜೋಡಿ ಇದೇ! ಗಿಲ್ಲಿ-ಕಾವ್ಯಗೆ ಹೀನಾಯ ಸೋಲು
ಸಾಮಾನ್ಯವಾಗಿ ಕ್ಯಾಪ್ಟನ್ಸಿ ರೇಸ್ ಮೂಲಕ ಕ್ಯಾಪ್ಟನ್ ಆಯ್ಕೆ ಮಾಡಲಾಗುತ್ತದೆ. ಈವರೆಗೂ ಈ ರೀತಿ ಟಾಸ್ಕ್ ಆಡಿ ಗಿಲ್ಲಿ ಕ್ಯಾಪ್ಟನ್ ಆಗಲು ಸಾಧ್ಯವಾಗಿಲ್ಲ. ಇದೀಗ ಕಟುಂಬ ಸದಸ್ಯರ ಕಡೆಯಿಂದಾದರೂ ಕ್ಯಾಪ್ಟನ್ ಆಗುತ್ತಾರಾ? ಕಾದುನೋಡಬೇಕು. ಈ ಮಾತನ್ನು ರಘು ಕೂಡ ಹೇಳಿದ್ದಾರೆ.