#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Israel Hamas : ಕೊನೆಗೂ ತಾಯ್ನಾಡಿಗೆ ಮರಳಿದ ಇಸ್ರೇಲ್‌ ಒತ್ತೆಯಾಳುಗಳು , ಭಾವುಕ ವಿಡಿಯೋ ವೈರಲ್‌

ಕೊನೆಗೂ ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಯುದ್ಧಕ್ಕೆ ತೆರೆ ಬಿದ್ದಿದೆ. ಉಭಯ ದೇಶಗಳು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದೀಗ ನಾಲ್ವರು ಮಹಿಳೆಯರು ತಾಯ್ನಾಡಿಗೆ ಮರಳಿದ್ದಾರೆ.

ಬಿಡುಗಡೆಯಾಗಿ ಕುಟುಂಬಸ್ಥರನ್ನು ಭೇಟಿಯಾದ  ಇಸ್ರೇಲ್‌ನ  ಒತ್ತೆಯಾಳುಗಳು, ಭಾವುಕ ಕ್ಷಣ ವೈರಲ್‌

Viral Video Of Israel

Profile Vishakha Bhat Jan 26, 2025 12:34 PM

ಜೆರುಸೆಲಂ: ನಿರಂತರವಾಗಿ ನಡೆಯುತ್ತಿದ್ದ ಇಸ್ರೇಲ್‌ ಹಾಗೂ ಹಮಾಸ್‌ (Israel- Hamas) ಯುದ್ಧ ಕೊನೆಗೂ ತೆರೆಕಂಡಿದೆ. ಉಭಯ ದೇಶಗಳು ಕದನವಿರಾಮಕ್ಕೆ ಅಸ್ತು ಎಂದು ಹೇಳಿವೆ. ಸದ್ಯ ಒಪ್ಪಂದದ ಪ್ರಕಾರ ಎರಡೂ ದೇಶಗಳು ಒತ್ತೆಯಾಳುಗಳಾಗಿ ಇರಿಸಿದ್ದ ಜನರನ್ನು ಬಿಡುಗಡೆ ಮಾಡುತ್ತಿವೆ. ಶನಿವಾರ ಹಮಾಸ್‌ ನಾಲ್ವರು ಇಸ್ರೇಲಿ ಮಹಿಳಾ ಯೋಧರನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ ಅವರು ತಮ್ಮ ಕುಟುಂಬದವರನ್ನು ಭೇಟಿಯಾದ ಭಾವುಕ ಕ್ಷಣ ವೈರಲ್‌ ಆಗಿದೆ. (Viral Video)

ಕರೀನಾ ಅರಿವ್, ಡೇನಿಯೆಲ್ಲಾ ಗಿಲ್ಬೋವಾ ಮತ್ತು ನಾಮಾ ಲೆವಿ, ಹಾಗೂ ಲಿರಿ ಅಲ್ಬಾಗ್ ಎಂಬುವವರನ್ನು ಹಮಾಸ್‌ ಬಿಡುಗಡೆ ಮಾಡಿದೆ. ಬಿಡುಗಡೆಯ ನಂತರ ಅವರು ನಗುತ್ತಾ ಕೈ ಬೀಸುತ್ತಾ ಗಡಿಗೆ ಬಂದಿದ್ದಾರೆ. ನಂತರ ಅವರನ್ನು ಇಸ್ರೇಲ್‌ ಸೇನೆ ಅವರನ್ನು ಸ್ವಾಗತಿಸಿದೆ.



2023 ರ ಅಕ್ಟೋಬರ್‌ 7 ರಂದು ಹಮಾಸ್‌ ಇಸ್ರೇಲ್‌ನ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ನಡೆಸಿ ಹಲವಾರು ಜನ ಹಾಗೂ ಸೇನಾ ಸಿಬ್ಬಂದಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿತ್ತು. ಇದೀಗ 477 ದಿನಗಳ ನಂತರ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದಂತಹ ಮಹಿಳೆಯರು ತಮ್ಮ ಮನೆಯವನ್ನು ಭೇಟಿಯಾಗಿದ್ದಾರೆ. ಕುಟುಂಬಸ್ಥರನ್ನು ನೋಡುತ್ತಿದ್ದಂತೆ ಆನಂದಭಾಷ್ಪ ಸುರಿಸಿದ್ದಾರೆ.



ಈ ಬಗ್ಗೆ ಮಾತನಾಡಿದ ಡೇನಿಯೆಲ್ಲಾಳ 15 ವರ್ಷದ ಸಹೋದರಿ ನಮ್ಮ ಕುಟುಂಬವು ಎಂದಿಗೂ ಭರವಸೆಯನ್ನು ಕಳೆದುಕೊಂಡಿರಲಿಲ್ಲ. ನಮಗೆ ನಂಬಿಕೆ ಇತ್ತು ಆಕೆ ಬಂದೇ ಬರುತ್ತದೆ ಎಂದು ಇದೀಗ ನಮಗೆ ಅಪಾರ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಒತ್ತೆಯಾಳು ಲಿರಿ ವಿಡಿಯೋವೊಂದರಲ್ಲಿ ಮಾತನಾಡಿ ಬಿಡುಗಡೆಯಾಗಿರುವುದು ಖುಷಿ ತಂದಿದೆ. ನಮ್ಮ ಕುಟುಂಬ ಹಾಗೂ ಇಸ್ರೇಲ್‌ ಸೇನೆ ನಿರಂತರವಾಗಿ ಬೆಂಬಲ ಸೂಚಿಸಿದ್ದಾರೆ. ನಾವು ತುಂಬಾ ಕೃತಜ್ಞರಾಗಿರುತ್ತೇವೆ. ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಅವರು ಹೇಳಿದರು.



ಈ ಸುದ್ದಿಯನ್ನೂ ಓದಿ : Gaza Ceasefire Deal: ಗಾಜಾ ಕದನ ವಿರಾಮ; 200 ಪ್ಯಾಲಸ್ತೀನ್‌ ಖೈದಿಗಳನ್ನು ಬಿಡುಗಡೆಗೊಳಿಸಿದ ಇಸ್ರೇಲ್‌

ಬಿಡುಗಡೆಯಾದ ಒತ್ತೆಯಾಳುಗಳ ಕುಟುಂಬಗಳ ಹೊರತಾಗಿ ಇನ್ನೂ ಸಾವಿರಾರು ಜನರು ಟೆಲ್‌ ಅವಿವ್‌ನಲ್ಲಿ ಸೇರಿದ್ದರು. ಮತ್ತೊಂದೆಡೆ ಪ್ಯಾಲಿಸ್ತೀನ್‌ನ ಯುದ್ಧ ಕೈದಿಗಳಿರುವ ಬಸ್ಸು ಗಾಜಾ ತಲುಪುತ್ತಿದಂತೆ ಸಂಭ್ರಮಾಚರಣೆ ಜೋರಾಗಿತ್ತು.