ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಪುಷ್ಪʼ ಬಳಿಕ ಮತ್ತೆ ಅಲ್ಲು ಅರ್ಜುನ್‌ ಜೊತೆಯಾದ ರಶ್ಮಿಕಾ ಮಂದಣ್ಣ; ಈ ಬಾರಿ ಫ್ಯಾನ್ಸ್‌ಗೆ ಶಾಕ್‌ ಕೊಡ್ತಾರೆ ʻನ್ಯಾಷನಲ್‌ ಕ್ರಶ್‌ʼ

Allu Arjun Atlee Movie Update: ರಶ್ಮಿಕಾ ಮಂದಣ್ಣ ಅವರು ಮುಂಬೈನಲ್ಲಿ ನಡೆಯುತ್ತಿರುವ ಅಲ್ಲು ಅರ್ಜುನ್‌ ಮತ್ತು ಅಟ್ಲಿ ಅವರ ಹೊಸ ಸಿನಿಮಾದ ಶೂಟಿಂಗ್ ಸೆಟ್‌ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

AA22xA6: ಅಲ್ಲು ಅರ್ಜುನ್ - ಅಟ್ಲಿ ಅಖಾಡಕ್ಕೆ ರಶ್ಮಿಕಾ ಮಂದಣ್ಣ ಎಂಟ್ರಿ!

-

Avinash GR
Avinash GR Feb 5, 2026 12:08 PM

ಬಿಗ್‌ ಬಜೆಟ್‌ ಸಿನಿಮಾಕ್ಕಾಗಿ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲಿ ಒಂದಾಗಿರುವುದು ಗೊತ್ತೇ ಇದೆ. ಸದ್ಯ 'AA22xA6' ಎಂಬ ವರ್ಕಿಂಗ್ ಟೈಟಲ್‌ನೊಂದಿಗೆ ಸೆಟ್ಟೇರಿರುವ ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸೈನ್ಸ್ ಫಿಕ್ಷನ್ ಅಡ್ವೆಂಚರಸ್ ಸಿನಿಮಾವಾಗಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ಇದೀಗ ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಎಂಟ್ರಿ ಕೊಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಪುಷ್ಪ ಸಿನಿಮಾದಲ್ಲಿ ಒಟ್ಟಿಗೆ ನಟಿಸಿ ಬ್ಲಾಕ್‌ ಬಸ್ಟರ್‌ ಜೋಡಿ ಎನಿಸಿಕೊಂಡಿದ್ದಾರೆ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ.

ಸಿನಿಮಾದ ಶೂಟಿಂಗ್‌ನಲ್ಲಿ ರಶ್ಮಿಕಾ ಭಾಗಿ

ಅಲ್ಲು ಅರ್ಜುನ್ ಅವರ ಈ ಹೊಸ ಸಿನಿಮಾದಲ್ಲಿ ಸ್ಟಾರ್ ಕಲಾವಿದರು ಮತ್ತು ಅತ್ಯುತ್ತಮ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಅವರ ಜೊತೆಗೆ ಇನ್ನೂ ಮೂವರು ನಾಯಕಿಯರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹಲವು ದಿನಗಳಿಂದ ಪ್ರಚಾರ ನಡೆಯುತ್ತಿದೆ. ಜಾನ್ವಿ ಕಪೂರ್, ಮೃಣಾಲ್ ಠಾಕೂರ್ ಮತ್ತು ರಶ್ಮಿಕಾ ಮಂದಣ್ಣ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿದ್ದವು. ಆದರೆ ಇದೀಗ ರಶ್ಮಿಕಾ ಈ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

Rashmika-Vijay Wedding: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಜೋರು? ವಿಡಿಯೋದಲ್ಲಿದೆ ಮಹಾಸತ್ಯ!

ಮುಂಬೈನಲ್ಲಿ ನಡೆಯುತ್ತಿರುವ ಶೂಟಿಂಗ್

ರಶ್ಮಿಕಾ ಮಂದಣ್ಣ ಅವರು ಮಂಗಳವಾರ (ಫೆ.3) ಅಲ್ಲು ಅರ್ಜುನ್‌ ಅವರ ಈ ಹೊಸ ಸಿನಿಮಾದ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಸದ್ಯ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲು ಅರ್ಜುನ್, ಜಾನ್ವಿ ಕಪೂರ್ ಮತ್ತು 'ಕುಬೇರ' ಖ್ಯಾತಿಯ ಜಿಮ್ ಸರ್ಭ್ ಅವರೊಂದಿಗೆ ರಶ್ಮಿಕಾ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. ಒಂದು ತಿಂಗಳ ಶೂಟಿಂಗ್‌ ಶೆಡ್ಯೂಲ್‌ ಫಿಕ್ಸ್‌ ಆಗಿದ್ದು, ಕೆಲವು ಪ್ರಮುಖ ಆಕ್ಷನ್ ಮತ್ತು ಎಮೋಷನಲ್ ದೃಶ್ಯಗಳನ್ನು ಚಿತ್ರೀಕರಿಸಲಿದ್ದಾರೆ ಎನ್ನಲಾಗಿದೆ. ರಮ್ಯಾ ಕೃಷ್ಣ, ಯೋಗಿ ಬಾಬು ಸೇರಿದಂತೆ ಇನ್ನೂ ಕೆಲ ಕಲಾವಿದರು ಈ ಸಿನಿಮಾದಲ್ಲಿದ್ದಾರಂತೆ.

Rashmika Mandanna: ರಶ್ಮಿಕಾ-ವಿಜಯ್ ಮದುವೆ ಕುರಿತು ಬಿಗ್‌ ಅಪ್‌ಡೇಟ್; ಭರದಿಂದ ಸಾಗಿದ ಸಿದ್ಧತೆ, ಮುಹೂರ್ತ ಫಿಕ್ಸ್!

ಈ ಸಿನಿಮಾದಲ್ಲಿ ರಶ್ಮಿಕಾಗೆ ಒಂಚೂರು ನೆಗೆಟಿವ್‌ ಶೇಡ್‌ನ ಪಾತ್ರ ಇದೆಯಂತೆ. ಇದುವರೆಗೂ ಅವರ ಕೆರಿಯರ್‌ನಲ್ಲಿ ಮಾಡಿರದಂತಹ ಅತ್ಯಂತ ಸವಾಲಿನ ಪಾತ್ರ ಇದಾಗಿರಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಭಾರೀ ಬಜೆಟ್‌ನಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕಾಗಿ ಲಾಸ್ ಏಂಜಲೀಸ್‌ನ ಪ್ರಮುಖ ಸ್ಪೆಷಲ್ ಎಫೆಕ್ಟ್ ಕಂಪನಿಗಳು ಕೆಲಸ ಮಾಡುತ್ತಿವೆ. 2027ರಲ್ಲಿ ಈ ಚಿತ್ರ ರಿಲೀಸ್‌ ಆಗಲಿದೆಯಂತೆ.